ಚಟುವಟಿಕೆಗಾಗಿ ಒಂದು ದೊಡ್ಡ ಬಾಗಿಲು ತೆರೆದಿದೆ
1 ಸುವಾರ್ತೆಯ ಒಬ್ಬ ಹುರುಪುಳ್ಳ ಸೌವಾರ್ತಿಕನೋಪಾದಿ ಪೌಲನು ಹೆಚ್ಚಿನ ಅಗತ್ಯವಿದ್ದ ಟೆರಿಟೊರಿಗಳನ್ನು ಉತ್ಸುಕನಾಗಿ ಹುಡುಕಿ ಕಂಡುಕೊಂಡನು. ಅವುಗಳಲ್ಲಿ ಒಂದು ಎಫೆಸ ನಗರವಾಗಿತ್ತು. ಅಲ್ಲಿ ಸಾರುವುದರಿಂದ ಅವನಿಗೆ ಎಷ್ಟು ಒಳ್ಳೆಯ ಯಶಸ್ಸು ದೊರಕಿತ್ತೆಂದರೆ, ಅವನು ಜೊತೆಕ್ರೈಸ್ತರಿಗೆ ಹೀಗೆ ಬರೆದನು: “ಚಟುವಟಿಕೆಗೆ ನಡೆಸುವ ಒಂದು ದೊಡ್ಡ ಬಾಗಿಲು ನನಗೆ ತೆರೆಯಲ್ಪಟ್ಟಿದೆ.” (1 ಕೊರಿಂ. 16:9, NW) ಪೌಲನು ಆ ಟೆರಿಟೊರಿಯಲ್ಲಿ ಸೇವೆಸಲ್ಲಿಸುತ್ತಾ, ಎಫೆಸದವರಲ್ಲಿ ಅನೇಕರನ್ನು ವಿಶ್ವಾಸಿಗಳಾಗುವಂತೆ ಸಹಾಯಮಾಡಿದನು.—ಅ. ಕೃ. 19:1-20, 26.
2 ಇಂದು ಕೂಡ, ಚಟುವಟಿಕೆಗೆ ನಡೆಸುವ ಒಂದು ದೊಡ್ಡ ಬಾಗಿಲು ನಮಗೆ ತೆರೆದಿದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಬ್ಬ ಕ್ರಮದ ಪಯನೀಯರರಾಗಿ ಹೆಸರನ್ನು ನಮೂದಿಸಿಕೊಳ್ಳಲು ಮತ್ತು ಸಾಧ್ಯವಿರುವಲ್ಲಿ, ಪ್ರಾಯಶಃ ದೊಡ್ಡ ಟೆರಿಟೊರಿಯುಳ್ಳ ಒಂದು ಪುಟ್ಟ ಸಭೆಯೊಂದಿಗೆ ಕಾರ್ಯಮಾಡಲು ಸ್ವಇಚ್ಛೆಯಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಿಸಲು ಹಾರ್ದಿಕ ಆಮಂತ್ರಣವಿದೆ. ಹೀಗೆ ನಮ್ಮ ಪ್ರಯತ್ನಗಳು ನಿರ್ದಿಷ್ಟ ಪ್ರದೇಶಗಳಲ್ಲಿರುವ ಅಗತ್ಯವನ್ನು ಸರಿದೂಗಿಸಬಲ್ಲವು.—2 ಕೊರಿಂಥ 8:13-15ನ್ನು ಹೋಲಿಸಿರಿ.
