ಸೆಪ್ಟೆಂಬರ್ಗಾಗಿ ಸೇವಾ ಕೂಟಗಳು
ಸೆಪ್ಟೆಂಬರ್ 1ರಿಂದ ಆರಂಭವಾಗುವ ವಾರ
ಸಂಗೀತ 26 (3)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಪ್ರಥಮವಾಗಿಡಿರಿ.” ಪ್ರಶ್ನೋತ್ತರಗಳು. ಸಮಯವು ಅನುಮತಿಸಿದಂತೆ, ಫೆಬ್ರವರಿ 22, 1987ರ ಅವೇಕ್! ಪತ್ರಿಕೆಯ, 8-9ನೆಯ ಪುಟಗಳಲ್ಲಿರುವ “ಯೋಗ್ಯವಾದ ಆದ್ಯತೆಗಳನ್ನಿಡುವುದು” ಎಂಬ ಲೇಖನದ ಮೇಲೆ ಹೇಳಿಕೆಯನ್ನು ಕೊಡಿರಿ.
20 ನಿ: “ಕುಟುಂಬ ಸಂತೋಷದ ರಹಸ್ಯದಲ್ಲಿ ಇತರರೊಂದಿಗೆ ಪಾಲಿಗರಾಗುವುದು.” ಪ್ಯಾರಗ್ರಾಫ್ 1 ಮತ್ತು 6-8ನೆಯ ಪ್ರಾರಗ್ರಾಫ್ಗಳನ್ನು ಆವರಿಸುವ ಒಂದು ಭಾಷಣ. 2-5ನೆಯ ಪ್ಯಾರಗ್ರಾಫ್ಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಶಿಷ್ಯರನ್ನಾಗಿ ಮಾಡುವ ಮತ್ತು ಅಭ್ಯಾಸಗಳನ್ನು ಆರಂಭಿಸುವ ಗುರಿಯನ್ನು ತಲಪುವ ವಿಷಯವನ್ನು ನಾವು ಮನಸ್ಸಿನಲ್ಲಿಡಬೇಕೆಂಬುದನ್ನು ಒತ್ತಿಹೇಳಿರಿ.
ಸಂಗೀತ 107 (4) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 8ರಿಂದ ಆರಂಭವಾಗುವ ವಾರ
ಸಂಗೀತ 27 (29)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಶಿಷ್ಯರನ್ನು ತಯಾರಿಸುವ ಬೈಬಲ್ ಅಭ್ಯಾಸಗಳು.” ಭಾಷಣ ಮತ್ತು ಗುಂಪು ಚರ್ಚೆ. ಹಿರಿಯನು ಲೇಖನವನ್ನು ಪುನರ್ವಿಮರ್ಶಿಸುತ್ತಾನೆ. ಅನಂತರ ಅವನು, ಅಭ್ಯಾಸಗಳನ್ನು ನಡೆಸುವ ಅನುಭವೀ ಪ್ರಚಾರಕರೊಂದಿಗೆ “ವಿದ್ಯಾರ್ಥಿಗಳನ್ನು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕಡೆಗೆ ಪ್ರೇರಿಸಿರಿ” (km 6/96 ಪುರವಣಿ, ಪ್ಯಾರ. 20-2) ಎಂಬ ವಿಷಯವನ್ನು ಚರ್ಚಿಸುತ್ತಾನೆ.
