1998ಕ್ಕಾಗಿ ಪರ್ಯಾಯ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್
ಸೂಚನೆಗಳು
1998ರಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಪಠ್ಯಪುಸ್ತಕಗಳು: ದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ [bi12], ಕಾವಲಿನಬುರುಜು [ಕಾ], “ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್” (1990ರ ಆವೃತ್ತಿ) [si], ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿ ಕಂಡುಕೊಳ್ಳಲ್ಪಡುವಂತಹ “ಚರ್ಚೆಗಾಗಿ ಬೈಬಲ್ ವಿಷಯಗಳು” [td], ನಿತ್ಯಜೀವಕ್ಕೆ ನಡೆಸುವ ಜ್ಞಾನ [kl], ಕುಟುಂಬ ಸಂತೋಷದ ರಹಸ್ಯ [fy] ಎಂಬ ಪುಸ್ತಕಗಳು ನೇಮಕಗಳಿಗೆ ಆಧಾರವಾಗಿರುವವು.
ಶಾಲೆಯು ಸಂಗೀತ, ಪ್ರಾರ್ಥನೆ, ಮತ್ತು ಸ್ವಾಗತ ಹೇಳಿಕೆಗಳಿಂದ ಸರಿಯಾದ ಸಮಯಕ್ಕೆ ಆರಂಭಗೊಳ್ಳಬೇಕು ಮತ್ತು ಈ ಕೆಳಗಿನಂತೆ ಮುಂದುವರಿಯಬೇಕು:
ನೇಮಕ ನಂಬ್ರ 1: 15 ನಿಮಿಷಗಳು. ಇದು ಒಬ್ಬ ಹಿರಿಯನಿಂದ ಅಥವಾ ಒಬ್ಬ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು, ಮತ್ತು ಅದು ಕಾವಲಿನಬುರುಜು ಪತ್ರಿಕೆ ಅಥವಾ “ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್” ಪುಸ್ತಕದ ಮೇಲೆ ಆಧಾರಿಸಿರುವುದು. ಕಾವಲಿನಬುರುಜು ಪತ್ರಿಕೆಯ ಮೇಲೆ ಆಧಾರಿಸಿರುವಾಗ, ಈ ನೇಮಕವು ಯಾವುದೇ ಮೌಖಿಕ ಪುನರ್ವಿಮರ್ಶೆಯಿಲ್ಲದೆ, 15 ನಿಮಿಷದ ಉಪದೇಶ ಭಾಷಣವಾಗಿ ಕೊಡಲ್ಪಡತಕ್ಕದ್ದು; “ಆಲ್ ಸ್ಕ್ರಿಪ್ಚರ್” ಪುಸ್ತಕದ ಮೇಲೆ ಆಧಾರಿಸಿರುವಾಗ, ಅದು 10ರಿಂದ 12 ನಿಮಿಷದ ಉಪದೇಶ ಭಾಷಣವಾಗಿ ಕೊಡಲ್ಪಡಬೇಕು; ಇದನ್ನು ಹಿಂಬಾಲಿಸಿ, ಈ ಪ್ರಕಾಶನದಲ್ಲಿ ಕೊಡಲ್ಪಟ್ಟಿರುವ ಮುದ್ರಿತ ಪ್ರಶ್ನೆಗಳನ್ನು ಉಪಯೋಗಿಸಿ, 3ರಿಂದ 5 ನಿಮಿಷದ ಮೌಖಿಕ ಪುನರ್ವಿಮರ್ಶೆಯನ್ನು ಮಾಡತಕ್ಕದ್ದು. ಇದರ ಉದ್ದೇಶವು ಕೇವಲ ವಸ್ತುವಿಷಯವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯಕ್ಕೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾದುದನ್ನು ಎತ್ತಿಹೇಳುವುದೇ ಆಗಿರಬೇಕು. ತೋರಿಸಲ್ಪಟ್ಟ ಮುಖ್ಯ ವಿಷಯವು ಉಪಯೋಗಿಸಲ್ಪಡಬೇಕು.
ಈ ಭಾಷಣಕ್ಕೆ ನೇಮಿತರಾದ ಸಹೋದರರು ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸಬೇಕು. ಅಗತ್ಯವಿದ್ದಲ್ಲಿ ಅಥವಾ ಭಾಷಣಕರ್ತನಿಂದ ವಿನಂತಿಸಿಕೊಳ್ಳಲ್ಪಟ್ಟಲ್ಲಿ ಖಾಸಗಿ ಸಲಹೆಯನ್ನು ನೀಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 6 ನಿಮಿಷಗಳು. ಇದು ಸ್ಥಳಿಕ ಅಗತ್ಯಗಳಿಗೆ ವಸ್ತುವಿಷಯವನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಒಬ್ಬ ಹಿರಿಯನಿಂದ ಅಥವಾ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು. ಇದು ನೇಮಿತ ವಾಚನದ ಕೇವಲ ಸಾರಾಂಶವಾಗಿರಬಾರದು. ನೇಮಿತ ಅಧ್ಯಾಯಗಳ 30ರಿಂದ 60 ಸೆಕೆಂಡಿನ ಸಂಪೂರ್ಣ ಪುನರ್ವಿಮರ್ಶೆಯು ಒಳಗೂಡಿಸಲ್ಪಡಬಹುದು. ಹಾಗಿದ್ದರೂ, ಈ ಮಾಹಿತಿಯು ನಮಗೆ ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯ ಮಾಡುವುದೇ ಮೂಲ ಉದ್ದೇಶವಾಗಿದೆ. ತದನಂತರ ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಗಳನ್ನು ಅವರ ವಿವಿಧ ವರ್ಗಕೋಣೆಗಳಿಗೆ ಕಳುಹಿಸುವನು.
ನೇಮಕ ನಂಬ್ರ 2: 5 ನಿಮಿಷಗಳು. ಇದು ಒಬ್ಬ ಸಹೋದರನಿಂದ ಕೊಡಲ್ಪಡುವ, ನೇಮಿತ ವಸ್ತುವಿಷಯದ ಬೈಬಲ್ ವಾಚನವಾಗಿದೆ. ಇದು ಮುಖ್ಯ ಶಾಲೆಯಲ್ಲಿ ಹಾಗೂ ಇತರ ಗುಂಪುಗಳಲ್ಲಿ ಅನ್ವಯಿಸುವುದು. ಈ ವಾಚನ ನೇಮಕಗಳು, ವಿದ್ಯಾರ್ಥಿಯು ಆರಂಭದ ಹಾಗೂ ಸಮಾಪ್ತಿಯ ಹೇಳಿಕೆಗಳಲ್ಲಿ ಸಂಕ್ಷಿಪ್ತ ವಿವರಣಾತ್ಮಕ ಮಾಹಿತಿಯನ್ನು ಕೊಡಸಾಧ್ಯವಾಗುವಂತೆ ಸಾಮಾನ್ಯವಾಗಿ ಸಾಕಷ್ಟು ಚಿಕ್ಕದಾಗಿರುತ್ತವೆ. ಐತಿಹಾಸಿಕ ಹಿನ್ನೆಲೆ, ಪ್ರವಾದನಾತ್ಮಕ ಅಥವಾ ತಾತ್ವಿಕ ಅರ್ಥವಿವರಣೆ, ಮತ್ತು ಮೂಲತತ್ವಗಳ ಅನ್ವಯವು ಒಳಗೂಡಿಸಲ್ಪಡಬಹುದು. ಎಲ್ಲ ನೇಮಿತ ವಚನಗಳನ್ನು ನಿಲ್ಲಿಸದೇ ಓದಬೇಕು. ಓದಲ್ಪಡಬೇಕಾಗಿರುವ ವಚನಗಳು ಕ್ರಮಾನುಗತವಾಗಿ ಇರದಿದ್ದಲ್ಲಿ, ವಿದ್ಯಾರ್ಥಿಯು ಓದುವಿಕೆಯು ಮುಂದುವರಿಯುವ ವಚನವನ್ನು ಉಲ್ಲೇಖಿಸಬಹುದೆಂಬುದು ನಿಶ್ಚಯ.
