ಕೂಟಗಳು ಸತ್ಕಾರ್ಯಗಳನ್ನು ಪ್ರೇರಿಸುತ್ತವೆ
1 ನಮ್ಮ ಆರಾಧನೆಯ ಎರಡು ಅತ್ಯಾವಶ್ಯಕ ವೈಶಿಷ್ಟ್ಯಗಳು, ಸಭಾ ಕೂಟಗಳಿಗೆ ಹಾಜರಾಗುವುದು ಮತ್ತು ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದೇ ಆಗಿದೆ. ಅವೆರಡೂ ಜೊತೆಜೊತೆಯಾಗಿ ಹೋಗುತ್ತವೆ. ಒಂದು ಕೆಲಸವು ಇನ್ನೊಂದು ಕೆಲಸವನ್ನು ಪ್ರಭಾವಿಸುತ್ತದೆ. ಕ್ರೈಸ್ತ ಕೂಟಗಳು ಸತ್ಕಾರ್ಯಗಳನ್ನು ಪ್ರೇರಿಸುತ್ತವೆ. ರಾಜ್ಯ ಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸವು ಈ ಸತ್ಕಾರ್ಯಗಳಲ್ಲಿ ಅತ್ಯುತ್ತಮವಾದುದಾಗಿದೆ. (ಇಬ್ರಿ. 10:24) ಕೂಟಗಳಿಗೆ ಹಾಜರಾಗುವುದನ್ನು ನಾವು ನಿಲ್ಲಿಸಿಬಿಡುವುದಾದರೆ, ಬೇಗನೆ ನಾವು ಸಾರುವುದನ್ನು ನಿಲ್ಲಿಸಬಹುದು. ಏಕೆಂದರೆ ಸಾರುವಂತೆ ನಾವು ಪ್ರೇರಿಸಲ್ಪಡುವುದಿಲ್ಲ.
2 ಸಾಪ್ತಾಹಿಕ ಕೂಟಗಳಲ್ಲಿ, ಸಾರುವಂತೆ ನಮ್ಮನ್ನು ಪ್ರಚೋದಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಆತ್ಮಿಕ ಮಾಹಿತಿಯನ್ನು ನಾವು ಪಡೆದುಕೊಳ್ಳುತ್ತೇವೆ. ಬೈಬಲಿನ ಜೀವದಾಯಕ ಸಂದೇಶವನ್ನು ಇತರರಿಗೆ ಕೊಂಡೊಯ್ಯುವಂತೆ ನಮ್ಮನ್ನು ಪ್ರಚೋದಿಸುತ್ತಾ, ಸಮಯಗಳ ಜರೂರಿಯು ಸತತವಾಗಿ ಒತ್ತಿಹೇಳಲ್ಪಡುತ್ತದೆ. ಸಾರುವ ಕೆಲಸದಲ್ಲಿ ಮುಂದುವರಿಯುವಂತೆ ನಾವು ಉತ್ತೇಜಿಸಲ್ಪಟ್ಟು, ಬಲಪಡಿಸಲ್ಪಡುತ್ತೇವೆ. (ಮತ್ತಾ. 24:13, 14) ಕೂಟಗಳಲ್ಲಿ ಹೇಳಿಕೆ ನೀಡಲಿಕ್ಕಾಗಿರುವ ಅವಕಾಶಗಳನ್ನು ಸದುಪಯೋಗಿಸುವ ಮೂಲಕ, ನಮ್ಮ ನಂಬಿಕೆಯನ್ನು ಇತರರ ಮುಂದೆ ವ್ಯಕ್ತಪಡಿಸುವುದನ್ನು ನಾವು ಹೆಚ್ಚು ರೂಢಿಮಾಡಿಕೊಳ್ಳುವೆವು. (ಇಬ್ರಿ. 10:23) ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನಮೂದಿಸಿಕೊಳ್ಳುವ ಮೂಲಕ, ನಾವು ಹೆಚ್ಚು ಪರಿಣಾಮಕಾರಿ ಶುಶ್ರೂಷಕರಾಗಿರಲು ಹಾಗೂ ನಮ್ಮ ಕಲಿಸುವಿಕೆಯ ಕೌಶಲಗಳನ್ನು ಉತ್ತಮಗೊಳಿಸಲು ತರಬೇತಿಯನ್ನು ಪಡೆದುಕೊಳ್ಳುತ್ತೇವೆ.—2 ತಿಮೊ. 4:2.
