“ಯಾವನು ನಮಗೋಸ್ಕರ ಹೋಗುವನು”?
ಈ ಪ್ರಶ್ನೆಯು ಯೆಹೋವನಿಂದ ಎಬ್ಬಿಸಲ್ಪಟ್ಟಾಗ, ಯೆಶಾಯನು ತತ್ಕ್ಷಣವೇ ಪ್ರತಿಕ್ರಿಯಿಸಿದ್ದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” (ಯೆಶಾ. 6:8) ಇಂದು ಕೊಯ್ಲು ಮಹತ್ತರವಾಗಿರುವುದರಿಂದ, ಅದೇ ಕರೆಯು ಇಂದು ಉದ್ಘೋಷಿಸಲ್ಪಡುತ್ತಿದೆ. ಹೆಚ್ಚಿನ ಪೂರ್ಣ ಸಮಯದ ಕೆಲಸಗಾರರು—ಕ್ರಮದ ಪಯನೀಯರರು—ತುರ್ತಾಗಿ ಬೇಕಾಗಿದ್ದಾರೆ! (ಮತ್ತಾ. 9:37) ನೀವು ಮುಂದೆಬರಲು ಸಿದ್ಧಮನಸುಳ್ಳವರಾಗಿದ್ದೀರೊ? ಹಾಗಿರುವಲ್ಲಿ, 1998ರ ಸೇವಾ ವರ್ಷದ ಆರಂಭವಾಗಿರುವ ಸೆಪ್ಟೆಂಬರ್ 1, ಒಬ್ಬ ಪಯನೀಯರರಾಗಿ ನಮೂದಿಸಿಕೊಳ್ಳಲು ಒಂದು ಉತ್ತಮ ಸಮಯವಾಗಿರುವುದು. ಅರ್ಜಿಯೊಂದಕ್ಕಾಗಿ ಹಿರಿಯರನ್ನು ಏಕೆ ಕೇಳಬಾರದು?