ಸಂಗೀತ 109 (2) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 15ರಿಂದ ಆರಂಭವಾಗುವ ವಾರ
ಸಂಗೀತ 30 (22)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: ಒಂದು ಸಂಭಾಷಣೆಯನ್ನು ಆರಂಭಿಸುವ ವಿಧ. ಶುಶ್ರೂಷೆಯಲ್ಲಿನ ನಮ್ಮ ಯಶಸ್ಸಿನ ಹೆಚ್ಚಿನ ಭಾಗವು, ನಾವು ಬೇರೆ ಜನರನ್ನು ಅರ್ಥಗರ್ಭಿತವಾದ ಸಂಭಾಷಣೆಗಳಲ್ಲಿ ಒಳಗೂಡಿಸಲು ಶಕ್ತರಾಗಿರುವುದರ ಮೇಲೆ ಅವಲಂಬಿಸುತ್ತದೆ. ಇತರರು ಕಿವಿಗೊಡುವಂತೆ ಮಾಡುವ ಯಾವುದೊ ವಿಷಯವನ್ನು ನಾವು ಹೇಳಲು ಶಕ್ತರಾಗಿರುವಾಗ, ನಾವು ಸಾಕ್ಷಿಕಾರ್ಯದಲ್ಲಿ ಎದುರಿಸುವ ಅತಿ ದೊಡ್ಡ ತಡೆಗಳಲ್ಲಿ ಒಂದನ್ನು ಜಯಿಸಿದ್ದೇವೆ. ಸ್ಕೂಲ್ ಗೈಡ್ಬುಕ್ ಅಭ್ಯಾಸ 16, 11-14ನೆಯ ಪ್ಯಾರಗ್ರಾಫ್ಗಳಲ್ಲಿರುವ ಮುಖ್ಯ ಸೂಚನೆಗಳನ್ನು ಸಭಿಕರೊಂದಿಗೆ ಚರ್ಚಿಸಿರಿ. (1) ಬೀದಿಯಲ್ಲಿ ಒಬ್ಬ ಪಾದಚಾರಿ, (2) ಬಸ್ಸಿನಲ್ಲಿ ಒಬ್ಬ ಪ್ರಯಾಣಿಕ, (3) ಕೌಂಟರ್ನಲ್ಲಿರುವ ಒಬ್ಬ ಕ್ಲರ್ಕ್, (4) ಒಂದು ಶಾಪಿಂಗ್ ಸೆಂಟರ್ನ ವಾಹನ ನಿಲುಗಡೆಯಲ್ಲಿರುವ ಒಬ್ಬ ವ್ಯಕ್ತಿ, (5) ಒಂದು ಉದ್ಯಾನವನದ ಬೆಂಚಿನ ಮೇಲೆ ಕುಳಿತುಕೊಂಡಿರುವ ಒಬ್ಬ ವ್ಯಕ್ತಿ, ಮತ್ತು (6) ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಸಂಪರ್ಕಿಸಲ್ಪಡುವ ಒಬ್ಬ ವ್ಯಕ್ತಿ—ಇಂತಹ ಜನರೊಂದಿಗೆ ಮಾತಾಡುವಾಗ, ಸಂಭಾಷಣೆಗಳನ್ನು ಆರಂಭಿಸುವುದರಲ್ಲಿ ಕುಶಲರೂ ಪ್ರಭಾವಶಾಲಿಗಳೂ ಆಗಿರುವ ಪ್ರಚಾರಕರು ತಾವು ಉಪಯೋಗಿಸುವ ಆರಂಭದ ಮಾತುಗಳನ್ನು ತಿಳಿಸುವಂತೆ ಏರ್ಪಡಿಸಿರಿ.
20 ನಿ: ನೀವು ಸ್ಕೂಲ್ ಬ್ರೋಷರನ್ನು ಉಪಯೋಗಿಸುತ್ತಿದ್ದೀರೊ? ಒಬ್ಬ ಹಿರಿಯನು ಅಕ್ಟೋಬರ್ 1, 1985ರ ವಾಚ್ಟವರ್ ಪತ್ರಿಕೆಯ, 30-1ನೆಯ ಪುಟಗಳನ್ನು ಕೆಲವು ಹೆತ್ತವರು ಮತ್ತು ಮಕ್ಕಳೊಂದಿಗೆ ಚರ್ಚಿಸುತ್ತಾನೆ. ಸ್ಕೂಲ್ ಬ್ರೋಷರನ್ನು ಉಪಯೋಗಿಸುತ್ತಾ ಅವರಿಗಾದ ವೈಯಕ್ತಿಕ ಅನುಭವಗಳನ್ನು ಅವರು ತಿಳಿಸುತ್ತಾರೆ.
ಸಂಗೀತ 112 (16) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 22ರಿಂದ ಆರಂಭವಾಗುವ ವಾರ
ಸಂಗೀತ 32 (3)
5 ನಿ: ಸ್ಥಳಿಕ ತಿಳಿಸುವಿಕೆಗಳು.
