ಜೂನ್‌ಗಾಗಿ ಸೇವಾ ಕೂಟಗಳು
ಜೂನ್ 2ರಿಂದ ಆರಂಭವಾಗುವ ವಾರ
ಸಂಗೀತ 181 (17)
8 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ತಿಳಿಸುವಿಕೆಗಳು. ದೇಶದ ಮತ್ತು ಸ್ಥಳಿಕ ಸಭೆಯ ಫೆಬ್ರವರಿ ಕ್ಷೇತ್ರ ಸೇವಾ ವರದಿಯ ಕುರಿತಾಗಿ ಹೇಳಿಕೆ ನೀಡಿರಿ.
15 ನಿ: “ನಿಮ್ಮ ಕೈಲಾದದ್ದೆಲ್ಲವನ್ನೂ ಮಾಡಿರಿ.” ಪ್ರಶ್ನೋತ್ತರಗಳು.—ಎಪ್ರಿಲ್ 15, 1993ರ ಕಾವಲಿನಬುರುಜು, ಪುಟಗಳು 28-30ನ್ನೂ ನೋಡಿರಿ.
22 ನಿ: “ದೇವರಿಂದ ಬರುವ ಜ್ಞಾನವು ಅನೇಕ ಪ್ರಶ್ನೆಗಳನ್ನು ಉತ್ತರಿಸುತ್ತದೆ.” ಅಧ್ಯಕ್ಷನು, ಲೇಖನವನ್ನು ಇಬ್ಬರು ಅಥವಾ ಮೂವರು ಪ್ರಚಾರಕರೊಂದಿಗೆ—ಒಬ್ಬ ಯುವ ವ್ಯಕ್ತಿಯನ್ನು ಸೇರಿಸಿ—ಚರ್ಚಿಸುತ್ತಾನೆ. ಪ್ರಶ್ನೆಗಳನ್ನು ಉತ್ತರಿಸುವುದರಲ್ಲಿ, ಜ್ಞಾನ ಪುಸ್ತಕವು ಯಾಕೆ ಇಷ್ಟು ಪರಿಣಾಮಕಾರಿಯಾಗಿದೆಯೆಂಬುದನ್ನು ಒತ್ತಿಹೇಳುತ್ತಾ, ಪ್ಯಾರಗ್ರಾಫ್ 1ರ ಮೇಲೆ ಹೇಳಿಕೆ ನೀಡಿರಿ. ಒಂದು ಪ್ರ್ಯಾಕ್ಟೀಸ್ ಸೆಷನನ್ನು ಪ್ರತ್ಯಕ್ಷಾಭಿನಯಿಸಿರಿ, ಮತ್ತು ಪ್ರತಿಯೊಂದು ನಿರೂಪಣೆಯ ಬಳಿಕ, ಅದನ್ನು ಉತ್ತಮಗೊಳಿಸುವ ರೀತಿಗಳನ್ನು ಸೂಚಿಸಿರಿ.
ಸಂಗೀತ 200 (23) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 9ರಿಂದ ಆರಂಭವಾಗುವ ವಾರ
ಸಂಗೀತ 189 (4)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ಮಳೆಗಾಲದ ಜ್ಞಾಪನಗಳು. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ದೇಶದ ಅನೇಕ ಭಾಗಗಳಲ್ಲಿ ಭಾರಿ ಮಳೆಯು ದಿನನಿತ್ಯದ ಜೀವಿತವನ್ನು ಅನೇಕ ವೇಳೆ ಭಂಗಗೊಳಿಸುತ್ತದೆ. ದೇವಪ್ರಭುತ್ವ ಚಟುವಟಿಕೆಗಳು ಅಲಕ್ಷಿಸಲ್ಪಡದಂತೆ, ನಾವು ವಿಷಯಗಳನ್ನು ಹೇಗೆ ವ್ಯವಸ್ಥಾಪಿಸಬಲ್ಲೆವು? ಈ ಮುಂದಿನ ವಿಷಯವನ್ನು ಚರ್ಚಿಸಿರಿ: (1) ಕೂಟಗಳಲ್ಲಿ ಕ್ರಮವಾದ ಹಾಜರಿಯನ್ನು ಕಾಪಾಡಿಕೊಳ್ಳುವುದು. (2) ಒಂದು ವೇಳೆ ಅನಂತರ ಕೆಟ್ಟ ತಾಪಮಾನವಿರುವ ಸಂದರ್ಭದಲ್ಲಿ, ತಿಂಗಳ ಆರಂಭದಲ್ಲೇ ಪ್ರಾರಂಭಿಸುತ್ತಾ, ಶುಶ್ರೂಷೆಯಲ್ಲಿ ಒಂದು ಕ್ರಮವಾದ ಪಾಲನ್ನು ಹೊಂದುವ ಏರ್ಪಾಡು ಮಾಡುವುದು. (3) ಪ್ರಾಯೋಗಿಕವಾದ ಮಳೆ ಉಡುಪು ಮತ್ತು ನಮ್ಮ ಬೈಬಲುಗಳು, ಸಾಹಿತ್ಯ ಮತ್ತು ಪತ್ರಿಕೆಗಳನ್ನು ಮಳೆಯಿಂದ ರಕ್ಷಿಸಲು ತಕ್ಕದಾದ ಒಂದು ಬ್ಯಾಗನ್ನು ಹೊಂದಿರುವುದು. (4) ಶಕ್ಯವಿರುವಲ್ಲಿ, ಅನೇಕ ಅಂತಸ್ತುಗಳುಳ್ಳ ಕಟ್ಟಡಗಳು, ಅಥವಾ ನೆರೆಯಿಂದ ನೀರು ತುಂಬದಿರುವ ಕ್ಷೇತ್ರಗಳಂತಹ ಸೂಕ್ತವಾದ ಟೆರಿಟೊರಿಯನ್ನು ಆಯ್ಕೆಮಾಡಿಕೊಳ್ಳುವುದು. (5) ಅನೌಪಚಾರಿಕ ಸಾಕ್ಷಿಕಾರ್ಯಕ್ಕಾಗಿ ಸ್ವಲ್ಪ ರಕ್ಷಣೆಯನ್ನು ನೀಡಬಲ್ಲ ಸಾರ್ವಜನಿಕ ಸ್ಥಳಗಳನ್ನು ಕಂಡುಕೊಳ್ಳುವುದು. (6) ವರದಿಸಲ್ಪಟ್ಟ ಚಟುವಟಿಕೆಯಲ್ಲಿ ಯಾವುದೇ ಇಳಿತವಿರದಂತೆ, ಹಿರಿಯರು ಸಭಾ ಚಟುವಟಿಕೆಗಳನ್ನು ಸುಸಂಘಟಿತವಾಗಿಡುವುದು.
20 ನಿ: ಇತರರಿಗೆ ಕಲಿಸುವುದು—ಒಂದು ಜರೂರಿಯ ಅಗತ್ಯ. ಒಬ್ಬ ಹಿರಿಯನಿಂದ ಭಾಷಣ. 1997 ವರ್ಷಪುಸ್ತಕದ 33ನೆಯ ಪುಟದಲ್ಲಿರುವ 1996ರ ಲೋಕವ್ಯಾಪಕ ಸೇವಾ ವರದಿಯನ್ನು ಪುನರ್ವಿಮರ್ಶಿಸಿರಿ. ಜನರನ್ನು ಕಂಡುಕೊಳ್ಳುವಲ್ಲೆಲ್ಲಾ ಅವರಿಗೆ ಸಾಕ್ಷಿನೀಡಲಿಕ್ಕಾಗಿ ತೀವ್ರಗೊಳಿಸಲ್ಪಟ್ಟ ಪ್ರಯತ್ನವು ಫಲವನ್ನು ಉತ್ಪಾದಿಸುತ್ತಿದೆ. ಕೊಡಿಕೆಗಳನ್ನು ಮಾಡಿರುವಲ್ಲೆಲ್ಲಾ ಪುನಃ ಹೋಗಿ, ಜನರಿಗೆ ಸತ್ಯವನ್ನು ಕಲಿಸುವುದೇ ಈಗ ಇರುವ ಜರೂರಿಯ ಅಗತ್ಯವಾಗಿದೆ. ನಾವು ಅವರನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಂಪರ್ಕಿಸುವಾಗ, ಒಂದು ಪುನರ್ಭೇಟಿಯನ್ನು ಮಾಡಲು ಸಾಧ್ಯವಾಗುವಂತೆ, ಜಾಣ್ಮೆಯಿಂದ ಅವರ ಹೆಸರನ್ನು ಮತ್ತು ವಿಳಾಸವನ್ನು ವಿನಂತಿಸಿಕೊಳ್ಳೋಣ. ನಾವು ರಾಜ್ಯದ ಬೀಜವನ್ನು ಬಿತ್ತುವುದಕ್ಕಿಂತಲೂ ಹೆಚ್ಚನ್ನು ಮಾಡುವ ಅಗತ್ಯವಿದೆ; ನಾವು ಅದಕ್ಕೆ ನೀರನ್ನೂ ಹೊಯ್ಯಬೇಕು. (1 ಕೊರಿಂ. 3:6-8) ಬೀಜವು ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟಿರುವಾಗ, ಒಳ್ಳೆಯ ಕಲಿಸುವಿಕೆಯು, ಒಬ್ಬ ವ್ಯಕ್ತಿಗೆ ಅದರ ಅರ್ಥವನ್ನು ಗ್ರಹಿಸುವಂತೆ ಸಹಾಯ ಮಾಡುವುದು. (ಮತ್ತಾ. 