ನೇಮಕ ನಂಬ್ರ 3: 5 ನಿಮಿಷಗಳು. ಇದು ಸಹೋದರಿಯೊಬ್ಬಳಿಗೆ ನೇಮಿಸಲ್ಪಡುವುದು. ಈ ಭಾಷಣಕ್ಕಾಗಿರುವ ವಿಷಯವು, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿ ಕಂಡುಕೊಳ್ಳಲ್ಪಡುವಂತಹ “ಚರ್ಚೆಗಾಗಿ ಬೈಬಲ್ ವಿಷಯಗಳು,” ನಿತ್ಯಜೀವಕ್ಕೆ ನಡೆಸುವ ಜ್ಞಾನ, ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕಗಳ ಮೇಲೆ ಆಧಾರಿಸಿರುವುದು. ಈ ಭಾಗಕ್ಕೆ ನೇಮಿತಳಾದ ವಿದ್ಯಾರ್ಥಿನಿಗೆ ಓದಲು ಗೊತ್ತಿರಬೇಕು ಮತ್ತು ಅವಳು ಪರಿಗಣಿಸಲಿಕ್ಕಾಗಿರುವ ಮುಖ್ಯ ವಿಷಯವನ್ನು ಮತ್ತು ವಸ್ತುವಿಷಯವನ್ನು ಒಂದು ಪ್ರಾಯೋಗಿಕ ಸನ್ನಿವೇಶಕ್ಕನುಗುಣವಾಗಿ ಸರಿಹೊಂದಿಸಿಕೊಳ್ಳಲು ಪ್ರಯತ್ನಿಸಬೇಕು—ಕ್ಷೇತ್ರ ಸೇವೆ ಅಥವಾ ಅನೌಪಚಾರಿಕ ಸಾಕ್ಷಿಕಾರ್ಯವನ್ನೊಳಗೊಂಡಿರುವ ಸನ್ನಿವೇಶವು (ಸೆಟಿಂಗ್) ಹೆಚ್ಚು ಇಷ್ಟಕರ. ಈ ಸಮಾಚಾರವನ್ನು ಕೊಡುತ್ತಿರುವಾಗ, ವಿದ್ಯಾರ್ಥಿನಿಯು ಕುಳಿತುಕೊಂಡಿರಬಹುದು ಅಥವಾ ನಿಂತುಕೊಂಡಿರಬಹುದು. ಒಬ್ಬ ಸಹಾಯಕಿಯನ್ನು ಶಾಲಾ ಮೇಲ್ವಿಚಾರಕನು ನೇಮಿಸುತ್ತಾನೆ, ಆದರೆ ಇನ್ನೊಬ್ಬ ಸಹಾಯಕಿಯನ್ನು ಉಪಯೋಗಿಸಬಹುದು. ವಿಷಯವಸ್ತುವನ್ನು ಮನೆಯಾಕೆಯು ವಿವೇಚಿಸಿ, ಅರ್ಥಮಾಡಿಕೊಳ್ಳುವಂತೆ ವಿದ್ಯಾರ್ಥಿನಿಯು ಹೇಗೆ ಸಹಾಯ ಮಾಡುತ್ತಾಳೆ ಮತ್ತು ವಚನಗಳು ಹೇಗೆ ಅನ್ವಯಿಸಲ್ಪಡುತ್ತವೆ ಎಂಬ ವಿಷಯದಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತನಾಗಿರುವನು. ಜ್ಞಾನ ಇಲ್ಲವೆ ಕುಟುಂಬ ಸಂತೋಷ ಪುಸ್ತಕಗಳನ್ನು ಪರಿಗಣಿಸುತ್ತಿರುವಾಗ, ಮನೆಯಾಕೆಯಿಂದ ಕೆಲವೊಂದು ಪ್ಯಾರಗ್ರಾಫ್ಗಳನ್ನು ಓದಿಸಬೇಕೊ ಇಲ್ಲವೊ ಎಂಬುದನ್ನು ವಿದ್ಯಾರ್ಥಿನಿಯು ನಿರ್ಧರಿಸಬಹುದು. ಮುಖ್ಯ ಪರಿಗಣನೆಯು ಸನ್ನಿವೇಶಕ್ಕಲ್ಲ, ಬದಲಾಗಿ ವಸ್ತುವಿಷಯದ ಪರಿಣಾಮಕಾರಿಯಾದ ಉಪಯೋಗಕ್ಕೆ ಕೊಡಲ್ಪಡತಕ್ಕದ್ದು.
ನೇಮಕ ನಂಬ್ರ 4: 5 ನಿಮಿಷಗಳು. ಇದು ಒಬ್ಬ ಸಹೋದರನಿಗೆ ಅಥವಾ ಸಹೋದರಿಗೆ ನೇಮಿಸಲ್ಪಡುವುದು. ಅದು, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿ ಕಂಡುಕೊಳ್ಳಲ್ಪಡುವ “ಚರ್ಚೆಗಾಗಿ ಬೈಬಲ್ ವಿಷಯಗಳು” ಅಥವಾ ಕುಟುಂಬ ಸಂತೋಷ ಎಂಬ ಪುಸ್ತಕದ ಮೇಲೆ ಆಧಾರಿಸಿರುವುದು. ಪ್ರತಿಯೊಂದು ನೇಮಕಕ್ಕೆ ಒಂದು ಮುಖ್ಯವಿಷಯವು ಶೆಡ್ಯೂಲ್ನಲ್ಲಿ ಕೊಡಲ್ಪಟ್ಟಿದೆ. ಒಬ್ಬ ಸಹೋದರನಿಗೆ ನೇಮಿಸಲ್ಪಟ್ಟಿರುವಾಗ, ಇದು ಸಭಿಕರೆಲ್ಲರಿಗೆ ಕೊಡಲ್ಪಡುವ ಒಂದು ಭಾಷಣವಾಗಿರಬೇಕು. ರಾಜ್ಯ ಸಭಾಗೃಹದ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಒಬ್ಬ ಸಹೋದರನು ತನ್ನ ಭಾಷಣವನ್ನು ತಯಾರಿಸುವುದು ಅವನಿಗೆ ಸಾಮಾನ್ಯವಾಗಿ ಅತ್ಯುತ್ತಮವಾಗಿರುವುದು. ಇದರಿಂದಾಗಿ, ವಾಸ್ತವವಾಗಿ ಕೇಳುವವರಿಗೆ ಅದು ನಿಜವಾಗಿಯೂ ಬೋಧಪ್ರದವೂ ಪ್ರಯೋಜನಕರವೂ ಆಗಿರುವುದು. ಒಬ್ಬ ಸಹೋದರಿಗೆ ಈ ಭಾಗವು ಕೊಡಲ್ಪಟ್ಟಿರುವಾಗ, ವಿಷಯವು ನೇಮಕ ನಂಬ್ರ 3ರಲ್ಲಿ ರೇಖಿಸಲ್ಪಟ್ಟಿರುವ ಪ್ರಕಾರ ನೀಡಲ್ಪಡಬೇಕು.
*ಹೆಚ್ಚಿನ ಬೈಬಲ್ ವಾಚನದ ಶೆಡ್ಯೂಲ್: ಇದು ಪ್ರತಿ ವಾರಕ್ಕಾಗಿ ಸಂಗೀತ ಸಂಖ್ಯೆಯ ತರುವಾಯ ಆವರಣ ಚಿಹ್ನೆಗಳಲ್ಲಿ ಕೊಡಲ್ಪಟ್ಟಿದೆ. ಈ ಶೆಡ್ಯೂಲನ್ನು ಅನುಸರಿಸಿ, ವಾರಕ್ಕೆ ಸುಮಾರು ಹತ್ತು ಪುಟಗಳನ್ನು ಓದುವ ಮೂಲಕ, ಇಡೀ ಬೈಬಲನ್ನು ಮೂರು ವರ್ಷಗಳಲ್ಲಿ ಓದಿ ಮುಗಿಸಸಾಧ್ಯವಿದೆ. ಶಾಲಾ ಕಾರ್ಯಕ್ರಮದ ಯಾವ ಭಾಗಗಳೂ ಇಲ್ಲವೆ ಲಿಖಿತ ಪುನರ್ವಿಮರ್ಶೆಯು ಈ ಹೆಚ್ಚಿನ ವಾಚನದ ಶೆಡ್ಯೂಲ್ನ ಮೇಲೆ ಆಧಾರಿಸಿರುವುದಿಲ್ಲ.
ಸೂಚನೆ: ಸಲಹೆ, ಕಾಲನಿಯಮನ, ಲಿಖಿತ ಪುನರ್ವಿಮರ್ಶೆಗಳು, ಮತ್ತು ನೇಮಕಗಳನ್ನು ತಯಾರಿಸುವುದರ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ಉಪದೇಶಕ್ಕಾಗಿ, ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ ಪುಟ 3ನ್ನು ದಯವಿಟ್ಟು ನೋಡಿರಿ.
