ಯೆಹೋವನನ್ನು ಸನ್ಮಾನಿಸಲು ನೀವು ಹೆಚ್ಚನ್ನು ಮಾಡಶಕ್ತರೋ?
1 ನಾವೆಲ್ಲರೂ ಪರಿಗಣಿಸಬೇಕಾದ ಒಂದು ಅತ್ಯಾವಶ್ಯಕ ಪ್ರಶ್ನೆ ಅದಾಗಿದೆ. ನಮ್ಮ ಧಣಿಯಾದ ಯೇಸು ಕ್ರಿಸ್ತನ ನಂಬಿಗಸ್ತ ಅನುಕರಣೆ ಮಾಡುವವರೋಪಾದಿ, ನಾವು ನಮ್ಮ ದೇವರನ್ನು, ಆತನ ನಾಮದ ಬಹಿರಂಗ ಘೋಷಣೆ ಮಾಡುವುದರ ಮೂಲಕ ಇಂದು ಸನ್ಮಾನಿಸುತ್ತೇವೆ. ದೇವರ ಮೆಚ್ಚಿಕೆಯನ್ನು ನಾವು ಸಂಪಾದಿಸಲಿಕ್ಕಿದ್ದರೆ, ನಾವು ಹೆಗಲುಕೊಡತಕ್ಕ ಒಂದು ಜವಾಬ್ದಾರಿ ಇದಾಗಿದೆ. (ಮಾರ್ಕ 13:10; ಲೂಕ 4:18; ಅ.ಕೃ. 4:20; ಇಬ್ರಿ. 13:15) ಯೆಹೋವನ ವಿಶ್ವವ್ಯಾಪಿ ಹಿಂಡಿನ ಇನ್ನೂ ಪಾಲಿಗರಾಗಬಹುದಾದ ಚದರಿರುವ ಉಳಿದ “ಕುರಿ” ಗಳಿಗೆ ಈ ಸುವಾರ್ತೆಯನ್ನು ಮುಟ್ಟಿಸುವುದು ಎಂತಹ ವರ್ಣನಾತೀತವಾದ ಸುಯೋಗ—ಹೌದು, ಗೌರವ—ವಾಗಿದೆ!—ಯೋಹಾ. 10:16.
2 ಶುಶ್ರೂಷೆಯಲ್ಲಿ ನಿಮ್ಮ ಚಟುವಟಿಕೆಯನ್ನು ಹೆಚ್ಚಿಸುವುದರಿಂದ ನೀವೂ, ನಿಮ್ಮ ಮಕ್ಕಳೂ ಯೆಹೋವನನ್ನು ಸನ್ಮಾನಿಸಲು ಹೆಚ್ಚನ್ನು ಮಾಡಶಕ್ತರೋ? ಲೋಕವ್ಯಾಪಕವಾಗಿ ನಿರಂತರ ವರ್ಧಿಸುತ್ತಿರುವ ಸಂಖ್ಯೆಯಲ್ಲಿ, ನಿಮ್ಮ ಸಹೋದರರು ಮತ್ತು ಸಹೋದರಿಯರು ಪಯನೀಯರ್ ಸೇವೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಭಾರತದಲ್ಲಿ 1992ರ ಎಪ್ರಿಲ್ ತಿಂಗಳಲ್ಲಿ, ಒಂದು ಉಚ್ಚಾಂಕವಾದ 2,106 ಮಂದಿ ವಿಶೇಷ, ಕ್ರಮದ, ಯಾ ಸಹಾಯಕ ಪಯನೀಯರ್ ಸೇವೆಯಲಿದ್ದರು. ಅದು ಆ ತಿಂಗಳಲ್ಲಿ ಚಟುವಟಿಕೆಯ ವರದಿ ಮಾಡಿದ ಜುಮ್ಲಾ ಪ್ರಚಾರಕರ ಸುಮಾರು 18 ಪ್ರತಿಶತವಾಗಿತ್ತು! ಪಯನೀಯರಿಂಗ್ಗೆ ಗಂಭೀರವಾದ ಪರಿಗಣನೆಯನ್ನು ನೀವು ವ್ಯಕ್ತಿಶಃ ಕೊಟ್ಟಿರುವಿರೋ? ಪೂರ್ಣ ಸಮಯದ ಶುಶ್ರೂಷೆಯಲ್ಲಿ ಒಂದು ಜೀವನೋದ್ಯೋಗವನ್ನು ಬೆಂಬತ್ತಿಹೋಗುವಂತೆ ನಿಮ್ಮ ಮಕ್ಕಳಿಗೆ ನೀವು ಪ್ರೋತ್ಸಾಹಿಸುತ್ತೀರೋ?
3 ಪಯನೀಯರ್ ಸೇವೆಯ ಕಡೆಗೆ ನಿಮ್ಮ ವೈಯಕ್ತಿಕ ಭಾವನೆಗಳನ್ನು ಯಾಕೆ ವಿಮರ್ಶಿಸಬಾರದು? ವಿಷಯವು ಹೇಳಲ್ಪಟ್ಟಾಗೆಲ್ಲಾ, ಪಯನೀಯರ್ ಶುಶ್ರೂಷಕನೋಪಾದಿ ಸೇವೆ ಸಲ್ಲಿಸಲು ನಿಮ್ಮ ಪರಿಸ್ಥಿತಿಗಳು ನಿಮ್ಮನ್ನು ಕೇವಲ ಅನುಮತಿಸುವುದಿಲ್ಲ ಎಂದು ಶೀಘ್ರವಾಗಿ ತೀರ್ಮಾನಕ್ಕೆ ನೀವು ಬರುತ್ತಿರೋ? ಕಡಿಮೆಪಕ್ಷ ಒಬ್ಬ ಸದಸ್ಯನಾದರೂ ಕ್ರಮದ ಪಯನೀಯರನೋಪಾದಿ ಭರ್ತಿಯಾಗಲು ಸಾಧ್ಯವಿದೆಯೋ ಎಂದು ನೋಡಲು, ಕುಟುಂಬದೋಪಾದಿ ವಿಷಯವನ್ನು ನೀವು ಚರ್ಚಿಸಿದ್ದಿರೋ? ಪಯನೀಯರಿಂಗ್ ಎಲ್ಲರಿಗೆ ಶಕ್ಯವಲ್ಲವೆಂಬುದು ಸತ್ಯ. ಶಾಸ್ತ್ರೀಯ ಜವಾಬ್ದಾರಿಗಳು ಮತ್ತು ಇತರ ಮಿತಿಗಳು ಪೂರ್ಣ ಸಮಯ ಸೇವಿಸುವುದರಿಂದ ಅನೇಕರನ್ನು ತಡೆಯುತ್ತವೆ. (1 ತಿಮೊ. 