ಇನ್ನೆಂದಿಗೂ ಪುನರಾವರ್ತಿಸಲ್ಪಡದ ಕೆಲಸದಲ್ಲಿ ಪಾಲ್ಗೊಳ್ಳಿರಿ
1 ಮಾನವಕುಲದ ಇತಿಹಾಸದಾದ್ಯಂತ, ವಿವಿಧ ಸಮಯಗಳಲ್ಲಿ ಯೆಹೋವನು ತನ್ನ ಶತ್ರುಗಳ ಮೇಲೆ ನ್ಯಾಯತೀರ್ಪನ್ನು ವಿಧಿಸುವುದು ಆವಶ್ಯಕವಾಗಿತ್ತು. ಆದಾಗಲೂ, ತನ್ನ ಕರುಣೆಯ ಕಾರಣದಿಂದ, ಆತನು ಸಹೃದಯಿಗಳಿಗೆ ರಕ್ಷಣೆಗಾಗಿ ಒಂದು ಅವಕಾಶವನ್ನು ಒದಗಿಸಿದನು. (ಕೀರ್ತ. 103:13) ಅವರ ಪ್ರತಿಕ್ರಿಯೆಯು ಅವರ ಅಂತ್ಯಫಲವನ್ನು ನಿರ್ಧರಿಸಿತು.
2 ಉದಾಹರಣೆಗಾಗಿ, ಸಾ.ಶ.ಪೂ. 2370ರಲ್ಲಿನ ಜಲಪ್ರಳಯಕ್ಕೆ ಮುಂಚೆ, ನೋಹನು “ಸುನೀತಿಯನ್ನು ಸಾರುವವ”ನಾಗಿದ್ದನು. ಆಗ ನಾಶವಾದವರು, ದೈವಿಕ ಎಚ್ಚರಿಕೆಯನ್ನು ಅಲಕ್ಷಿಸಿದವರಾಗಿದ್ದರು. (2 ಪೇತ್ರ 2:5; ಇಬ್ರಿ. 11:7) ಸಾ.ಶ. 70ರಲ್ಲಾದ ಯೆರೂಸಲೇಮಿನ ನಾಶನಕ್ಕೆ ಮುಂಚೆ, ಆ ಪಟ್ಟಣದ ಮೇಲೆ ಎರಗಲಿದ್ದ ವಿನಾಶವನ್ನು ಪಾರಾಗಲಿಕ್ಕಾಗಿ ಯಾವನೇ ವ್ಯಕ್ತಿಗೆ ಅಗತ್ಯವಿರುವ ಕ್ರಿಯೆಯನ್ನು, ಯೇಸು ಸ್ಪಷ್ಟವಾಗಿ ತಿಳಿಸಿದ್ದನು. ಅವನ ಎಚ್ಚರಿಕೆಯ ಸಂದೇಶವನ್ನು ತಿರಸ್ಕರಿಸಿದವರೆಲ್ಲರೂ, ವಿಪತ್ಕರ ಫಲಿತಾಂಶಗಳನ್ನು ಅನುಭವಿಸಿದರು. (ಲೂಕ 21:20-24) ಅಂತಹ ದೈವಿಕ ಎಚ್ಚರಿಕೆಗಳು ಮತ್ತು ನ್ಯಾಯತೀರ್ಪುಗಳು, ಇತಿಹಾಸದಾದ್ಯಂತ ಅನೇಕ ಸಲ ಪುನರಾವರ್ತಿಸಲ್ಪಟ್ಟವು.
3 ಆಧುನಿಕ ದಿನದ ಎಚ್ಚರಿಕೆಯ ಕೆಲಸ: ತನ್ನ ಕೋಪವು ಇಂದಿನ ದುಷ್ಟ ವ್ಯವಸ್ಥೆಯ ವಿರುದ್ಧ ಹೊರಡಿಸಲ್ಪಡುವುದು ಮತ್ತು ಕೇವಲ ದೀನರು ಪಾರಾಗುವರೆಂದು, ಬಹಳ ಸಮಯದ ಹಿಂದೆಯೇ ಯೆಹೋವನು ಘೋಷಿಸಿದನು. (ಚೆಫ. 2:2, 3; 3:8) ಈ ಎಚ್ಚರಿಕೆಯ ಸಂದೇಶವನ್ನು ಸಾರಲಿಕ್ಕಾಗಿರುವ ಸಮಯವು ತ್ವರಿತವಾಗಿ ಮುಗಿಯುತ್ತಿದೆ! “ಮಹಾ ಸಂಕಟವು” ಮುಂದೆಯೇ ಇದೆ, ಮತ್ತು ಈಗ ದೀನ ವ್ಯಕ್ತಿಗಳು ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಖಂಡಿತವಾಗಿಯೂ, “ಹೊಲಗಳು ಕೊಯ್ಲಿಗಾಗಿ ಬೆಳ್ಳಗಾಗಿವೆ” (NW). ಹೀಗಿರುವುದರಿಂದ, ಬೇರೆ ಯಾವುದೇ ಕೆಲಸವು, ಈ ಕೆಲಸಕ್ಕಿರುವ ಮಹತ್ತ್ವ ಮತ್ತು ತುರ್ತಿಗೆ ಹೋಲಿಕೆಯಾಗದು.—ಮತ್ತಾ. 24:14, 21, 22; ಯೋಹಾ. 4:35.
