ಪ್ರಶ್ನಾ ರೇಖಾಚೌಕ
◼ ನಮ್ಮ ಶುಶ್ರೂಷೆಯ ಸಂಬಂಧದಲ್ಲಿ ನಾವು ವಿರುದ್ಧ ಲಿಂಗಜಾತಿಯ ಒಬ್ಬರ ಸಹವಾಸದಲ್ಲಿ ಇರುವಾಗ ಯಾವ ಮುಂಜಾಗ್ರತೆಗಳು ಅಗತ್ಯ?
ನಮ್ಮ ಸಹೋದರ ಸಹೋದರಿಯರು, ತಮ್ಮ ವೈಯಕ್ತಿಕ ನಡತೆಯಲ್ಲಿ ಅತ್ಯುಚ್ಚವಾದ ನೈತಿಕ ಮಟ್ಟಕ್ಕೆ ಅಂಟಿಕೊಳ್ಳಲು ಉದ್ದೇಶಿಸುತ್ತಾರೆಂಬುದನ್ನು ನಿರೀಕ್ಷಿಸಲು ನಮಗೆ ಕಾರಣವಿದೆ. ಹಾಗಿದ್ದರೂ, ತೀರ ಕಡಿಮೆ ನೈತಿಕ ಮಿತಿಗಳಿರುವ, ಒಂದು ಅಶುದ್ಧ ಮತ್ತು ಸ್ವಚ್ಛಂಧ ಲೋಕದಲ್ಲಿ ನಾವು ಜೀವಿಸುತ್ತೇವೆ. ನಮಗೆ ಅತ್ಯುತ್ತಮವಾದ ಉದ್ದೇಶಗಳಿರಬಹುದಾದರೂ, ನಿಂದೆಯಾಗುವಂತೆ ಮಾಡುವುದರಿಂದ ಅಥವಾ ಅಯೋಗ್ಯವಾಗಿರುವ ಒಂದು ವಿಷಯದಲ್ಲಿ ಒಳಗೂಡುವುದರಿಂದ ದೂರವಿರಲು ನಾವು ಸತತವಾಗಿ ಎಚ್ಚರವಾಗಿರಬೇಕು. ಶುಶ್ರೂಷೆಯಲ್ಲಿ ಒಳಗೂಡಿರುವಾಗ ಜಾಗರೂಕರಾಗಿರುವುದು ಇದರಲ್ಲಿ ಸೇರಿರುತ್ತದೆ.
ಕ್ಷೇತ್ರ ಸೇವೆಯಲ್ಲಿ ನಾವು ಅನೇಕವೇಳೆ, ಯಾವುದು ಸತ್ಯದಲ್ಲಿ ನಿಜವಾದ ಆಸಕ್ತಿಯಂತೆ ತೋರುತ್ತದೊ ಅಂತಹ ಆಸಕ್ತಿಯನ್ನು ಪ್ರದರ್ಶಿಸುವ, ವಿರುದ್ಧ ಲಿಂಗಜಾತಿಯ ಜನರನ್ನು ಸಂಧಿಸುತ್ತೇವೆ. ಆ ಭೇಟಿಯನ್ನು ಮಾಡುವಾಗ ನಾವು ಒಬ್ಬರೇ ಇರುವಲ್ಲಿ ಮತ್ತು ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವಲ್ಲಿ, ಒಳಗೆ ಹೋಗುವುದಕ್ಕಿಂತಲೂ ಬಾಗಿಲಿನ ಬಳಿಯಲ್ಲೇ ನಿಂತು ಸಾಕ್ಷಿಯನ್ನು ಕೊಡುವುದು ಸಾಮಾನ್ಯವಾಗಿ ಅತ್ಯುತ್ತಮ. ಆಸಕ್ತಿಯಿರುವಲ್ಲಿ, ನಮ್ಮೊಂದಿಗೆ ಇನ್ನೊಬ್ಬ ಪ್ರಚಾರಕರು ಇರುವಾಗ ಅಥವಾ ಮನೆವಾರ್ತೆಯ ಇತರರು ಸಹ ಉಪಸ್ಥಿತರಿರುವ ಸಮಯದಲ್ಲಿ ಹಿಂದಿರುಗಲು ಏರ್ಪಾಡುಗಳನ್ನು ಮಾಡಸಾಧ್ಯವಿದೆ. ಇದು ಸಾಧ್ಯವಿರದಿರುವಲ್ಲಿ, ಮನೆಯವನದ್ದೇ ಲಿಂಗಜಾತಿಯ ಒಬ್ಬ ಪ್ರಚಾರಕರಿಗೆ ಆ ಪುನರ್ಭೇಟಿಯನ್ನು ಒಪ್ಪಿಸುವುದು ವಿವೇಕಯುತ. ವಿರುದ್ಧ ಲಿಂಗಜಾತಿಯ ಒಬ್ಬರೊಂದಿಗೆ ಬೈಬಲ್ ಅಭ್ಯಾಸಗಳನ್ನು ನಡಿಸುವ ವಿಷಯಕ್ಕೂ ಇದು ಅನ್ವಯವಾಗುತ್ತದೆ.—ಮತ್ತಾ. 10:16.
ಶುಶ್ರೂಷೆಯಲ್ಲಿ ಕೆಲಸಮಾಡಲು ನಾವು ಯಾರಾದರೊಬ್ಬರನ್ನು ಆರಿಸಿಕೊಳ್ಳುವಾಗ ಜಾಗರೂಕರಾಗಿರಬೇಕು. ವಿರುದ್ಧ ಲಿಂಗಜಾತಿಯ ಪ್ರಚಾರಕರು ಕೆಲವೊಮ್ಮೆ ಜೊತೆಯಾಗಿ ಕೆಲಸ ಮಾಡಬಹುದಾದರೂ, ಇದನ್ನು ಒಂದು ಗುಂಪಿನಲ್ಲಿರುವಾಗ ಮಾಡುವುದು ಹೆಚ್ಚು ಉತ್ತಮ. ಸರ್ವಸಾಧಾರಣವಾಗಿ—ಶುಶ್ರೂಷೆಯಲ್ಲಿ ಇರುವಾಗಲೂ—ನಮ್ಮ ವಿವಾಹ ಸಂಗಾತಿಯಾಗಿರದ ವಿರುದ್ಧ ಲಿಂಗಜಾತಿಯ ಒಬ್ಬರೊಂದಿಗೆ ಏಕಾಂತವಾಗಿ ಸಮಯವನ್ನು ಕಳೆಯುವುದು ನಮಗೆ ವಿವೇಕಯುತವಲ್ಲ. ಆದುದರಿಂದ ಸೇವಾ ಗುಂಪಿನ ಉಸ್ತುವಾರಿ ವಹಿಸುತ್ತಿರುವ ಸಹೋದರನು, ಹದಿವಯಸ್ಕರನ್ನು ಸೇರಿಸಿ, ಪ್ರಚಾರಕರನ್ನು ಜೊತೆಯಾಗಿ ಕೆಲಸ ಮಾಡಲು ನೇಮಿಸುವಾಗ, ಒಳ್ಳೆಯ ನಿರ್ಣಯಶಕ್ತಿಯನ್ನು ಉಪಯೋಗಿಸಬೇಕು.
ಯಾವಾಗಲೂ ಒಳ್ಳೆಯ ನಿರ್ಣಯಶಕ್ತಿಯನ್ನು ಉಪಯೋಗಿಸುವ ಮೂಲಕ, ನಮ್ಮನ್ನು ಅಥವಾ ಇತರರನ್ನು “ಮುಗ್ಗರಿಸಲಿಕ್ಕಾಗಿ ನಾವು ಯಾವುದೇ ಕಾರಣವನ್ನು” (NW) ಕೊಡುವುದರಿಂದ ದೂರವಿರುವೆವು.—2 ಕೊರಿಂ. 6:3.