5:8) ಆದರೆ ನೀವು ವಿಷಯಕ್ಕೆ ಇತ್ತೀಚೆಗೆ ಪ್ರಾರ್ಥನಾಪೂರ್ವಕವಾಗಿ ಗಮನ ಕೊಟ್ಟಿದ್ದೀರೋ? ದ ವಾಚ್ಟವರ್ನ ನವಂಬರ 15, 1982ರ ಸಂಚಿಕೆಯ 23 ನೆಯ ಪುಟದಲ್ಲಿ ಈ ವಿಚಾರ-ಪ್ರೇರಕ ಹೇಳಿಕೆಯನ್ನು ಮಾಡಿತ್ತು: “ನಿಜವಾಗಿಯೂ, ಪ್ರತಿಯೊಬ್ಬ ಕ್ರೈಸ್ತ ಶುಶ್ರೂಷಕನು, ತಾನು ಪಯನೀಯರ್ ಆಗಶಕ್ತನೋ ಯಾ ಇಲ್ಲವೋ ಎಂದು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸತಕ್ಕದ್ದು. ಹದಿನೈದು ವರ್ಷ ಪಯನೀಯರ್ ಸೇವೆಮಾಡಿದ ದಕ್ಷಿಣ ಆಫ್ರಿಕದ ದಂಪತಿಗಳು ಹೇಳಿದ್ದು: ‘ನಾವು ಪಯನೀಯರಿಂಗ್ ಯಾಕೆ ಮಾಡುತ್ತೇವೆ? ನಾವು ಮಾಡದೆ ಇರುವುದಾದರೆ, ಯೆಹೋವನ ಮುಂದೆ ನಾವು ಎಂದಾದರೂ ನ್ಯಾಯೀಕರಿಸಬಲ್ಲೆವೋ?’ ಪಯನೀಯರರುಗಳಾಗಿರದ ಅನೇಕರು ಸಂಬಂಧಿತ ಪ್ರಶ್ನೆಯನ್ನು ಹಾಕಿಕೊಳ್ಳುವುದು ಒಳ್ಳೆಯದು: ‘ನಾನೊಬ್ಬ ಪಯನೀಯರ್ ಆಗಿಲ್ಲ ಎಂಬ ವಾಸ್ತವಾಂಶವನ್ನು ಯೆಹೋವನ ಮುಂದೆ ನಾನು ನಿಜವಾಗಿಯೂ ನ್ಯಾಯೀಕರಿಸಶಕ್ತನೋ?’”
4 ವಿಷಯದ ಮೇಲಿನ ಇನ್ನೊಂದು ವಾಚ್ಟವರ್ ಲೇಖನವು ಈ ಮೊನಚಾದ ಹೇಳಿಕೆಯನ್ನು ಮಾಡಿತು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನೊಂದಿಗೆ ಪ್ರಾಮಾಣಿಕನಾಗಿರತಕ್ಕದ್ದು. ‘ಆತ್ಮಕ್ಕೆ ಮನಸ್ಸುಂಟು, ಆದರೆ ದೇಹ ನಿರ್ಬಲ’ ಎಂದು ನೀವು ಹೇಳುತ್ತೀರೊ? ಆದರೆ ಆತ್ಮಕ್ಕೆ ನಿಜವಾಗಿಯೂ ಮನಸ್ಸುಂಟೋ? ಆತ್ಮದ ಇಷ್ಟವಿಲ್ಲದಿರುವಿಕೆಯ ನೆವನವಾಗಿ ದೇಹದ ನಿರ್ಬಲತೆಯನ್ನು ಬಳಸುವುದನ್ನು ನಾವು ಹೋಗಲಾಡಿಸೋಣ.”—w 78 8⁄15 ಪು. 23.
5 ತಮ್ಮ ಮಕ್ಕಳು ಜಯಪ್ರದರಾಗುವಂತೆ ಬಯಸುವ ಹೆತ್ತವರು: ಜ್ಞಾನೋಕ್ತಿ 15:20 ನಮಗೆ ಆಶ್ವಾಸನೆಯನ್ನೀಯುವುದು: “ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು.” ಯೆಹೋವನಿಗೆ ಸಮರ್ಪಿತ ಸೇವೆಯ ಜೀವಿತವೊಂದನ್ನು ತಮ್ಮ ಪುತ್ರರು ಮತ್ತು ಪುತ್ರಿಯರು ಬೆಂಬತ್ತಿಹೋಗುವಾಗ ದೇವಭಕ್ತಿಯ ಹೆತ್ತವರು ನಿರ್ವಿವಾದವಾಗಿ ಉಲ್ಲಾಸಿಸುತ್ತಾರೆ. ಆದಾಗ್ಯೂ, ನಿಮ್ಮ ಮಕ್ಕಳು ಯಾಂತ್ರಿಕವಾಗಿ ವಿವೇಕದ ಮಾರ್ಗವನ್ನು ಆರಿಸುವುದಿಲ್ಲ. ಈ ಲೋಕದ ಸೆಳೆತವು ಬಹಳ ಶಕ್ತಿಶಾಲಿಯಾಗಿದೆ. ಹೆತ್ತವರೇ, ನಿಮ್ಮ ಸ್ವಂತದವುಗಳಿಂದ ನಿಮ್ಮ ಮಕ್ಕಳ ಮೌಲ್ಯಗಳು ಬಹಳವಾಗಿ ರೂಪುಗೊಳ್ಳುತ್ತವೆ. ಪೂರ್ಣ ಸಮಯದ ಸೇವೆಯ ಪ್ರಯೋಜನಗಳನ್ನು ನೀವು ಸಕಾರಾತ್ಮಕವಾಗಿ ಯಾವಾಗಲೂ ಮಾತಾಡುವುದಾದರೆ, ಶ್ರದ್ಧೆಯ ಪಯನೀಯರರುಗಳ ಸಹವಾಸವನ್ನು ಹುಡುಕುವಂತೆ ನಿಮ್ಮ ಎಳೆಯರನ್ನು ನೀವು ಉತ್ತೇಜಿಸುವುದಾದರೆ, ಪೂರ್ಣ ಸಮಯದ ಶುಶ್ರೂಷೆಯು ನಿಮ್ಮ ಮಕ್ಕಳು ಕೈಕೊಳ್ಳಶಕ್ತನಾದ ಅತ್ಯಂತ ಗೌರವಾರ್ಹ ಜೀವನೋದ್ಯೋಗವೆಂದು ನಿಮಗೆ ನಿಜವಾಗಿ ಮನವರಿಕೆಯಾಗಿದ್ದರೆ, ಈ ಸಕಾರಾತ್ಮಕ ಮನೋಭಾವವು ನಿಸ್ಸಂದೇಹವಾಗಿ ನಿಮ್ಮ ಮಕ್ಕಳ ಮೇಲೆ ಬಲವಾದ ಪರಿಣಾಮವುಳ್ಳದ್ದಾಗಿರುವುದು. ಮನುಷ್ಯರಿಗಿಂತ ಯೆಹೋವನೊಂದಿಗೆ ಒಂದು ಒಳ್ಳೇ ಹೆಸರನ್ನು ಮಾಡಿಕೊಳ್ಳುವ ಮೂಲ್ಯವನ್ನು ಗಣ್ಯಮಾಡಲು ಅವರಿಗೆ ಸಹಾಯನೀಡಿರಿ.
