ಸಾಂತ್ವನವನ್ನು ಕಂಡುಕೊಳ್ಳುವಂತೆ ಇತರರಿಗೆ ಸಹಾಯಮಾಡಿರಿ
1 ಅನೇಕ ಜನರು ವಿಪತ್ತುಗಳು, ಯುದ್ಧಗಳು, ಪಾತಕ ಮತ್ತು ಕಷ್ಟಾನುಭವದ ಕುರಿತಾಗಿ ಕೇಳಿಕೇಳಿ ಬೇಸತ್ತುಹೋಗಿದ್ದಾರೆ. ಇಂದಿನ ವಾರ್ತಾ ವರದಿಗಳಲ್ಲಿ ಸಾಂತ್ವನವು ಸುವ್ಯಕ್ತವಾಗಿ ಇಲ್ಲದಿರುವುದಾದರೂ, ಅದು ತಾನೇ ಮಾನವಕುಲಕ್ಕೆ ನಿಜವಾಗಿಯೂ ಅಗತ್ಯವಾಗಿರುವ ಸಂಗತಿಯಾಗಿದೆ. ಸಾಂತ್ವನಕೊಡುವುದರ ಅರ್ಥ, “ಬಲ ಮತ್ತು ನಿರೀಕ್ಷೆಯನ್ನು ಕೊಡುವುದು” ಮತ್ತು ಇನ್ನೊಬ್ಬರ “ದುಃಖ ಅಥವಾ ತೊಂದರೆಯನ್ನು ಕಡಿಮೆಗೊಳಿಸುವುದು” ಎಂದಾಗಿದೆ. ಯೆಹೋವನ ಸಾಕ್ಷಿಗಳೋಪಾದಿ, ಈ ರೀತಿಯಲ್ಲಿ ನಾವು ಜನರಿಗೆ ಸಹಾಯಮಾಡಲು ಸಜ್ಜಿತರಾಗಿದ್ದೇವೆ. (2 ಕೊರಿಂ. 1:3, 4) ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಾವು ನೀಡಲಿರುವ ನಮ್ಮ ಬೈಬಲಾಧಾರಿತ ಬ್ರೋಷರುಗಳು, ಸತ್ಯದ ಸಾಂತ್ವನದಾಯಕ ಸಂದೇಶಗಳನ್ನು ಪಡೆದಿವೆ. (ರೋಮಾ. 15:4) ವಿವಿಧ ಪರಿಸ್ಥಿತಿಗಳಲ್ಲಿ ಅವುಗಳನ್ನು ಸಾದರಪಡಿಸಲು ಇಲ್ಲಿ ಕೆಲವು ಸಲಹೆಗಳಿವೆ:
2 ಪ್ರಾಯಶಃ ನೀವು ಈ ಮುಂದಿನ ವಿಷಯವನ್ನು ಹೇಳುವ ಮೂಲಕ, ಒಂದು ದುರಂತಮಯ ವಾರ್ತಾ ಕಥೆಯು ಇತರರಿಗೆ ಸಾಕ್ಷಿಯನ್ನು ನೀಡಲು ಮತ್ತು ಸಾಂತ್ವನವನ್ನು ತರಲು ಒಂದು ಅವಕಾಶವನ್ನು ಉಂಟುಮಾಡಬಲ್ಲದು:
◼“ಇಂತಹ ಸಂಗತಿಗಳು ಸಂಭವಿಸುವಾಗ, ದೇವರು ನಿಜವಾಗಿ ಮಾನವರ ಕುರಿತಾಗಿ ಚಿಂತಿಸುತ್ತಾನೊ ಎಂದು ಕೆಲವರು ಸೋಜಿಗಪಡುತ್ತಾರೆ. ನೀವು ಏನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಭೂಮಿಯನ್ನು ಸೃಷ್ಟಿಸುವುದರಲ್ಲಿ ದೇವರಿಗೆ ಒಂದು ಉದ್ದೇಶವಿತ್ತೆಂಬುದನ್ನು ಬೈಬಲ್ ಹೇಳುವುದನ್ನು ಗಮನಿಸಿರಿ.” ಯೆಶಾಯ 45:18ನ್ನು ಓದಿರಿ. ಅನಂತರ ಮುಂದುವರಿಸಿರಿ: “ಭೂಮಿಯು ನಿವಾಸಿಸಲ್ಪಡಬೇಕೆಂದು ಆತನು ಬಯಸುವಲ್ಲಿ, ಮಾನವರು