ಶೆಡ್ಯೂಲ್
ಜನ. 5 ಬೈಬಲ್ ವಾಚನ: ಅ. ಕೃತ್ಯಗಳು 7-8
ಸಂಗೀತ ನಂಬ್ರ 162 (89) [*ಆದಿಕಾಂಡ 1-9]
ನಂ. 1: “ಸತ್ಯವಾಕ್ಯವನ್ನು ಸರಿಯಾಗಿ ನಿರ್ವಹಿಸುವುದು” (ಕಾ96 1/1 ಪು. 29-31)
ನಂ. 2: ಅ. ಕೃತ್ಯಗಳು 7:44-60
ನಂ. 3: ಪರಮ ಅಧಿಕಾರಕ್ಕೆ ಯಾವಾಗಲೂ ವಿಧೇಯರಾಗಿರಿ (kl ಪು. 130-1 ಪ್ಯಾರ. 1-6)
ನಂ. 4: td 22ಬಿ ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡಬೇಕಾದ ಕಾರಣ
ಜನ. 12 ಬೈಬಲ್ ವಾಚನ: ಅ. ಕೃತ್ಯಗಳು 9-10
ಸಂಗೀತ ನಂಬ್ರ 14 (6) [*ಆದಿಕಾಂಡ 10-18]
ನಂ. 1: ದೇವರ ವಾಕ್ಯದ ಧೀರ ಘೋಷಕರಾಗಿರಿ (ಕಾ96 1/15 ಪು. 24-5)
ನಂ. 2: ಅ. ಕೃತ್ಯಗಳು 9:1-16
ನಂ. 3: ಮೇಲಧಿಕಾರಿಗಳಿಗೆ ಅಧೀನರಾಗಿರಿ (kl ಪು. 131-3 ಪ್ಯಾರ. 7-10)
ನಂ. 4: td 23ಎ ದೇವರ ರಾಜ್ಯವು ಮಾನವಕುಲಕ್ಕಾಗಿ ಮಾಡಲಿರುವ ವಿಷಯ
ಜನ. 19 ಬೈಬಲ್ ವಾಚನ: ಅ. ಕೃತ್ಯಗಳು 11-13
ಸಂಗೀತ ನಂಬ್ರ 187 (93) [*ಆದಿಕಾಂಡ 19-24]
ನಂ. 1: ನಿಮ್ಮ ನೋಟಕ್ಷೇತ್ರದಾಚೆಗೆ ದೃಷ್ಟಿಹರಿಸಿರಿ! (ಕಾ96 2/15 ಪು. 27-9)
ನಂ. 2: ಅ. ಕೃತ್ಯಗಳು 13:1-12
ನಂ. 3: ಕುಟುಂಬದಲ್ಲಿ ಅಧಿಕಾರದ ವಿಷಯವಾಗಿ ದೇವರು ಮಾಡಿದ ಏರ್ಪಾಡನ್ನು ಗಣ್ಯಮಾಡಿರಿ (kl ಪು. 134-6 ಪ್ಯಾರ. 11-18)
ನಂ. 4: td 23ಸಿ ದೇವರ ರಾಜ್ಯವು ಮಾನವನ ಪ್ರಯತ್ನಗಳ ಮೂಲಕ ಬರುವುದಿಲ್ಲ
ಜನ. 26 ಬೈಬಲ್ ವಾಚನ: ಅ. ಕೃತ್ಯಗಳು 14-16
ಸಂಗೀತ ನಂಬ್ರ 163 (94) [*ಆದಿಕಾಂಡ 25-30]
ನಂ. 1: ನಿಮ್ಮ ವಿವಾಹ ಪ್ರತಿಜ್ಞೆಗನುಸಾರ ಜೀವಿಸುವುದು (ಕಾ96 3/1 ಪು. 19-22)
ನಂ. 2: ಅ. ಕೃತ್ಯಗಳು 16:1-15
ನಂ. 3: ಸಭೆಯಲ್ಲಿ ಅಧಿಕಾರ—ಯೆಹೋವನಿಂದ ಬಂದ ಒಂದು ಪ್ರೀತಿಪರ ಏರ್ಪಾಡು (kl ಪು. 137-9 ಪ್ಯಾರ. 19-25)
ನಂ. 4: td 24ಬಿ ಕಡೇ ದಿವಸಗಳ ಪುರಾವೆಗೆ ಎಚ್ಚರವಾಗಿರಿ
ಫೆಬ್ರ. 2 ಬೈಬಲ್ ವಾಚನ: ಅ. ಕೃತ್ಯಗಳು 17-19
ಸಂಗೀತ ನಂಬ್ರ 97 (50) [*ಆದಿಕಾಂಡ 31-36]
ನಂ. 1: ಯೆಹೋವ—ನೀತಿ ಮತ್ತು ನ್ಯಾಯವನ್ನು ಪ್ರೀತಿಸುವವನು (ಕಾ96 3/15 ಪು. 21-3)
ನಂ. 2: ಅ. ಕೃತ್ಯಗಳು 18:1-11
ನಂ. 3: ಒಂದು ಸಂತೋಷದ ವಿವಾಹಕ್ಕೆ ನಿಷ್ಠೆಯು ನೆರವು ನೀಡುವ ವಿಧ (kl ಪು. 140-1 ಪ್ಯಾರ. 1-6)
ನಂ. 4: td 25ಬಿ ಸಕಲರೂ ಸ್ವರ್ಗಕ್ಕೆ ಹೋಗುವುದಿಲ್ಲ
ಫೆಬ್ರ. 9 ಬೈಬಲ್ ವಾಚನ: ಅ. ಕೃತ್ಯಗಳು 20-21
ಸಂಗೀತ ನಂಬ್ರ 103 (87) [*ಆದಿಕಾಂಡ 37-42]
ನಂ. 1: ನಿಮ್ಮ ಚಿಂತಾಭಾರವನ್ನು ಯಾವಾಗಲೂ ಯೆಹೋವನ ಮೇಲೆ ಹಾಕಿರಿ (ಕಾ96 4/1 ಪು. 27-30)
ನಂ. 2: ಅ. ಕೃತ್ಯಗಳು 21:1-14
ನಂ. 3: ವಿವಾಹದಲ್ಲಿ ಸಂವಾದದ ಅತ್ಯಾವಶ್ಯಕ ಪಾತ್ರ (kl ಪು. 142-3 ಪ್ಯಾರ. 7-9)
ನಂ. 4: td 26ಎ ವಿವಾಹ ಬಂಧವು ಗೌರವಯುತವಾಗಿರಬೇಕು
ಫೆಬ್ರ. 16 ಬೈಬಲ್ ವಾಚನ: ಅ. ಕೃತ್ಯಗಳು 22-24
ಸಂಗೀತ ನಂಬ್ರ 107 (57) [*ಆದಿಕಾಂಡ 43-49]
ನಂ. 1: “ಸುಮ್ಮನಿರುವ ಸಮಯ, ಮಾತಾಡುವ ಸಮಯ” (ಕಾ96 5/15 ಪು. 21-3)
ನಂ. 2: ಅ. ಕೃತ್ಯಗಳು 22:1-16
ನಂ. 3: ನಿಮ್ಮ ಸಂಗಾತಿಗೆ ಸನ್ಮಾನ ಹಾಗೂ ಗೌರವವನ್ನು ತೋರಿಸಿರಿ (kl ಪು. 143-4 ಪ್ಯಾರ. 10-14)
ನಂ. 4: td 26ಸಿ ಮಕ್ಕಳ ಕಡೆಗೆ ಕ್ರೈಸ್ತ ಹೆತ್ತವರ ಜವಾಬ್ದಾರಿ
ಫೆಬ್ರ. 23 ಬೈಬಲ್ ವಾಚನ: ಅ. ಕೃತ್ಯಗಳು 25-26
ಸಂಗೀತ ನಂಬ್ರ 89 (49) [*ಆದಿಕಾಂಡ 50-ವಿಮೋಚನಕಾಂಡ 7]
ನಂ. 1: ದೇವರನ್ನು ಪ್ರೀತಿಸುವುದು ಏನನ್ನು ಅರ್ಥೈಸುತ್ತದೆ? (ಕಾ96 6/15 ಪು. 4-7)
ನಂ. 2: ಅ. ಕೃತ್ಯಗಳು 25:1-12
ನಂ. 3: ಒಳ್ಳೆಯ ಮಾದರಿಯನ್ನಿಟ್ಟು ನಿಮ್ಮ ಮಕ್ಕಳಿಗೆ ಪ್ರೀತಿಯನ್ನು ತೋರಿಸಿರಿ (kl ಪು. 145-6 ಪ್ಯಾರ. 15-18)
ನಂ. 4: td 26ಇ ಸತ್ಯ ಕ್ರೈಸ್ತರು ಬಹುಪತ್ನೀಕರಲ್ಲ
ಮಾರ್ಚ್ 2 ಬೈಬಲ್ ವಾಚನ: ಅ. ಕೃತ್ಯಗಳು 27-28
ಸಂಗೀತ ನಂಬ್ರ 193 (103) [*ವಿಮೋಚನಕಾಂಡ 8-13]
ನಂ. 1: ಅ. ಕೃತ್ಯಗಳು—ಪ್ರಯೋಜನಕರವೇಕೆ (si ಪು. 204-5 ಪ್ಯಾರ. 32-40)
ನಂ. 2: ಅ. ಕೃತ್ಯಗಳು 27:33-44
