ದೇವರು ಕೊಡುವ ಅಭಿವೃದ್ಧಿಯಲ್ಲಿ ಉಲ್ಲಾಸಿಸುವುದು
1 ಪ್ರಥಮ ಶತಮಾನದ ಕ್ರೈಸ್ತರು ಹುರುಪುಳ್ಳ ರಾಜ್ಯ ಪ್ರಚಾರಕರಾಗಿದ್ದರು. “ಸಭೆಗಳು . . . ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ” ಬಂದಾಗ ಅವರು ಉಲ್ಲಾಸಿಸಿದರು. (ಅ. ಕೃ. 16:5) ಅವರ ಧೈರ್ಯದ ಸಾರುವಿಕೆಯು, ಏಷಿಯಾ, ಯೂರೋಪ್, ಮತ್ತು ಆಫ್ರಿಕದೊಳಗೆ ವಿಸ್ತರಿಸುತ್ತಾ, ವಿಶ್ವಾಸಿಗಳ ಒಂದು ಸಮೃದ್ಧ ಕೊಯ್ಲಿನಲ್ಲಿ ಫಲಿಸಿತು.
2 ಕಡೇ ದಿವಸಗಳಲ್ಲಿ ಸಾರುವ ಕಾರ್ಯವು, “ಸರ್ವಲೋಕ”ವನ್ನು ತಲಪುವುದೆಂದು ಯೇಸು ಮುಂತಿಳಿಸಿದನು. (ಮತ್ತಾ. 24:14) 1996ರ ಸೇವಾ ವರ್ಷದ ಸಮಯದಲ್ಲಿ, ಭೂಗೋಳದ ಸುತ್ತಲೂ ಇರುವ ದೇಶಗಳಿಂದ, ಅದ್ಭುತಕರವಾದ ಅಭಿವೃದ್ಧಿಗಳು ಮತ್ತು ಪ್ರಚಾರಕರ ಹೊಸ ಉಚ್ಚಾಂಕಗಳ ವರದಿಗಳನ್ನು ನಾವು ಪಡೆಯುತ್ತಾ ಇದ್ದೆವು. ಈ ತ್ವರಿತವಾದ ಬೆಳವಣಿಗೆಯು, ನೂರಾರು ಹೊಸ ರಾಜ್ಯ ಸಭಾಗೃಹಗಳು ಮತ್ತು ಎಸೆಂಬ್ಲಿ ಹಾಲ್ಗಳನ್ನು ನಿರ್ಮಿಸುವುದನ್ನು ಹಾಗೂ ಹಲವಾರು ಬ್ರಾಂಚ್ ಸೌಕರ್ಯಗಳನ್ನು ವಿಸ್ತರಿಸುವುದನ್ನು ಅವಶ್ಯವನ್ನಾಗಿ ಮಾಡಿದೆ.
3 ಆಗಸ್ಟ್ 1996ರ ನಮ್ಮ ರಾಜ್ಯದ ಸೇವೆಯು, ಆಫ್ರಿಕದಲ್ಲಿ ನಡೆಯುತ್ತಿರುವ ನಿರ್ಮಾಣ ಕೆಲಸದ ಕುರಿತಾಗಿ ವರದಿಸಿತು. ತದ್ರೀತಿಯ ಚಟುವಟಿಕೆಯು ಲ್ಯಾಟಿನ್ ಅಮೆರಿಕದಾದ್ಯಂತ ನಡೆಯುತ್ತಾ ಇದೆ. 1996ರ ಸೇವಾ ವರ್ಷಕ್ಕಾಗಿ, ಮೆಕ್ಸಿಕೊ ದೇಶವು 4,70,098 ಪ್ರಚಾರಕರ ಒಂದು ದಂಗುಬಡಿಸುವ ಉಚ್ಚಾಂಕವನ್ನು ಮತ್ತು 6,00,751 ಬೈಬಲ್ ಅಭ್ಯಾಸಗಳ ಒಂದು ಸರಾಸರಿಯನ್ನು ವರದಿಸುತ್ತದೆ! ಇದು 466 ಹೊಸ ಸಭೆಗಳ ರಚನೆಯನ್ನು ಅವಶ್ಯಪಡಿಸುತ್ತದೆ!
4 ಭಾರತದಲ್ಲಿನ ಸಭೆಗಳ ಸಂಖ್ಯೆಯು, ಆ ವರ್ಷದಲ್ಲಿ 25ರಷ್ಟು ಏರುತ್ತಾ, ಸಭೆಗಳು ಮತ್ತು ಪ್ರತ್ಯೇಕ ಗುಂಪುಗಳ ಒಟ್ಟು ಸಂಖ್ಯೆಯನ್ನು 531ಕ್ಕೆ ತಂದಿತು. ಆಗಸ್ಟ್ ತಿಂಗಳಿನಲ್ಲಿ, 16,615 ಪ್ರಚಾರಕರು ತಮ್ಮ ಚಟುವಟಿಕೆಯನ್ನು ವರದಿಸುತ್ತಾ, ನಾವು ನಮ್ಮ 24ನೆಯ ಆನುಕ್ರಮಿಕ ಉಚ್ಚಾಂಕವನ್ನು ತಲಪಲು ಉಲ್ಲಾಸಿಸಿದೆವು. ಇದು ಆ ವರ್ಷಕ್ಕಾಗಿ ಏಳು ಪ್ರತಿಶತ ಅಭಿವೃದ್ಧಿಯಲ್ಲಿ ಫಲಿಸಿತು. ಭಾರತದಲ್ಲಿ ಈಗ ಸಾಕ್ಷಿಗಳು ಸ್ವಾಮ್ಯವನ್ನು ಪಡೆದಿರುವ 170 ರಾಜ್ಯ ಸಭಾಗೃಹಗಳಿರುವುದಾದರೂ, ಈ ಕ್ಷಿಪ್ರವಾದ ಬೆಳವಣಿಗೆಯು, ಹೊಸ ರಾಜ್ಯ ಸಭಾಗೃಹಗಳನ್ನು ನಿರ್ಮಿಸುವುದನ್ನು—ಸದ್ಯಕ್ಕೆ 21 ನಿರ್ಮಾಣ ಕಾರ್ಯಯೋಜನೆಗಳು ನಡೆಯುತ್ತಾ ಇವೆ—ಮತ್ತು ನಮ್ಮ ಬ್ರಾಂಚ್ ನಿರ್ಮಾಣ ಕಾರ್ಯಯೋಜನೆಯ ಕಡೆಗೆ ಮುಂದೊತ್ತುವುದನ್ನು ಅವಶ್ಯವನ್ನಾಗಿ ಮಾಡಿದೆ.
