ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/96 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1996 ನಮ್ಮ ರಾಜ್ಯದ ಸೇವೆ
1996 ನಮ್ಮ ರಾಜ್ಯದ ಸೇವೆ
km 12/96 ಪು. 7

ಪ್ರಕಟನೆಗಳು

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಡಿಸೆಂಬರ್‌ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೆ ಲೆಕ್ಕ ತಪಾಸಣೆ ಮಾಡಬೇಕು. ಇದನ್ನು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.

◼ 1997ಕ್ಕಾಗಿರುವ ಜ್ಞಾಪಕಾಚರಣೆಯು ಆದಿತ್ಯವಾರ, ಮಾರ್ಚ್‌ 23ರಂದು, ಸೂರ್ಯಾಸ್ತಮಾನದ ನಂತರ ಇರುವುದು. ಅವಶ್ಯವಿದ್ದಲ್ಲೆಲ್ಲಾ ಸಹೋದರರು ಸಭಾಗೃಹಗಳನ್ನು ಮುಂಗಡವಾಗಿ ಕಾಯ್ದಿರಿಸಲು ಸಾಧ್ಯವಾಗುವಂತೆ ಈ ಮರುಜ್ಞಾಪಕವನ್ನು ಕೊಡಲಾಗುತ್ತಿದೆ.

◼ ಜನವರಿಯಲ್ಲಿ ಆರಂಭಿಸಿ, ಸರ್ಕಿಟ್‌ ಮೇಲ್ವಿಚಾರಕರು, “ನಮ್ಮ ದೇವರಾದ ಯೆಹೋವನಂತೆ ಯಾರಿದ್ದಾರೆ?” ಎಂಬ ಮುಖ್ಯಶೀರ್ಷಿಕೆಯುಳ್ಳ ಸಾರ್ವಜನಿಕ ಭಾಷಣವನ್ನು ಕೊಡುವರು. ಗುರುವಾರ (ಅಥವಾ ಶುಕ್ರವಾರ)ದಂದು ಅವರು ಕೊಡುವ ಪ್ರಥಮ ಸೇವಾ ಭಾಷಣದ ಶೀರ್ಷಿಕೆಯು, “ಸುವಾರ್ತೆಯಲ್ಲಿ ತೀವ್ರವಾಗಿ ಮಗ್ನರಾಗಿರಿ” ಎಂದಾಗಿರುವುದು. ಮತ್ತು ಅದೇ ದಿನ, ಒಟ್ಟುಗೂಡಿ ನಡೆಸಲಾಗುವ 45 ನಿಮಿಷಗಳ ಸಭಾ ಪುಸ್ತಕ ಅಭ್ಯಾಸದ ನಂತರ ಕೊಡಲ್ಪಡುವ ಎರಡನೆಯ ಸೇವಾ ಭಾಷಣವು, “ಸದ್ಗುಣ ಅಥವಾ ದುರ್ಗುಣ—ನೀವು ಯಾವುದನ್ನು ಬೆನ್ನಟ್ಟುತ್ತೀರಿ?” ಎಂದಾಗಿರುವುದು. ಈ ಭಾಷಣಗಳಲ್ಲಿ ಪ್ರತಿಯೊಂದು ಭಾಷಣವು 25 ನಿಮಿಷಗಳದ್ದಾಗಿದ್ದು, ಗುರುವಾರ (ಅಥವಾ ಶುಕ್ರವಾರ)ದ ಕೂಟವನ್ನು, ಒಂದು ಗಂಟೆ 50 ನಿಮಿಷಗಳ ಅವಧಿಯದನ್ನಾಗಿ ಮಾಡುವುದು. ‘ನೀವು ಕಲಿತಿರುವ ವಿಷಯಗಳಲ್ಲಿ ಮುಂದುವರಿಯಿರಿ,’ ಎಂಬ ಚರ್ಚೆಯ ಸ್ಥಾನದಲ್ಲಿ ಇನ್ನೊಂದು ವಿಷಯವನ್ನು ಹಾಕಲಾಗಿದೆ.

