ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/97 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1997 ನಮ್ಮ ರಾಜ್ಯದ ಸೇವೆ
1997 ನಮ್ಮ ರಾಜ್ಯದ ಸೇವೆ
km 6/97 ಪು. 3

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಜೂನ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 20.00ರ ಕಾಣಿಕೆಗೆ. ಮನೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸುವುದರ ಮೇಲೆ ಕೇಂದ್ರೀಕರಿಸಿರಿ.

ಜುಲೈ ಮತ್ತು ಆಗಸ್ಟ್‌: ಈ ಕೆಳಗಿನ 32 ಪುಟಗಳ ಯಾವುದೇ ಬ್ರೋಷರ್‌ಗಳನ್ನು ರೂ. 6.00ರ ಕಾಣಿಕೆಗೆ ನೀಡಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್‌), ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!

ಸೆಪ್ಟೆಂಬರ್‌: ಕುಟುಂಬ ಸಂತೋಷದ ರಹಸ್ಯ ಪುಸ್ತಕ, ರೂ. 20.00ರ ಕಾಣಿಕೆಗೆ.

◼ ಸೊಸೈಟಿಯು, ಸಾಹಿತ್ಯಕ್ಕಾಗಿರುವ ಪ್ರಚಾರಕರ ವ್ಯಕ್ತಿಗತ ವಿನಂತಿಗಳನ್ನು ಪೂರೈಸುವುದಿಲ್ಲ. ವೈಯಕ್ತಿಕ ಸಾಹಿತ್ಯವನ್ನು ಪಡೆಯುವುದರಲ್ಲಿ ಆಸಕ್ತರಿರುವವರೆಲ್ಲರೂ, ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ಹೇಳಲು ಸಾಧ್ಯವಾಗುವಂತೆ, ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ಬೇಡಿಕೆಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆಯೆಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.

◼ ಜುಲೈ ತಿಂಗಳಿನಿಂದ ಆರಂಭಿಸಿ, ಸರ್ಕಿಟ್‌ ಮೇಲ್ವಿಚಾರಕರು ತಮ್ಮ ಸಂದರ್ಶನಗಳ ಸಮಯದಲ್ಲಿ, “ಶಿಕ್ಷಣವನ್ನು ಯೆಹೋವನನ್ನು ಸ್ತುತಿಸಲಿಕ್ಕಾಗಿ ಉಪಯೋಗಿಸಿರಿ” ಎಂಬ ಬಹಿರಂಗ ಭಾಷಣವನ್ನು ಮತ್ತು “ದೃಶ್ಯ ಸಂಸ್ಥೆಯೊಂದಿಗೆ ಸರಿಸಮವಾಗಿ ಮುಂದುವರಿಯಿರಿ” ಎಂಬ ಸಮಾಪ್ತಿಯ ಭಾಷಣವನ್ನು ಕೊಡುವರು. ಗುರುವಾರ (ಅಥವಾ ಶುಕ್ರವಾರ)ದಂದು ಅವರು ಕೊಡುವ ಪ್ರಥಮ ಸೇವಾ ಭಾಷಣದ ಶಿರೋನಾಮವು, “ಧೈರ್ಯಶಾಲಿಗಳಾಗಿದ್ದು ಸಾರಿರಿ!” ಎಂದಾಗಿರುವುದು.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು, ಸಭೆಯ ಅಕೌಂಟ್ಸ್‌ ಅನ್ನು ಜೂನ್‌ 1ರಂದು ಅಥವಾ ಅದರ ನಂತರ ಸಾಧ್ಯವಾದಷ್ಟು ಬೇಗನೆ ಆಡಿಟ್‌ ಮಾಡತಕ್ಕದ್ದು. ಇದು ಮಾಡಲ್ಪಟ್ಟ ತರುವಾಯ ಸಭೆಗೆ ತಿಳಿಸಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು (ರಿವೈಸ್ಡ್‌ 1997)—ಮಲೆಯಾಳಂ.

ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ—ತಮಿಳು, ಮಲೆಯಾಳಂ

1995ರಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಬಿಡುಗಡೆಮಾಡಲ್ಪಟ್ಟ ಈ ಬ್ರೋಷರ್‌, ಪ್ರಥಮ ಬಾರಿ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಿದೆ. ಎಲ್ಲಾ ಹೆತ್ತವರು ಇದನ್ನು ತಮ್ಮ ಮಕ್ಕಳೊಂದಿಗೆ ಅಭ್ಯಾಸಿಸುವಂತೆ ಮತ್ತು ತಮ್ಮ ಮಕ್ಕಳ ಶಿಕ್ಷಕರಿಗೆ ಅದನ್ನು ನೀಡುವಂತೆ ನಾವು ಉತ್ತೇಜಿಸುತ್ತೇವೆ. ಸ್ವತಃ ಮಕ್ಕಳು, ಅದರ ಪ್ರತಿಗಳನ್ನು ತಮ್ಮೊಂದಿಗೆ ಕ್ರಮವಾಗಿ ಶಾಲೆಗೆ ಒಯ್ಯಸಾಧ್ಯವಿದೆ ಮತ್ತು ತಮ್ಮ ಶಿಕ್ಷಕರಲ್ಲಿ ಸಾಧ್ಯವಿರುವಷ್ಟು ಹೆಚ್ಚು ಮಂದಿಗೆ ಅದನ್ನು ನೀಡಸಾಧ್ಯವಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