5 ನಿರ್ಮಾಣ ವೆಚ್ಚಗಳು ಅತ್ಯಧಿಕವಾಗಿವೆ, ಆದರೆ ಇನ್ನೂ ಹೆಚ್ಚಿನ ರಾಜ್ಯ ಸಭಾಗೃಹಗಳು ಕಟ್ಟಲ್ಪಡಬೇಕು. ಅನೇಕವೇಳೆ, ಇಂತಹ ಕಾರ್ಯಯೋಜನೆಗಳಿಗೆ ರಾಷ್ಟ್ರೀಯ ರಾಜ್ಯ ಸಭಾಗೃಹ ನಿಧಿ (ನ್ಯಾಷನಲ್ ಕಿಂಗ್ಡಂ ಹಾಲ್ ಫಂಡ್)ಯ ಮೂಲಕ ನೆರವು ನೀಡಲ್ಪಡುತ್ತದೆ. ಈ ನಿಧಿಗೆ ಹಣವು, ನಿಮ್ಮ ಕೂಟದ ಸ್ಥಳದಲ್ಲಿ ‘ಬಿಲ್ಡಿಂಗ್ ಫಂಡ್’ (ಕಟ್ಟಡನಿರ್ಮಾಣ ನಿಧಿ) ಎಂದು ಗುರುತಿಸಲ್ಪಟ್ಟಿರುವ ಪೆಟ್ಟಿಗೆಯಲ್ಲಿ ನೀವು ಹಾಕುವ ಕಾಣಿಕೆಗಳಿಂದ ಒದಗಿಸಲ್ಪಡುತ್ತದೆ. ಈ ನಿರ್ಮಾಣ ವೆಚ್ಚಗಳ ಕಡೆಗೆ ಸಹಾಯವನ್ನು ನೀಡುವ ನಮ್ಮ ಸಿದ್ಧಮನಸ್ಸು, ಕೊಡುವುದರಿಂದ ಬರುವಂತಹ ಸಂತೋಷ ಮತ್ತು ಯೆಹೋವನು ಕೊಡುವಂತಹ ಅಭಿವೃದ್ಧಿಯನ್ನು ನೋಡುವುದರಿಂದ ಬರುವ ಆನಂದವನ್ನು ಅನುಭವಿಸುವುದರಲ್ಲಿ ಫಲಿಸುತ್ತದೆ!—ಅ. ಕೃ. 20:35.
[ಪುಟ 4, 5 ರಲ್ಲಿರುವಚಿತ್ರ]
ಪ್ಯಾರಗ್ವೈ ಬ್ರಾಂಚ್
[ಪುಟ 4 ರಲ್ಲಿರುವಚಿತ್ರ]
ಎಕ್ವಡಾರ್ ಬ್ರಾಂಚ್
[ಪುಟ 4, 5 ರಲ್ಲಿರುವಚಿತ್ರ]
ನಿರ್ಮಾಣಕಾರ್ಯ ನಡೆಯುತ್ತಿರುವ ಮೆಕ್ಸಿಕೊ ಬ್ರಾಂಚ್ನ ವಿಸ್ತೃತ ಭಾಗ
[[ಪುಟ 4, 5 ರಲ್ಲಿರುವಚಿತ್ರ]
ಡೊಮಿನಿಕನ್ ರಿಪಬ್ಲಿಕ್ ಬ್ರಾಂಚ್
[ಪುಟ 4 ರಲ್ಲಿರುವಚಿತ್ರ]
ವಿಸ್ತೃತ ಭಾಗದೊಂದಿಗೆ ಬ್ರೆಸಿಲ್ ಬ್ರಾಂಚ್
[ಪುಟ 4, 5 ರಲ್ಲಿರುವಚಿತ್ರ]
ನಿರ್ಮಾಣಕಾರ್ಯ ನಡೆಯುತ್ತಿರುವ ಯುರಗ್ವೈ ಬ್ರಾಂಚ್
[ಪುಟ 5 ರಲ್ಲಿರುವಚಿತ್ರ]
ಲ್ಯಾಟಿನ್ ಅಮೆರಿಕದಲ್ಲಿ ಪ್ರತಿನಿಧಿರೂಪದ ಕಡಮೆ ಖರ್ಚಿನ ರಾಜ್ಯ ಸಭಾಗೃಹಗಳು
1. ಬ್ರೆಸಿಲ್
2. ನಿಕರಾಗುವ
3. ಚಿಲಿ
4. ಕೊಲಂಬಿಯ
5. ಮೆಕ್ಸಿಕೊ
6. ಬ್ರೆಸಿಲ್
7. ಪೆರೂ
8. ವೆನಿಸ್ವೇಲ
9. ಮೆಕ್ಸಿಕೊ