ಸಾಹಿತ್ಯ ನೀಡುವಿಕೆಗಳು
ಮಾರ್ಚ್: ಕುಟುಂಬ ಸಂತೋಷದ ರಹಸ್ಯ ಪುಸ್ತಕ ರೂ. 20.00ರ ಕಾಣಿಕೆಗೆ.
ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾಗಳು ರೂ. 45.00 ಆಗಿವೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಪ್ರತಿಯೊಂದು ಬಿಡಿ ಪ್ರತಿಗಳು ರೂ. 4.00ಕ್ಕೆ ನೀಡಲ್ಪಡಬೇಕು.
ಚಂದಾಗಳನ್ನು ಪಡೆಯುವಾಗ, ಕಾವಲಿನಬುರುಜು ಈಗ ಪಂಜಾಬಿ ಮತ್ತು ಉರ್ದು (ಈ ಭಾಷೆಗಳಲ್ಲಿ ಅದು ಮಾಸಿಕವಾಗಿದೆ) ಭಾಷೆಗಳ ಹೊರತಾಗಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿದೆ ಎಂಬುದನ್ನು ದಯವಿಟ್ಟು ಜ್ಞಾಪಕದಲ್ಲಿಡಿರಿ.
ಎಚ್ಚರ! ಪತ್ರಿಕೆಯು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ತೆಲುಗು, ನೇಪಾಲಿ, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲಿ ಮಾಸಿಕವಾಗಿದೆ. ಉರ್ದು, ಪಂಜಾಬಿ ಮತ್ತು ಬಂಗಾಲಿ ಭಾಷೆಗಳಲ್ಲಿ ಎಚ್ಚರ! ಪತ್ರಿಕೆಯ ತ್ರೈಮಾಸಿಕ ವಿತರಣಾ ಪ್ರತಿಗಳು ಸಭೆಗಳಿಗೆ ದೊರಕುತ್ತವೆ, ಆದರೆ ಈ ಮೂರು ಭಾಷೆಗಳಲ್ಲಿ ವೈಯಕ್ತಿಕ ಚಂದಾಗಳು ದೊರಕುವುದಿಲ್ಲ.
ಜೂನ್: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 20.00ರ ಕಾಣಿಕೆಗೆ. ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸುವುದರ ಮೇಲೆ ಕೇಂದ್ರೀಕರಿಸಿರಿ.
ಸೂಚನೆ: ಮೇಲೆ ತಿಳಿಸಲ್ಪಟ್ಟ ಕ್ಯಾಂಪೇನ್ ಸಾಹಿತ್ಯಗಳಲ್ಲಿ ಯಾವುದನ್ನೂ ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ (S-AB-14) ವಿನಂತಿಸತಕ್ಕದ್ದು.
◼ ಎಚ್ಚರ! ಪತ್ರಿಕೆಯು ಈಗ ನೇಪಾಲಿ ಭಾಷೆಯಲ್ಲಿ ಮಾಸಿಕ ಪತ್ರಿಕೆಯಾಗಿ ಪ್ರಕಾಶಿಸಲ್ಪಡುತ್ತಿದೆ. ಒಂದು ವರ್ಷದ ಚಂದಾ ರೂ. 45.00 ಆಗಿದೆ. ಈ ಮುದ್ರಣಕ್ಕೆ ಆರು ತಿಂಗಳ ಚಂದಾ ಇರುವುದಿಲ್ಲ.
◼ ಎಪ್ರಿಲ್ 8, 1997ರ ಸಂಚಿಕೆಯಿಂದ ಆರಂಭಿಸಿ, ಎಚ್ಚರ! ಪತ್ರಿಕೆಯು ಪಂಜಾಬಿ ಭಾಷೆಯಲ್ಲಿ ಒಂದು ತ್ರೈಮಾಸಿಕ ಪತ್ರಿಕೆಯಾಗಿ ಪ್ರಕಾಶಿಸಲ್ಪಡುವುದು. ಸಭೆಗಳು ಈ ಮುದ್ರಣಕ್ಕಾಗಿ ವಿತರಕರ ಆರ್ಡರನ್ನು ತತ್‌ಕ್ಷಣವೇ ಸಲ್ಲಿಸಬಹುದು, ಆದರೆ ಈ ಪಂಜಾಬಿ ಎಚ್ಚರ! ಪತ್ರಿಕೆಗಾಗಿ ಚಂದಾಗಳು ಲಭ್ಯವಿಲ್ಲವೆಂಬುದಕ್ಕೆ ದಯವಿಟ್ಟು ಗಮನಕೊಡಿ.