6 ಎಳೆಯರೇ, ಜ್ಞಾನೋಕ್ತಿ 22:1 ನೀವು ಮಾಡಬೇಕಾದ ಆಯ್ಕೆಯನ್ನು ಎತ್ತಿತೋರಿಸುತ್ತದೆ: “ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.” ನಿಮಗಾಗಿ ಸ್ವತಃ ನೀವು ಯಾವ ವಿಧದ ಹೆಸರನ್ನು ಮಾಡಿಕೊಳ್ಳುವಿರಿ? ನಾವು ಬೈಬಲಿನಲ್ಲಿ ಓದುವಂತೆ, ಸಮರ್ಪಿತ ಸೇವೆಯ ಮೂಲಕ ದೇವರೊಂದಿಗೆ ಒಂದು ಹೆಸರನ್ನು ಮಾಡಿದ ಪುರುಷರ ಮತ್ತು ಸ್ತ್ರೀಯರ ಕುರಿತು ಯೋಚಿಸಿರಿ. ಪ್ರಿಯ ವೈದ್ಯನಾಗಿದ್ದ ಲೂಕ, ಮತ್ತು ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದ ಹನೋಕ ಅಲಿದ್ದರು. ಅತಿ ಕೋಮಲ ಪ್ರಾಯದಲ್ಲಿ ಯೆಹೋವನ ಆಲಯದಲ್ಲಿ ಆತನ ಸೇವೆಯನ್ನು ಆರಂಭಿಸುವುದರ ಮೂಲಕ ಸಮುವೇಲನು ಸಂಭವವಿರುವ ಅತ್ಯುತ್ತಮ ಶಿಕ್ಷಣವನ್ನು ಪಡೆದನು. ಅವರು ಮಾಡಿದ ಆಯ್ಕೆಯ ಬಗ್ಗೆ ಈ ನಂಬಿಗಸ್ತ ಸೇವಕರು ಎಂದಾದರೂ ವಿಷಾದಪಟ್ಟಿದ್ದರು ಎಂದು ಎಣಿಸುವಿರೋ? ಅವರು ಯಾಕೆ ವಿಷಾದಪಡಬೇಕು? ಅವರೆಲ್ಲರೂ ಸಂತೋಷದ, ಫಲಪ್ರದವಾದ, ಮತ್ತು ಉತ್ತೇಜಕವಾದ ಜೀವಿತಗಳನ್ನು ನಡಿಸಿದರು. ಮತ್ತು ಅವರು ಯೆಹೋವನೊಂದಿಗೆ ಬಾಳುವ ಮೆಚ್ಚಿಗೆಯನ್ನು ಕಂಡುಕೊಂಡರು!—ಕೀರ್ತ. 110:3; 148:12, 13; ಜ್ಞಾನೋ. 20:29ಎ; 1 ತಿಮೊ. 4:8ಬಿ.
7 ಮಕ್ಕಳು ಜೀವಿತದಲ್ಲಿ ಯಶಸ್ಸನ್ನು ಗಳಿಸುವಾಗ, ಅವರ ಹೆತ್ತವರು ಹೆಮ್ಮೆ ಪಡುತ್ತಾರೆ. “ಯೆಹೋವನಿಂದ ಬಂದ ಸ್ವಾಸ್ಥ್ಯ”ದ ತರಬೇತಿಯಲ್ಲಿ, ಶಿಸ್ತುಪಾಟುಗೊಳಿಸುವುದರಲ್ಲಿ, ಮತ್ತು ಶಿಕ್ಷಣವನ್ನೀಯುವುದರಲ್ಲಿ ಅವರು ಹೂಡಿದ ಬಂಡವಾಳವು ಅನೇಕ ಪಟ್ಟು ಹೆಚ್ಚಾಗಿ ಹಿಂದಕ್ಕೆ ದೊರಕುತ್ತದೆ. (ಕೀರ್ತ. 127:3) ಯೆಹೋವನನ್ನು ಸನ್ಮಾನಿಸಲು ಒಬ್ಬ ಮಗನು ಯಾ ಮಗಳು ಅವನಿಂದ ಯಾ ಅವಳಿಂದ ಮಾಡಲು ಶಕ್ಯವಾದುದ್ದೆಲ್ಲವನ್ನೂ ಮಾಡುತ್ತಿರುವುದಾದರೆ, ಹೆತ್ತವರಿಗೆ ಬೇರೆ ಯಾವುದು ಹೆಚ್ಚು ಹೆಮ್ಮೆ ಪಡುವಂತೆ ಮಾಡಬಲ್ಲದು? ಒಂದು ಪತ್ರದಿಂದ ಉದಾಹರಿಸಲ್ಪಟ್ಟಂತೆ, ಆಧುನಿಕ ಸಮಯಗಳಲ್ಲಿ ಅನೇಕ ಎಳೆಯರು ಲೂಕ, ಹನೋಕ, ಮತ್ತು ಸಮುವೇಲರ ಹೆಜ್ಜೆಜಾಡೆಯನ್ನು ಅನುಸರಿಸುತ್ತಾರೆ: “ನನಗೆ 16 ವರ್ಷ. ಕ್ರಮದ ಪಯನೀಯರಿಂಗ್ ನಾನು ಆರಂಭಿಸಿದೆ . . . ದೀಕ್ಷಾಸ್ನಾನ ಹೊಂದಿದ ಒಂಬತ್ತು ತಿಂಗಳುಗಳ ನಂತರ, ಮತ್ತು ಅಂದಿನಿಂದ ನಾನು ಯೆಹೋವನಿಂದ ಆಶೀರ್ವಾದಗಳನ್ನು ಪಡೆಯುತ್ತಾ ಇದ್ದೇನೆ. . . . ಪಯನೀಯರಿಂಗ್ ಶಾಲೆಯಲ್ಲೂ ನಿಮಗೆ ಸಹಾಯ ಮಾಡುತ್ತದೆ. ಈ ಮೊದಲು ನನ್ನ ತರಗತಿಯ ಸಂಗಾತಿಗಳಿಂದ ನಾನೊಬ್ಬ ಸಾಕ್ಷಿಯಾಗಿದ್ದುದರಿಂದ, ನಾನು ಚೇಷ್ಟೆಗೆ ಗುರಿಯಾಗುತ್ತಿದ್ದೆ. ಈಗ, ನನಗೆ ಹೆಚ್ಚು ವೈಯಕ್ತಿಕ ಅಭ್ಯಾಸ ಮಾಡಲಿಕ್ಕಿರುವದರಿಂದ, ನಾನು ‘ನನ್ನನ್ನು ದೂರುವವನಿಗೆ ಉತ್ತರವನ್ನೀಯಲು’ ಶಕ್ತನಾಗಿದ್ದೇನೆ.”
