ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/97 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1997 ನಮ್ಮ ರಾಜ್ಯದ ಸೇವೆ
1997 ನಮ್ಮ ರಾಜ್ಯದ ಸೇವೆ
km 3/97 ಪು. 7

ಪ್ರಕಟನೆಗಳು

◼ ಈ ವರ್ಷದ ಜ್ಞಾಪಕ ಕಾಲಕ್ಕಾಗಿರುವ ವಿಶೇಷ ಬಹಿರಂಗ ಭಾಷಣವು, ಹೆಚ್ಚಿನ ಸಭೆಗಳಲ್ಲಿ, ಭಾನುವಾರ, ಎಪ್ರಿಲ್‌ 6ರಂದು ಕೊಡಲ್ಪಡುವುದು. ಭಾಷಣದ ಶೀರ್ಷಿಕೆಯು “ಲೌಕಿಕ ಮಲಿನತೆಗಳಿಂದ ಶುದ್ಧರಾಗಿರಿ” ಎಂದಾಗಿದೆ. ನಾವೆಲ್ಲರೂ ಹಾಜರಾಗತಕ್ಕದ್ದು, ಮತ್ತು ಜ್ಞಾಪಕಕ್ಕೆ ಬಂದಿದ್ದ ಆಸಕ್ತ ವ್ಯಕ್ತಿಗಳು ಭಾಷಣಕ್ಕೆ ಉಪಸ್ಥಿತರಿರುವಂತೆ ನಾವು ಸಹಾಯ ಮಾಡತಕ್ಕದ್ದು. ನಾವೇನನ್ನು ಕೇಳಲಿದ್ದೇವೊ ಅದು, ನಿಶ್ಚಯವಾಗಿಯೂ ದೇವರನ್ನು ಮೆಚ್ಚಿಸಲಿಕ್ಕಾಗಿ ನವೀಕರಿಸಲ್ಪಟ್ಟ ದೃಢನಿಶ್ಚಯಕ್ಕೆ ಒಂದು ಕಾರಣವಾಗಿರುವುದು.

◼ ಮಹಾನ್‌ ಪುರುಷ ಪುಸ್ತಕದಲ್ಲಿನ ಸಭಾ ಅಭ್ಯಾಸಗಳ ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಎಪ್ರಿಲ್‌ 1993ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟದಲ್ಲಿ ಕಂಡುಬರುವ ಉತ್ಕೃಷ್ಟ ನಿರ್ದೇಶನಗಳನ್ನು ದಯವಿಟ್ಟು ಪರಿಗಣಿಸಿರಿ. ಆ ಲೇಖನವು, ಪ್ರತಿಯೊಂದು ಪಾಠವನ್ನು ಹೇಗೆ ತಯಾರಿಸಬೇಕೆಂಬುದನ್ನು ಮತ್ತು ಸಭಾ ಪುಸ್ತಕ ಅಭ್ಯಾಸವು ಅನುಸರಿಸಲಿರುವ ವ್ಯವಸ್ಥೆಯ ಕುರಿತು ವಿವರಿಸುತ್ತದೆ. ಈ ಮಾಹಿತಿಯನ್ನು ಪುನರ್ವಿಮರ್ಶಿಸುವ ಮೂಲಕ ಅಭ್ಯಾಸ ಚಾಲಕರು ಮತ್ತು ಹಾಜರಾಗುವವರೆಲ್ಲರೂ ಪ್ರಯೋಜನವನ್ನು ಹೊಂದುವರು.

◼ ಪ್ರತಿಯೊಂದು ಸಮುದಾಯದಲ್ಲಿ, ವರ್ಷದ ವಿವಿಧ ಸಮಯಗಳಲ್ಲಿ, ಮಕ್ಕಳಿಗೆ ಶಾಲೆಯಿಂದ ಬಿಡುವನ್ನು ಕೊಡುವ ಮತ್ತು ಐಹಿಕ ಕೆಲಸದಿಂದ ರಜೆಯನ್ನು ಕೊಡುವ ಲೌಕಿಕ ಉತ್ಸವಗಳಿರುತ್ತವೆ. ಸಭೆಯು ಕ್ಷೇತ್ರ ಶುಶ್ರೂಷೆಯಲ್ಲಿ ಒಂದು ಹೆಚ್ಚಿನ ಪಾಲನ್ನು ತೆಗೆದುಕೊಳ್ಳುವಂತೆ ಇವು ಉತ್ಕೃಷ್ಟವಾದ ಅವಕಾಶಗಳನ್ನು ಒದಗಿಸುತ್ತವೆ. ಈ ಸಂದರ್ಭಗಳು ಯಾವಾಗ ಬರುವವು ಎಂಬುದನ್ನು ಹಿರಿಯರು ಮೊದಲೇ ತಿಳಿದುಕೊಂಡು, ರಜೆಯ ಅವಧಿಗಳಲ್ಲಿ ಗುಂಪು ಸಾಕ್ಷಿಕಾರ್ಯಕ್ಕಾಗಿ ಮಾಡಲ್ಪಡುವ ಏರ್ಪಾಡುಗಳ ಕುರಿತಾಗಿ ಸಾಕಷ್ಟು ಮುಂಚಿತವಾಗಿಯೇ ಸಭೆಗೆ ತಿಳಿಸಬೇಕು.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭೆಯ ಅಕೌಂಟ್ಸ್‌ ಅನ್ನು ಮಾರ್ಚ್‌ 1ರಂದು ಅಥವಾ ಅದರ ನಂತರ ಸಾಧ್ಯವಾದಷ್ಟು ಬೇಗನೆ ಆಡಿಟ್‌ ಮಾಡತಕ್ಕದ್ದು. ಇದನ್ನು ಮಾಡಿದ ನಂತರ ಸಭೆಗೆ ತಿಳಿಸಿರಿ.

◼ ಮಾರ್ಚ್‌ 1, 1997ರಿಂದ ಆರಂಭಿಸಿ, ಕನ್ನಡ, ತೆಲುಗು ಮತ್ತು ಮರಾಠಿ ಭಾಷೆಯಲ್ಲಿನ ಎಲ್ಲಾ ಕಾವಲಿನಬುರುಜು ಮತ್ತು ನಮ್ಮ ರಾಜ್ಯದ ಸೇವೆಯ ಸಂಚಿಕೆಗಳಲ್ಲಿ, ಈ ಭಾಷೆಗಳಲ್ಲಿ ಲಭ್ಯವಿರುವ ಗೀತ ಬ್ರೋಷರ್‌ನಿಂದ ತೆಗೆಯಲ್ಪಟ್ಟ ಪರ್ಯಾಯ ಸಂಗೀತ ನಂಬ್ರಗಳು ಇರುವವು. ಈ ಭಾಷೆಗಳಲ್ಲಿ ನಡೆಸಲ್ಪಟ್ಟ ಕೂಟಗಳಲ್ಲಿ ಇಂಗ್ಲಿಷ್‌ ಗೀತಗಳನ್ನಲ್ಲ, ಬದಲಾಗಿ ದೇಶೀಯ ಭಾಷೆಯ ಗೀತಗಳು ಉಪಯೋಗಿಸಲ್ಪಡಬೇಕು. ಇದು ಪ್ರಚಾರಕರು ಮತ್ತು ಕೂಟಕ್ಕೆ ಹಾಜರಾಗುವವರು, ತಮ್ಮ ಸ್ವಂತ ಭಾಷೆಯಲ್ಲಿರುವ ರಾಜ್ಯ ಗೀತಗಳೊಂದಿಗೆ ಪರಿಚಿತರಾಗುವಂತೆ ಪ್ರೋತ್ಸಾಹಿಸುವುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