ಸಾಕ್ಷಿಗಳಲ್ಲದ ಸಂಗಾತಿಗಳಿಗೆ ಸಹಾಯಮಾಡಲು ಪ್ರಯತ್ನಿಸಿರಿ
1 ವಿವಾಹಿತ ದಂಪತಿಗಳು ಸತ್ಯಾರಾಧನೆಯಲ್ಲಿ ಐಕ್ಯಗೊಂಡಿರುವಾಗ ಅದು ಮಹದಾನಂದಕ್ಕೆ ಒಂದು ಕಾರಣವಾಗಿದೆ. ಆದರೂ ಅನೇಕ ಕುಟುಂಬಗಳ ವಿವಾಹಿತ ಸಂಗಾತಿಗಳಲ್ಲಿ ಒಬ್ಬರೇ ಒಬ್ಬರು ಸತ್ಯದ ಮಾರ್ಗವನ್ನು ಸ್ವೀಕರಿಸಿದ್ದಾರೆ. ಈ ಸಾಕ್ಷಿಗಳಲ್ಲದ ಸಂಗಾತಿಗಳಿಗೆ ಸಹಾಯಮಾಡಲು ಪ್ರಯತ್ನಿಸಿ, ನಮ್ಮೊಂದಿಗೆ ಯೆಹೋವನನ್ನು ಆರಾಧಿಸುವಂತೆ ನಾವು ಅವರನ್ನು ಹೇಗೆ ಉತ್ತೇಜಿಸಸಾಧ್ಯವಿದೆ?—1 ತಿಮೊ. 2:1-4.
2 ಅವರ ಆಲೋಚನೆಯನ್ನು ಅರ್ಥಮಾಡಿಕೊಳ್ಳಿರಿ: ಸಾಕ್ಷಿಗಳಲ್ಲದ ಕೆಲವು ಸಂಗಾತಿಗಳು ವಿರೋಧಿಸುವವರು ಆಗಿರಬಹುದಾದರೂ ಹೆಚ್ಚಿನ ಸಮಯ ಭಿನ್ನಾಭಿಪ್ರಾಯ ಅಥವಾ ತಪ್ಪಭಿಪ್ರಾಯವೇ ಸಮಸ್ಯೆಯಾಗಿರುತ್ತದೆ. ಒಬ್ಬ ವ್ಯಕ್ತಿಗೆ ಅಲಕ್ಷಿಸಲ್ಪಟ್ಟ ಅನಿಸಿಕೆ ಆಗಬಹುದು ಇಲ್ಲವೆ ಅವನ ಅಥವಾ ಅವಳ ಸಂಗಾತಿಯ ಹೊಸದಾಗಿ ಕಂಡುಕೊಳ್ಳಲ್ಪಟ್ಟ ಆತ್ಮಿಕ ಅಭಿರುಚಿಯಿಂದಾಗಿ ಹೊಟ್ಟೆಕಿಚ್ಚಾಗಬಹುದು. “ಮನೆಯಲ್ಲಿ ಒಂಟಿಯಾಗಿರುತ್ತಿದ್ದುದರಿಂದ ನನಗೆ ತ್ಯಜಿಸಲ್ಪಟ್ಟಂತೆ ಅನಿಸಿತು” ಎಂದು ಒಬ್ಬ ಪತಿಯು ಜ್ಞಾಪಿಸಿಕೊಳ್ಳುತ್ತಾನೆ. “ನನ್ನ ಪತ್ನಿ ಹಾಗೂ ಮಕ್ಕಳು ನನ್ನನ್ನು ತೊರೆಯುತ್ತಿರುವರೋ ಎಂದೆನಿಸುತ್ತಿತ್ತು” ಎಂದು ಮತ್ತೊಬ್ಬ ಹೇಳುತ್ತಾನೆ. ಕೆಲವು ಪುರುಷರು ಧರ್ಮವೊಂದಕ್ಕಾಗಿ ತಮ್ಮ ಕುಟುಂಬವನ್ನು ತಾವು ಕಳೆದುಕೊಳ್ಳುತ್ತಿದ್ದೇವೆಂದು ನೆನಸಬಹುದು. (ಆಗಸ್ಟ್ 15, 1990, ವಾಚ್ಟವರ್, 20-3ನೆಯ ಪುಟಗಳನ್ನು ನೋಡಿರಿ.) ಆದುದರಿಂದಲೇ, ಸಾಧ್ಯವಿರುವಲ್ಲಿ, ಆರಂಭದಿಂದಲೇ ಗೃಹ ಬೈಬಲ್ ಅಭ್ಯಾಸದ ಏರ್ಪಾಡಿನಲ್ಲಿ ಪತ್ನಿಯೊಂದಿಗೆ ಪತಿಯನ್ನು ಒಳಗೂಡಿಸಿಕೊಳ್ಳುವುದು ಅತ್ಯುತ್ತಮ.