ನಂ. 3: ಪ್ರೀತಿಪೂರ್ಣ ಶಿಸ್ತು ಮತ್ತು ಕೌಶಲಪೂರ್ಣ ನಿರ್ದೇಶನವು ಸಾಧಿಸಬಲ್ಲ ಸಂಗತಿ (kl ಪು. 148-9 ಪ್ಯಾರ. 19-23)
ನಂ. 4: td 27ಬಿ ಮರಿಯಳು “ಸದಾ ಕನ್ನಿಕೆ”ಯಾಗಿಯೇ ಇರಲಿಲ್ಲವೆಂದು ಬೈಬಲು ತೋರಿಸುತ್ತದೆ
ಮಾರ್ಚ್ 9 ಬೈಬಲ್ ವಾಚನ: ರೋಮಾಪುರ 1-3
ಸಂಗೀತ ನಂಬ್ರ 92 (51) [*ವಿಮೋಚನಕಾಂಡ 14-20]
ನಂ. 1: ರೋಮಾಪುರ ಪುಸ್ತಕಕ್ಕೆ ಪೀಠಿಕೆ (si ಪು. 205-6 ಪ್ಯಾರ. 1-7)
ನಂ. 2: ರೋಮಾಪುರ 1:18-32
ನಂ. 3: ನಾವು ದೇವರ ಸಮೀಪಕ್ಕೆ ಬರಬಯಸುವ ಕಾರಣ (kl ಪು. 150-1 ಪ್ಯಾರ. 1-5)
ನಂ. 4: td 28ಬಿ ಬಲಿಪೂಜೆ (ಮಾಸ್)ಯ ಆಚರಣೆಯು ಅಶಾಸ್ತ್ರೀಯವಾಗಿದೆ
ಮಾರ್ಚ್ 16 ಬೈಬಲ್ ವಾಚನ: ರೋಮಾಪುರ 4-6
ಸಂಗೀತ ನಂಬ್ರ 36 (14) [*ವಿಮೋಚನಕಾಂಡ 21-27]
ನಂ. 1: “ಇಂಥವರನ್ನು ಸನ್ಮಾನಿಸಿರಿ” (ಕಾ96 6/15 ಪು. 28-30)
ನಂ. 2: ರೋಮಾಪುರ 4:1-15
ನಂ. 3: ದೇವರ ಸಮೀಪಕ್ಕೆ ಬರಲಿಕ್ಕಾಗಿರುವ ಆವಶ್ಯಕತೆಗಳು (kl ಪು. 152-3 ಪ್ಯಾರ. 6-9)
ನಂ. 4: td 30ಎ ಕ್ರೈಸ್ತರ ಕಡೆಗೆ ತೋರಿಸಲ್ಪಡುವ ವಿರೋಧಕ್ಕೆ ಕಾರಣ
ಮಾರ್ಚ್ 23 ಬೈಬಲ್ ವಾಚನ: ರೋಮಾಪುರ 7-9
ಸಂಗೀತ ನಂಬ್ರ 84 (30) [*ವಿಮೋಚನಕಾಂಡ 28-33]
ನಂ. 1: “ಸಹಜ ಪ್ರವೃತ್ತಿಯ ವಿವೇಕಿ”ಗಳಾಗಿರುವ ಜೀವಿಗಳು ನಮಗೆ ಕಲಿಸಬಲ್ಲ ವಿಷಯಗಳು (ಕಾ96 7/15 ಪು. 21-3)
ನಂ. 2: ರೋಮಾಪುರ 9:1-18
ನಂ. 3: ದೇವರೊಂದಿಗೆ ಮಾತಾಡಿರಿ ಮತ್ತು ಆತನಿಂದ ಆಲಿಸಲ್ಪಡಿರಿ (kl ಪು. 153-5 ಪ್ಯಾರ. 10-14)
ನಂ. 4: td 30ಬಿ ತನ್ನ ಗಂಡನು ತನ್ನನ್ನು ದೇವರಿಂದ ಪ್ರತ್ಯೇಕಿಸುವಂತೆ ಹೆಂಡತಿಯೊಬ್ಬಳು ಬಿಡಬಾರದು
ಮಾರ್ಚ್ 30 ಬೈಬಲ್ ವಾಚನ: ರೋಮಾಪುರ 10-12
ಸಂಗೀತ ನಂಬ್ರ 165 (81) [*ವಿಮೋಚನಕಾಂಡ 34-39]
ನಂ. 1: ವಾಗ್ದತ್ತ ದೇಶದಿಂದ ಪ್ರಾಯೋಗಿಕ ಪಾಠಗಳು (ಕಾ96 8/15 ಪು. 4-8)
ನಂ. 2: ರೋಮಾಪುರ 10:1-15
ನಂ. 3: ಪ್ರಾರ್ಥನೆಯಲ್ಲಿ ಪಟ್ಟುಹಿಡಿದವರಾಗಿರಿ ಮತ್ತು ಕಿವಿಗೊಡಿರಿ (kl ಪು. 156-9 ಪ್ಯಾರ. 15-20)
ನಂ. 4: td 31ಎ ದೇವರು ಆಲಿಸುವಂತಹ ಪ್ರಾರ್ಥನೆಗಳು
ಎಪ್ರಿಲ್ 6 ಬೈಬಲ್ ವಾಚನ: ರೋಮಾಪುರ 13-16
ಸಂಗೀತ ನಂಬ್ರ 175 (104) [*ವಿಮೋಚನಕಾಂಡ 40-ಯಾಜಕಕಾಂಡ 7]
ನಂ. 1: ರೋಮಾಪುರ—ಪ್ರಯೋಜನಕರವೇಕೆ (si ಪು. 208-9 ಪ್ಯಾರ. 20-5)
ನಂ. 2: ರೋಮಾಪುರ 13:1-10
ನಂ. 3: ದೇವಜನರೊಳಗೆ ನಿಜ ಭದ್ರತೆಯನ್ನು ಕಂಡುಕೊಳ್ಳಿರಿ (kl ಪು. 160-1 ಪ್ಯಾರ. 1-4)
ನಂ. 4: td 32ಎ ಮನುಷ್ಯನಿಗೆ ಪೂರ್ವನಿರ್ಧಾರವಾಗಿರುವುದಿಲ್ಲ
ಎಪ್ರಿಲ್ 13 ಬೈಬಲ್ ವಾಚನ: 1 ಕೊರಿಂಥ 1-3
ಸಂಗೀತ ನಂಬ್ರ 86 (45) [*ಯಾಜಕಕಾಂಡ 8-13]
ನಂ. 1: 1 ಕೊರಿಂಥ ಪುಸ್ತಕಕ್ಕೆ ಪೀಠಿಕೆ (si ಪು. 210-11 ಪ್ಯಾರ. 1-7)
ನಂ. 2: 1 ಕೊರಿಂಥ 1:10-25
ನಂ. 3: ಯೆಹೋವನು ಆತ್ಮಿಕ ಆಹಾರವನ್ನು ಒದಗಿಸುವ ವಿಧ (kl ಪು. 161-3 ಪ್ಯಾರ. 5-8)
ನಂ. 4: td 33ಬಿ ಯೇಸು ಪ್ರಾಯಶ್ಚಿತ್ತವನ್ನು ತೆರಸಾಧ್ಯವಿದ್ದುದರ ಕಾರಣ
ಎಪ್ರಿಲ್ 20 ಬೈಬಲ್ ವಾಚನ: 1 ಕೊರಿಂಥ 4-6
ಸಂಗೀತ ನಂಬ್ರ 170 (95) [*ಯಾಜಕಕಾಂಡ 14-19]
ನಂ. 1: ಬೈಬಲು ಅದೃಷ್ಟದಲ್ಲಿ ನಂಬಿಕೆಯನ್ನು ಕಲಿಸುತ್ತದೊ? (ಕಾ96 9/1 ಪು. 4-7)
ನಂ. 2: 1 ಕೊರಿಂಥ 4:1-13
ನಂ. 3: ಪ್ರೀತಿಯನ್ನು ಧರಿಸಿಕೊಳ್ಳುವುದು ಅರ್ಥೈಸುವ ವಿಷಯ (kl ಪು. 163-6 ಪ್ಯಾರ. 9-14)
ನಂ. 4: td 34ಬಿ ಸುಳ್ಳು ಬೋಧನೆಗಳನ್ನು ಖಂಡಿಸುವುದು ತಪ್ಪೊ?
ಎಪ್ರಿಲ್ 27 ಲಿಖಿತ ಪುನರ್ವಿಮರ್ಶೆ. ಅ. ಕೃತ್ಯಗಳು 7ರಿಂದ 1 ಕೊರಿಂಥ 6ರ ವರೆಗೆ
ಸಂಗೀತ ನಂಬ್ರ 26 (9) [*ಯಾಜಕಕಾಂಡ 20-25]
ಮೇ 4 ಬೈಬಲ್ ವಾಚನ: 1 ಕೊರಿಂಥ 7-9
ಸಂಗೀತ ನಂಬ್ರ 152 (82) [*ಯಾಜಕಕಾಂಡ 26-ಅರಣ್ಯಕಾಂಡ 3]
ನಂ. 1: ನೀವು ತಪ್ಪೊಪ್ಪಿಕೊಳ್ಳುವುದು ನಿಜವಾಗಿ ಅವಶ್ಯವೊ? (ಕಾ96 9/15 ಪು. 22-4)
ನಂ. 2: 1 ಕೊರಿಂಥ 7:10-24
ನಂ. 3: ಸಭೆ—ಭದ್ರತೆಯ ಒಂದು ಸ್ಥಳ (kl ಪು. 167-9 ಪ್ಯಾರ. 15-20)
ನಂ. 4: td 34ಡಿ ದೇವರು ಎಲ್ಲ ಧರ್ಮಗಳಲ್ಲಿ ಒಳ್ಳೆಯದನ್ನು ಕಾಣುತ್ತಾನೊ?
