ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಸೆಪ್ಟೆಂಬರ್ 1ರಿಂದ ಡಿಸೆಂಬರ್ 22, 1997ರ ವಾರಗಳ ತನಕದ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ ಇದಾಗಿರುತ್ತದೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲಾ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಾ ನಂಬ್ರಗಳು ಒಂದು ವೇಳೆ ಇರಲಿಕ್ಕಿಲ್ಲ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ದೇವರು ಬುದ್ಧಿವಂತ ಜೀವಿಗಳಿಗೆ ಇಚ್ಛಾಸ್ವಾತಂತ್ರ್ಯವನ್ನು ದಯಪಾಲಿಸದೆ ಇರುತ್ತಿದ್ದಲ್ಲಿ, ದುಷ್ಟತನವು ಇರುತ್ತಿರಲಿಲ್ಲ. [rs ಪು. 428 ಪ್ಯಾರ. 2]
2. ಲೂಕ 22:30ರಲ್ಲಿ ಸೂಚಿಸಲ್ಪಟ್ಟ ‘ಇಸ್ರಾಯೇಲಿನ ಹನ್ನೆರಡು ಕುಲಗಳು,’ ಮತ್ತಾಯ 19:28ರಲ್ಲಿರುವ ವಿಷಯದ ಸೂಚಿತಾರ್ಥವನ್ನೇ ಪಡೆದಿವೆ. ಅಲ್ಲಿ, ಅನ್ವಯವು ಯೇಸುವಿನ ಆತ್ಮಾಭಿಷಿಕ್ತ ಸಹಯಾಜಕರಲ್ಲದೆ ಮಾನವಜಾತಿಯ ಇತರರೆಲ್ಲರನ್ನು ಒಳಗೂಡಲು ವಿಸ್ತರಿಸುತ್ತದೆ. [ವಾರದ ಬೈಬಲ್ ವಾಚನ; w87 3/1 ಪು. 27 ಪ್ಯಾರ. 10; ಪು. 28 ಪ್ಯಾರ. 12 ನ್ನು ನೋಡಿರಿ.]
3. ಯೇಸು ಒಬ್ಬ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುತ್ತಿದ್ದುದಕ್ಕಾಗಿ ಅವನ ಶಿಷ್ಯರು ಆಶ್ಚರ್ಯವನ್ನು ವ್ಯಕ್ತಪಡಿಸಿದ ಕಾರಣವು, ಅವಳಿಗೆ ಅನೈತಿಕ ಹಿನ್ನೆಲೆಯಿತ್ತೆಂಬುದೇ. (ಯೋಹಾ. 4:27) [ವಾರದ ಬೈಬಲ್ ವಾಚನ; ಕಾ95 7/15 ಪು. 15 ಪ್ಯಾರಗಳು. 1-2 ನ್ನು ನೋಡಿರಿ.]
4. ಯೋಹಾನ 6:64ರಲ್ಲಿರುವ “ಮೊದಲಿನಿಂದ” ಎಂಬ ಅಭಿವ್ಯಕ್ತಿಯು, ಯೂದನು ಒಬ್ಬ ಅಪೊಸ್ತಲನಾಗಿ ಆಯ್ಕೆಗೊಂಡ ಸಮಯದಲ್ಲೇ, ತನ್ನನ್ನು ಹಿಡಿದುಕೊಡುವವನು ಅವನಾಗಿರುವನೆಂಬುದು ಯೇಸುವಿಗೆ ತಿಳಿದಿತ್ತೆಂಬುದನ್ನು ಸೂಚಿಸುತ್ತದೆ. [ವಾರದ ಬೈಬಲ್ ವಾಚನ; it-2 ಪು. 129 ಪ್ಯಾರಗಳು. 4-6ನ್ನು ನೋಡಿರಿ.]