3 ನೀವು ಕ್ರಮದ ಪಯನೀಯರ್ ಆಗಿ ಸೇವೆಸಲ್ಲಿಸಬಲ್ಲಿರೋ? ಒಬ್ಬ ಕ್ರಮದ ಪಯನೀಯರ್ ಆಗಿ ಸೇವೆಸಲ್ಲಿಸುವ ಸಂಭವನೀಯತೆಯನ್ನು ನೀವು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದ್ದೀರೋ? ಭಾರತದಲ್ಲಿರುವ ಕ್ಷೇತ್ರವು ನಿಜವಾಗಿಯೂ ದೊಡ್ಡದಾಗಿದೆ ಮತ್ತು ಮಹತ್ತಾದ ಒಟ್ಟುಗೂಡಿಸುವಿಕೆಯ ಕೆಲಸವು ಇನ್ನೂ ಮಾಡಲ್ಪಡಬೇಕಾಗಿದೆ. ಈ ವಿಷಯದ ಕುರಿತಾಗಿ ನಿಮ್ಮ ಕುಟುಂಬದವರೊಂದಿಗೆ, ನಿಮ್ಮ ಸಭೆಯಲ್ಲಿರುವ ಹಿರಿಯರೊಂದಿಗೆ, ನಿಮ್ಮ ಸರ್ಕಿಟ್ ಮೇಲ್ವಿಚಾರಕರೊಂದಿಗೆ ಕೂಡ ನೀವು ಏಕೆ ಮಾತಾಡಬಾರದು. ಕ್ರಮದ ಪಯನೀಯರ್ ಸೇವೆಯನ್ನು ನೀವು ತೆಗೆದುಕೊಳ್ಳಶಕ್ತರಾಗುವಂತೆ ನಿಮ್ಮ ಶೆಡ್ಯೂಲನ್ನು ನೀವು ಹೇಗೆ ಪುನರ್ ಅಳವಡಿಸಿಕೊಳ್ಳಸಾಧ್ಯವಿದೆ ಎಂಬುದರ ಕುರಿತಾಗಿ ಅವರ ಸಲಹೆಗಳನ್ನು ಕೇಳಿರಿ. ದೊಡ್ಡ ಕುಟುಂಬಗಳಲ್ಲಿ, ಒಬ್ಬ ಸದಸ್ಯನು ಪಯನೀಯರ್ ಆಗಶಕ್ತನಾಗುವಂತೆ ಇಡೀ ಕುಟುಂಬವು ಒಟ್ಟಾಗಿ ಸಹಕರಿಸಸಾಧ್ಯವೋ? ಕೇವಲ ಪತಿಪತ್ನಿಯರನ್ನೊಳಗೊಂಡ ಕುಟುಂಬವಿದ್ದು, ಹಣಕಾಸಿನ ಅಗತ್ಯಗಳು ಅವರಿಬ್ಬರನ್ನೂ ಪೂರ್ಣ ಸಮಯ ಕೆಲಸಮಾಡಲು ಒತ್ತಾಯಿಸದಿರುವಲ್ಲಿ, ಪತ್ನಿಯು ಕೆಲವೊಂದು ವರ್ಷಗಳ ತನಕ ಕ್ರಮದ ಪಯನೀಯರ್ ಸೇವೆಯಲ್ಲಿ ಮೊದಲು ಪಾಲ್ಗೊಳ್ಳಸಾಧ್ಯವಾಗುವಂತೆ, ತಡವಾಗಿ ಮಕ್ಕಳನ್ನು ಪಡೆದುಕೊಳ್ಳುವುದರ ಕುರಿತಾಗಿ ನೀವು ಪರಿಗಣಿಸಸಾಧ್ಯವಿದೆಯೋ?