3 ಸೇವಾ ಕೂಟವು ಸಾರುವಂತೆ ನಮ್ಮನ್ನು ಪ್ರೇರಿಸುವ ವಿಧ: ನಮ್ಮ ರಾಜ್ಯದ ಸೇವೆಯಲ್ಲಿರುವ ವಿಷಯವನ್ನು, ಸಮಯಕ್ಕೆ ಮುಂಚಿತವಾಗಿಯೇ ಪರಾಮರ್ಶಿಸುವಂತೆ ನಮ್ಮೆಲ್ಲರನ್ನು ಉತ್ತೇಜಿಸಲಾಗುತ್ತದೆ. ತದನಂತರ ನಾವು ಸೇವಾ ಕೂಟಕ್ಕೆ ಹಾಜರಾದಂತೆ ಹಾಗೂ ವೇದಿಕೆಯಿಂದ ನಿರೂಪಣೆಗಳು ಪ್ರತ್ಯಕ್ಷಾಭಿನಯಿಸಲ್ಪಡುವುದನ್ನು ನೋಡಿದಂತೆ, ಈ ಮಾಹಿತಿಯು ನಮ್ಮ ಮನಸ್ಸುಗಳ ಮೇಲೆ ಅಚ್ಚೊತ್ತಲ್ಪಡುತ್ತದೆ. ಕ್ಷೇತ್ರ ಸೇವೆಯಲ್ಲಿರುವಾಗ, ನಾವು ನಮ್ಮ ರಾಜ್ಯದ ಸೇವೆಯ ಕುರಿತಾಗಿ ಪರ್ಯಾಲೋಚಿಸಿ, ಪ್ರತ್ಯಕ್ಷಾಭಿನಯಿಸಲ್ಪಟ್ಟ ನಿರೂಪಣೆಗಳನ್ನು ಜ್ಞಾಪಿಸಿಕೊಳ್ಳಸಾಧ್ಯವಿದೆ, ಮತ್ತು ಹೀಗೆ ಹೆಚ್ಚು ಪರಿಣಾಮಕರವಾದ ಸಾಕ್ಷಿಯನ್ನು ಕೊಡಸಾಧ್ಯವಿದೆ. ಇದು ಅನೇಕ ಪ್ರಚಾರಕರ ಅನುಭವವಾಗಿದೆ.
4 ಸೇವಾ ಕೂಟಗಳನ್ನು ಅನುಸರಿಸಿಕೊಂಡುಹೋಗಲು, ಕೆಲವರು ಇತರರೊಂದಿಗೆ ಶುಶ್ರೂಷೆಯಲ್ಲಿ ಒಟ್ಟಾಗಿ ಪಾಲ್ಗೊಳ್ಳಲಿಕ್ಕಾಗಿ ಸಮಯ ನಿಶ್ಚಯಮಾಡಿಕೊಳ್ಳುತ್ತಾರೆ. ಕ್ಷೇತ್ರಕ್ಕೆ ಅನ್ವಯವಾಗುವ ಅಂಶಗಳು ಪ್ರಚಾರಕರಿಗೆ ಇನ್ನೂ ಜ್ಞಾಪಕದಲ್ಲಿರುತ್ತವೆ ಮತ್ತು ಅವುಗಳನ್ನು ಉಪಯೋಗಿಸಲು ಪ್ರಯತ್ನಿಸುವಂತೆ ಅವರು ಪ್ರಚೋದಿಸಲ್ಪಡುತ್ತಾರೆ. ಏಕೆಂದರೆ ಈ ಕೂಟಗಳು ಪ್ರತಿ ವಾರ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಉತ್ತೇಜಿಸಿವೆ.
5 ಎಲ್ಲಿ ನಾವು ಜೊತೆ ಆರಾಧಕರೊಂದಿಗೆ ಒಟ್ಟುಗೂಡಿ, ಸತ್ಕಾರ್ಯಗಳಿಗಾಗಿ ಪ್ರೇರಿಸಲ್ಪಡುತ್ತೇವೋ ಆ ನಮ್ಮ ಕ್ರೈಸ್ತ ಕೂಟಗಳಿಗೆ ಯಾವುದೇ ಬದಲಿ ವ್ಯವಸ್ಥೆಯಿಲ್ಲ. ನಮ್ಮ ಶುಶ್ರೂಷೆಯು ಅಭಿವೃದ್ಧಿಹೊಂದಬೇಕಾಗಿರುವಲ್ಲಿ, ನಾವು ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗಬೇಕು. “ಸಭೆಯಾಗಿ ಕೂಡಿಕೊಳ್ಳುವದನ್ನು . . . ಬಿಟ್ಟು ಬಿಡದೆ” ಇರುವ ಮೂಲಕ, ಯೆಹೋವನಿಂದ ಕೊಡಲ್ಪಟ್ಟಿರುವ ಈ ಅದ್ಭುತಕರ ಒದಗಿಸುವಿಕೆಗೆ ನಾವು ಗಣ್ಯತೆಯನ್ನು ತೋರಿಸುವಂತಾಗಲಿ.—ಇಬ್ರಿ. 10:25.