5. ದೇವರು ಅಜಾತ ಮಾನವ ಶಿಶುವನ್ನು ಒಂದು ಅಮೂಲ್ಯ ಜೀವವಾಗಿ ವೀಕ್ಷಿಸುತ್ತಾನೆಂಬುದನ್ನು ಗಣ್ಯಮಾಡುವಂತೆ ವಿಮೋಚನಕಾಂಡ 21:22, 23 ನಮಗೆ ಸಹಾಯ ಮಾಡುತ್ತದೆ. [kl ಪು. 128 ಪ್ಯಾರ. 21]
6. ಮೊದಲನೆಯ ಪೇತ್ರ 3:3, 4, ಹೊರ ವಸ್ತ್ರಗಳ ಧರಿಸುವಿಕೆಯನ್ನು ನಿಷೇಧಿಸದಿರುವಂತೆಯೇ, ಆಭರಣ ಹಾಗೂ ಕಾಂತಿವರ್ಧಕಗಳ ಮಿತವಾದ ಹಾಗೂ ಯೋಗ್ಯವಾದ ಬಳಕೆಯನ್ನು ನಿಷೇಧಿಸುವುದಿಲ್ಲ. [rs ಪು. 435 ಪ್ಯಾರ. 1]
7. ಯೋಹಾನ 5:1ರಲ್ಲಿ ಉಲ್ಲೇಖಿಸಲ್ಪಟ್ಟಿರುವ “ಯೆಹೂದ್ಯರದೊಂದು ಜಾತ್ರೆ,” ಸಾ.ಶ. 31ರ ಪಸ್ಕವನ್ನು ಸೂಚಿಸುತ್ತದೆ. [si ಪು. 194 ಪ್ಯಾರ. 8]
8. ಜೊತೆ ಆರಾಧಕನೊಬ್ಬನು ನಮ್ಮನ್ನು ನೋಯಿಸುವುದಾದರೆ, ನೋಯಿಸಿದವನೊಂದಿಗಿನ ಎಲ್ಲ ಸಂಪರ್ಕವನ್ನು ತ್ಯಜಿಸಿ, ನಮ್ಮ ಜೀವನದಿಂದ ಅವನನ್ನು ತೊಲಗಿಸುವುದು ತಪ್ಪಾಗಿರುವುದು. [uw ಪು. 134 ಪ್ಯಾರ. 7]
9. ಪೌರಾಧಿಕಾರಿಗಳು ನೀತಿವಂತರಾಗಿ ಇಲ್ಲವೆ ಅನೀತಿವಂತರಾಗಿ ವೀಕ್ಷಿಸಲ್ಪಡಲಿ ಇಲ್ಲದಿರಲಿ, ಸತ್ಯ ಕ್ರೈಸ್ತರು ತಮ್ಮ ವಿವಾಹವನ್ನು ಅವರೊಂದಿಗೆ ಸರಿಯಾಗಿ ರಿಜಿಸ್ಟರ್ ಮಾಡಿಸಿಕೊಳ್ಳತಕ್ಕದ್ದು. [kl ಪು. 122 ಪ್ಯಾರ. 11]
10. ಲೂಕನು ಎಫೆಸದಲ್ಲಿದ್ದಾಗ ಅಪೊಸ್ತಲ ಕೃತ್ಯಗಳ ಪುಸ್ತಕವನ್ನು ಬರೆದನು. [si ಪು. 199 ಪ್ಯಾರ. 3]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಪ್ರಥಮ ಶತಮಾನದ ಎಫೆಸದ ಕ್ರೈಸ್ತರ ಮಾದರಿಗೆ ಅನುಗುಣವಾಗಿ, ದುಷ್ಟಾತ್ಮಗಳನ್ನು ಪ್ರತಿರೋಧಿಸಲು ತೆಗೆದುಕೊಳ್ಳಬೇಕಾದ ಒಂದು ಆವಶ್ಯಕ ಹೆಜ್ಜೆಯು ಯಾವುದು? (ಅ. ಕೃ. 19:19) [kl ಪು. 114 ಪ್ಯಾರ. 14]
12. ನೋಹನ ದಿನದಲ್ಲಿ ಕೆಲವು ದೇವದೂತರು ಹೇಗೆ ಪಾಪ ಮಾಡಿದರು? [kl ಪು. 109 ಪ್ಯಾರ. 4]
13. ಪಿತ್ರಾರ್ಜಿತ ಆಸ್ತಿಯ ವಿವಾದವೊಂದರಲ್ಲಿ ಒಳಗೊಳ್ಳಲು ಯೇಸು ನಿರಾಕರಿಸಿದ್ದೇಕೆ? (ಲೂಕ 12:13, 14) [ವಾರದ ಬೈಬಲ್ ವಾಚನ; ಕಾ97 4/1 ಪು. 28 ನ್ನು ನೋಡಿರಿ.]
