ಪ್ರಶ್ನಾ ರೇಖಾಚೌಕ
◼ ನಮ್ಮ ಸಹೋದರರನ್ನು ನೇರವಾಗಿ ಬಾಧಿಸುವಂತಹ ಒಂದು ವಿಪತ್ತು ಬಂದೆರಗುವಾಗ, ಏನು ಮಾಡಬೇಕು?
ನಿಮ್ಮ ಕ್ಷೇತ್ರದಲ್ಲಿ ಒಂದು ವಿಪತ್ತು ಬಂದೆರಗುವುದಾದರೆ: ಗಾಬರಿಗೊಳ್ಳಬೇಡಿ. ಶಾಂತರಾಗಿದ್ದು, ಸ್ವತ್ತುಗಳ ಮೇಲಲ್ಲ, ನಿಜವಾಗಿಯೂ ಅಮೂಲ್ಯವಾಗಿರುವ ಜೀವದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ನಿಮ್ಮ ಕುಟುಂಬದ ತುರ್ತಾದ ಶಾರೀರಿಕ ಅಗತ್ಯಗಳಿಗಾಗಿ ಚಿಂತಿಸಿರಿ. ತರುವಾಯ ಹಿರಿಯರಿಗೆ ನಿಮ್ಮ ಪರಿಸ್ಥಿತಿಗಳು ಮತ್ತು ಪ್ರಚಲಿತ ಸ್ಥಾನದ ಕುರಿತು ತಿಳಿಯಪಡಿಸಿರಿ.
ಪರಿಹಾರ ನೆರವನ್ನು ಒದಗಿಸುವುದರಲ್ಲಿ, ಹಿರಿಯರು ಮತ್ತು ಶುಶ್ರೂಷಾ ಸೇವಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ವಿಪತ್ತಿನ ಕುರಿತಾದ ಮುನ್ನೆಚ್ಚರಿಕೆಯು—ಕೆಲವು ದೊಡ್ಡ ಬಿರುಗಾಳಿಗಳ ವಿಷಯದಲ್ಲಿ—ಕೊಡಲ್ಪಟ್ಟಿರುವಲ್ಲಿ, ಎಲ್ಲರೂ ಸುರಕ್ಷಿತವಾದ ಸ್ಥಳದಲ್ಲಿರುವುದನ್ನು ಈ ಸಹೋದರರು ಖಚಿತಪಡಿಸಿಕೊಳ್ಳಬೇಕು, ಮತ್ತು ಸಮಯವು ಅನುಮತಿಸುವಲ್ಲಿ, ಅಗತ್ಯವಾಗಿರಬಹುದಾದ ಸರಬರಾಯಿಗಳನ್ನು ಪಡೆದುಕೊಂಡು ಅವುಗಳನ್ನು ವಿತರಿಸಬೇಕು.
ತರುವಾಯ, ಪುಸ್ತಕ ಅಭ್ಯಾಸ ಚಾಲಕರು ಪ್ರತಿಯೊಂದು ಕುಟುಂಬವನ್ನು ಕಂಡುಹಿಡಿದು, ಅವರ ಕ್ಷೇಮದ ಕುರಿತು ವಿಚಾರಿಸಬೇಕು. ಅಧ್ಯಕ್ಷ ಮೇಲ್ವಿಚಾರಕನಿಗೆ ಇಲ್ಲವೆ ಮತ್ತೊಬ್ಬ ಹಿರಿಯನಿಗೆ ಪ್ರತಿಯೊಂದು ಮನೆವಾರ್ತೆಯ ಸನ್ನಿವೇಶದ ಕುರಿತು—ಎಲ್ಲವೂ ಸರಿಯಾಗಿರುವಾಗಲೂ—ತಿಳಿಸಬೇಕು. ಯಾರಾದರೊಬ್ಬರು ಗಾಯಗೊಂಡಿರುವಲ್ಲಿ, ವೈದ್ಯಕೀಯ ಚಿಕಿತ್ಸೆಗಾಗಿ ಹಿರಿಯರು ಏರ್ಪಾಡು ಮಾಡಲು ಪ್ರಯತ್ನಿಸುವರು. ಅಗತ್ಯವಿರುವ ಆಹಾರ, ಬಟ್ಟೆಬರೆ, ಆಶ್ರಯ, ಇಲ್ಲವೆ ಮನೆವಾರ್ತೆಯ ಸರಬರಾಯಿಗಳಂತಹ ಯಾವುದೇ ಭೌತಿಕ ವಸ್ತುಗಳನ್ನು ಸಹ ಅವರು ಒದಗಿಸುವರು. (ಯೋಹಾ. 13:35; ಗಲಾ. 6:10) ಸ್ಥಳಿಕ ಹಿರಿಯರು ಸಭೆಗೆ ಆತ್ಮಿಕ ಹಾಗೂ ಭಾವನಾತ್ಮಕ ಬೆಂಬಲವನ್ನೂ ಕೊಡುವರು ಮತ್ತು ಸಭಾ ಕೂಟಗಳನ್ನು ಪುನಃ ಆರಂಭಿಸಲು ಸಾಧ್ಯವಾದಷ್ಟು ಬೇಗನೆ ಏರ್ಪಾಡನ್ನು ಮಾಡುವರು. ಆ ಸ್ಥಿತಿಯ ಸಂಪೂರ್ಣ ಮೌಲ್ಯಮಾಪನ ಮಾಡಿದ ತರುವಾಯ, ಹಿರಿಯರ ಮಂಡಲಿಯ ಪರವಾಗಿ ಒಬ್ಬ ಹಿರಿಯನು ಸರ್ಕಿಟ್ ಮೇಲ್ವಿಚಾರಕನನ್ನು ಸಂಪರ್ಕಿಸಿ, ಯಾವುದೇ ಹಾನಿ, ರಾಜ್ಯ ಸಭಾಗೃಹಕ್ಕಾದ ನಷ್ಟ, ಇಲ್ಲವೆ ಸಹೋದರರ ಮನೆಗಳಿಗಾದ ನಷ್ಟ, ಅಲ್ಲದೆ ಯಾವುದೇ ವಿಶೇಷ ಅಗತ್ಯಗಳ ಕುರಿತು ತಿಳಿಸಬೇಕು. ಆಗ ಸರ್ಕಿಟ್ ಮೇಲ್ವಿಚಾರಕನು ಸನ್ನಿವೇಶದ ವರದಿಯೊಂದಿಗೆ ಬ್ರಾಂಚ್ ಆಫೀಸಿಗೆ ಟೆಲಿಫೋನ್ ಮಾಡುವನು. ಅಗತ್ಯವಿರುವ ಯಾವುದೇ ದೊಡ್ಡ ಪ್ರಮಾಣದ ಪರಿಹಾರ ಕಾರ್ಯಕ್ರಮಗಳನ್ನು ಬ್ರಾಂಚ್ ಆಫೀಸು ಸಂಘಟಿಸುವುದು.