ಮೇ 11 ಬೈಬಲ್ ವಾಚನ: 1 ಕೊರಿಂಥ 10-12
ಸಂಗೀತ ನಂಬ್ರ 185 (98) [*ಅರಣ್ಯಕಾಂಡ 4-9]
ನಂ. 1: ಪುನಃ ಮಣ್ಣಿಗೆ—ಹೇಗೆ? (ಕಾ96 9/15 ಪು. 29-31)
ನಂ. 2: 1 ಕೊರಿಂಥ 11:1-16
ನಂ. 3: ಯೇಸುವನ್ನು ಅನುಕರಿಸಿರಿ—ದೇವರನ್ನು ಸದಾಕಾಲ ಸೇವಿಸಿರಿ (kl ಪು. 170-1 ಪ್ಯಾರ. 1-6)
ನಂ. 4: td 35ಬಿ ಸತ್ತವರು ಎಲ್ಲಿಗೆ ಪುನರುತ್ಥಾನಗೊಳಿಸಲ್ಪಡುವರು?
ಮೇ 18 ಬೈಬಲ್ ವಾಚನ: 1 ಕೊರಿಂಥ 13-14
ಸಂಗೀತ ನಂಬ್ರ 55 (18) [*ಅರಣ್ಯಕಾಂಡ 10-15]
ನಂ. 1: ಒಬ್ಬನ ಮನೆವಾರ್ತೆಗಾಗಿ ಒದಗಿಸುವುದರ ಪಂಥಾಹ್ವಾನವನ್ನು ನಿಭಾಯಿಸುವುದು (ಕಾ96 10/1 ಪು. 29-31)
ನಂ. 2: 1 ಕೊರಿಂಥ 14:1-12
ನಂ. 3: ಜೀವಕ್ಕೆ ನಡೆಸುವ ಪ್ರಮುಖ ಹೆಜ್ಜೆಗಳು (kl ಪು. 173-5 ಪ್ಯಾರ. 7-9)
ನಂ. 4: td 36ಬಿ ಕ್ರಿಸ್ತನ ಹಿಂದಿರುಗುವಿಕೆಯು ಭೌತಿಕ ವಾಸ್ತವಾಂಶಗಳಿಂದ ವಿವೇಚಿಸಲ್ಪಡುತ್ತದೆ
ಮೇ 25 ಬೈಬಲ್ ವಾಚನ: 1 ಕೊರಿಂಥ 15-16
ಸಂಗೀತ ನಂಬ್ರ 158 (85) [*ಅರಣ್ಯಕಾಂಡ 16-22]
ನಂ. 1: 1 ಕೊರಿಂಥ—ಪ್ರಯೋಜನಕರವೇಕೆ (si ಪು. 213-14 ಪ್ಯಾರ. 23-6)
ನಂ. 2: 1 ಕೊರಿಂಥ 16:1-13
ನಂ. 3: ದೀಕ್ಷಾಸ್ನಾನವು ಆವಶ್ಯಕವಾಗಿರುವುದರ ಕಾರಣ (kl ಪು. 175-6 ಪ್ಯಾರ. 10-12)
ನಂ. 4: td 37ಬಿ ಸಬ್ಬತ್ತಿನ ನಿಯಮವು ಕ್ರೈಸ್ತರಿಗೆ ಕೊಡಲ್ಪಟ್ಟಿರಲಿಲ್ಲ
ಜೂನ್ 1 ಬೈಬಲ್ ವಾಚನ: 2 ಕೊರಿಂಥ 1-4
ಸಂಗೀತ ನಂಬ್ರ 63 (32) [*ಅರಣ್ಯಕಾಂಡ 23-29]
ನಂ. 1: 2 ಕೊರಿಂಥ ಪುಸ್ತಕಕ್ಕೆ ಪೀಠಿಕೆ (si ಪು. 214 ಪ್ಯಾರ. 1-4)
ನಂ. 2: 2 ಕೊರಿಂಥ 4:1-12
ನಂ. 3: ದೀಕ್ಷಾಸ್ನಾನ—ನಿಮ್ಮ ಜೀವನದಲ್ಲಿನ ಅತ್ಯಂತ ಮಹತ್ವದ ಮೈಲುಗಲ್ಲು (kl ಪು. 177 ಪ್ಯಾರ. 13-16)
ನಂ. 4: td 38ಎ ದೇವರು ಕ್ರಿಸ್ತನ ಮೂಲಕ ಮಾತ್ರ ರಕ್ಷಣೆಯನ್ನು ಕೊಡುತ್ತಾನೆ
ಜೂನ್ 8 ಬೈಬಲ್ ವಾಚನ: 2 ಕೊರಿಂಥ 5-8
ಸಂಗೀತ ನಂಬ್ರ 102 (53) [*ಅರಣ್ಯಕಾಂಡ 30-35]
ನಂ. 1: ಮರಣಾನಂತರದ ಜೀವನ—ಹೇಗೆ, ಎಲ್ಲಿ, ಯಾವಾಗ? (ಕಾ96 10/15 ಪು. 4-7)
ನಂ. 2: 2 ಕೊರಿಂಥ 7:1-13
ನಂ. 3: ನಿಮ್ಮ ಸಮರ್ಪಣೆ ಹಾಗೂ ದೀಕ್ಷಾಸ್ನಾನಕ್ಕೆ ಅನುಗುಣವಾಗಿ ಜೀವಿಸುವುದರ ಅರ್ಥ (kl ಪು. 178-80 ಪ್ಯಾರ. 17-22)
ನಂ. 4: td 38ಸಿ “ಸಾರ್ವತ್ರಿಕ ರಕ್ಷಣೆ” ಶಾಸ್ತ್ರೀಯವಾದದ್ದಲ್ಲ
ಜೂನ್ 15 ಬೈಬಲ್ ವಾಚನ: 2 ಕೊರಿಂಥ 9-13
ಸಂಗೀತ ನಂಬ್ರ 129 (66) [*ಅರಣ್ಯಕಾಂಡ 36-ಧರ್ಮೋಪದೇಶಕಾಂಡ 4]
ನಂ. 1: 2 ಕೊರಿಂಥ—ಪ್ರಯೋಜನಕರವೇಕೆ (si ಪು. 216-17 ಪ್ಯಾರ. 18-20)
ನಂ. 2: 2 ಕೊರಿಂಥ 10:1-12
ನಂ. 3: “ವಾಸ್ತವವಾದ ಜೀವ”ಕ್ಕಾಗಿ ಈಗ ತಯಾರಿಸುವುದು (kl ಪು. 181-2 ಪ್ಯಾರ. 1-5)
ನಂ. 4: td 39ಬಿ ಎಲ್ಲ ಮಾನವರು ಆದಾಮನ ಪಾಪದಿಂದ ಕಷ್ಟಾನುಭವಿಸುವುದರ ಕಾರಣ
ಜೂನ್ 22 ಬೈಬಲ್ ವಾಚನ: ಗಲಾತ್ಯ 1-3
ಸಂಗೀತ ನಂಬ್ರ 127 (64) [*ಧರ್ಮೋಪದೇಶಕಾಂಡ 5-11]
ನಂ. 1: ಗಲಾತ್ಯ ಪುಸ್ತಕಕ್ಕೆ ಪೀಠಿಕೆ (si ಪು. 217-18 ಪ್ಯಾರ. 1-6)
ನಂ. 2: ಗಲಾತ್ಯ 1:1-12
ನಂ. 3: ಅರ್ಮಗೆದೋನಿನ ತರುವಾಯ—ಒಂದು ಪ್ರಮೋದವನ ಭೂಮಿ (kl ಪು. 182-4 ಪ್ಯಾರ. 6-11)
ನಂ. 4: td 39ಡಿ ಪವಿತ್ರಾತ್ಮದ ವಿರುದ್ಧವಾದ ಪಾಪ ಎಂದರೇನು?
ಜೂನ್ 29 ಬೈಬಲ್ ವಾಚನ: ಗಲಾತ್ಯ 4-6
ಸಂಗೀತ ನಂಬ್ರ 98 (91) [*ಧರ್ಮೋಪದೇಶಕಾಂಡ 12-19]
ನಂ. 1: ಗಲಾತ್ಯ—ಪ್ರಯೋಜನಕರವೇಕೆ (si ಪು. 219-20 ಪ್ಯಾರ. 14-18)
ನಂ. 2: ಗಲಾತ್ಯ 6:1-18
ನಂ. 3: ಎಲ್ಲೆಡೆಯೂ ಶಾಂತಿ ಮತ್ತು ಮೃತರ ಪುನರುತ್ಥಾನ (kl ಪು. 184-7 ಪ್ಯಾರ. 12-18)
ನಂ. 4: td 40ಬಿ ಪ್ರಾಣ ಮತ್ತು ಆತ್ಮ ಭಿನ್ನವಾಗಿರುವುದು ಹೇಗೆ?
ಜುಲೈ 6 ಬೈಬಲ್ ವಾಚನ: ಎಫೆಸ 1-3
ಸಂಗೀತ ನಂಬ್ರ 106 (55) [*ಧರ್ಮೋಪದೇಶಕಾಂಡ 20-27]
ನಂ. 1: ಎಫೆಸ ಪುಸ್ತಕಕ್ಕೆ ಪೀಠಿಕೆ (si ಪು. 220-1 ಪ್ಯಾರ. 1-8)
ನಂ. 2: ಎಫೆಸ 1:1-14
ನಂ. 3: ಪರಿಪೂರ್ಣತೆಯು ಅರ್ಥೈಸುವ ವಿಷಯ, ಮತ್ತು ನಾವು ಅದನ್ನು ಅನುಭವಿಸಸಾಧ್ಯವಿರುವ ವಿಧ (kl ಪು. 187-91 ಪ್ಯಾರ. 19-25)
ನಂ. 4: td 41ಬಿ ಮನುಷ್ಯ ಮತ್ತು ಪಶುವಿನ ಜೀವಶಕ್ತಿಯನ್ನು ಆತ್ಮವೆಂದು ಕರೆಯಲಾಗುತ್ತದೆ
ಜುಲೈ 13 ಬೈಬಲ್ ವಾಚನ: ಎಫೆಸ 4-6
ಸಂಗೀತ ನಂಬ್ರ 138 (71) [*ಧರ್ಮೋಪದೇಶಕಾಂಡ 28-32]
ನಂ. 1: ಎಫೆಸ—ಪ್ರಯೋಜನಕರವೇಕೆ (si ಪು. 222-3 ಪ್ಯಾರ. 16-19)
ನಂ. 2: ಎಫೆಸ 6:1-13
ನಂ. 3: td 41ಸಿ ಸತ್ಯ ಕ್ರೈಸ್ತರು ಎಲ್ಲ ರೀತಿಯ ಪ್ರೇತವ್ಯವಹಾರವಾದವನ್ನು ತ್ಯಜಿಸುವುದರ ಕಾರಣ
ನಂ. 4: ಕುಟುಂಬವು ಉತ್ಕಟ ಸ್ಥಿತಿಯಲ್ಲಿದೆ (fy ಪು. 1-9 ಪ್ಯಾರ. 1-14)
ಜುಲೈ 20 ಬೈಬಲ್ ವಾಚನ: ಫಿಲಿಪ್ಪಿ 1-4
ಸಂಗೀತ ನಂಬ್ರ 123 (63) [*ಧರ್ಮೋಪದೇಶಕಾಂಡ 33-ಯೆಹೋಶುವ 6]
ನಂ. 1: ಫಿಲಿಪ್ಪಿ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 223-4 ಪ್ಯಾರ. 1-7; ಪು. 225 ಪ್ಯಾರ. 12-14)
ನಂ. 2: ಫಿಲಿಪ್ಪಿ 1:1-14
ನಂ. 3: ಕುಟುಂಬ ಸಂತೋಷದ ರಹಸ್ಯ (fy ಪು. 9-12 ಪ್ಯಾರ. 15-23)
ನಂ. 4: td 42ಸಿ ದೇವರೂ ಕ್ರಿಸ್ತನೂ ಒಂದಾಗಿರುವ ವಿಧ
ಜುಲೈ 27 ಬೈಬಲ್ ವಾಚನ: ಕೊಲೊಸ್ಸೆ 1-4
ಸಂಗೀತ ನಂಬ್ರ 64 (35) [*ಯೆಹೋಶುವ 7-12]
ನಂ. 1: ಕೊಲೊಸ್ಸೆ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 226 ಪ್ಯಾರ. 1-5; ಪು. 228 ಪ್ಯಾರ. 12-14)
ನಂ. 2: ಕೊಲೊಸ್ಸೆ 4:1-13
ನಂ. 3: td 42ಡಿ ಪವಿತ್ರಾತ್ಮವು ದೇವರ ಕ್ರಿಯಾಶೀಲ ಶಕ್ತಿಯಾಗಿದೆ
ನಂ. 4: ನೀವು ವಿವಾಹಕ್ಕೆ ಸಿದ್ಧರಾಗಿದ್ದೀರೊ? (fy ಪು. 13-15 ಪ್ಯಾರ. 1-6)
ಆಗಸ್ಟ್ 3 ಬೈಬಲ್ ವಾಚನ: 1 ಥೆಸಲೊನೀಕ 1-5
ಸಂಗೀತ ನಂಬ್ರ 35 (15) [*ಯೆಹೋಶುವ 13-19]
ನಂ. 1: 1 ಥೆಸಲೊನೀಕ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 229 ಪ್ಯಾರ. 1-5; ಪು. 231 ಪ್ಯಾರ. 13-15)
ನಂ. 2: 1 ಥೆಸಲೊನೀಕ 2:1-12
ನಂ. 3: ಸ್ವತಃ ನಿಮ್ಮ ಕುರಿತು ತಿಳಿದುಕೊಳ್ಳುವ ಮತ್ತು ವಾಸ್ತವಿಕರಾಗಿರಬೇಕಾದ ಕಾರಣ (fy ಪು. 16-18 ಪ್ಯಾರ. 7-10)
ನಂ. 4: td 43ಸಿ ದೇವರ ಕರುಣೆಯಿಂದ ಪ್ರಯೋಜನಪಡೆಯಿರಿ
ಆಗಸ್ಟ್ 10 ಬೈಬಲ್ ವಾಚನ: 2 ಥೆಸಲೊನೀಕ 1-3
ಸಂಗೀತ ನಂಬ್ರ 132 (70) [*ಯೆಹೋಶುವ 20-ನ್ಯಾಯಸ್ಥಾಪಕರು 1]
ನಂ. 1: 2 ಥೆಸಲೊನೀಕ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 232 ಪ್ಯಾರ. 1-4; ಪು. 233 ಪ್ಯಾರ. 10-11)
ನಂ. 2: 2 ಥೆಸಲೊನೀಕ 1:1-12
ನಂ. 3: td 43ಡಿ ದೇವರ ರಾಜ್ಯವು ಮನುಷ್ಯನ ಏಕಮಾತ್ರ ನಿರೀಕ್ಷೆಯಾಗಿದೆ
ನಂ. 4: ಒಬ್ಬ ಸಂಗಾತಿಯಲ್ಲಿ ಅವಲೋಕಿಸಬೇಕಾದ ಸಂಗತಿಗಳು (fy ಪು. 18-22 ಪ್ಯಾರ. 11-15)
ಆಗಸ್ಟ್ 17 ಬೈಬಲ್ ವಾಚನ: 1 ತಿಮೊಥೆಯ 1-3
ಸಂಗೀತ ನಂಬ್ರ 38 (65) [*ನ್ಯಾಯಸ್ಥಾಪಕರು 2-7]
ನಂ. 1: 1 ತಿಮೊಥೆಯ ಪುಸ್ತಕಕ್ಕೆ ಪೀಠಿಕೆ (si ಪು. 234 ಪ್ಯಾರ. 1-6)
ನಂ. 2: 1 ತಿಮೊಥೆಯ 1:3-16
ನಂ. 3: ಶಾಶ್ವತವಾದ ಬದ್ಧತೆಯನ್ನು ಮಾಡುವ ಮೊದಲು ಪರಿಗಣಿಸಬೇಕಾದ ವಿಷಯಗಳು (fy ಪು. 22-3 ಪ್ಯಾರ. 16-19)
ನಂ. 4: td 44ಸಿ ಎಲ್ಲ ಮನುಷ್ಯರ ರಕ್ತದಿಂದ ನಿರ್ದೋಷಿಗಳಾಗಿ ಉಳಿಯಿರಿ
ಆಗಸ್ಟ್ 24 ಬೈಬಲ್ ವಾಚನ: 1 ತಿಮೊಥೆಯ 4-6
ಸಂಗೀತ ನಂಬ್ರ 39 (16) [*ನ್ಯಾಯಸ್ಥಾಪಕರು 8-13]
ನಂ. 1: 1 ತಿಮೊಥೆಯ—ಪ್ರಯೋಜನಕರವೇಕೆ (si ಪು. 236-7 ಪ್ಯಾರ. 15-19)
ನಂ. 2: 1 ತಿಮೊಥೆಯ 4:1-16
ನಂ. 3: td 1ಎ ದೇವರು ಪೂರ್ವಜರ ಆರಾಧನೆಯನ್ನು ಅಸಮ್ಮತಿಸುವುದರ ಕಾರಣ
ನಂ. 4: ನಿಮ್ಮ ಪ್ರಣಯಯಾಚನೆಯನ್ನು ಗೌರವಾರ್ಹವಾಗಿ ಇಡಿರಿ, ಮತ್ತು ವಿವಾಹ ದಿನದ ಆಚೆಗೆ ನೋಡಿರಿ (fy ಪು. 24-6 ಪ್ಯಾರ. 20-3)