14. ಅ. ಕೃತ್ಯಗಳು 1:6ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಶಿಷ್ಯರು ಯೇಸುವಿಗೆ ಅವನು ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡಲಿರುವನೊ ಎಂಬುದಾಗಿ ಕೇಳಿದಾಗ, ಯಾವ ವಿಷಯದ ಪರಿಜ್ಞಾನ ಅವರಿಗೆ ಇರಲಿಲ್ಲ? [ವಾರದ ಬೈಬಲ್ ವಾಚನ; ಕಾ90 12/1 ಪು. 25 ಪ್ಯಾರ. 4 ನ್ನು ನೋಡಿರಿ.]
15. ಬಾಳುವ ವಿವಾಹಕ್ಕೆ ನೆರವು ನೀಡಸಾಧ್ಯವಿರುವ ಎರಡು ಅಂಶಗಳನ್ನು ತಿಳಿಸಿರಿ. [uw ಪು. 140 ಪ್ಯಾರ. 4]
16. ಕ್ರೈಸ್ತ ಸ್ತ್ರೀಯೊಬ್ಬಳು ಕೆಲವು ಸಂದರ್ಭಗಳಲ್ಲಿ ತಲೆಗೆ ಮುಸುಕು ಹಾಕಿಕೊಳ್ಳುವುದು ಏಕೆ? [rs ಪು. 433 ಪ್ಯಾರ. 2]
17. ಯೋಹಾನ 1:1ರಲ್ಲಿ, ಬೇರೆ ಭಾಷಾಂತರಗಳು “ವಾಕ್ಯವು ದೇವರಾಗಿತ್ತು” ಎಂದು ಹೇಳುವ ಹಾಗೆ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಹೇಳದೆ, “ವಾಕ್ಯವು ಒಬ್ಬ ದೇವನಾಗಿದ್ದನು” ಎಂದು ಏಕೆ ಹೇಳುತ್ತದೆ? [ವಾರದ ಬೈಬಲ್ ವಾಚನ; rs 212 ಪ್ಯಾರ. 5ನ್ನು ನೋಡಿರಿ.]
18. ಪ್ರಕಟನೆ ಪುಸ್ತಕಕ್ಕನುಸಾರ, “ಮಾಟವನ್ನು ಅಭ್ಯಸಿಸುತ್ತಿರುವವರು” ಪಶ್ಚಾತ್ತಾಪಪಟ್ಟು ತಮ್ಮ ಮಾರ್ಗಗಳನ್ನು ಬದಲಾಯಿಸದಿದ್ದರೆ ಎಲ್ಲಿ ಅಂತ್ಯಗೊಳ್ಳುವರು? [kl ಪು. 111 ಪ್ಯಾರ. 8]
19. ಯೇಸು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದು, ಬೋಧಕನೋಪಾದಿ ತನ್ನ ಪಾತ್ರವನ್ನು ಅಂಗೀಕರಿಸಿದನಾದರೂ, “ಒಳ್ಳೇ ಬೋಧಕನೇ” ಎಂದು ಕರೆಯಲ್ಪಡುವುದನ್ನು ಅವನು ಏಕೆ ಸ್ವೀಕರಿಸಲಿಲ್ಲ? (ಲೂಕ 18:18, 19) [ವಾರದ ಬೈಬಲ್ ವಾಚನ; ಕಾ95 3/1 ಪು. 15 ಪ್ಯಾರ. 7 ನ್ನು ನೋಡಿರಿ.]
