ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/97 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1997 ನಮ್ಮ ರಾಜ್ಯದ ಸೇವೆ
1997 ನಮ್ಮ ರಾಜ್ಯದ ಸೇವೆ
km 5/97 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾಗಳು ರೂ. 45.00 ಆಗಿವೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಪ್ರತಿಯೊಂದು ಬಿಡಿ ಪ್ರತಿಗಳು ರೂ. 4.00ಕ್ಕೆ ನೀಡಲ್ಪಡಬೇಕು. ಸೂಕ್ತವಾಗಿರುವಲ್ಲಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ರೂ. 6.00ರ ಕಾಣಿಕೆಗೆ ನೀಡಸಾಧ್ಯವಿದೆ.

ಕಾವಲಿನಬುರುಜು ಪತ್ರಿಕೆಯು ಪಂಜಾಬಿ ಮತ್ತು ಉರ್ದು (ಈ ಭಾಷೆಗಳಲ್ಲಿ ಅದು ಮಾಸಿಕವಾಗಿದೆ) ಭಾಷೆಗಳ ಹೊರತಾಗಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿದೆ ಎಂಬುದನ್ನು ದಯವಿಟ್ಟು ಜ್ಞಾಪಕದಲ್ಲಿಡಿರಿ.

ಎಚ್ಚರ! ಪತ್ರಿಕೆಯು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ತೆಲುಗು, ನೇಪಾಲಿ, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲಿ ಮಾಸಿಕವಾಗಿದೆ. ಉರ್ದು, ಪಂಜಾಬಿ ಮತ್ತು ಬಂಗಾಲಿ ಭಾಷೆಗಳಲ್ಲಿ ಎಚ್ಚರ! ಪತ್ರಿಕೆಯ ತ್ರೈಮಾಸಿಕ ವಿತರಣಾ ಪ್ರತಿಗಳು ಸಭೆಗಳಿಗೆ ದೊರಕುತ್ತವೆ, ಆದರೆ ಈ ಮೂರು ಭಾಷೆಗಳಲ್ಲಿ ವೈಯಕ್ತಿಕ ಚಂದಾಗಳು ದೊರಕುವುದಿಲ್ಲ.

ಜೂನ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 20.00ರ ಕಾಣಿಕೆಗೆ. ಮನೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸುವುದರ ಮೇಲೆ ಕೇಂದ್ರೀಕರಿಸಿರಿ.

ಜುಲೈ ಮತ್ತು ಆಗಸ್ಟ್‌: ಈ ಕೆಳಗಿನ 32 ಪುಟಗಳ ಯಾವುದೇ ಬ್ರೋಷರುಗಳನ್ನು ರೂ. 6.00ರ ಕಾಣಿಕೆಗೆ ನೀಡಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌), ನೀವು ತ್ರೈಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್‌), ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!

◼ ಲಭ್ಯವಿರುವ ಹೊಸ ಪ್ರಕಾಶನಗಳು:

ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು—ಮರಾಠಿ

ಪ್ರಾಥಮಿಕ ಬೈಬಲ್‌ ಬೋಧನೆಗಳು—ಹಿಂದಿ

◼ ಲಭ್ಯವಿರುವ ಹೊಸ ಆಡಿಯೊಕ್ಯಾಸೆಟ್‌ಗಳು:

