ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/98 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1998 ನಮ್ಮ ರಾಜ್ಯದ ಸೇವೆ
1998 ನಮ್ಮ ರಾಜ್ಯದ ಸೇವೆ
km 1/98 ಪು. 7

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆಗಳು ಜನವರಿ: ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. (ಜುಲೈ 1997ರ ನಮ್ಮ ರಾಜ್ಯದ ಸೇವೆಯ ಪುಟ 6 ಮತ್ತು ಎಪ್ರಿಲ್‌ 14, 1997ರ ಸೊಸೈಟಿಯ ಪತ್ರವನ್ನು ನೋಡಿರಿ.) ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಇರದಿದ್ದರೆ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳು ಪ್ರತಿಯೊಂದನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು, ರೂ. 25.00 (ದೊಡ್ಡ ಸೈಜ್‌ ರೂ. 45.00)ರ ಕಾಣಿಕೆಗೆ ಅಥವಾ ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಲಭ್ಯವಿರದಿದ್ದಲ್ಲಿ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳು ಪ್ರತಿಯೊಂದನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಮಾರ್ಚ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು, ರೂ. 20ರ ಕಾಣಿಕೆಗೆ. ಮನೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸುವುದರ ಮೇಲೆ ಕೇಂದ್ರೀಕರಿಸಿರಿ. ಎಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು.

◼ ಜನವರಿ 5ರ ವಾರದ ಸೇವಾ ಕೂಟಕ್ಕೆ ಹಾಜರಿರುವ ಎಲ್ಲ ದೀಕ್ಷಾಸ್ನಾನಿತ ಪ್ರಚಾರಕರು ಸಾಹಿತ್ಯ ಕೌಂಟರ್‌ನಿಂದ ಅಡ್ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌/ರಿಲೀಸ್‌ ಕಾರ್ಡ್‌ ಮತ್ತು ಅವರ ಮಕ್ಕಳಿಗಾಗಿ ಐಡೆಂಟಿಟಿ ಕಾರ್ಡ್‌ ಅನ್ನು ಪಡೆದುಕೊಳ್ಳಬಹುದು.

◼ ಈ ವರ್ಷ ಶನಿವಾರ, ಎಪ್ರಿಲ್‌ 11ರಂದು ಸೂರ್ಯಾಸ್ತಮಾನದ ಅನಂತರ ಜ್ಞಾಪಕವನ್ನು ಆಚರಿಸಲು ಸಭೆಗಳು ಅನುಕೂಲಕರವಾದ ಏರ್ಪಾಡುಗಳನ್ನು ಮಾಡತಕ್ಕದ್ದು. ಭಾಷಣವನ್ನು ಬೇಗನೆ ಆರಂಭಿಸಬಹುದಾದರೂ, ಜ್ಞಾಪಕದ ಕುರುಹುಗಳ ದಾಟಿಸುವಿಕೆಯು, ಸೂರ್ಯಾಸ್ತಮಾನದ ನಂತರದ ತನಕ ಆರಂಭಿಸಲ್ಪಡಬಾರದು. ನಿಮ್ಮ ಕ್ಷೇತ್ರದಲ್ಲಿ ಯಾವಾಗ ಸೂರ್ಯಾಸ್ತಮಾನವಾಗುತ್ತದೆಂಬುದನ್ನು ನಿರ್ಧರಿಸಲು ಸ್ಥಳಿಕ ಮೂಲಗಳಿಂದ ತಿಳಿದುಕೊಳ್ಳಿರಿ. ಪ್ರತಿಯೊಂದು ಸಭೆಯು ತನ್ನ ಸ್ವಂತ ಜ್ಞಾಪಕಾಚರಣೆಯನ್ನು ನಡೆಸುವುದು ಅಪೇಕ್ಷಣೀಯವಾಗಿರುವುದಾದರೂ, ಇದು ಯಾವಾಗಲೂ ಸಾಧ್ಯವಾಗಿರಲಿಕ್ಕಿಲ್ಲ. ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುವ ಕಡೆಗಳಲ್ಲಿ, ಪ್ರಾಯಶಃ ಒಂದು ಅಥವಾ ಹೆಚ್ಚು ಸಭೆಗಳು, ಆ ಸಾಯಂಕಾಲಕ್ಕಾಗಿ ಇನ್ನೊಂದು ಕಟ್ಟಡದ ಉಪಯೋಗವನ್ನು ಮಾಡಿಕೊಳ್ಳಬಹುದು. ಜ್ಞಾಪಕವು, ಹೊಸದಾಗಿ ಆಸಕ್ತರಾದ ಜನರಿಗೆ ಹಾಜರಾಗಲು ಅನನುಕೂಲವಾಗುವಷ್ಟು ತಡವಾಗಿ ಆರಂಭವಾಗಬಾರದು. ಅಲ್ಲದೆ, ಕಾಲತಖ್ತೆಯು, ಸಂದರ್ಶಕರಿಗೆ ಅಭಿವಂದಿಸಲು, ಆಸಕ್ತ ವ್ಯಕ್ತಿಗಳಿಗೆ ಇನ್ನೂ ಹೆಚ್ಚಿನ ಆತ್ಮಿಕ ನೆರವಿಗಾಗಿ ಏರ್ಪಾಡುಗಳನ್ನು ಮಾಡಲು ಅಥವಾ ಉತ್ತೇಜನದ ಒಂದು ಸಾಮಾನ್ಯ ಪರಸ್ಪರ ವಿನಿಮಯದಲ್ಲಿ ಆನಂದಿಸಲು, ಆಚರಣೆಯ ಮುಂಚೆ ಅಥವಾ ನಂತರ ಸಮಯವಿರಲಾರದಷ್ಟು ಬಿಗಿಯಾಗಿರಬಾರದು. ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿದ ಬಳಿಕ, ಜ್ಞಾಪಕವನ್ನು ಹಾಜರಾಗುವವರು ಆ ಸಂದರ್ಭದಿಂದ ಪೂರ್ಣವಾಗಿ ಲಾಭವನ್ನು ಪಡೆದುಕೊಳ್ಳಲು ಯಾವ ರೀತಿಯ ಏರ್ಪಾಡುಗಳು ಅತ್ಯುತ್ತಮವಾಗಿ ಸಹಾಯ ಮಾಡುವವೆಂಬುದನ್ನು ಹಿರಿಯರು ನಿರ್ಣಯಿಸಬೇಕು.