4 ಇತರರು “ಕೇಳಿದರೂ ಕೇಳದೆ ಹೋದರೂ,” ಆಧುನಿಕ ದಿನದ ಎಚ್ಚರಿಕೆಯನ್ನು ಅವರಿಗೆ ಧ್ವನಿಸುವುದರಲ್ಲಿ ನಾವು ಭಾಗವಹಿಸಬೇಕು. ನಾವು ಅಲಕ್ಷಿಸಲೇಬಾರದಾದಂತಹ ಒಂದು ದೇವದತ್ತ ನೇಮಕ ಇದಾಗಿದೆ. (ಯೆಹೆ. 2:4, 5; 3:17, 18) ಈ ಕೆಲಸದಲ್ಲಿ ನಾವು ಒಂದು ಪೂರ್ಣ ಪಾಲನ್ನು ಹೊಂದಿರುವುದು, ದೇವರಿಗಾಗಿರುವ ನಮ್ಮ ಗಾಢವಾದ ಪ್ರೀತಿ, ನಮ್ಮ ನೆರೆಯವರಿಗಾಗಿರುವ ನಮ್ಮ ಪ್ರಾಮಾಣಿಕವಾದ ಚಿಂತೆ, ಮತ್ತು ನಮ್ಮ ವಿಮೋಚಕನಾದ ಯೇಸು ಕ್ರಿಸ್ತನಲ್ಲಿ ನಮಗಿರುವ ಅಚಲ ನಂಬಿಕೆಯ ಒಂದು ಮನಗಾಣಿಸುವ ಪ್ರದರ್ಶನವಾಗಿದೆ.
5 ಕ್ರಿಯೆಗೈಯುವ ಸಮಯವು ಇದೇ ಆಗಿದೆ: ಯೆಹೋವನ ಹಿಂದಿನ ನ್ಯಾಯತೀರ್ಪುಗಳ ನಂತರ, ದುಷ್ಟತನವು ಯಾವಾಗಲೂ ತಿರುಗಿ ತಲೆದೋರಿತು, ಯಾಕಂದರೆ ಸೈತಾನನು ಮತ್ತು ಅವನ ದೆವ್ವಗಳು ಇನ್ನೂ ಸಕ್ರಿಯರಾಗಿದ್ದರು. ಆದಾಗಲೂ, ಈ ಸಲ ಅದು ಭಿನ್ನವಾಗಿರುವುದು. ಸೈತಾನಸಂಬಂಧಿತ ಪ್ರಭಾವವು ನಿರ್ಮೂಲಗೊಳಿಸಲ್ಪಡುವುದು. ಸನ್ನಿಹಿತವಾದ ಒಂದು “ಮಹಾ ಸಂಕಟ”ದ ಕುರಿತಾದ ಒಂದು ಭೌಗೋಲಿಕ ಎಚ್ಚರಿಕೆಯು ಇನ್ನೆಂದಿಗೂ ಅಗತ್ಯವಿರುವುದಿಲ್ಲ. (ಪ್ರಕ. 7:14; ರೋಮಾ. 16:20) ಇನ್ನೆಂದಿಗೂ ಪುನರಾವರ್ತಿಸಲ್ಪಡದ ಒಂದು ಕೆಲಸದಲ್ಲಿ ಭಾಗಿಗಳಾಗಿರುವ ವಿಶೇಷ ಸುಯೋಗ ನಮಗಿದೆ. ಈ ಅವಕಾಶದ ಪೂರ್ಣ ಲಾಭವನ್ನು ಪಡೆದುಕೊಳ್ಳುವ ಸಮಯವು ಇದೇ ಆಗಿದೆ.
6 ಅಪೊಸ್ತಲ ಪೌಲನು, ತನ್ನ ಸಾರುವ ಚಟುವಟಿಕೆಯ ಕುರಿತಾಗಿ ತೀವ್ರ ಮನಗಾಣಿಕೆಯಿಂದ ತಿಳಿಸಿದ್ದು: “ನಾನು ಮನುಷ್ಯರೆಲ್ಲರ ರಕ್ತದಿಂದ ಶುದ್ಧನಾಗಿದ್ದೇನೆ.” (ಅ. ಕೃ. 20:26, NW) ಎಚ್ಚರಿಕೆಯನ್ನು ಧ್ವನಿಸಲು ತಪ್ಪಿಹೋಗುವುದರ ಮೂಲಕ ಬರುವ ಯಾವುದೇ ರಕ್ತಾಪರಾಧದ ಅನಿಸಿಕೆ ಅವನಿಗಾಗಲಿಲ್ಲ. ಏಕೆ? ಏಕೆಂದರೆ ಅವನು ತನ್ನ ಶುಶ್ರೂಷೆಯ ಕುರಿತಾಗಿ ಹೀಗೆ ಹೇಳಸಾಧ್ಯವಿತ್ತು: “ಇದಕ್ಕೋಸ್ಕರವೇ ಹೋರಾಡುತ್ತೇನೆ, ಪ್ರಯಾಸಪಡುತ್ತೇನೆ.” (ಕೊಲೊ. 1:29) ಇನ್ನೆಂದಿಗೂ ಪುನರಾವರ್ತಿಸಲ್ಪಡದ ಕೆಲಸದಲ್ಲಿ, ಸಾಧ್ಯವಿರುವಷ್ಟು ಪೂರ್ಣ ಮಟ್ಟಿಗೆ ಭಾಗವಹಿಸುವ ಅದೇ ತೃಪ್ತಿಯನ್ನು ನಾವು ಅನುಭವಿಸೋಣ!—2 ತಿಮೊ. 2:15.