ರಾಜ್ಯ ಗೀತೆಗಳನ್ನು ಹಾಡುವುದು—ಇಂಗ್ಲಿಷ್‌

76 ನಿಮಿಷಗಳ ಈ ರೆರ್ಕಾಡಿಂಗ್‌ನಲ್ಲಿ, ವಾದ್ಯ ಮೇಳದೊಂದಿಗೆ ಬಾಯಿಮಾತಿನ ನಿರೂಪಣೆಗಳಿವೆ. ಕೆಲವು ಗೀತೆಗಳು, ಅನುಭವಿ ಸಹೋದರರು ಹಿಮ್ಮೇಳದೊಂದಿಗೆ ಒಬ್ಬೊಬ್ಬರೇ ಹಾಡಿರುವವುಗಳಾಗಿವೆ. ಇತರ ಗೀತೆಗಳು, ಅಮೆರಿಕದ ಬೆತೆಲ್‌ ಕುಟುಂಬದ ಸದಸ್ಯರಿಂದ ರಚಿತವಾಗಿರುವ ಒಂದು ಗಾಯಕ ತಂಡದಿಂದ ಹಾಡಲ್ಪಟ್ಟವುಗಳಾಗಿವೆ. ಮತ್ತು ಒಂದು ಗೀತೆಯು ಬೆತೆಲ್‌ ಸಹೋದರಿಯರ ಒಂದು ಗುಂಪಿನಿಂದ ಹಾಡಲ್ಪಟ್ಟಿದೆ. ಇವು, ನಮ್ಮ ರಾಜ್ಯ ಗೀತೆಗಳಲ್ಲಿ ಕೆಲವನ್ನು ಹಾಡುವ ವಿಧಕ್ಕೆ ಒಂದು ಆದರ್ಶವಾಗಿ ಕಾರ್ಯನಡಿಸುವುದು ಮತ್ತು ಆನಂದಕರವಾದ ಹಾಗೂ ಭಕ್ತಿವೃದ್ಧಿಸುವ ಆಲಿಸುವಿಕೆಯನ್ನು ಸಾಧ್ಯಮಾಡುವುದು, ಹಾಗೂ ಆಲಿಸುವವರಿಗೆ ಪದಗಳನ್ನು ಕೇಳಲು, ಅವುಗಳ ಮೇಲೆ ಮನನ ಮಾಡಲು ಮತ್ತು ಪ್ರಾಯಶಃ ಅವುಗಳನ್ನು ಬಾಯಿಪಾಠ ಮಾಡಲೂ ಒಂದು ಅವಕಾಶವನ್ನು ಕೊಡುವುದು. ಪ್ರತಿಯೊಂದು ಕ್ಯಾಸೆಟ್‌, ಪಯನೀಯರರಿಗಾಗಿ ರೂ. 55.00 ಮತ್ತು ಪ್ರಚಾರಕರು ಹಾಗೂ ಸಾರ್ವಜನಿಕರಿಗಾಗಿ ರೂ. 65.00 ಆಗಿದೆ.

◼ ಲಭ್ಯವಿರುವ ಹೊಸ ವಿಡಿಯೊ ಕ್ಯಾಸೆಟ್‌ಗಳು:

ಭೂಮಿಯ ಕಟ್ಟಕಡೆಯ ವರೆಗೆ—ಇಂಗ್ಲಿಷ್‌

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 50ನೆಯ ವಾರ್ಷಿಕೋತ್ಸವವನ್ನು ಗುರುತಿಸಲಿಕ್ಕಾಗಿ ಬಿಡುಗಡೆ ಮಾಡಲ್ಪಟ್ಟ, 42 ನಿಮಿಷಗಳ ಈ ವಿಡಿಯೊ, ವೀಕ್ಷಕರನ್ನು ಗಿಲ್ಯಡ್‌ನ ಪ್ರಥಮ ತರಗತಿಯ ಸದಸ್ಯರಿಗೆ ಪರಿಚಯಿಸುತ್ತದೆ, 95ನೆಯ ತರಗತಿಯ ಕೋಣೆಯಿಂದ ದೃಶ್ಯಗಳನ್ನು ತೋರಿಸುತ್ತದೆ, ಮಿಷನೆರಿ ಜೀವನವು ಹೇಗಿರುತ್ತದೆಂಬ ಕಲ್ಪನೆಯನ್ನು ಕೊಡುತ್ತದೆ ಮತ್ತು ಶಾಲೆಯ ಸಾಧನೆಗಳನ್ನು ಹಾಗೂ ಅದು ಲೋಕವ್ಯಾಪಕವಾದ ಸಾರುವ ಕೆಲಸದ ಮೇಲೆ ಬೀರಿರುವ ಪರಿಣಾಮವನ್ನು ಚರ್ಚಿಸುತ್ತದೆ. ಪ್ರತಿಯೊಂದು ಕ್ಯಾಸೆಟ್‌ ಪಯನೀಯರರಿಗಾಗಿ ರೂ. 150.00 ಮತ್ತು ಪ್ರಚಾರಕರು ಹಾಗೂ ಸಾರ್ವಜನಿಕರಿಗಾಗಿ ರೂ. 200.00 ಆಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