ಅದರ ಮೇಲೆ ಶಾಂತಿಪೂರ್ಣವಾಗಿ ಜೀವಿಸಲು ಸಾಧ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಆತನು ಏನನ್ನಾದರೂ ಮಾಡುವನೆಂಬುದನ್ನು ನಂಬುವುದು ಸಮಂಜಸವಲ್ಲವೊ? ಸಾಂತ್ವನಗೊಳಿಸುವಂತಹದ್ದಾಗಿ ನೀವು ಕಂಡುಕೊಳ್ಳುವಿರೆಂದು ನನಗೆ ಗೊತ್ತಿರುವ ಒಂದು ಬ್ರೋಷರ್ ನನ್ನ ಬಳಿಯಿದೆ. ಅದರ ಶಿರೋನಾಮವು ದೇವರು ನಮ್ಮ ಕುರಿತಾಗಿ ನಿಜವಾಗಿಯೂ ಚಿಂತಿಸುತ್ತಾನೋ? ಎಂದಾಗಿದೆ. [ಮುಖಪುಟದಲ್ಲಿರುವ ಪ್ರಶ್ನೆಗಳನ್ನು ಓದಿರಿ.] ನಾವಿಂದು ಎದುರಿಸುತ್ತಿರುವ ಎಲ್ಲ ಅನ್ಯಾಯದ ಪರಿಸ್ಥಿತಿಗಳಿಗೆ ದೇವರು ಬೇಗನೆ ಒಂದು ಅಂತ್ಯವನ್ನು ತರುವನೆಂದು ಮನಗಾಣಿಸುವ ರುಜುವಾತು ಅದರಲ್ಲಿದೆ. ನೀವಿದನ್ನು ಓದಲು ಇಷ್ಟಪಡುವಿರೊ?” ಬ್ರೋಷರನ್ನು ನೀಡಿರಿ ಮತ್ತು ಹಿಂದಿರುಗಿ ಹೋಗಲು ಏರ್ಪಾಡು ಮಾಡಿರಿ.
3 ಪುನರ್ಭೇಟಿಯಲ್ಲಿ, ನೀವು ಹೀಗೆ ಹೇಳಬಹುದು:
◼“ದೇವರು ನಮ್ಮ ಕುರಿತಾಗಿ ನಿಜವಾಗಿಯೂ ಚಿಂತಿಸುತ್ತಾನೊ? ಎಂಬ ಬ್ರೋಷರನ್ನು ನಾನು ಬಿಟ್ಟುಹೋದಾಗ, ದೇವರ ಆಸ್ಥೆಯ ಕುರಿತಾದ ರುಜುವಾತಿನ ಕುರಿತಾಗಿ ನಾವು ಮಾತಾಡುತ್ತಿದ್ದೆವು. ಪುಟ 7ರಲ್ಲಿರುವ ಈ ಅಂಶವನ್ನು ನೀವು ಗಮನಿಸಿದ್ದಿರಬಹುದು. [ಚಿತ್ರವನ್ನು ತೋರಿಸಿ, ಪ್ಯಾರಗ್ರಾಫ್ 15ನ್ನು ಸಾರಾಂಶಿಸಿರಿ.] ಮಾನವಕುಲದ ಸೃಷ್ಟಿಯಲ್ಲಿ ದೇವರು ಎಷ್ಟು ಕಾಳಜಿಯನ್ನು ವಹಿಸಿದನೆಂಬುದಕ್ಕೆ ಇದು ಕೇವಲ ಒಂದು ಉದಾಹರಣೆಯಾಗಿದೆ. [ಪುಟ 9ರಲ್ಲಿರುವ ಪ್ಯಾರಗ್ರಾಫ್ 27ನ್ನು ಓದಿರಿ.] ಬೈಬಲಿನ ಒಂದು ವೈಯಕ್ತಿಕ ಅಭ್ಯಾಸವು, ಜೀವನದ ದಿನನಿತ್ಯದ ಸಮಸ್ಯೆಗಳನ್ನು ನಿಭಾಯಿಸಲು ನನಗೆ ಸಹಾಯಮಾಡಿದೆ. ಯಾಕಂದರೆ ಅದು ವಿಷಯಗಳ ಕುರಿತಾಗಿ ದೇವರ ವೀಕ್ಷಣೆಯನ್ನು ಕೊಡುತ್ತದೆ.” ಒಂದು ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಲು ಸಿದ್ಧರಿದ್ದೀರೆಂದು ಹೇಳಿರಿ.