8 ಶುಶ್ರೂಷೆಗೆ ಒಬ್ಬನನ್ನು ಸನ್ನದ್ಧನಾಗಿ ಮಾಡುವ ವಿದ್ಯೆ: ಈ ಬಿಂದುವಿನಲ್ಲಿ ನಾವು ಐಹಿಕ ಶಿಕ್ಷಣದ ಪ್ರಶ್ನೆಯನ್ನು ಪರಿಗಣಿಸಬಹುದು. ಒಂದು ಸಮತೂಕದ ದೃಷ್ಟಿಕೋನ ವಿಶೇಷವಾಗಿ ಅಗತ್ಯವಿರುವ ಒಂದು ಕ್ಷೇತ್ರ ಇದಾಗಿದೆ. ಫೆಬ್ರವರಿ 1, 1993ರ ಕಾವಲಿನಬುರುಜು “ಒಂದು ಉದ್ದೇಶವಿರುವ ವಿದ್ಯೆ” ಎಂಬ ಲೇಖನವನ್ನು ಪ್ರಧಾನವಾಗಿ ತೋರಿಸಿತ್ತು. “ಯಥೋಚಿತ ಶಿಕ್ಷಣ” ಎಂಬ ಉಪಶಿರೋನಾಮದ ಕೆಳಗೆ ಈ ವಿಚಾರವು ತಿಳಿಸಲ್ಪಟ್ಟಿತ್ತು: “ಕ್ರೈಸ್ತರು ತಮ್ಮನ್ನು ತಾವೇ ಪೋಷಿಸಿಕೊಳ್ಳಲು ಶಕ್ತರಾಗಿರಬೇಕು; ಅವರು ಪೂರ್ಣ ಸಮಯದ ಪಯನೀಯರ್ ಶುಶ್ರೂಷಕರಾಗಿರುವಾಗಲೂ ಕೂಡ. (2 ಥೆಸಲೊನೀಕ 3:10-12) . . . ಈ ಬೈಬಲ್ ಸೂತ್ರಗಳನ್ನು ಸನ್ಮಾನಿಸುವಂತೆ ಮತ್ತು ತನ್ನ ಕ್ರೈಸ್ತ ಹಂಗುಗಳನ್ನು ಪೂರೈಸುವಂತೆ ಒಬ್ಬ ಯುವ ಕ್ರೈಸ್ತನಿಗೆ ಎಷ್ಟು ಶಿಕ್ಷಣದ ಅಗತ್ಯವಿದೆ? . . . ಸುವಾರ್ತೆಯ ಪಯನೀಯರ್ ಶುಶ್ರೂಷಕರಾಗ ಬಯಸುವವರಿಗೆ ಯಾವುದನ್ನು [ವೇತನ] ‘ಸಾಕಷ್ಟು’ ಎಂದು ಕರೆಯಬಹುದು? ಅವರ ಸಹೋದರರ ಮೇಲೆ ಯಾ ಕುಟುಂಬದ ಮೇಲೆ ‘ಒಂದು ದುಬಾರಿಯಾದ ಭಾರ’ ಹಾಕುವದನ್ನು ತಪ್ಪಿಸಲು ಅಂಥವರಿಗೆ ಸಾಮಾನ್ಯವಾಗಿ ಅಂಶ ಕಾಲಿಕ ಕೆಲಸದ ಅಗತ್ಯವಿದೆ.—1 ಥೆಸಲೊನೀಕ 2:9, NW.”
9 ಪೂರ್ಣ ಸಮಯದ ಸೇವೆಯನ್ನು ಬೆಂಬತ್ತಿಹೋಗಲು ಅವನಿಗೆ ಸಹಾಯವಾಗುವಂತೆ ಸಂಪೂರಕ ಶಿಕ್ಷಣವು ಅಗತ್ಯವೆಂದು ಭಾವೀ ಕ್ರಮದ ಪಯನೀಯರನಿಂದ ಎಣಿಸಲ್ಪಡುವಲ್ಲಿ, ಫೆಬ್ರವರಿ 1, 1993 ಕಾವಲಿನಬುರುಜು ಶಿಫಾರಸು ಮಾಡುವುದು: “ಸಾಧ್ಯವಾಗುವುದಾದರೆ, ಒಬ್ಬ ಯುವ ಸಾಕ್ಷಿಯು, ಮನೆಯಲ್ಲಿ ಜೀವಿಸಿರುವಾಗಲೇ ಇದನ್ನು ತಕ್ಕೊಳ್ಳುವುದು ಹಿತಕರ. ಹೀಗೆ ಯಥಾ ಸ್ಥಿತಿಯ ಕ್ರೈಸ್ತ ಅಧ್ಯಯನದ ರೂಢಿ, ಕೂಟದ ಹಾಜರಿ, ಮತ್ತು ಸಾರುವ ಕಾರ್ಯವನ್ನು ಅವನು ಕಾಪಾಡಿಕೊಳ್ಳಶಕ್ತನಾಗುವನು.”
10 ಪಯನೀಯರ್ ಸೇವೆಯಲ್ಲಿ ಅವನ ಹೃದಯವಿದ್ದರೂ, ವೃತ್ತಿಶಿಕ್ಷಣ ಶಾಲೆಗೆ ಹೋಗಲೇ ಬೇಕಾದ 22 ವರ್ಷ ವಯಸ್ಸಿನ ಯುವಕನ ಒಂದು ಅನುಭವವು ಆಫ್ರಿಕದಿಂದ ಬರುತ್ತದೆ. ವೃತ್ತಿಶಿಕ್ಷಣ ಶಾಲೆಯಲ್ಲಿರುವಾಗ, ಅವನು ಸಹಾಯಕ ಪಯನೀಯರನಾಗಿ ಭರ್ತಿಯಾದನು. ಅವನ ಸಮಾನಸ್ಥರು ಅವನ ಹಾಸ್ಯ ಮಾಡುತ್ತಾ, ಅವನ ಪರೀಕ್ಷೆಗಳಲ್ಲಿ ಅವನು ಖಂಡಿತ ತೇರ್ಗಡೆಯಾಗುವುದಿಲ್ಲವೆಂದು ಹೇಳಿದರು. ಅವರಿಗೆ ಅವನ ಉತ್ತರವು ಯಾವಾಗಲೂ ಇದಾಗಿತ್ತು: “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” ಸ್ವಯಂ-ಶಿಸ್ತನ್ನು ಪ್ರದರ್ಶಿಸುತ್ತಾ, ಅವನು ಪ್ರತಿ ಬೆಳಿಗ್ಗೆ ಬೇಗ ಏಳುತ್ತಿದ್ದನು ಮತ್ತು ತರಗತಿಗಳಿಗಾಗಿ ಎರಡು ತಾಸುಗಳ ತಯಾರಿಯನ್ನು ಮಾಡುತ್ತಿದ್ದನು ಮತ್ತು ಅನಂತರ ತರಗತಿಗಳು ಮುಗಿದ ನಂತರ ಮಧ್ಯಾಹ್ನದಲ್ಲಿ ಕ್ಷೇತ್ರ ಸೇವೆಯಲ್ಲಿ ಪಾಲಿಗನಾಗುತ್ತಿದ್ದನು. ಅತ್ಯುತ್ತಮ ಮೂವರು ವಿದ್ಯಾರ್ಥಿಗಳನ್ನು ಒಂದು ವಿಶೇಷ ಪುರಸ್ಕರಣ ಬಹುಮಾನಕ್ಕಾಗಿ ಆರಿಸಲ್ಪಡುವ ಒಂದು ವಿಶೇಷ ಪರೀಕ್ಷೆಯಲ್ಲಿ ಈ ಯುವಕನು ಮೂರನೆಯವನಾಗಿ ಬಂದಾಗ ಇಡೀ ಶಾಲೆ ಸ್ತಬ್ಧಗೊಂಡಿತು. ಎರಡನೆಯವನಾಗಿ ಬಂದ ವಿದ್ಯಾರ್ಥಿಯು ಒಬ್ಬ ಆಸಕ್ತ ವ್ಯಕ್ತಿಯಾಗಿದ್ದು, ಅವನೊಂದಿಗೆ ನಮ್ಮ ಪಯನೀಯರ್ ಸಹೋದರನು ಶಾಲೆಯಲ್ಲಿ ಬೈಬಲ್ ಅಧ್ಯಯನ ಮಾಡಿದ್ದನು. ಮೊದಲನೆಯವನಾಗಿ ಬಂದ ವಿದ್ಯಾರ್ಥಿಯು ಶಾಲೆಯಲ್ಲಿದ್ದ ಇನ್ನೊಬ್ಬ ಹುರುಪಿನ ಸಾಕ್ಷಿಯಾಗಿದ್ದನು.
