ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು ಅಕ್ಟೋಬರ್: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾಗಳು ರೂ. 45.00 ಆಗಿವೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಪ್ರತಿಯೊಂದು ಬಿಡಿ ಪ್ರತಿಗಳು ರೂ. 4.00ಕ್ಕೆ ನೀಡಲ್ಪಡಬೇಕು. ಚಂದಾಗಳನ್ನು ಪಡೆದುಕೊಳ್ಳುವಾಗ, ಕಾವಲಿನಬುರುಜು ಪತ್ರಿಕೆಯು ಪಂಜಾಬಿ ಮತ್ತು ಉರ್ದು (ಈ ಭಾಷೆಗಳಲ್ಲಿ ಅದು ಮಾಸಿಕವಾಗಿದೆ) ಭಾಷೆಗಳ ಹೊರತಾಗಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿದೆ ಎಂಬುದನ್ನು ದಯವಿಟ್ಟು ಜ್ಞಾಪಕದಲ್ಲಿಡಿರಿ. ಎಚ್ಚರ! ಪತ್ರಿಕೆಯು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ತೆಲುಗು, ನೇಪಾಲಿ, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲಿ ಮಾಸಿಕವಾಗಿದೆ. ಉರ್ದು, ಪಂಜಾಬಿ ಮತ್ತು ಬಂಗಾಲಿ ಭಾಷೆಗಳಲ್ಲಿ ಎಚ್ಚರ! ಪತ್ರಿಕೆಯ ತ್ರೈಮಾಸಿಕ ವಿತರಣಾ ಪ್ರತಿಗಳು ಸಭೆಗಳಿಗೆ ದೊರಕುತ್ತವೆ, ಆದರೆ ಈ ಮೂರು ಭಾಷೆಗಳಲ್ಲಿ ವೈಯಕ್ತಿಕ ಚಂದಾಗಳು ದೊರಕುವುದಿಲ್ಲ. ಅಕ್ಟೋಬರ್ 12ರಿಂದ ಆರಂಭಿಸುತ್ತಾ, ರಾಜ್ಯ ವಾರ್ತೆ ನಂ. 35 ವಿತರಿಸಲ್ಪಡುವುದು. ನವೆಂಬರ್: ರಾಜ್ಯ ವಾರ್ತೆ ನಂ. 35ರ ವಿತರಣೆಯು ಮುಂದುವರಿಯುವುದು. ರಾಜ್ಯ ವಾರ್ತೆ ನಂ. 35ರ ಲಭ್ಯ ಸರಬರಾಯಿ ಮುಗಿದುಹೋದ ಅನಂತರ, ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ಕೊಡಬಹುದು. ಡಿಸೆಂಬರ್: ಈ ಮುಂದಿನ ಮೂರು ಪುಸ್ತಕಗಳಲ್ಲಿ ಯಾವುದೇ ಒಂದು ಪುಸ್ತಕವು, ರೂ. 45.00ರ ಕಾಣಿಕೆಗಾಗಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, (ಚಿಕ್ಕ ಸೈಜ್ ರೂ. 25.00), ಬೈಬಲ್ ಕಥೆಗಳ ನನ್ನ ಪುಸ್ತಕ, (ಚಿಕ್ಕ ಸೈಜ್ ರೂ. 30.00), ಅಥವಾ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಪರ್ಯಾಯವಾಗಿ, ವಿಶೇಷ ದರದ ಪುಸ್ತಕಗಳಾಗಿ, ಜುಲೈ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಪುಸ್ತಕಗಳಲ್ಲಿ ಯಾವುದೇ ಪುಸ್ತಕಗಳನ್ನು ರೂ. 2.50ಕ್ಕೆ ನೀಡಸಾಧ್ಯವಿದೆ. ಜನವರಿ: ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಇರದಿದ್ದರೆ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳು ಪ್ರತಿಯೊಂದನ್ನು ರೂ. 20.00ಕ್ಕೆ ನೀಡಸಾಧ್ಯವಿದೆ.
ಸೂಚನೆ: ಮೇಲೆ ಉಲ್ಲೇಖಿಸಲ್ಪಟ್ಟಿರುವ ಯಾವುದೇ ಕ್ಯಾಂಪೇನ್ ಐಟಮ್‌ಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-AB-14)ನಲ್ಲಿ ಹಾಗೆ ಮಾಡತಕ್ಕದ್ದು.
◼ ಒಂದು ಸಭೆಯೊಂದಿಗೆ ಸಹವಾಸಿಸುವವರು ತಮ್ಮ ವೈಯಕ್ತಿಕ ಚಂದಾಗಳನ್ನು ಸೇರಿಸಿ, ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಿಗೆ ಎಲ್ಲ ಹೊಸ ಹಾಗೂ ಪುನರ್‌ನವೀಕರಣ ಚಂದಾಗಳನ್ನು ಸಭೆಯ ಮುಖಾಂತರ ಕಳುಹಿಸಬೇಕು.
◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿನ ಪುರವಣಿಯು “1998ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆ ಶೆಡ್ಯೂಲ್” ಆಗಿದೆ ಹಾಗೂ 1998ರಾದ್ಯಂತ ರೆಫರೆನ್ಸ್‌ಗಾಗಿ ಇಡಲ್ಪಡಬೇಕು.
◼ ಸಂಪೂರ್ಣ ಐದು ವಾರಾಂತ್ಯಗಳುಳ್ಳ ನವೆಂಬರ್ ತಿಂಗಳು ಅನೇಕರಿಗೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಅನುಕೂಲಕರವಾದ ಸಮಯವಾಗಿರಬಹುದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳ ಬೌಂಡ್ ವಾಲ್ಯೂಮ್ಸ್—1996—ಇಂಗ್ಲಿಷ್
ಕುಟುಂಬ ಸಂತೋಷದ ರಹಸ್ಯ—ಉರ್ದು
ಬೈಬಲ್ ಕಥೆಗಳ ನನ್ನ ಪುಸ್ತಕ (ಚಿಕ್ಕ ಸೈಜ್)—ಕನ್ನಡ
◼ ಪುನಃ ಲಭ್ಯವಿರುವ ಪ್ರಕಾಶನಗಳು:
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಡಿಲಕ್ಸ್ ಪಾಕೆಟ್ ಸೈಸ್ (Dlbi25) ಕಪ್ಪು ಹಾಗೂ ಕಂದುಬಣ್ಣದ್ದು—ಇಂಗ್ಲಿಷ್
ಮೃತ್ಯುವಿನ ಮೇಲೆ ವಿಜಯ—ನಿಮಗೆ ಅದು ಸಾಧ್ಯವೋ?—ಗುಜರಾಥಿ, ತಮಿಳು
◼ ಸ್ಟಾಕ್‌ನಲ್ಲಿ ಇಲ್ಲದ ಪ್ರಕಾಶನಗಳು:
ಒಬ್ಬನೇ ಸತ್ಯದೇವರ ಆರಾಧನೆಯಲ್ಲಿ ಐಕ್ಯರು—ಮಲೆಯಾಳಂ
ಹೊಸ ಲೋಕದೊಳಗೆ ಪಾರಾಗುವಿಕೆ—ಮಲೆಯಾಳಂ