4 “ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?” ಎಂಬ ಬ್ರೋಷರನ್ನು ಉಪಯೋಗಿಸುತ್ತಾ ಒಂದು ಸಂಕ್ಷಿಪ್ತ ಸಾಕ್ಷಿಯನ್ನು ನೀಡಸಾಧ್ಯವಿದೆ. ನೀವು ನಿಮ್ಮನ್ನೇ ಪರಿಚಯಿಸಿಕೊಂಡು, ಹೀಗೆ ಹೇಳಸಾಧ್ಯವಿದೆ:
◼“ನಾನು ನಿಮ್ಮನ್ನು ನಿಮ್ಮ ನೆರೆಯವರನ್ನು ಒಂದು ಪ್ರಾಮುಖ್ಯ ಸಂದೇಶದೊಂದಿಗೆ ಸಂದರ್ಶಿಸುತ್ತಿದ್ದೇನೆ.” ಬ್ರೋಷರ್ನ ಪುಟ 4ರಲ್ಲಿರುವ ಮೊದಲನೆಯ ಪ್ಯಾರಗ್ರಾಫನ್ನು ಓದಿ, ಮನೆಯವನು ಏನು ನೆನಸುತ್ತಾನೆಂದು ಅನಂತರ ಕೇಳಿರಿ, ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಿಮ್ಮ ಬೈಬಲನ್ನು ಯೆಶಾಯ 45:18ಕ್ಕೆ ತೆರೆದಿಡಿರಿ. ಆ ವಚನವನ್ನು ಓದಿ, ಹೀಗೆ ಹೇಳಿರಿ: “ನಮ್ಮನ್ನು ಮನಸ್ಸಿನಲ್ಲಿಡುತ್ತಾ, ಈ ಭೂಮಿಯನ್ನು ಸೃಷ್ಟಿಸಲಾಯಿತೆಂದು ಈ ವಚನವು ತೋರಿಸುತ್ತದೆ. ಆದರೆ ನಾವು ಇಲ್ಲಿ ಏನನ್ನು ಮಾಡುವಂತೆ ಉದ್ದೇಶಿಸಲ್ಪಟ್ಟಿದ್ದೇವೆ? ನಮ್ಮ ಭವಿಷ್ಯತ್ತು ಏನು?” ಬ್ರೋಷರಿನ ಉದ್ದೇಶವನ್ನು ವಿವರಿಸಿ, ಅದನ್ನು ನೀಡಿರಿ. ಪುನಃ ಸಂದರ್ಶಿಸಲು ಒಂದು ನಿರ್ದಿಷ್ಟ ಏರ್ಪಾಡನ್ನು ಮಾಡಿರಿ.