11 ಹಿರಿಯರು ತಮ್ಮ ಪಾತ್ರವನ್ನು ಮಾಡುತ್ತಾರೆ: ಪಯನೀಯರರು ಮಾಡುವ ಕಾರ್ಯದಲ್ಲಿ ಹೆಮ್ಮೆ ಪಡುವ ಸಭಾ ಹಿರಿಯರು, ಈ ಹುರುಪಿನ ಶುಶ್ರೂಷಕರಿಗೆ ಮಹಾ ಪ್ರೋತ್ಸಾಹವನ್ನು ಒದಗಿಸುತ್ತಾರೆ. ಯಾವುದೇ ಸಭೆಗೆ ಶ್ರಮಶೀಲ, ಉತ್ಪಾದಕ ಪಯನೀಯರರು ಒಂದು ಆಶೀರ್ವಾದವಾಗಿದ್ದಾರೆ ಎಂದು ಹಿರಿಯರು ತಿಳಿದಿರುವ ಕಾರಣ, ಇದನ್ನು ಮಾಡಲು ಅವರು ಸಂತೋಷಿಸುತ್ತಾರೆ. ಕ್ರಮದ ಪಯನೀಯರ್ ಸೇವೆಯಲ್ಲಿ ಒಂದು ವರ್ಷ ಯಾ ಹೆಚ್ಚು ಸಮಯ ವ್ಯಯಿಸಿಯಾದ ಬಳಿಕ, ಅಂತಹವರು ಅಧಿಕ ತರಬೇತಿಗಾಗಿ ಪಯನೀಯರ್ ಸೇವಾ ಶಾಲೆಗೆ ಯೋಗ್ಯತೆ ಪಡೆಯುತ್ತಾರೆ. ಪಯನೀಯರರ ಪರಿಣಾಮಕಾರತೆಯನ್ನು ಪ್ರಗತಿಗೊಳಿಸುವುದರಲ್ಲಿ ಈ ಪಾಠಕ್ರಮವು ಒಂದು ಅಮೂಲ್ಯ ಸಾಧನವಾಗಿ ರುಜುವಾಗಿದೆ. ಕೆಲಸದಲ್ಲಿ ಪಯನೀಯರರು ಮುಂಭಾಗದಲ್ಲಿ ಇರುವುದಾದರೂ, ಅವರಿಗೆ ಸಹ ಪ್ರೀತಿಯ ಪ್ರೋತ್ಸಾಹ ಬೇಕಾಗಿದೆ, ಮತ್ತು ಈ ಅಗತ್ಯವನ್ನು ತುಂಬಿಸಲು ಹಿರಿಯರು ಜಾಗೃತರಾಗಿರತಕ್ಕದ್ದು.—1 ಪೇತ್ರ 5:1-3.
12 ಕ್ರಮದ ಪಯನೀಯರ್ ಕಾರ್ಯಕ್ಕೆ ಹಿರಿಯರು ಉತ್ತೇಜನೆಯನ್ನು ಹೇಗೆ ನೀಡಶಕ್ತರು? ಒಂದು ಒಳ್ಳೆಯ ಆರಂಭದ ಬಿಂದುವು ಏನಂದರೆ ಈ ಸುಯೋಗಕ್ಕೆ ತಲುಪಸಾಧ್ಯವಿರುವವರು ಯಾರು ಎಂದು ನಿಯತಕಾಲಿಕವಾಗಿ ವಿಮರ್ಶಿಸುವುದೇ. ಕ್ರಮವಾಗಿ ಸಹಾಯಕ ಪಯನೀಯರ್ ಮಾಡುವ ಅನೇಕರ ಸಹಿತ, ಪಯನೀಯರ್ ಆಗಲು ಅನುಕೂಲ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು, ನಿವೃತ್ತಿಹೊಂದಿದ ವ್ಯಕ್ತಿಗಳನ್ನು, ಗೃಹಿಣಿಯರನ್ನು, ಮತ್ತು ವಿದ್ಯಾರ್ಥಿಗಳನ್ನು ಹಿರಿಯರು ಗೋಚರಿಸಬಹುದು. ಭರ್ತಿಯಾಗಬೇಕೆಂಬ ಹಂಗಿಗೆ ಒಳಬೀಳುವಂತೆ ಯಾರಿಗೂ ಮಾಡಬಾರದಾದರೂ, ಮಾಡುವ ಅಪೇಕ್ಷೆ ಇರುವ ಆದರೆ ಹಿಂಜರಿಯುತ್ತಿರಬಹುದಾದವರಿಗೆ ತುಸು ವ್ಯಾವಹಾರಿಕ ಪ್ರೋತ್ಸಾಹನೆಯೊಂದಿಗೆ, ಪಯನೀಯರಿಂಗ್ ಅವರ ನಿಲುಕಿನಲ್ಲಿ ಇದೆ ಎಂದು ತಿಳಿಯಬಹುದು.