13:23) ಕಲಿಸುವ ಕಾರ್ಯದಲ್ಲಿ ನಾವು ಸಾಧ್ಯವಿರುವಷ್ಟು ಪೂರ್ಣವಾಗಿ ಮತ್ತು ಕೌಶಲದಿಂದ ಪಾಲಿಗರಾಗಬೇಕು. (ಇಬ್ರಿ. 5:12ಎ) ಜೂನ್ 1996ರ ನಮ್ಮ ರಾಜ್ಯದ ಸೇವೆಯಲ್ಲಿರುವ ಪುರವಣಿಯ, ಪ್ಯಾರಗ್ರಾಫ್ 25-6ರಿಂದ ಅಂಶಗಳನ್ನು ಸೇರಿಸಿರಿ. ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕದಲ್ಲಿ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸುವುದನ್ನು ಒತ್ತಿಹೇಳಿರಿ.
ಸಂಗೀತ 204 (25) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 16ರಿಂದ ಆರಂಭವಾಗುವ ವಾರ
ಸಂಗೀತ 192 (21)
10 ನಿ: ಸ್ಥಳಿಕ ತಿಳಿಸುವಿಕೆಗಳು. ಪ್ರಚಲಿತ ಪತ್ರಿಕೆಗಳಲ್ಲಿನ ಸಂಭಾಷಣಾ ವಿಷಯಗಳನ್ನು ಸೂಚಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ನಿಮ್ಮ ಧರ್ಮವನ್ನು ಸತ್ಯವೋ ಸುಳ್ಳೋ ಎಂದು ಗುರುತಿಸುವುದು. ಡಿಸೆಂಬರ್ 22, 1989ರ ಅವೇಕ್! ಪತ್ರಿಕೆಯ 18ನೆಯ ಪುಟದ ಮೇಲೆ ಆಧಾರಿಸಿ, ಒಬ್ಬ ಹಿರಿಯನು, ಇಬ್ಬರು ಅಥವಾ ಮೂವರು ಸಮರ್ಥ ಪ್ರಚಾರಕರೊಂದಿಗೆ ಒಂದು ಚರ್ಚೆಯನ್ನು ನಡಿಸುತ್ತಾನೆ. ಪ್ರಾಮಾಣಿಕರೆಂದು ತೋರುವ ಅನೇಕ ಜನರನ್ನು ನಾವು ಪುನಃ ಪುನಃ ಸಂದರ್ಶಿಸುತ್ತೇವೆ. ಆದಾಗಲೂ, ಅವರು ಒಂದು ಬೈಬಲ್ ಅಭ್ಯಾಸವನ್ನು ಸ್ವೀಕರಿಸುವುದಿಲ್ಲ. ನಿಷ್ಕೃಷ್ಟ ಜ್ಞಾನಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಅಗತ್ಯದ ಕುರಿತಾಗಿ ಅವರಿಗೆ ಅರಿವನ್ನು ಹುಟ್ಟಿಸಲು, ಈ ಅವೇಕ್! ಲೇಖನದಲ್ಲಿರುವ ವಿಷಯಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆಯೆಂಬುದನ್ನು ಚರ್ಚಿಸಿರಿ. ಜ್ಞಾನ ಪುಸ್ತಕದಲ್ಲಿ, “ದೇವರು ಯಾರ ಆರಾಧನೆಯನ್ನು ಅಂಗೀಕರಿಸುತ್ತಾನೆ?” ಎಂಬ ಅಧ್ಯಾಯ 5ರಲ್ಲಿರುವ ಮುಖ್ಯ ವಿಷಯಗಳಿಗೆ ನಿರ್ದೇಶಿಸಿರಿ. ಪ್ಯಾರಗ್ರಾಫ್ 20ನ್ನು ಓದಿರಿ. ಒಂದು ಅಭ್ಯಾಸವನ್ನು ಸ್ವೀಕರಿಸುವಂತೆ ಮತ್ತು ಕೂಟಗಳಿಗೆ ಹಾಜರಾಗುವಂತೆ ಅಂತಹ ವ್ಯಕ್ತಿಗಳಿಗೆ ದಯಾಭಾವದಿಂದ ಹಾಗೂ ಜಾಣ್ಮೆಯಿಂದ ಉತ್ತೇಜಿಸಲು, ಅವರಿಗೆ ಪುನರ್ಭೇಟಿ ಮಾಡಸಾಧ್ಯವಿದೆ.