ಆಗಸ್ಟ್ 31 ಲಿಖಿತ ಪುನರ್ವಿಮರ್ಶೆ. 1 ಕೊರಿಂಥ 7ರಿಂದ 1 ತಿಮೊಥೆಯ 6ರ ವರೆಗೆ
ಸಂಗೀತ ನಂಬ್ರ 59 (31) [*ನ್ಯಾಯಸ್ಥಾಪಕರು 14-19]
ಸೆಪ್ಟೆಂ. 7 ಬೈಬಲ್ ವಾಚನ: 2 ತಿಮೊಥೆಯ 1-4
ಸಂಗೀತ ನಂಬ್ರ 46 (20) [*ನ್ಯಾಯಸ್ಥಾಪಕರು 20-ರೂತಳು 4]
ನಂ. 1: 2 ತಿಮೊಥೆಯ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 237-8 ಪ್ಯಾರ. 1-4; ಪು. 238-9 ಪ್ಯಾರ. 10-12)
ನಂ. 2: 2 ತಿಮೊಥೆಯ 3:1-13
ನಂ. 3: ಒಂದು ಯಶಸ್ವೀ ವಿವಾಹಕ್ಕಾಗಿ ತಯಾರಿಯನ್ನು ಮಾಡುವಂತೆ ನಿಮಗೆ ಸಹಾಯ ಮಾಡಬಲ್ಲ ಬೈಬಲ್ ಮೂಲತತ್ವಗಳು (fy ಪು. 26 ಪುನರ್ವಿಮರ್ಶೆ ರೇಖಾಚೌಕ)
ನಂ. 4: td 2ಬಿ ಅರ್ಮಗೆದೋನ್ ದೇವರ ಪ್ರೀತಿಯ ಉಲ್ಲಂಘನೆಯಾಗಿರದು
ಸೆಪ್ಟೆಂ. 14 ಬೈಬಲ್ ವಾಚನ: ತೀತ 1-ಫಿಲೆಮೋನ
ಸಂಗೀತ ನಂಬ್ರ 200 (108) [*1 ಸಮುವೇಲ 1-8]
ನಂ. 1: ತೀತ ಮತ್ತು ಫಿಲೆಮೋನ ಪುಸ್ತಕಗಳಿಗೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 239-41 ಪ್ಯಾರ. 1-4, 8-10; ಪು. 241-3 ಪ್ಯಾರ. 1-4, 7-10)
ನಂ. 2: ತೀತ 3:1-14
ನಂ. 3: td 3ಎ ದೀಕ್ಷಾಸ್ನಾನವು ಒಂದು ಕ್ರೈಸ್ತ ಆವಶ್ಯಕತೆಯಾಗಿದೆ
ನಂ. 4: ಚಿರಸ್ಥಾಯಿಯಾದ ವಿವಾಹಕ್ಕೆ ಪ್ರಥಮ ಕೀಲಿ ಕೈ (fy ಪು. 27-9 ಪ್ಯಾರ. 1-6)
ಸೆಪ್ಟೆಂ. 21 ಬೈಬಲ್ ವಾಚನ: ಇಬ್ರಿಯ 1-3
ಸಂಗೀತ ನಂಬ್ರ 149 (69) [*1 ಸಮುವೇಲ 9-14]
ನಂ. 1: ಇಬ್ರಿಯ ಪುಸ್ತಕಕ್ಕೆ ಪೀಠಿಕೆ (si ಪು. 243-4 ಪ್ಯಾರ. 1-9)
ನಂ. 2: ಇಬ್ರಿಯ 3:1-15
ನಂ. 3: ಚಿರಸ್ಥಾಯಿಯಾದ ವಿವಾಹಕ್ಕೆ ಎರಡನೆಯ ಕೀಲಿ ಕೈ (fy ಪು. 30-1 ಪ್ಯಾರ. 7-10)
ನಂ. 4: td 4ಬಿ ಬೈಬಲ್ ನಮ್ಮ ದಿನಕ್ಕೆ ಪ್ರಾಯೋಗಿಕವಾಗಿದೆ
ಸೆಪ್ಟೆಂ. 28 ಬೈಬಲ್ ವಾಚನ: ಇಬ್ರಿಯ 4-7
ಸಂಗೀತ ನಂಬ್ರ 51 (24) [*1 ಸಮುವೇಲ 15-19]
ನಂ. 1: ಯೆಹೋವನಿಗೆ ಏಕೆ ಕೊಡಬೇಕು? (ಕಾ96 11/1 ಪು. 28-30)
ನಂ. 2: ಇಬ್ರಿಯ 6:1-12
ನಂ. 3: td 4ಸಿ ಬೈಬಲು ಸಕಲ ಮಾನವಜಾತಿಗಾಗಿರುವ ಗ್ರಂಥವಾಗಿದೆ
ನಂ. 4: ಪುರುಷನ ತಲೆತನವು ಕ್ರಿಸ್ತಸದೃಶವಾಗಿರಬೇಕು (fy ಪು. 31-3 ಪ್ಯಾರ. 11-15)
ಅಕ್ಟೋ. 5 ಬೈಬಲ್ ವಾಚನ: ಇಬ್ರಿಯ 8-10
ಸಂಗೀತ ನಂಬ್ರ 143 (76) [*1 ಸಮುವೇಲ 20-25]
ನಂ. 1: ಯೆಹೋವನ ನಿಷ್ಪಕ್ಷಪಾತವನ್ನು ಅನುಕರಿಸಿರಿ (ಕಾ96 11/15 ಪು. 25-7)
ನಂ. 2: ಇಬ್ರಿಯ 8:1-12
ನಂ. 3: ಹೆಂಡತಿಯೊಬ್ಬಳು ತನ್ನ ಗಂಡನಿಗೆ ಪರಿಪೂರಕಳಾಗಿರುವ ವಿಧ (fy ಪು. 34-5 ಪ್ಯಾರ. 16-19)
ನಂ. 4: td 6ಎ ಅನ್ಯಜನಾಂಗಗಳ ಸಮಯಗಳು 1914ರಲ್ಲಿ ಕೊನೆಗೊಂಡವು
ಅಕ್ಟೋ. 12 ಬೈಬಲ್ ವಾಚನ: ಇಬ್ರಿಯ 11-13
ಸಂಗೀತ ನಂಬ್ರ 205 (118) [*1 ಸಮುವೇಲ 26-2 ಸಮುವೇಲ 2]
ನಂ. 1: ಇಬ್ರಿಯ—ಪ್ರಯೋಜನಕರವೇಕೆ (si ಪು. 247 ಪ್ಯಾರ. 23-7)
ನಂ. 2: ಇಬ್ರಿಯ 11:1-10
ನಂ. 3: td 7ಎ ಕ್ರಿಸ್ತನ ಸತ್ಯ ಸಭೆ
ನಂ. 4: ಒಳ್ಳೆಯ ಸಂವಾದವು ನಿಜವಾಗಿಯೂ ಅರ್ಥೈಸುವ ವಿಷಯ (fy ಪು. 35-8 ಪ್ಯಾರ. 20-6)
ಅಕ್ಟೋ. 19 ಬೈಬಲ್ ವಾಚನ: ಯಾಕೋಬ 1-5
ಸಂಗೀತ ನಂಬ್ರ 144 (78) [*2 ಸಮುವೇಲ 3-10]
ನಂ. 1: ಯಾಕೋಬ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 248-9 ಪ್ಯಾರ. 1-7; ಪು. 250 ಪ್ಯಾರ. 15-17)
ನಂ. 2: ಯಾಕೋಬ 5:1-12
ನಂ. 3: ಒಂದು ಚಿರಸ್ಥಾಯಿಯಾದ, ಸಂತೋಷವುಳ್ಳ ವಿವಾಹವನ್ನು ಅನುಭವಿಸಲು ನಿಮಗೆ ಸಹಾಯ ಮಾಡಬಲ್ಲ ಬೈಬಲ್ ಮೂಲತತ್ವಗಳು (fy ಪು. 38 ಪುನರ್ವಿಮರ್ಶೆ ರೇಖಾಚೌಕ)
ನಂ. 4: td 8ಬಿ ಸೃಷ್ಟಿಯ ದಿನಗಳು 24 ಗಂಟೆಗಳಷ್ಟು ದೀರ್ಘವಾಗಿದ್ದವೊ?
ಅಕ್ಟೋ. 26 ಬೈಬಲ್ ವಾಚನ: 1 ಪೇತ್ರ 1-5
ಸಂಗೀತ ನಂಬ್ರ 145 (115) [*2 ಸಮುವೇಲ 11-15]
ನಂ. 1: 1 ಪೇತ್ರ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 251-2 ಪ್ಯಾರ. 1-5; ಪು. 253 ಪ್ಯಾರ. 11-13)
ನಂ. 2: 1 ಪೇತ್ರ 4:1-11
ನಂ. 3: td 9ಎ ಯೇಸು ಒಂದು ಶಿಲುಬೆಯ ಮೇಲೆ ಮೃತಪಟ್ಟನೊ?