13 ಅರ್ಜಿ ಹಾಕಲು ಬಯಸುವವರಿಗೆ ಪ್ರೋತ್ಸಾಹನೆಯನ್ನು ಕೊಡುವುದರಲ್ಲಿ, ಒಬ್ಬ ಕ್ರಮದ ಪಯನೀಯರನಾಗಲು ಅರ್ಜಿದಾರನು ಹಲವಾರು ತಿಂಗಳುಗಳ ತನಕ ಸಹಾಯಕ ಪಯನೀಯರ್ ಕೆಲಸ ಮಾಡುವ ಆವಶ್ಯಕತೆಯೇನೂ ಇಲ್ಲ ಎಂದು ಹಿರಿಯರು ಮನಸ್ಸಿನಲ್ಲಿಡತಕ್ಕದ್ದು. (km 10⁄86 ಪುರವಣಿ ಪ್ಯಾರ. 24-26) ಸಹಜವಾಗಿ, ತಾಸುಗಳ ಆವಶ್ಯಕತೆಯನ್ನು ಮುಟ್ಟುವ ಸ್ಥಾನದಲ್ಲಿ ಅರ್ಜಿದಾರನು ಇದ್ದಾನೆ ಎಂದು ನ್ಯಾಯಸಮ್ಮತವಾಗಿ ಖಚಿತಮಾಡಿಕೊಳ್ಳಲು ಹಿರಿಯರು ಬಯಸುತ್ತಾರೆ.
14 ಸಭೆಯ ಸೇವಾ ಕಮಿಟಿಯು ಅರ್ಜಿಯನ್ನು ಪರಾಮರ್ಶಿಸಿದ ಮತ್ತು ಎಲ್ಲಾ ಪ್ರಶ್ನೆಗಳು ಉತ್ತರಿಸಲ್ಪಟ್ಟಿವೆ ಎಂದು ಖಚಿತಪಡಿಸಿಕೊಳ್ಳಲು ಸೆಕ್ರಿಟರಿಯು ಜಾಗ್ರತೆಯಿಂದ ಪರಿಶೀಲಿಸಿದ ನಂತರ, ಕಾರ್ಯವಿಳಂಬ ಮಾಡದೆ ಅದನ್ನು ಸೊಸೈಟಿಗೆ ಕಳುಹಿಸತಕ್ಕದ್ದು.
15 ಕ್ರಮದ ಪಯನೀಯರರು ಅನುಭವಿಸುತ್ತಿರಬಹುದಾದ ಯಾವುದೇ ಸಮಸ್ಯೆಗಳನ್ನು ಸೆಕ್ರಿಟರಿಯು ಹಿರಿಯರಿಗೆ ತಿಳಿಸತಕ್ಕದ್ದು. ಸಭೆಯಲ್ಲಿ ತುಂಬಾ ಪಯನೀಯರರುಗಳು ಇರುವಾಗ, ವಿಶೇಷವಾಗಿ ಇದು ಪ್ರಾಮುಖ್ಯವಾಗಿದೆ. ಸೇವಾ ವರ್ಷದಂತ್ಯದಲ್ಲಿ ಕಾಂಗ್ರಿಗೇಶನ್ ಆನ್ಯಾಲಿಸಿಸ್ ರಿಪೋರ್ಟ್ (S-10) ನಲ್ಲಿ ವಿನಂತಿಸಲ್ಪಟ್ಟಂತೆ, ಕ್ರಮದ ಪಯನೀಯರರ ಚಟುವಟಿಕೆಯನ್ನು ಪರಾಮರ್ಶಿಸುವದಕ್ಕೆ ಕೂಡಿಸಿ, ತಾಸುಗಳ ಆವಶ್ಯಕತೆಗಳನ್ನು ತಲುಪಲು ಹಿಂದೆಬೀಳುವವರು ಮತ್ತು ವೈಯಕ್ತಿಕ ಗಮನದ ಆವಶ್ಯಕತೆಯಿರುವವರು ಯಾರು ಎಂದು ನೋಡಲು, ಸೇವಾ ಮೇಲ್ವಿಚಾರಕನು ತನ್ನನ್ನು ಭೇಟಿಯಾಗುವಂತೆ ಸೆಕ್ರಿಟರಿಯು ಮಾರ್ಚ್ನ ಆರಂಭದಲ್ಲಿ ಅವನನ್ನು ಆಮಂತ್ರಿಸತಕ್ಕದ್ದು. (ಫೆಬ್ರವರಿ 1993 ನಮ್ಮ ರಾಜ್ಯದ ಸೇವೆ, ಪ್ರಕಟನೆಗಳು ನೋಡಿರಿ.) ತಡಮಾಡದೆ ಸಹಾಯವು ಕೊಡಲ್ಪಟ್ಟಲ್ಲಿ, ಯಶಸ್ವಿಯಾಗಿ ಸೇವಾ ವರ್ಷವನ್ನು ಕೊನೆಗೊಳಿಸಲು ಪಯನೀಯರನು ಶಕ್ತನಾಗಬಹುದು.
16 ಹೊಸ ಕ್ರಮದ ಪಯನೀಯರರಲ್ಲಿ ಅನೇಕರು ಪ್ರಾಯದಲ್ಲಿ ಎಳೆಯರೂ, ಸಂಬಂಧಿತವಾಗಿ ಸತ್ಯದಲ್ಲಿ ಹೊಸಬರೂ ಆಗಿದ್ದಾರೆ. ಅವರ ಸ್ವ-ಇಚ್ಛೆಯ ಆತ್ಮವು ಖಂಡಿತವಾಗಿ ನಮ್ಮನ್ನು ಉಲ್ಲಾಸಿಸುವಂತೆ ಮಾಡುತ್ತದೆ! ಆದರೆ ಮನೆ-ಮನೆಯ ಕಾರ್ಯದಲ್ಲಿ ಕೌಶಲವನ್ನು ಬೆಳಸಲು, ಪರಿಣಾಮಕಾರಿ ಪುನಃ ಭೇಟಿಗಳನ್ನು ಮಾಡಲು, ಮತ್ತು ಬೈಬಲ್ ಅಭ್ಯಾಸಗಳಲ್ಲಿ ಕಲಿಸಲು ಈ ಹೊಸಬರಿಗೆ ಇನ್ನೂ ತರಬೇತಿಯ ಜರೂರಿಯಿದೆ. ಈ ತರಬೇತಿಯು ದೊರೆಯದಿದ್ದಲ್ಲಿ, ಒಂದು ಯಾ ಹೆಚ್ಚು ವರ್ಷದ ನಂತರ, ಹೊಸಬನು ನಿರುತ್ಸಾಹಗೊಳ್ಳಬಹುದು ಮತ್ತು ಶುಶ್ರೂಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯದಿರುವ ಕಾರಣ, ಕ್ರಮೇಣ ಪಯನೀಯರ್ ಸೇವೆಯನ್ನು ನಿಲ್ಲಿಸಬಹುದು. ಜಾಗೃತ ಹಿರಿಯರಿಗೆ ಚಿಕ್ಕಪುಟ್ಟ ಸಮಸ್ಯೆಗಳನ್ನು ಯಾ ಚಟುವಟಿಕೆಯಲ್ಲಿ ನಿಧಾನಿಸುವಿಕೆಯನ್ನು ಪತ್ತೆಹಚ್ಚಲು ಸಾಧ್ಯವಿರಬಹುದು. ಕೂಡಲೇ ಗಮನವನ್ನು ಕೊಟ್ಟಲ್ಲಿ, ಮತ್ತು ಅವನ ಸಮಸ್ಯೆಯೊಂದಿಗೆ ಪಯನೀಯರನಿಗೆ ನೆರವಾದಲ್ಲಿ, ಉತ್ಪಾದಕ ಸೇವೆಯ ಹಲವಾರು ವರ್ಷಗಳನ್ನು ಅವನು ಆನಂದಿಸಬಹುದು.