3 ಒಟ್ಟುಗೂಡಿ ಕಾರ್ಯಮಾಡಿರಿ: ಒಬ್ಬ ಸಾಕ್ಷಿ ದಂಪತಿಗಳು ವಿವಾಹಿತ ಜನರನ್ನು ಸತ್ಯಕ್ಕೆ ಕರೆತರಲು ಸಹಾಯಮಾಡುವುದರಲ್ಲಿ ಪರಿಣಾಮಕಾರಿಯಾಗಿ ಒಟ್ಟುಗೂಡಿ ಕಾರ್ಯಮಾಡಿದರು. ಆ ಸಹೋದರಿಯು ಪತ್ನಿಯೊಂದಿಗೆ ಒಂದು ಅಭ್ಯಾಸವನ್ನು ಸ್ಥಾಪಿಸಿದ ಮೇಲೆ, ಆ ಸಹೋದರನು ಪತಿಯನ್ನು ಭೇಟಿಮಾಡುತ್ತಿದ್ದನು. ಅವನು ಅನೇಕ ವೇಳೆ ಪತಿಯೊಂದಿಗೆ ಒಂದು ಅಭ್ಯಾಸವನ್ನು ಪ್ರಾರಂಭಿಸಲು ಶಕ್ತನಾಗುತ್ತಿದ್ದನು.
4 ಸ್ನೇಹಪರರೂ ಸತ್ಕರಿಸುವವರೂ ಆಗಿರ್ರಿ: ಸಭೆಯಲ್ಲಿರುವ ಕುಟುಂಬಗಳು, ಸತ್ಯಾರಾಧನೆಯಲ್ಲಿ ಇನ್ನೂ ಐಕ್ಯಗೊಂಡಿರದ ಕುಟುಂಬಗಳಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುವ ಮೂಲಕ ಸಹಾಯಮಾಡಸಾಧ್ಯವಿದೆ. ಯೆಹೋವನ ಸಾಕ್ಷಿಗಳು ಆದರಣೀಯರೂ, ಪರಸ್ಪರ ಕ್ಷೇಮದ ಬಗ್ಗೆ ಕಾಳಜಿಯುಳ್ಳವರಾದ ಕ್ರೈಸ್ತರಾಗಿದ್ದಾರೆಂಬುದನ್ನು ಸಾಕ್ಷಿಗಳಲ್ಲದ ಸಂಗಾತಿಗಳು ನೋಡಲು ಕೆಲವೊಂದು ಸ್ನೇಹಪರ ಭೇಟಿಗಳು ಸಹಾಯಮಾಡಸಾಧ್ಯವಿದೆ.
5 ಆಗಿಂದಾಗ್ಗೆ, ಹಿರಿಯರು ಸಾಕ್ಷಿಗಳಲ್ಲದ ಸಂಗಾತಿಗಳಿಗೆ ಸಹಾಯಮಾಡುವುದರಲ್ಲಿ ಮಾಡಲ್ಪಟ್ಟಿರುವ ಇತ್ತೀಚಿನ ಪ್ರಯತ್ನಗಳನ್ನು ಪುನರ್ವಿಮರ್ಶಿಸಸಾಧ್ಯವಿದೆ ಹಾಗೂ ಅವರನ್ನು ಯೆಹೋವನ ಪಕ್ಷಕ್ಕೆ ಕರೆತರುವ ನಿರೀಕ್ಷೆಗಳಲ್ಲಿ ಇನ್ನೂ ಏನು ಮಾಡಸಾಧ್ಯವಿದೆ ಎಂಬುದನ್ನು ನಿಷ್ಕರ್ಷಿಸಸಾಧ್ಯವಿದೆ.—1 ಪೇತ್ರ 3:1.