23 ನಿ: “1997ರ ‘ದೇವರ ವಾಕ್ಯದಲ್ಲಿ ನಂಬಿಕೆ’ ಜಿಲ್ಲಾ ಅಧಿವೇಶನ.” (ಪ್ಯಾರಗ್ರಾಫ್ಗಳು 1-16) ಪ್ರಶ್ನೋತ್ತರಗಳು. 10, 12, ಮತ್ತು 15ನೆಯ ಪ್ಯಾರಗ್ರಾಫ್ಗಳನ್ನು ಓದಿರಿ. ನಮ್ಮ ಸಭ್ಯ ಕ್ರೈಸ್ತ ತೋರಿಕೆ ಮತ್ತು ನಡತೆಯನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವ ಹಾಗೂ ನಮ್ಮ ಮಕ್ಕಳ ಯೋಗ್ಯವಾದ ಮೇಲ್ವಿಚಾರಣೆಯನ್ನು ಮಾಡುವ ಶಾಸ್ತ್ರೀಯ ಮಹತ್ವವನ್ನು ಒತ್ತಿಹೇಳಿರಿ.
17 ನಿ: ಸಭೆಯ 1997ರ ಸೇವಾ ವರ್ಷದ ವರದಿಯನ್ನು ಪುನರ್ವಿಮರ್ಶಿಸಿರಿ. ವಿಶೇಷವಾಗಿ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿನ ಉತ್ತಮ ಪ್ರಯತ್ನಕ್ಕಾಗಿ ಸೇವಾ ಮೇಲ್ವಿಚಾರಕನು ಸಭೆಯನ್ನು ಶ್ಲಾಘಿಸುತ್ತಾನೆ. ಸುಧಾರಣೆಗಾಗಿ ಸಲಹೆಗಳನ್ನು ನೀಡುತ್ತಾನೆ. ಐದು ವಾರಾಂತ್ಯಗಳಿರುವ, ನವೆಂಬರ್, ಮೇ, ಆಗಸ್ಟ್ ತಿಂಗಳುಗಳಲ್ಲಿ ಆಕ್ಸಿಲಿಯಿರಿ ಪಯನೀಯರ್ ಸೇವೆ ಮಾಡುವುದನ್ನು ಸೇರಿಸಿ, ಹೊಸ ಸೇವಾ ವರ್ಷಕ್ಕಾಗಿ ಕೆಲವೊಂದು ವ್ಯಾವಹಾರಿಕ ಗುರಿಗಳನ್ನು ತಿಳಿಸುತ್ತಾನೆ.
ಸಂಗೀತ 113 (12) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 29ರಿಂದ ಆರಂಭವಾಗುವ ವಾರ
ಸಂಗೀತ 37 (9)
13 ನಿ: ಸ್ಥಳಿಕ ತಿಳಿಸುವಿಕೆಗಳು. ಎಲ್ಲರೂ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಜ್ಞಾಪಕಹುಟ್ಟಿಸಿರಿ. ಮುಂದಿನ ವಾರ ಪುಸ್ತಕ ಅಭ್ಯಾಸದಲ್ಲಿ, ನಾವು ಕುಟುಂಬ ಸಂತೋಷ ಪುಸ್ತಕವನ್ನು ಅಭ್ಯಾಸಿಸುವುದನ್ನು ಆರಂಭಿಸುವೆವು ಎಂಬುದನ್ನು ತಿಳಿಸಿರಿ. ಅಕ್ಟೋಬರ್ ತಿಂಗಳಿನ ಚಂದಾ ನೀಡುವಿಕೆಗೆ ತಯಾರಿಯಲ್ಲಿ, ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ ಪುಟ 8ರಿಂದ, “ನಿಮ್ಮ ಟೆರಿಟೊರಿಯನ್ನು ವಿಶ್ಲೇಷಿಸಿರಿ,” “ಸ್ವತಃ ಪತ್ರಿಕೆಗಳೊಂದಿಗೆ ಪರಿಚಿತರಾಗಿರಿ,” “ನಿಮ್ಮ ಆರಂಭದ ಮಾತುಗಳನ್ನು ತಯಾರಿಸಿರಿ,” “ಮನೆಯವನಿಗೆ ಹೊಂದಿಕೊಳ್ಳಿರಿ,” ಮತ್ತು “ಒಬ್ಬರಿಗೊಬ್ಬರು ನೆರವು ನೀಡಿರಿ,” ಇವುಗಳನ್ನು ಮಾಡುವ ಅಗತ್ಯವನ್ನು ಚರ್ಚಿಸಿರಿ.
