ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು
ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್ ರೂ. 45.00) ಅಥವಾ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕ ರೂ. 20.00ರ ಕಾಣಿಕೆಗೆ. ಪರ್ಯಾಯವಾಗಿ, ವಿಶೇಷ ನೀಡಿಕೆಯ ಯಾವುದೇ 192 ಪುಟಗಳ ಹಳೆಯ ಪುಸ್ತಕಗಳನ್ನು ರೂ. 10.00ರ ಕಾಣಿಕೆಗೆ ನೀಡಸಾಧ್ಯವಿದೆ.
ಮಾರ್ಚ್: ಕುಟುಂಬ ಸಂತೋಷದ ರಹಸ್ಯ ಪುಸ್ತಕ, ರೂ. 20.00ರ ಕಾಣಿಕೆಗೆ.
ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು.
ಸೂಚನೆ: ಕುಟುಂಬ ಮತ್ತು ಸದಾ ಜೀವಿಸಬಲ್ಲಿರಿ ಪುಸ್ತಕಗಳ ಸದುಪಯೋಗವನ್ನು ಮಾಡುವಂತೆ ನಾವು ಎಲ್ಲ ಸಭೆಗಳಿಗೆ ಉತ್ತೇಜನ ನೀಡುತ್ತೇವೆ. ಪ್ರಚಾರಕರು ತಮ್ಮೊಂದಿಗೆ ಈ ಪುಸ್ತಕಗಳ ಪ್ರತಿಗಳನ್ನು ಎಲ್ಲ ಸಮಯಗಳಲ್ಲಿ, ವರ್ಷದಾದ್ಯಂತ ಇಟ್ಟುಕೊಳ್ಳುವಂತೆ ಮತ್ತು ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ಅವುಗಳನ್ನು ನೀಡುವಂತೆ ಪ್ರೋತ್ಸಾಹಿಸಲ್ಪಡಬಲ್ಲರು. ಮೇಲೆ ಉಲ್ಲೇಖಿಸಲ್ಪಟ್ಟ ಯಾವುದೇ ಕ್ಯಾಂಪೇನ್ ಐಟಮ್‌ಗಳನ್ನು ಇನ್ನೂ ವಿನಂತಿಸಿಕೊಂಡಿರದ ಸಭೆಗಳು, ತಮ್ಮ ಮುಂದಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-AB-14)ನಲ್ಲಿ ಹಾಗೆ ಮಾಡತಕ್ಕದ್ದು.
◼ ಎಲ್ಲ ಕ್ರಮದ ಪಯನೀಯರರ ಚಟುವಟಿಕೆಯನ್ನು ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕರು ಪುನರ್ವಿಮರ್ಶಿಸಬೇಕು. ತಾಸಿನ ಆವಶ್ಯಕತೆಯನ್ನು ಮುಟ್ಟುವುದರಲ್ಲಿ ಯಾರಿಗಾದರೂ ಕಷ್ಟವಿರುವುದಾದರೆ, ನೀಡಲ್ಪಡಬೇಕಾಗಿರುವ ನೆರವಿಗಾಗಿ ಹಿರಿಯರು ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ, ಅಕ್ಟೋಬರ್ 1, 1993 ಮತ್ತು ಅಕ್ಟೋಬರ್ 1, 1992ರ ಸೊಸೈಟಿಯ ಪತ್ರಗಳನ್ನು (S-201) ಪುನರ್ವಿಮರ್ಶಿಸಿರಿ. ಅಕ್ಟೋಬರ್ 1986ರ ನಮ್ಮ ರಾಜ್ಯದ ಸೇವೆಯ ಪುರವಣಿಯ, 12-20ನೆಯ ಪ್ಯಾರಗ್ರಾಫ್‌ಗಳನ್ನು ಸಹ ನೋಡಿರಿ.
◼ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸಲು ಇಚ್ಛಿಸುವ ಪ್ರಚಾರಕರು, ಈಗಲೇ ತಮ್ಮ ಯೋಜನೆಗಳನ್ನು ಮಾಡಬೇಕು ಮತ್ತು ಮುಂಚಿತವಾಗಿಯೇ ತಮ್ಮ ಅರ್ಜಿಗಳನ್ನು ಕಳುಹಿಸಬೇಕು. ಇದು ಹಿರಿಯರಿಗೆ ಅಗತ್ಯವಿರುವ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಮಾಡಲು ಮತ್ತು ಕೈಯಲ್ಲಿ ಸಾಕಷ್ಟು ಪತ್ರಿಕೆಗಳು ಹಾಗೂ ಇತರ ಸಾಹಿತ್ಯವಿರುವಂತೆ ಮಾಡಲು ಸಹಾಯಮಾಡುವುದು. ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಸಮ್ಮತಿಸಲ್ಪಟ್ಟವರೆಲ್ಲರ ಹೆಸರುಗಳು ಸಭೆಗೆ ಪ್ರಕಟಿಸಲ್ಪಡಬೇಕು.