ನಂ. 4: ನಿಮ್ಮ ಸಂಪಾದನೆಗೆ ತಕ್ಕಂತೆ ಜೀವಿಸಿರಿ (fy ಪು. 39-41 ಪ್ಯಾರ. 1-6)
ನವೆಂ. 2 ಬೈಬಲ್ ವಾಚನ: 2 ಪೇತ್ರ 1-3
ಸಂಗೀತ ನಂಬ್ರ 27 (7) [*2 ಸಮುವೇಲ 16-20]
ನಂ. 1: 2 ಪೇತ್ರ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 254 ಪ್ಯಾರ. 1-3; ಪು. 255 ಪ್ಯಾರ. 8-10)
ನಂ. 2: 2 ಪೇತ್ರ 3:1-13
ನಂ. 3: ಮನೆವಾರ್ತೆಯನ್ನು ಪರಾಮರಿಸುವುದು ಒಂದು ಕುಟುಂಬ ಕಾರ್ಯಯೋಜನೆಯಾಗಿದೆ (fy ಪು. 42-4 ಪ್ಯಾರ. 7-11)
ನಂ. 4: td 10ಬಿ ಮೃತರ ಸ್ಥಿತಿಯೇನಾಗಿದೆ?
ನವೆಂ. 9 ಬೈಬಲ್ ವಾಚನ: 1 ಯೋಹಾನ 1-5
ಸಂಗೀತ ನಂಬ್ರ 114 (61) [*2 ಸಮುವೇಲ 21-1 ಅರಸುಗಳು 1]
ನಂ. 1: 1 ಯೋಹಾನ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 256-7 ಪ್ಯಾರ. 1-5; ಪು. 258 ಪ್ಯಾರ. 11-13)
ನಂ. 2: 1 ಯೋಹಾನ 5:1-12
ನಂ. 3: td 10ಸಿ ಮೃತರೊಂದಿಗೆ ಮಾತಾಡುವುದು ಅಸಾಧ್ಯವಾಗಿರುವುದರ ಕಾರಣ
ನಂ. 4: ನಾವು ಶುದ್ಧರಾಗಿರಬೇಕೆಂದು ಯೆಹೋವನು ಕೇಳಿಕೊಳ್ಳುವ ಕಾರಣ (fy ಪು. 45-9 ಪ್ಯಾರ. 12-20)
ನವೆಂ. 16 ಬೈಬಲ್ ವಾಚನ: 2 ಯೋಹಾನ-ಯೂದ
ಸಂಗೀತ ನಂಬ್ರ 50 (23) [*1 ಅರಸುಗಳು 2-6]
ನಂ. 1: 2 ಯೋಹಾನ, 3 ಯೋಹಾನ ಮತ್ತು ಯೂದ ಪುಸ್ತಕಗಳಿಗೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 259 ಪ್ಯಾರ. 1-3, 5; ಪು. 260-1 ಪ್ಯಾರ. 1-3, 5; ಪು. 261-3 ಪ್ಯಾರ. 1-4, 8-10)
ನಂ. 2: 2 ಯೋಹಾನ 1:1-13
ನಂ. 3: ಪ್ರಾಮಾಣಿಕವಾದ ಪ್ರಶಂಸೆ ಹಾಗೂ ಕೃತಜ್ಞತೆಯು ಒಂದು ಕುಟುಂಬಕ್ಕೆ ಮಾಡಸಾಧ್ಯವಿರುವ ಸಂಗತಿ (fy ಪು. 49-50 ಪ್ಯಾರ. 21-2)
ನಂ. 4: td 11ಸಿ ದೆವ್ವಗಳು ಯಾರು?
ನವೆಂ. 23 ಬೈಬಲ್ ವಾಚನ: ಪ್ರಕಟನೆ 1-3
ಸಂಗೀತ ನಂಬ್ರ 195 (105) [*1 ಅರಸುಗಳು 7-10]
ನಂ. 1: ಪ್ರಕಟನೆ ಪುಸ್ತಕಕ್ಕೆ ಪೀಠಿಕೆ (si ಪು. 263-4 ಪ್ಯಾರ. 1-6)
ನಂ. 2: ಪ್ರಕಟನೆ 3:1-11
ನಂ. 3: td 12ಎ ಭೂಮಿಗಾಗಿ ದೇವರ ಉದ್ದೇಶವು ಏನಾಗಿದೆ?
ನಂ. 4: ಮಕ್ಕಳು ಹಾಗೂ ಕುಟುಂಬ ಜವಾಬ್ದಾರಿಯ ವಿಷಯದಲ್ಲಿ ಬೈಬಲಿನ ನೋಟ (fy ಪು. 51-2 ಪ್ಯಾರ. 1-5)
ನವೆಂ. 30 ಬೈಬಲ್ ವಾಚನ: ಪ್ರಕಟನೆ 4-6
ಸಂಗೀತ ನಂಬ್ರ 168 (84) [*1 ಅರಸುಗಳು 11-15]
ನಂ. 1: ನೀವು ಮೆಸ್ಸೀಯನನ್ನು ಅಂಗೀಕರಿಸುತ್ತಿದ್ದಿರೊ? (ಕಾ96 11/15 ಪು. 28-31)
ನಂ. 2: ಪ್ರಕಟನೆ 5:1-12
ನಂ. 3: ಒಂದು ಮಗುವಿನ ಅಗತ್ಯಗಳನ್ನು ಪೂರೈಸುವುದು ಅರ್ಥೈಸುವ ವಿಷಯ (fy ಪು. 53-5 ಪ್ಯಾರ. 6-9)
ನಂ. 4: td 14ಎ ಆತ್ಮಿಕ ಗುಣಪಡಿಸುವಿಕೆ ಅಷ್ಟೊಂದು ಪ್ರಾಮುಖ್ಯವಾಗಿರುವುದರ ಕಾರಣ
ಡಿಸೆಂ. 7 ಬೈಬಲ್ ವಾಚನ: ಪ್ರಕಟನೆ 7-9
ಸಂಗೀತ ನಂಬ್ರ 53 (27) [*1 ಅರಸುಗಳು 16-20]
ನಂ. 1: “ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ” ಏಕೆ? (ಕಾ96 12/1 ಪು. 29-31)
ನಂ. 2: ಪ್ರಕಟನೆ 8:1-13
ನಂ. 3: td 14ಬಿ ದೇವರ ರಾಜ್ಯವು ಶಾಶ್ವತವಾದ ಶಾರೀರಿಕ ಗುಣಪಡಿಸುವಿಕೆಗಳನ್ನು ತರುವುದು
ನಂ. 4: ನಿಮ್ಮ ಮಗುವಿನಲ್ಲಿ ಸತ್ಯವನ್ನು ನಾಟಿಸಿರಿ (fy ಪು. 55-7 ಪ್ಯಾರ. 10-15)
ಡಿಸೆಂ. 14 ಬೈಬಲ್ ವಾಚನ: ಪ್ರಕಟನೆ 10-12
ಸಂಗೀತ ನಂಬ್ರ 34 (8) [*1 ಅರಸುಗಳು 21-2 ಅರಸುಗಳು 3]
ನಂ. 1: ಮದ್ಯಪಾನೀಯಗಳ ವಿಷಯದಲ್ಲಿ ದೈವಿಕವಾದ ನೋಟ (ಕಾ96 12/15 ಪು. 25-9)
ನಂ. 2: ಪ್ರಕಟನೆ 10:1-11
ನಂ. 3: ನಿಮ್ಮ ಮಗುವಿಗೆ ಯೆಹೋವನ ಮಾರ್ಗಗಳನ್ನು ಕಲಿಸಿರಿ (fy ಪು. 58-9 ಪ್ಯಾರ. 16-19)
ನಂ. 4: td 15ಎ 1,44,000 ಮಂದಿ ಮಾತ್ರ ಸ್ವರ್ಗಕ್ಕೆ ಹೋಗುತ್ತಾರೆ
ಡಿಸೆಂ. 21 ಬೈಬಲ್ ವಾಚನ: ಪ್ರಕಟನೆ 13-15
ಸಂಗೀತ ನಂಬ್ರ 21 (1) [*2 ಅರಸುಗಳು 4-9]
ನಂ. 1: ಪ್ರಾಣಕ್ಕಾಗಿ ಒಂದು ಉತ್ತಮ ನಿರೀಕ್ಷೆ (ಕಾ96 8/1 ಪು. 4-8)
ನಂ. 2: ಪ್ರಕಟನೆ 13:1-15
ನಂ. 3: td 16ಎ ನರಕವು ಅಗ್ನಿಮಯ ಯಾತನೆಯ ಸ್ಥಳವಾಗಿರುವುದಿಲ್ಲ
ನಂ. 4: ಅದರ ಹಲವಾರು ರೀತಿಗಳಲ್ಲಿ ಶಿಸ್ತಿನ ಅತ್ಯಾವಶ್ಯಕತೆ (fy ಪು. 59-61 ಪ್ಯಾರ. 20-3)
ಡಿಸೆಂ. 28 ಲಿಖಿತ ಪುನರ್ವಿಮರ್ಶೆ. 2 ತಿಮೊಥೆಯ 1ರಿಂದ ಪ್ರಕಟನೆ 15ರ ವರೆಗೆ
ಸಂಗೀತ ನಂಬ್ರ 212 (110) [*2 ಅರಸುಗಳು 10-15]