ಒಂದು ವಿಪತ್ತು ಬೇರೆಲ್ಲಾದರೂ ಬಂದೆರಗುವುದಾದರೆ: ನಿಮ್ಮ ಪ್ರಾರ್ಥನೆಗಳಲ್ಲಿ ಆ ಸಹೋದರ ಸಹೋದರಿಯರನ್ನು ಜ್ಞಾಪಿಸಿಕೊಳ್ಳಿರಿ. (2 ಕೊರಿಂ. 1:8-11) ನೀವು ಹಣಸಹಾಯ ಮಾಡಲು ಬಯಸುವುದಾದರೆ, ನಿಮ್ಮ ದಾನಗಳನ್ನು ಸೊಸೈಟಿಗೆ ಕಳುಹಿಸಬಹುದು. ವಿಳಾಸವು ಹೀಗಿದೆ: Watch Tower Society, H-58 Old Khandala Road, Lonavla, MAH 410 401. (ಅ. ಕೃ. 2:44, 45; 1 ಕೊರಿಂ. 16:1-3; 2 ಕೊರಿಂ. 9:5-7; ಡಿಸೆಂಬರ್ 1, 1985ರ ವಾಚ್‌ಟವರ್ ಪತ್ರಿಕೆಯ 20-2ನೆಯ ಪುಟಗಳನ್ನು ನೋಡಿರಿ.) ಮೇಲ್ವಿಚಾರಣೆ ನೋಡಿಕೊಳ್ಳುವ ಸಹೋದರರಿಂದ ನಿರ್ದಿಷ್ಟವಾಗಿ ವಿನಂತಿಸಲ್ಪಡದ ಹೊರತು, ವಿಪತ್ತು ಸಂಭವಿಸಿರುವ ಕ್ಷೇತ್ರಕ್ಕೆ ವಸ್ತುಗಳನ್ನು ಇಲ್ಲವೆ ಸರಬರಾಯಿಗಳನ್ನು ಕಳುಹಿಸಬೇಡಿ. ಇದು ಕ್ರಮಬದ್ಧವಾದ ಪರಿಹಾರ ಪ್ರಯತ್ನ ಹಾಗೂ ವಸ್ತುಗಳ ಯೋಗ್ಯವಾದ ವಿತರಣೆಯನ್ನು ಖಚಿತಪಡಿಸುವುದು. (1 ಕೊರಿಂ. 14:40) ಅನಾವಶ್ಯಕವಾಗಿ ಸೊಸೈಟಿಗೆ ಟೆಲಿಫೋನ್ ಮಾಡಬೇಡಿ, ಇದು ವಿಪತ್ತು ಸಂಭವಿಸಿದ ಕ್ಷೇತ್ರದಿಂದ ಬರುವ ಕರೆಗಳನ್ನು ನಿರ್ವಹಿಸಲು ಬೇಕಾಗುವ ಟೆಲಿಫೋನ್ ಲೈನ್‌ಗಳನ್ನು ಸುಮ್ಮನೆ ತಡೆದುಹಿಡಿಯುವುದು.
ಯೋಗ್ಯವಾದ ಅಂದಾಜನ್ನು ಮಾಡಿದ ಮೇಲೆ, ಪರಿಹಾರ ಕಮಿಟಿಯನ್ನು ರಚಿಸಬೇಕೊ ಇಲ್ಲವೊ ಎಂಬುದನ್ನು ಸೊಸೈಟಿಯು ನಿರ್ಧರಿಸುವುದು. ಜವಾಬ್ದಾರಿಯುತ ಸಹೋದರರಿಗೆ ವಿಷಯವು ತಿಳಿಸಲ್ಪಡುವುದು. ನಾಯಕತ್ವವನ್ನು ವಹಿಸುತ್ತಿರುವ ಹಿರಿಯರೊಂದಿಗೆ ಎಲ್ಲರೂ ಸಹಕರಿಸಬೇಕು, ಇದರಿಂದ ಎಲ್ಲ ಸಹೋದರರ ತೀವ್ರಾವಶ್ಯಕತೆಗಳು ಯೋಗ್ಯವಾಗಿ ಪೂರೈಸಲ್ಪಡುವವು.—ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಪುಸ್ತಕದ, 310-15ನೆಯ ಪುಟಗಳನ್ನು ನೋಡಿರಿ.