ಸಂಗೀತ 201 (8) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 23ರಿಂದ ಆರಂಭವಾಗುವ ವಾರ
ಸಂಗೀತ 193 (18)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: ಅವರು ನಮ್ಮ ಕುರಿತಾಗಿ ಏನು ಹೇಳುತ್ತಿದ್ದಾರೆ? ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 1986-1995, 341-3ನೆಯ ಪುಟಗಳಲ್ಲಿ (ಅಥವಾ 1986-90 ಇಂಡೆಕ್ಸ್‌ನಲ್ಲಿ 268-9ನೆಯ ಪುಟಗಳು) ಕಂಡುಬರುವ ಮಾಹಿತಿಯ ಮೇಲಾಧಾರಿತವಾದ ಒಂದು ಭಾಷಣ. ಯೆಹೋವನ ಸಾಕ್ಷಿಗಳ—ನಮ್ಮ ನಡತೆ ಮತ್ತು ನಮ್ಮ ಕೆಲಸದ—ಕುರಿತಾಗಿ, “ಇತರರಿಂದ ಹೇಳಿಕೆಗಳು” (ಸ್ಟೇಟ್‌ಮೆಂಟ್ಸ್ ಬೈ ಅದರ್ಸ್) ಎಂಬ ವಿಷಯದಿಂದ ಗಮನಾರ್ಹವಾದ ಹೇಳಿಕೆಗಳನ್ನು ಆಯ್ದುಕೊಳ್ಳಿರಿ. ಇತರರು ನಮ್ಮಲ್ಲಿ ಏನನ್ನು ನೋಡುತ್ತಾರೊ ಅದರಿಂದ ಅವರು ಪ್ರಸನ್ನಕರವಾಗಿ ಪ್ರಭಾವಿತರಾಗಿರುವ ವಿಧವನ್ನು ತೋರಿಸಿರಿ. ನಾವು ಯಾವಾಗಲೂ ನಮ್ಮನ್ನು ಯೋಗ್ಯವಾಗಿ ನಡೆಸಿಕೊಳ್ಳಲು ಮತ್ತು ನಮ್ಮ ಕೆಲಸದಲ್ಲಿ ಪಟ್ಟುಹಿಡಿಯಲು ಇದು ನಮ್ಮನ್ನು ಏಕೆ ಪ್ರಚೋದಿಸಬೇಕೆಂಬುದನ್ನು ವಿವರಿಸಿರಿ. ನಮ್ಮ ಕುರಿತಾಗಿ ಹೆಚ್ಚನ್ನು ತಿಳಿದುಕೊಳ್ಳಲು ಬಯಸುವ ಪರಿಚಯಸ್ಥರೊಂದಿಗೆ ಮತ್ತು ಆಸಕ್ತ ವ್ಯಕ್ತಿಗಳೊಂದಿಗೆ ಮಾತಾಡುವಾಗ, ಅಂತಹ ಪ್ರಸನ್ನಕರವಾದ ಹೇಳಿಕೆಗಳನ್ನು ಉಪಯೋಗಿಸುವ ವಿಧವನ್ನು ತಿಳಿಸಿರಿ.