20. ಯೋಹಾನ 13:34ರಲ್ಲಿ ಹೇಳಲ್ಪಟ್ಟಿರುವ ಆಜ್ಞೆಯಲ್ಲಿ ಹೊಸ ಸಂಗತಿಯು ಯಾವುದಾಗಿತ್ತು? [ವಾರದ ಬೈಬಲ್ ವಾಚನ; w90 2/1 ಪು. 21 ಪ್ಯಾರಗಳು. 5-6 ನ್ನು ನೋಡಿರಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ನಮ್ಮ ಸಹೋದರನಿಗೆ ನಮ್ಮ ವಿರುದ್ಧ ಏನೋ ಇದೆ ಎಂಬುದನ್ನು ನಾವು ಗ್ರಹಿಸುವುದಾದರೆ, ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದು ಮತ್ತು ______________ ಪುನಃಸ್ಥಾಪಿಸಲು ಪ್ರಯತ್ನಿಸುವುದು, ______________ದೊಂದಿಗೆ ಕೂಡಿದ ______________ಯನ್ನು ಕೇಳಿಕೊಳ್ಳುತ್ತದೆ. [uw ಪು. 135 ಪ್ಯಾರ. 10]
22. ‘ಹತ್ತು ಮೊಹರಿಗಳು,’ ಆತ್ಮಾಭಿಷಿಕ್ತ ಶಿಷ್ಯರು ಸ್ವರ್ಗೀಯ ರಾಜ್ಯದ ಹೆಚ್ಚಿನ ______________ ಸಿದ್ಧಪಡಿಸುವುದರಲ್ಲಿ ಬಳಸಸಾಧ್ಯವಿದ್ದ ______________ ಪ್ರತಿನಿಧಿಸುತ್ತವೆ. (ಲೂಕ 19:13) [ವಾರದ ಬೈಬಲ್ ವಾಚನ; w89 10/1 ಪು. 8 ನ್ನು ನೋಡಿರಿ.]
23. ಯೂದಾಯದ ರೋಮನ್ ಅಧಿಪತಿಯಾದ ಪಿಲಾತನ ಮುಂದೆ ಯೇಸುವಿನ ವಿರುದ್ಧವಾಗಿ ಯೆಹೂದ್ಯರು ಹೊರಿಸಿದ ಮೂರು ಸುಳ್ಳು ಆಪಾದನೆಗಳಲ್ಲಿ, ______________ ಭ್ರಷ್ಟಗೊಳಿಸುವುದು, ______________ ಸಲ್ಲಿಸುವುದನ್ನು ನಿಷೇಧಿಸುವುದು, ಮತ್ತು ತಾನೊಬ್ಬ ______________ನೆಂದು ಹೇಳಿಕೊಳ್ಳುವುದು ಸೇರಿತ್ತು. (ಲೂಕ 23:2) [ವಾರದ ಬೈಬಲ್ ವಾಚನ; w90 12/1 ಪು. 9 ಪ್ಯಾರ. 1 ನ್ನು ನೋಡಿರಿ.]
24. ನಿಜ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನಾಗಲಿ, ಸುಳ್ಳು ಧಾರ್ಮಿಕ ನಂಬಿಕೆಗಳ ಮೇಲೆ ಆಧರಿತವಾಗಿರುವ ಇತರ ಯಾವುದೇ ರಜಾ ದಿನವನ್ನಾಗಲಿ ಆಚರಿಸುವುದಿಲ್ಲ, ಏಕೆಂದರೆ ಅವರು ಯೆಹೋವನಿಗೆ ______________ ಕೊಡುತ್ತಾರೆ; ಪಾಪಿಗಳಾದ ಮಾನವರನ್ನು ಅಥವಾ ರಾಷ್ಟ್ರಗಳನ್ನು ______________ ರಜಾ ದಿನಗಳನ್ನೂ ಅವರು ಆಚರಿಸುವುದಿಲ್ಲ. [kl ಪು. 126 ಪ್ಯಾರ. 16]