17 ದೂರದ ನೀರುಗಳಲ್ಲಿ ನೀವು ಮೀನು ಹಿಡಿಯಶಕ್ತರೋ? ಯೇಸುವಿನ ಶಿಷ್ಯರಲ್ಲಿ ಕೆಲವರು ಬೆಸ್ತರಾಗಿದ್ದರು. ಕೆಲವೊಮ್ಮೆ, ಇಡೀ ರಾತ್ರಿ ಮೀನು ಹಿಡಿಯಲು ಪ್ರಯತ್ನಿಸಿದ ನಂತರವೂ, ಅವರ ಬಲೆಗಳು ಖಾಲಿಯಾಗಿಯೇ ಇರುತ್ತಿದ್ದವು. (ಯೋಹಾನ 21:3) ಈ ದೇಶದ ಕೆಲವು ನಗರಗಳಲ್ಲಿ ಎಲ್ಲಿ ‘ಮನುಷ್ಯರನ್ನು ಹಿಡಿಯುವ’ ಕೆಲಸವು ಕೆಲವು ವರ್ಷಗಳಿಂದ ಸಾಗುತ್ತಾ ಇದೆಯೋ ಅಲ್ಲಿ ‘ಮೀನು ಹಿಡಿಯುವ’ ಕಾರ್ಯದ ಪರಾಮರಿಕೆ ಮಾಡುವ ಹುರುಪಿನ ಅನೇಕ ಸಾಕ್ಷಿಗಳಿರುವ ದೊಡ್ಡ ಸಭೆಗಳು ಇವೆ. ಅವರ ಸಭೆಯ “ನೀರುಗಳಲ್ಲಿ” ಉಳಿದಿರುವ “ಮೀನುಗಳು” ಕೊಂಚವೇ ಎಂದು ಕೆಲವರು ತೀರ್ಮಾನಕ್ಕೆ ಕೂಡ ಬಂದಿರುತ್ತಾರೆ. (ಮತ್ತಾ. 4:19) ವ್ಯತಿರಿಕ್ತವಾಗಿ, ಎಲ್ಲಿ ಪ್ರಚಾರಕರು ಮತ್ತು ಪಯನೀಯರರು ಅನೇಕ ಬೈಬಲ್ ಅಭ್ಯಾಸಗಳನ್ನು ನಡಿಸುತ್ತಾರೋ ಆ ನಗರಗಳಿಂದ ಬರುವ ವರದಿಗಳನ್ನು ಆಲಿಸುವುದರಲ್ಲಿ ನಾವು ರೋಮಾಂಚಗೊಳ್ಳುವುದಿಲ್ಲವೇ? ಈ ಪಟ್ಟಣಗಳಲ್ಲಿ ಪಯನೀಯರರಿಂದ ಅನುಭವಿಸಲ್ಪಟ್ಟ ಆನಂದವು ಸ್ಪಷ್ಟವಾಗಿಗಿ ತೋರಿಬರುತ್ತದೆ. (ಕಾಬು92 12⁄1 ಪು. 20 ಪ್ಯಾರ. 15) ಹೀಗೆ, ಕೆಲವು ಶ್ರಮಶೀಲ ಕ್ರಮದ ಪಯನೀಯರರು ಎಲ್ಲಿ ಆವಶ್ಯಕತೆಯು ಇದೆಯೋ ಅಲ್ಲಿ ಹೋಗುವ ಸ್ಥಿತಿಯಲ್ಲಿರುವುದಾದರೆ, ಮತ್ತು ಅವರು ಹಾಗೆ ಮಾಡಲು ಯೋಚಿಸುತ್ತಿರುವುದಾದರೆ, ಅಂತಹ ಒಂದು ಸ್ಥಳ ಬದಲಾವಣೆ ಮಾಡುವ ಮೊದಲು ಅವರು ಬ್ರಾಂಚ್ ಆಫೀಸಿನೊಂದಿಗೆ ವಿಚಾರಿಸಿಕೊಳ್ಳತಕ್ಕದ್ದು.
18 ಆರಂಭದಲ್ಲಿ, ಪಯನೀಯರಿಂಗ್ ಮಾಡುವುದು ಯೋಗ್ಯ ಸಂಗತಿ ಎಂದು ಅವರು ತಿಳಿದುಕೊಂಡ ಕಾರಣ ಕೆಲವರು ಅದನ್ನು ಆರಂಭಿಸಿರಬಹುದು, ಆದರೆ ಅದರಲ್ಲಿ ಯಶಸ್ಸು ಪಡೆಯಲು ಶಕ್ತರಾಗುವರೋ ಎಂದು ಅವರು ಚಿಂತಿತರಾಗಿದ್ದರು. ಕೆಲವು ಸಂದೇಹ ಮತ್ತು ಮೀಸಲಾತಿಗಳೊಂದಿಗೆ ಅವರು ಅರ್ಜಿ ನೊಂದಾಯಿಸಿರಬಹುದು. ಮೊದಲು ಕ್ಷೇತ್ರದಲ್ಲಿ ಅವರ ಫಲಿತಾಂಶಗಳು ಅತಿ ಕೊಂಚವೇ ಇದ್ದಿರಬಹುದು. ಆದಾಗ್ಯೂ, ಸಮಯಾನಂತರ ಅವರ ಕೌಶಲವು ಅಭಿವೃದ್ಧಿಗೊಂಡಿತು, ಮತ್ತು ಅವರ ಕಾರ್ಯದ ಮೇಲೆ ಯೆಹೋವನ ಆಶೀರ್ವಾದದ ರುಜುವಾತು ತೋರಿಬಂತು. ತತ್ಪರಿಣಾಮವಾಗಿ, ಅವರ ಆನಂದ ಮತ್ತು ಭರವಸೆಯು ಬೆಳೆಯಿತು. ಕೆಲವರಿಗೆ, ಪಯನೀಯರಿಂಗ್ ಬೆತೆಲ್ ಸೇವೆಗೆ, ಮತ್ತು ಸಂಚರಣಾ ಕೆಲಸಕ್ಕೆ ಒಂದು ಮೇಲೇರುವ ಮೆಟ್ಟಲಾಗಿ ಸಹ ರುಜುವಾಗಿದೆ.