20 ನಿ: “ಹೆತ್ತವರೇ—ನಿಮ್ಮ ಮಕ್ಕಳಿಗೆ ಸಾರಲು ಕಲಿಸಿರಿ.” ಪ್ರಶ್ನೋತ್ತರಗಳು. ನಮ್ಮ ಶುಶ್ರೂಷೆ ಪುಸ್ತಕದಲ್ಲಿ, 99-100ನೆಯ ಪುಟಗಳಲ್ಲಿ, “ಯುವ ಜನರಿಗೆ ಸಹಾಯ ಕೊಡುವುದು” ಎಂಬ ಉಪಶೀರ್ಷಿಕೆಯ ಕೆಳಗಿರುವ ನಿರ್ದೇಶನವನ್ನು ಸೇರಿಸಿರಿ.
ಸಂಗೀತ 211 (22) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 30ರಿಂದ ಆರಂಭವಾಗುವ ವಾರ
ಸಂಗೀತ 197 (6)
10 ನಿ: ಸ್ಥಳಿಕ ತಿಳಿಸುವಿಕೆಗಳು. ಜೂನ್ ತಿಂಗಳಿಗಾಗಿ ಎಲ್ಲರೂ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಜ್ಞಾಪಿಸಿರಿ.
20 ನಿ: “ಯುವ ಜನರೇ—ನಿಮ್ಮ ಆತ್ಮಿಕ ಗುರಿಗಳು ಏನಾಗಿವೆ?” ಇಬ್ಬರು ತಂದೆಯಂದಿರು ಲೇಖನವನ್ನು ಜೊತೆಯಾಗಿ ಚರ್ಚಿಸುತ್ತಾರೆ. ಪ್ರಾಪಂಚಿಕ ಹಿತಾಸಕ್ತಿಗಳನ್ನು ಬೆನ್ನಟ್ಟುವ ಬದಲಿಗೆ, ಆತ್ಮಿಕ ಆಶೀರ್ವಾದಗಳನ್ನು ತರುವ ದೇವಪ್ರಭುತ್ವ ಗುರಿಗಳನ್ನು ಇಡುವುದು ಏಕೆ ಆವಶ್ಯಕ ಎಂಬುದನ್ನು ತಮ್ಮ ಮಕ್ಕಳು ಗಣ್ಯಮಾಡುವಂತೆ ಅವರಿಗೆ ಸಹಾಯ ಮಾಡುವ ವಿಧವನ್ನು ಅವರು ಪರಿಗಣಿಸುತ್ತಾರೆ.—ನಮ್ಮ ಶುಶ್ರೂಷೆ ಪುಸ್ತಕ, 116-18ನೆಯ ಪುಟಗಳನ್ನೂ ನೋಡಿರಿ.
15 ನಿ: ಜುಲೈ ತಿಂಗಳಿನ ಸಾಹಿತ್ಯ ನೀಡುವಿಕೆಗಾಗಿ ತಯಾರಿಸುವುದು. ಸ್ಥಳಿಕ ಟೆರಿಟೊರಿಯಲ್ಲಿ ಚೆನ್ನಾಗಿ ಆಸಕ್ತಿಯನ್ನು ಎಬ್ಬಿಸಿರುವ ಒಂದೆರಡು ಬ್ರೋಷರ್‌ಗಳನ್ನು ಆರಿಸಿಕೊಳ್ಳಿರಿ ಮತ್ತು ಪ್ರತಿಯೊಂದರಲ್ಲಿರುವ ಗಮನಾರ್ಹವಾದ ವಿಷಯಗಳಲ್ಲಿ ಕೆಲವನ್ನು ಪುನರ್ವಿಮರ್ಶಿಸಿರಿ. ಇವುಗಳನ್ನು ಒಂದು ನಿರೂಪಣೆಯಲ್ಲಿ ಸೇರಿಸುವ ವಿಧಗಳನ್ನು ಸೂಚಿಸಿರಿ. ಎಲ್ಲರೂ ಕೊಡಿಕೆಗಳ ಒಂದು ದಾಖಲೆಯನ್ನು ಇಡಲು ಮತ್ತು ಹಿಂದಿರುಗಿ ಹೋಗಿ, ಆಸಕ್ತಿಯನ್ನು ವಿಕಸಿಸುವಂತೆ ಜ್ಞಾಪಿಸಿರಿ.
ಸಂಗೀತ 109 (2) ಮತ್ತು ಸಮಾಪ್ತಿಯ ಪ್ರಾರ್ಥನೆ.