25. ಬೈಬಲ್ ವಿದ್ಯಾರ್ಥಿಗಳೋಪಾದಿ, ನಾವು ವಿಷಯದ ಸಂಶೋಧನೆ ಮಾಡಲಿಕ್ಕಾಗಿ ಲಭ್ಯವಿರುವ ಇಂಡೆಕ್ಸ್ಗಳನ್ನು ಉಪಯೋಗಿಸಲು ಕಲಿತುಕೊಳ್ಳಬೇಕು, ಪ್ರತಿಯೊಂದು ಪ್ರಶ್ನೆಗೆ ______________ ಅಥವಾ ______________ ಎಂಬ ಉತ್ತರವನ್ನು ನಿರೀಕ್ಷಿಸಬಾರದು, ಮತ್ತು ______________ನಿಗಾಗಿ ಹಾಗೂ ನಮ್ಮ ಕುಟುಂಬದ ಸದಸ್ಯರಿಗಾಗಿ ನಮ್ಮ ಪ್ರೀತಿಯನ್ನು ಪ್ರತಿಬಿಂಬಿಸುವಂತಹ ______________ ಮಾಡಬೇಕು. [uw ಪು. 144 ಪ್ಯಾರ. 13]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಅಪೊಸ್ತಲ ಪೇತ್ರನಿಗನುಸಾರ, ಯೆಹೋವನ (ದಯೆ; ಪ್ರೀತಿ; ತಾಳ್ಮೆ)ಯು ನಾವು (ಪಶ್ಚಾತ್ತಾಪಿಗಳು; ನಂಬಿಗಸ್ತರು; ವಿಧೇಯರು) ಎಂಬುದನ್ನು ಪ್ರದರ್ಶಿಸಲು ನಮಗೆ ಅವಕಾಶವನ್ನು ಕೊಡಲಿಕ್ಕಾಗಿ ನಮ್ಮ ದಿನದ ವರೆಗೆ ವಿಸ್ತರಿಸಿದೆ. (2 ಪೇತ್ರ 3:9) [rs ಪು. 429 ಪ್ಯಾರ. 2]
27. ಜನರನ್ನು ಬಿಡುಗಡೆಗೊಳಿಸುವ ಸತ್ಯವು (ವಿಜ್ಞಾನ; ಸುಳ್ಳು ಧರ್ಮ; ಯೇಸು ಕ್ರಿಸ್ತ)ನ ಕುರಿತಾದ ಸತ್ಯವಾಗಿದೆ, ಏಕೆಂದರೆ ಅದರ ಮೂಲಕ ಮಾತ್ರ ನಾವು (ಸುಳ್ಳು ಬೋಧನೆಗಳು; ಲೌಕಿಕ ಪ್ರಚಾರ; ಮಾರಕವಾದ ಪಾಪ)ದಿಂದ ಬಿಡುಗಡೆಗೊಳಿಸಲ್ಪಡಸಾಧ್ಯವಿದೆ. (ಯೋಹಾ. 8:12-36) [ವಾರದ ಬೈಬಲ್ ವಾಚನ; w88 5/1 ಪು. 9 ಪ್ಯಾರ. 5 ನ್ನು ನೋಡಿರಿ.]
28. ನಾವು ದೈವಭಕ್ತಿಯ ಜೀವನವನ್ನು ನಡೆಸುವುದು (ನಾವು ಸದಾ ಇತರರಿಂದ ಸದುಪಚರಿಸಲ್ಪಡುವೆವು; ಹೇರಳವಾದ ಭೌತಿಕ ವಿಷಯಗಳನ್ನು ಈಗ ಅನುಭವಿಸುವೆವು; ನಾವು ಸರಿಯಾದುದನ್ನು ಮಾಡುತ್ತಿರುವ ಕಾರಣದಿಂದ ದೇವರ ಒಪ್ಪಿಗೆಯ ಮಂದಹಾಸವು ನಮಗಿರುವುದು) ಎಂಬ ಖಾತರಿಯನ್ನು ನೀಡುತ್ತದೆ. [kl ಪು. 118 ಪ್ಯಾರ. 2]
29. ಯೇಸು ಅಪೊಸ್ತಲ ಪೇತ್ರನನ್ನು “ನೀನು . . . ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ” ಎಂದು ಕೇಳಿದಾಗ, ಪೇತ್ರನು ಯೇಸುವನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ (ಈ ಬೇರೆ ಶಿಷ್ಯರನ್ನು ಪ್ರೀತಿಸಿದನೊ; ಈ ಬೇರೆ ಶಿಷ್ಯರು ಯೇಸುವನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಪ್ರೀತಿಸಿದನೊ; ಮೀನುಗಳಂತಹ ಈ ವಿಷಯಗಳನ್ನು ಅವನು ಪ್ರೀತಿಸಿದನೊ) ಎಂದು ಯೇಸು ಕೇಳುತ್ತಿದ್ದನು. (ಯೋಹಾ. 21:15) [ವಾರದ ಬೈಬಲ್ ವಾಚನ; w88 11/1 ಪು. 31 ಪ್ಯಾರ. 9 ನ್ನು ನೋಡಿರಿ.]