19 ಕ್ರಮದ ಪಯನೀಯರ್ ಆಗಿ ದೂರದ ಪಟ್ಟಣಕ್ಕೆ ಹೋಗಲು ನಿಮಗೆ ಸಾಧ್ಯವಾಗಲಿಕ್ಕಿಲ್ಲ, ಆದರೆ ಒಂದು ವೇಳೆ ನಿಮ್ಮ ಪ್ರಸ್ತುತ ಟೆರಿಟೊರಿಯು ವಿಶೇಷವಾಗಿ ಫಲದಾಯಕವಾಗಿಲ್ಲದಿರುವುದಾದರೆ, ಬೇರೆ ನೀರುಗಳಲ್ಲಿ, ಪ್ರಾಯಶಃ ನಿಮ್ಮ ಪ್ರಾಂತ್ಯದೊಳಗೆ, ಮೀನು ಹಿಡಿಯುವ ಅವಕಾಶಗಳು ನಿಮಗೆ ಇರಬಹುದು. ಅಂತಹ ಒಂದು ಬದಲಾವಣೆಯು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸುವಿಕೆಯನ್ನು ಆವಶ್ಯಕವನ್ನಾಗಿ ಮಾಡಬಹುದು, ಆದರೆ ಆತ್ಮಿಕ ಬಹುಮಾನಗಳಾದರೋ ಖಂಡಿತವಾಗಿಯೂ ಅತಿ ಹೇರಳವಾಗಿರುವುವು.—ಮತ್ತಾ. 6:19-21.
20 ಯಾ ನಿಮ್ಮ ಪರಿಸ್ಥಿತಿಗಳು ಅನುಮತಿಸುವುದಾದರೆ, ನಿಮ್ಮ ಸ್ವಂತ ಸರ್ಕಿಟಿನ ಹತ್ತಿರದ ಸಭೆಯೊಂದಕ್ಕೆ ನೀವು ಸಹಾಯವನ್ನೀಯಲು ಶಕ್ತರಾಗಿರಬಹುದು. ನೀವು ಅರ್ಹತೆಯುಳ್ಳವರಾಗಿರುವುದಾದರೆ, ಇನ್ನೊಬ್ಬ ಪಯನೀಯರನಿಂದ ಪ್ರಯೋಜನವಾಗುವ ಸಭೆಗಳ ಕುರಿತು ಸಲಹೆಗಳನ್ನು ನೀಡಲು ನಿಮ್ಮ ಸರ್ಕಿಟ್ ಮೇಲ್ವಿಚಾರಕನು ಸಂತೋಷಿಸುವನು.
21 ಕೆಲವು ಪಯನೀಯರರು ಮತ್ತು ಪ್ರಚಾರಕರು ಅವರ ಸ್ವಂತ ಮನೆಯಲ್ಲಿಯೇ ಇದ್ದು, ಅವರ ಪ್ರದೇಶದ ಆವಶ್ಯಕತೆಗಳನ್ನು ಪೂರೈಸಲು ಶಕ್ತರಾಗಿದ್ದಾರೆ. ಅವರಿಗೆ ಇನ್ನೊಂದು ಭಾಷೆಯು ತಿಳಿದಿರಬಹುದು. ನಿಮ್ಮ ಟೆರಿಟೊರಿಯ ಒಳಗಿರುವ ಜನರಲ್ಲಿ ಒಂದು ದೊಡ್ಡ ಪ್ರಮಾಣದವರು ಇನ್ನೊಂದು ಭಾಷೆಯನ್ನಾಡುತ್ತಾರೆಂದು ನೀವು ಕಂಡುಕೊಳ್ಳುತ್ತೀರೋ? ಅವರ ಸ್ವಂತ ಭಾಷೆಯನ್ನು ಬಳಸುವ ಯಾರಾದರೊಬ್ಬರಿಂದ ರಾಜ್ಯ ಸಂದೇಶವನ್ನು ಪಡೆಯುವ ಆವಶ್ಯಕತೆಯಿರುವ ಜನರಿದ್ದಾರೋ? ರಾಜ್ಯದ ಸಂದೇಶದೊಂದಿಗೆ ಎಲ್ಲಾ ವಿಧದ ಜನರಿಗೆ ತಲುಪುವದರಲ್ಲಿ, ಇನ್ನೊಂದು ಭಾಷೆಯನ್ನು ತಿಳಿದಿರುವವರು ಮಹಾ ಸಹಾಯಕಾರಿಯಾಗಬಲ್ಲರು. ಇದೊಂದು ನಿಜ ಪಂಥಾಹ್ವಾನವಾಗಿರಬಹುದಾದರೂ ಕೂಡ, ಅದು ಅತಿ ಪ್ರತಿಫಲವನ್ನೀಯುವಂಥದ್ದೂ ಆಗಿರಬಲ್ಲದು.—1 ತಿಮೊ. 2:4; ತೀತ 2:11.
22 ಯೆಹೋವನನ್ನು ಸನ್ಮಾನಿಸಲು ನೀವೇನು ಮಾಡಶಕ್ತರೋ ಅದೆಲ್ಲವನ್ನೂ ನೀವು ಪ್ರಚಲಿತದಲ್ಲಿ ಮಾಡುತ್ತಿರುವುದಾದರೆ, ನಿಮ್ಮ ಸದ್ಯದ ಸೇವಾ ಸುಯೋಗಗಳಲ್ಲಿ ಉಲ್ಲಾಸಿಸಿರಿ. ನೀವು ಹೆಚ್ಚನ್ನು ಮಾಡಶಕ್ತರು ಎಂದು ಭಾವಿಸುವುದಾದರೆ, ವಿಷಯವನ್ನು ಪ್ರಾರ್ಥನೆಯಲ್ಲಿ ಯೆಹೋವನ ಬಳಿ ಕೊಂಡೊಯ್ಯಿರಿ. ನಿಮ್ಮ ಪರಿಸ್ಥಿತಿಗಳು ಯಾವ ಬದಲಾವಣೆಗಳನ್ನು ಮಾಡಲು ನಿಮಗೆ ಅನುಮತಿಸುವವೆಂಬದನ್ನು ವಾಸ್ತವಿಕವಾಗಿ ವಿವೇಚಿಸಿ ನೋಡಿರಿ. ಪಯನೀಯರಾತ್ಮವಿರುವ ಒಬ್ಬ ಹಿರಿಯನೊಂದಿಗೆ ಯಾ ಸರ್ಕಿಟ್ ಮೇಲ್ವಿಚಾರಕನೊಂದಿಗೆ ನಿಮ್ಮ ಯೋಜನೆಗಳನ್ನು ಮಾತಾಡಿರಿ. ಪ್ರಾರ್ಥನಾಪೂರ್ವಕವಾದ, ವ್ಯಾವಹಾರಿಕ ತೀರ್ಮಾನವೊಂದನ್ನು ನೀವು ಮಾಡಿದ ನಂತರ, ಅವನನ್ನು ಸನ್ಮಾನಿಸುವವರನ್ನು ಸನ್ಮಾನಿಸುವ ಯೆಹೋವನ ವಾಗ್ದಾನದ ಮೇಲೆ ಭರವಸೆಯನ್ನಿಟ್ಟು, ವಿಳಂಬಿಸದೇ ಸಾಧಿಸಲು ಯತ್ನಿಸಿರಿ.—ಇಬ್ರಿ. 13:5, 6; 1 ಸಮು. 2:30.