20 ನಿ: “1997ರ ‘ದೇವರ ವಾಕ್ಯದಲ್ಲಿ ನಂಬಿಕೆ’ ಜಿಲ್ಲಾ ಅಧಿವೇಶನ.” (ಪ್ಯಾರಗ್ರಾಫ್ಗಳು 17-22) ಪ್ರಶ್ನೋತ್ತರಗಳು. ಪ್ಯಾರಗ್ರಾಫ್ 17ನ್ನು ಮತ್ತು ಉಲ್ಲೇಖಿತ ವಚನಗಳನ್ನು ಓದಿರಿ. ವಿಶೇಷವಾಗಿ ಆಸನವ್ಯವಸ್ಥೆಯ ವಿಷಯದಲ್ಲಿ, ಕ್ರಮಬದ್ಧತೆ ಮತ್ತು ಇತರರಿಗಾಗಿ ಪರಿಗಣನೆಯನ್ನು ತೋರಿಸುವ ಅಗತ್ಯವನ್ನು ಒತ್ತಿಹೇಳಿರಿ. “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಇದನ್ನು ಪುನರ್ವಿಮರ್ಶಿಸುತ್ತಾ, ಒಂದು ಸಂಕ್ಷಿಪ್ತ ಭಾಷಣದೊಂದಿಗೆ ಸಮಾಪ್ತಿಗೊಳಿಸಿರಿ.
12 ನಿ: ನಿಮ್ಮ ಶುಶ್ರೂಷೆಯನ್ನು ಮಹಿಮೆಪಡಿಸಿರಿ. ನಮ್ಮ ಶುಶ್ರೂಷೆ ಪುಸ್ತಕದ 81-3ನೆಯ ಪುಟಗಳ ಕುರಿತಾದ ಸಭಿಕರೊಂದಿಗಿನ ಚರ್ಚೆ. ಮುಖ್ಯ ವಿಷಯಗಳನ್ನು ಎತ್ತಿತೋರಿಸಲು ಈ ಪ್ರಶ್ನೆಗಳನ್ನು ಕೇಳಿರಿ: (1) ಯೇಸುವಿನ ಮಾದರಿಯನ್ನು ಅನುಸರಿಸುವುದರಿಂದ ನಾವು ಹೇಗೆ ಪ್ರಯೋಜನಪಡೆಯುತ್ತೇವೆ? (2) ಸಾರುವುದಕ್ಕಾಗಿರುವ ನಮ್ಮ ಜವಾಬ್ದಾರಿಯು ಎಷ್ಟು ಪ್ರಾಮುಖ್ಯವಾಗಿದೆ? (3) ಯೆಹೋವನಿಗೆ ನಮ್ಮ ಜೀವಗಳನ್ನು ಸಮರ್ಪಿಸಲು ಯಾವ ಹೇತುಗಳು ನಮ್ಮನ್ನು ಪ್ರಚೋದಿಸಿದವು? (4) ಒಬ್ಬ ವ್ಯಕ್ತಿಯು ದೇವರನ್ನು ಸೇವಿಸಬೇಕಾದರೆ, ಯಾವ ವಿಧದ ನಡತೆಯು ಅವಶ್ಯವಾಗಿದೆ? (5) ಯೇಸು ಸಾರಿದಂತಹ ವಿಧದಿಂದ ನಾವೇನನ್ನು ಕಲಿಯಸಾಧ್ಯವಿದೆ?
ಸಂಗೀತ 121 (21) ಮತ್ತು ಸಮಾಪ್ತಿಯ ಪ್ರಾರ್ಥನೆ.