30. ಯೋಹಾನ 10:16ರಲ್ಲಿ ಉಲ್ಲೇಖಿಸಲ್ಪಟ್ಟ “ಬೇರೆ ಕುರಿಗಳು” (ಅನ್ಯ ಕ್ರೈಸ್ತರು; ಯೆಹೂದಿ ಕ್ರೈಸ್ತರು; ಭೂಮಿಯ ಮೇಲೆ ಪ್ರಮೋದವನದಲ್ಲಿ ಜೀವದ ಪ್ರತೀಕ್ಷೆಯಿರುವ ಎಲ್ಲರನ್ನು) ಸೂಚಿಸುತ್ತದೆ. [ವಾರದ ಬೈಬಲ್ ವಾಚನ; ಕಾ95 4/15 ಪು. 31 ಪ್ಯಾರ. 4 ನ್ನು ನೋಡಿರಿ.]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ವಿಮೋ. 31:12, 13; ಜ್ಞಾನೋ. 3:9, 10; ಮತ್ತಾ. 5:14-16; ಲೂಕ 9:60, 62; 13:4, 5
31. ಯೇಸು ತನ್ನ ಕೇಳುಗರಿಗೆ ಚಿರಪರಿಚಿತವಾಗಿದ್ದ ಒಂದು ದುರಂತವನ್ನು ಸೂಚಿಸುತ್ತಾ, ಅದೃಷ್ಟವಾದಾತ್ಮಕ ವಿವೇಚನೆಯ ವಿರುದ್ಧ ವಾದಿಸಿದನು ಮತ್ತು ಸ್ಪಷ್ಟವಾಗಿಯೇ ಅದನ್ನು ಅವನು ಕಾಲ ಮತ್ತು ಮುನ್ನರಿಯದ ಸಂಭವಕ್ಕೆ ಆರೋಪಿಸಿದನು. [ವಾರದ ಬೈಬಲ್ ವಾಚನ; ಕಾ96 9/1 ಪು. 5 ಪ್ಯಾರ. 5 ನ್ನು ನೋಡಿರಿ.]
32. ಮೋಶೆಯ ಧರ್ಮಶಾಸ್ತ್ರವು ಸಕಲ ಮಾನವಕುಲಕ್ಕೆ ಬಂಧಕವಾಗಿರಬೇಕೆಂಬ ಅರ್ಥವನ್ನು ಎಂದೂ ಪಡೆದಿರಲಿಲ್ಲ. [uw ಪು. 147 ಪ್ಯಾರ. 5]
33. ರಾಜ್ಯವನ್ನು ಪ್ರವೇಶಿಸುವ ಸಲುವಾಗಿ ಏಕ-ನಿಷ್ಠೆಯ ಭಕ್ತಿ ಆವಶ್ಯಕವಾಗಿದೆ. [si ಪು. 192 ಪ್ಯಾರ. 32]
34. ಸತ್ಯಾರಾಧನೆಯನ್ನು ಪ್ರವರ್ಧಿಸಲು, ನಮ್ಮ ಸಮಯ, ಶಕ್ತಿ, ಮತ್ತು ಹಣವನ್ನು ಸೇರಿಸಿ ಇತರ ಸಂಪನ್ಮೂಲಗಳನ್ನು ನಾವು ಬಳಸಿದಂತೆ, ಯೆಹೋವನು ನಮ್ಮನ್ನು ಆಶೀರ್ವದಿಸುವನು. [kl ಪು. 120 ಪ್ಯಾರ. 8]
35. ಕ್ರೈಸ್ತರಾಗಿರುವವರು ದೇವರ ನಾಮ ಮತ್ತು ಉದ್ದೇಶಗಳ ಸಂಬಂಧದಲ್ಲಿ ಲೋಕಕ್ಕೆ ಸಕ್ರಿಯ ಸಾಕ್ಷಿಗಳಾಗಿರಬೇಕು. [rs ಪು. 438 ಪ್ಯಾರ. 4]