◼ 1997ಕ್ಕಾಗಿರುವ ವರ್ಷವಚನವು, “ನಿನ್ನ ಚಿತ್ತವನ್ನು ಮಾಡಲು ನನಗೆ ಕಲಿಸು.”—ಕೀರ್ತನೆ 143:10, NW ಆಗಿದೆ. ಜನವರಿ 1, 1997ರಂದು ಅಥವಾ ಅದರ ನಂತರ ಸಾಧ್ಯವಾದಷ್ಟು ಬೇಗನೆ ಪ್ರದರ್ಶಿಸಲು ಸಾಧ್ಯವಾಗುವಂತೆ, ಸಭೆಗಳು ಹೊಸ ವರ್ಷವಚನದ ತಮ್ಮ ಬೋರ್ಡುಗಳನ್ನು ಸಿದ್ಧಪಡಿಸುವುದಾದರೆ ಒಳ್ಳೆಯದಾಗಿರುವುದು.

◼ ಕಲ್ಕತ್ತದಲ್ಲಿನ ಜಿಲ್ಲಾ ಅಧಿವೇಶನದ ದಿನಾಂಕವು 1997, ಜನವರಿ 3-5ಕ್ಕೆ ಬದಲಾಯಿಸಲ್ಪಟ್ಟಿದೆ.

◼ 1997ರಲ್ಲಿ ಉಪಯೋಗಿಸಲಿಕ್ಕಾಗಿ, ಸೇವಾ ಫಾರ್ಮ್‌ಗಳ ಒಂದು ವರ್ಷದ ಸರಬರಾಯಿಯು ಪ್ರತಿಯೊಂದು ಸಭೆಗೆ ಕಳುಹಿಸಲ್ಪಟ್ಟಿದೆ. ಸೂಕ್ತವಾದ ಫಾರ್ಮ್‌ಗಳನ್ನು ಸಂಬಂಧಪಟ್ಟ ಸಹೋದರರಿಗೆ ಹಂಚುವಂತೆ ಎಲ್ಲಾ ಸಭಾ ಸೆಕ್ರಿಟರಿಗಳಿಗೆ ನೆರವನ್ನೀಯಲಿಕ್ಕಾಗಿ, ಈ ಫಾರ್ಮ್‌ಗಳೊಂದಿಗೆ ಒಂದು ಚೆಕ್‌ಲಿಸ್ಟ್‌ ಒಳಸೇರಿಸಲ್ಪಟ್ಟಿತ್ತು. ಈ ಫಾರ್ಮ್‌ಗಳನ್ನು ಅವುಗಳ ನಿಗದಿತ ಉದ್ದೇಶಕ್ಕಾಗಿ ಮಾತ್ರವೇ ಉಪಯೋಗಿಸತಕ್ಕದ್ದು, ಅವುಗಳನ್ನು ಹಾಳುಮಾಡಬಾರದು. ನಿಮ್ಮ ಸಭೆಗೆ ಆ ಫಾರ್ಮ್‌ಗಳು ಒಂದು ವರ್ಷಕ್ಕಾಗಿ ಸಾಕಾಗುವುವೋ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿರಿ. ಹೆಚ್ಚಿನ ಫಾರ್ಮ್‌ಗಳ ಅಗತ್ಯವಿರುವಲ್ಲಿ, ಅವುಗಳನ್ನು ತತ್‌ಕ್ಷಣವೇ ಆರ್ಡರ್‌ ಮಾಡಬೇಕು. ದಯವಿಟ್ಟು ಡಿಸೆಂಬರ್‌ 1997ರ ವರೆಗೆ ಸಾಕಾಗುವಷ್ಟು ಫಾರ್ಮ್‌ಗಳನ್ನು ಮಾತ್ರ ಆರ್ಡರ್‌ ಮಾಡಿ.

ಫಾರ್ಮ್‌ಗಳೊಂದಿಗೆ ಹೊಸ ವಾಚ್‌ಟವರ್‌ ಪಬ್ಲಿಕೇಷನ್ಸ್‌ ಲಿಸ್ಟ್‌ನ ನಾಲ್ಕು ಪ್ರತಿಗಳು ಸೇರಿಸಲ್ಪಟ್ಟಿದ್ದವು. ಸೆಕ್ರಿಟರಿಯು ಒಂದು ಪ್ರತಿಯನ್ನು ಇಟ್ಟಕೊಳ್ಳತಕ್ಕದ್ದು, ಮತ್ತು ಉಳಿದ ಪ್ರತಿಗಳು, ಸಾಹಿತ್ಯ, ಪತ್ರಿಕೆಗಳು ಮತ್ತು ಅಕೌಂಟ್ಸ್‌ನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಸಹೋದರರಿಗೆ ಹಂಚಲ್ಪಡಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