◼ ಸಭೆಯು ಸ್ಥಳಿಕ ಸಮ್ಮೇಳನಗಳಿಗೆ ಹಾಜರಾಗುವಾಗ, ಈ ಮುಂದಿನ ಅಳವಡಿಸುವಿಕೆಗಳು ಅಗತ್ಯವೆಂಬುದು ಹಿರಿಯರ ಮಂಡಲಿಗೆ ತಿಳಿದಿರಬೇಕು: ಒಂದು ವಿಶೇಷ ಸಮ್ಮೇಳನ ದಿನವು ಗೊತ್ತುಮಾಡಲ್ಪಟ್ಟಿರುವಾಗ, ಸಭೆಯು ವಾರದಾದ್ಯಂತವಿರುವ ಎಲ್ಲಾ ಸಾಮಾನ್ಯ ಕೂಟಗಳನ್ನು ನಡಿಸಬೇಕು. ಸಾರ್ವಜನಿಕ ಕೂಟ ಮತ್ತು ಕಾವಲಿನಬುರುಜು ಅಭ್ಯಾಸ ಮಾತ್ರ ರದ್ದುಗೊಳಿಸಲ್ಪಡುವುದು. ಒಂದು ಸರ್ಕಿಟ್ ಸಮ್ಮೇಳನವನ್ನು ಹಾಜರಾಗಲು ಗೊತ್ತುಮಾಡಲ್ಪಟ್ಟಿರುವಾಗ, ಸಭೆಯು ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟವನ್ನು ಕೂಡ ರದ್ದುಗೊಳಿಸುವುದು; ಆ ವಾರದಲ್ಲಿ ಕೇವಲ ಸಭಾ ಪುಸ್ತಕ ಅಭ್ಯಾಸವು ಸ್ಥಳಿಕವಾಗಿ ನಡಿಸಲ್ಪಡುವುದು.
◼ 1997, ಜನವರಿ 8ರ ಸಂಚಿಕೆಯೊಂದಿಗೆ ಆರಂಭಿಸಿ, ನೇಪಾಲಿ ಭಾಷೆಯ ಎಚ್ಚರ! ಪತ್ರಿಕೆಯು ಒಂದು ಮಾಸಿಕ ಪ್ರಕಾಶನವಾಗಿರುವುದು ಮತ್ತು ವಾರ್ಷಿಕ ಚಂದಾವು ರೂ. 45.00ಕ್ಕೆ ಲಭ್ಯವಿರುವುದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಕುಟುಂಬ ಸಂತೋಷದ ರಹಸ್ಯ—ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಮರಾಠಿ, ಮಲೆಯಾಳಂ, ಹಿಂದಿ
(ಈ ಪುಸ್ತಕವು ಪ್ರಚಾರಕರಿಗೆ ಹಾಗೂ ಸಾರ್ವಜನಿಕರಿಗೆ ರೂ. 20.00 ಮತ್ತು ಪಯನೀಯರರಿಗಾಗಿ ರೂ. 12.00 ಆಗಿದೆ.)
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?—ಆಸಾಮಿಸ್, ಇಂಗ್ಲಿಷ್, ಒರಿಯಾ, ಕನ್ನಡ, ಕಾಸಿ, ಕೊಂಕಣಿ (ದೇವನಾಗರಿ, ಕನ್ನಡ ಮತ್ತು ರೋಮನ್ ಲಿಪಿಗಳಲ್ಲಿ ಪ್ರತ್ಯೇಕವಾಗಿ ಲಭ್ಯ), ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮಣಿಪುರಿ, ಮರಾಠಿ, ಮಲೆಯಾಳಂ, ಮಿಸೊ, ಹಿಂದಿ
(ಈ ಬ್ರೋಷರ್ ಪ್ರಚಾರಕರು ಮತ್ತು ಸಾರ್ವಜನಿಕರಿಗಾಗಿ ರೂ. 6.00 ಮತ್ತು ಪಯನೀಯರರಿಗಾಗಿ ರೂ. 4.00 ಆಗಿದೆ.)
ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ (ಚಿಕ್ಕ ಸೈಸ್)—ಪಂಜಾಬಿ
ಭೂಮಿಯ ಮೇಲೆ ಸದಾಜೀವನವನ್ನು ಆನಂದಿಸಿರಿ!—ಅಸ್ಸಾಮಿಸ್, ಟಿಬೆಟನ್
ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (ಟ್ರಾಕ್ಟ್ ನಂಬ್ರ 15)—ಡ್ಸಾಂಖ
◼ ಲಭ್ಯವಿರುವ ಹೊಸ ಆಡಿಯೊಕ್ಯಾಸೆಟ್‌ಗಳು:
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? (ಒಂದೇ ಕ್ಯಾಸೆಟ್)—ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ಹಿಂದಿ
(ಈ ಆಡಿಯೊಕ್ಯಾಸೆಟ್‌ಗಳು, ಪ್ರಚಾರಕರು ಮತ್ತು ಸಾರ್ವಜನಿಕರಿಗಾಗಿ ರೂ. 65.00 ಮತ್ತು ಪಯನೀಯರರಿಗಾಗಿ ರೂ. 55.00 ಆಗಿದೆ.)