4 ಇತ್ತೀಚಿನ ದಶಕಗಳಲ್ಲಿ, ಲೋಕವ್ಯಾಪಕವಾಗಿರುವ ಸಾವಿರಾರು ಕ್ರೈಸ್ತ ಕುಟುಂಬಗಳು ಕೊಯ್ಲಿನ ಕೆಲಸದಲ್ಲಿ ಸಂಪೂರ್ಣ ಪಾಲನ್ನು ತೆಗೆದುಕೊಳ್ಳಲಿಕ್ಕಾಗಿ ಇತರ ಪ್ರದೇಶಗಳಿಗೆ ಸ್ಥಳಾಂತರಿಸಿವೆ. ಹೀಗೆ ಮಾಡಿದ ಒಬ್ಬ ದಂಪತಿಗಳು ಹೇಳಿದ್ದು: “ನಾವು ಎಲ್ಲಿ ಹೆಚ್ಚಿನ ಸಹಾಯವನ್ನು ಮಾಡಸಾಧ್ಯವಿದೆಯೋ ಅಲ್ಲಿ ಯೆಹೋವನಿಗೆ ಸೇವೆಸಲ್ಲಿಸಲು ಇಚ್ಛಿಸಿದೆವು.” ಒಂದು ದೊಡ್ಡ ಸಭೆಯಿಂದ ಟೆರಿಟೊರಿಯು ಆಗಾಗ್ಗೆ ಆವರಿಸಲ್ಪಡುತ್ತಿರುವ ಪ್ರದೇಶದಲ್ಲಿ ನೀವು ವಾಸಿಸುತ್ತಿರುವುದಾದರೆ ಹಾಗೂ ಎಲ್ಲಿ ಕಡಿಮೆ ರಾಜ್ಯ ಘೋಷಕರಿದ್ದಾರೆಂಬುದು ನಿಮಗೆ ತಿಳಿದಿದ್ದು ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಿಸಲು ನಿಮಗೆ ಅವಕಾಶವಿರುವುದಾದರೆ, ಅಲ್ಲಿಗೆ ಸ್ವಇಚ್ಛೆಯಿಂದ ಸ್ಥಳಾಂತರಿಸುವುದನ್ನು ಪರಿಗಣಿಸಲು ನೀವು ಇಚ್ಛಿಸುವಿರೋ? ಹೊಸ ಪ್ರದೇಶದಲ್ಲಿ ನೀವು ಒಬ್ಬ ಕ್ರಮದ ಪಯನೀಯರ್ ಆಗಿ ಸೇವೆಸಲ್ಲಿಸಲು ಸಾಧ್ಯವಾಗದಿದ್ದರೂ, ನೀವು ಅಲ್ಲಿ ಇರುವುದು ಒಂದು ಪುಟ್ಟ ಸಭೆಗಾಗಿ ಪ್ರಯೋಜನಕಾರಿಯಾಗಿರಬಹುದು. ಈ ಅಭಿಲಾಷೆಯು ನಿಮಗಿರುವುದಾದರೆ ಸಂಭವನೀಯತೆಗಳ ಬಗ್ಗೆ ನಿಮ್ಮ ಸಭೆಯಲ್ಲಿರುವ ಹಿರಿಯರೊಂದಿಗೆ ಇಲ್ಲವೇ ನಿಮ್ಮ ಸರ್ಕಿಟ್ ಮೇಲ್ವಿಚಾರಕರೊಂದಿಗೆ ನೀವು ಮಾತಾಡಸಾಧ್ಯವಿದೆ.
5 ಯೆಹೋವನ ನಾಮವನ್ನು ಧರಿಸಿಕೊಂಡಿರುವುದು ಒಂದು ಸುಯೋಗವಾಗಿದೆ. ನಮ್ಮಲ್ಲಿ ಎಲ್ಲರೂ ಪಯನೀಯರ್ ಸೇವೆಯನ್ನು ಮಾಡಶಕ್ತರಲ್ಲ, ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಆ ಸಂಭವನೀಯತೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಏನೇ ಆಗಲಿ, ಚಟುವಟಿಕೆಗಾಗಿ ಒಂದು ದೊಡ್ಡ ಬಾಗಿಲು ತೆರೆದಿರುವಷ್ಟು ಸಮಯ, ನಮ್ಮಲ್ಲಿ ಎಲ್ಲರೂ ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುತ್ತಾ ಮುಂದುವರಿಯುವಂತಾಗಲಿ.—1 ಕೊರಿಂ. 15:58.