5 ಆಸಕ್ತಿಯನ್ನು ಮುಂದುವರಿಸುವ ಸಂದರ್ಶನದಲ್ಲಿ, ಒಂದು ಅಭ್ಯಾಸವನ್ನು ಆರಂಭಿಸಲು ನೀವು ಈ ಪ್ರಸ್ತಾವವನ್ನು ಪ್ರಯತ್ನಿಸಬಹುದು:
◼“ಜೀವಿತದ ಉದ್ದೇಶದ ಕುರಿತಾಗಿ ನಮಗೆ ಯಾರು ತಿಳಿಸಬಲ್ಲರೆಂಬುದನ್ನು ದೃಷ್ಟಾಂತಿಸುವ ಮೂಲಕ, ನಮ್ಮ ಹಿಂದಿನ ಸಂಭಾಷಣೆಯನ್ನು ನಾನು ಮುಂದುವರಿಸಲು ಇಷ್ಟಪಡುತ್ತೇನೆ. [ಜೀವಿತದ ಉದ್ದೇಶ ಬ್ರೋಷರ್ನ ಪುಟ 6ರಲ್ಲಿರುವ 1 ಮತ್ತು 2ನೆಯ ಪ್ಯಾರಗ್ರಾಫ್ಗಳ ತಾತ್ಪರ್ಯವನ್ನು ತಿಳಿಸಿರಿ.] ಯೆಹೋವ ದೇವರು ನಮ್ಮ ಸೃಷ್ಟಿಕರ್ತನಾಗಿದ್ದಾನೆಂದು ಪ್ರಕಟನೆ 4:11 ವಿವರಿಸುತ್ತದೆ. [ಓದಿರಿ.] ನಮ್ಮನ್ನು ಸೃಷ್ಟಿಸಲಿಕ್ಕಾಗಿ ಅವನಲ್ಲಿ ನಿಶ್ಚಯವಾಗಿಯೂ ಒಂದು ಕಾರಣವಿದ್ದಿರಬೇಕು. ಅದು ಏನಾಗಿದೆಯೆಂದು ಕಂಡುಹಿಡಿಯಲು ಬಯಸಿರುವ ಜನರು, ದೇವರ ಲಿಖಿತ ವಾಕ್ಯವಾದ ಬೈಬಲನ್ನು ಅಧ್ಯಯನಿಸಿದ್ದಾರೆ. ನಾನು ನಿಮಗೆ ಆ ಅವಕಾಶವನ್ನು ನೀಡಲು ಇಷ್ಟಪಡುತ್ತೇನೆ.” ನಮ್ಮ ಉಚಿತ ಮನೆ ಬೈಬಲ್ ಅಭ್ಯಾಸ ಕ್ರಮವು ನಡಿಸಲ್ಪಡುವ ವಿಧವನ್ನು ವಿವರಿಸಿರಿ ಮತ್ತು ಅಭ್ಯಾಸವನ್ನು ಆರಂಭಿಸಲು ಏರ್ಪಾಡುಗಳನ್ನು ಮಾಡಿರಿ.
6 ಈ ಸಕಾರಾತ್ಮಕ ಪ್ರಸ್ತಾವವು, ಒಬ್ಬ ಪ್ರಿಯ ವ್ಯಕ್ತಿಯ ಮರಣವನ್ನು ಅನುಭವಿಸಿರುವವರನ್ನು ಸಂತೈಸಬಹುದು:
◼“ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿರುವವರೆಲ್ಲರಿಗೋಸ್ಕರ ನಾನೊಂದು ಸಾರ್ವಜನಿಕ ಸೇವೆಯನ್ನು ಮಾಡುತ್ತಿದ್ದೇನೆ. ನಾವು ನಿಭಾಯಿಸಬೇಕಾಗಬಹುದಾದ ಅತಿ ಕಠಿನವಾದ ವಿಷಯಗಳಲ್ಲಿ ಇದು ಒಂದು ವಿಷಯವಾಗಿರಬಹುದಾದ ಕಾರಣದಿಂದ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಈ ಬ್ರೋಷರ್ ತಯಾರಿಸಲ್ಪಟ್ಟಿದೆ. ಇದು ಲಕ್ಷಾಂತರ ಜನರಿಗೆ ಸಹಾಯಮಾಡಿದೆ. ಯೇಸು ಕ್ರಿಸ್ತನಿಂದ ಮಾಡಲ್ಪಟ್ಟಿರುವ ಒಂದು ರೋಮಾಂಚಕಾರಿ ವಾಗ್ದಾನದ ಕುರಿತಾಗಿ ಇದು ಏನು ತಿಳಿಸುತ್ತದೆಂಬುದನ್ನು ನಾನು ನಿಮಗೆ ತೋರಿಸಲು ಇಷ್ಟಪಡುತ್ತೇನೆ. [ಯೋಹಾನ 5:21, 28, 29ನ್ನು ಸೇರಿಸಿ, ಪುಟ 26ರಲ್ಲಿರುವ ಐದನೆಯ ಪ್ಯಾರಗ್ರಾಫನ್ನು ಓದಿರಿ.] ಯೇಸು ಲಾಜರನನ್ನು ವಾಸ್ತವದಲ್ಲಿ ಮರಣದಿಂದ ಎಬ್ಬಿಸುವುದರ ಕುರಿತಾದ ಬೈಬಲ್ ವೃತ್ತಾಂತವನ್ನು ಚಿತ್ರಿಸುವ, ಪುಟ 29ರಲ್ಲಿರುವ ಈ ಚಿತ್ರವನ್ನು ಗಮನಿಸಿರಿ. ಈ ಸಾಂತ್ವನದಾಯಕ ಬ್ರೋಷರನ್ನು ನೀವು ಸ್ವೀಕರಿಸುವಂತೆ ಉತ್ತೇಜಿಸಲು ನಾನು ಇಷ್ಟಪಡುತ್ತೇನೆ, ಮತ್ತು ನಾನು ಪುನಃ ಬಂದು ಅದನ್ನು ನಿಮ್ಮೊಂದಿಗೆ ಚರ್ಚಿಸಲು ಸಂತೋಷಿಸುವೆ.”
7 ನೀವು ಹಿಂದಿರುಗಿ ಹೋಗುವಾಗ, “ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಬ್ರೋಷರ್ನ ಪುಟ 29ರಲ್ಲಿರುವ ಚಿತ್ರವನ್ನು ಪುನಃ ತೋರಿಸಿ, ನೀವು ಹೀಗೆ ಹೇಳಬಹುದು:
◼“ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದ ಕುರಿತಾದ ನಮ್ಮ ಚರ್ಚೆಯನ್ನು ಜ್ಞಾಪಿಸಿಕೊಳ್ಳಿರಿ. [ಪುಟ 28ರಲ್ಲಿರುವ ಚಿತ್ರಬರಹವನ್ನು ಓದಿರಿ, ಮತ್ತು “ಅದು ನಿಜವಾಗಿ ಸಂಭವಿಸಿತೊ?” ಎಂಬ ಉಪಶೀರ್ಷಿಕೆಯ ಕೆಳಗಿರುವ ವಸ್ತುವಿಷಯವನ್ನು ಪರಿಗಣಿಸಿರಿ.] ಮೃತಪಟ್ಟಿರುವ ಒಬ್ಬ ಪ್ರಿಯ ವ್ಯಕ್ತಿಯನ್ನು ನೀವು ಪುನಃ ನೋಡಸಾಧ್ಯವಿದೆಯೆಂಬುದನ್ನು ನಂಬುವಂತೆ ನಿಮ್ಮ ಹೃದಯವು ಹಾತೊರೆಯುವಲ್ಲಿ, ಪುನರುತ್ಥಾನದ ನಿರೀಕ್ಷೆಯಲ್ಲಿ ನಂಬಿಕೆಯನ್ನಿಡುವಂತೆ ನಾನು ನಿಮಗೆ ಸಹಾಯ ಮಾಡುವೆ.” ಒಂದು ಮನೆ ಬೈಬಲ್ ಅಭ್ಯಾಸವನ್ನು ನೀಡಿರಿ.
8 “ದುಃಖಿತರೆಲ್ಲರನ್ನು ಸಂತೈಸುವ” ಮೂಲಕ ಯೇಸುವನ್ನು ಅನುಕರಿಸಲು, ಬರಲಿರುವ ತಿಂಗಳುಗಳಲ್ಲಿ ನಾವು ನಮ್ಮ ಅತ್ಯುತ್ತಮವಾದುದನ್ನು ಮಾಡುವಂತಾಗಲಿ.—ಯೆಶಾ. 61:3.