◼ 1998ರ ಜ್ಞಾಪಕ ಕಾಲಕ್ಕಾಗಿರುವ ವಿಶೇಷ ಬಹಿರಂಗ ಭಾಷಣವು, ಭಾನುವಾರ ಮಾರ್ಚ್‌ 29ರಂದು ಕೊಡಲ್ಪಡುವುದು. ಒಂದು ಹೊರಮೇರೆಯು ಒದಗಿಸಲ್ಪಡುವುದು. ಆ ವಾರಾಂತ್ಯದಲ್ಲಿ, ಸರ್ಕಿಟ್‌ ಮೇಲ್ವಿಚಾರಕನ ಭೇಟಿ, ಒಂದು ಸರ್ಕಿಟ್‌ ಸಮ್ಮೇಳನ ಅಥವಾ ವಿಶೇಷ ಸಮ್ಮೇಳನ ದಿನ ಇರುವ ಸಭೆಗಳಿಗೆ, ವಿಶೇಷ ಭಾಷಣವು ಅದರ ಮುಂದಿನ ವಾರದಲ್ಲಿರುವುದು. ಯಾವುದೇ ಸಭೆಯು, ವಿಶೇಷ ಭಾಷಣವನ್ನು, 1998 ಮಾರ್ಚ್‌ 29ರ ಮುಂಚೆ ನೀಡಬಾರದು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಕುಟುಂಬ ಜೀವಿತದಲ್ಲಿ ಆನಂದಿಸಿರಿ (ಟಿ-21)—ಕೊಂಕಣಿ (ರೋಮನ್‌ ಲಿಪಿ), ಪಂಜಾಬಿ

ಖಿನ್ನರಿಗಾಗಿ ಸಾಂತ್ವನ (ಟಿ-20)—ಕೊಂಕಣಿ (ರೋಮನ್‌ ಲಿಪಿ), ಪಂಜಾಬಿ

ನಿಜವಾಗಿಯೂ ಯಾರು ಲೋಕವನ್ನು ಆಳುತ್ತಾರೆ? (ಟಿ-22)—ಕೊಂಕಣಿ (ರೋಮನ್‌ ಲಿಪಿ), ಪಂಜಾಬಿ

◼ ಸ್ಟಾಕ್‌ನಲ್ಲಿಲ್ಲದ ಪ್ರಕಾಶನಗಳು:

ಇರುವುದು ಈ ಜೀವಿತ ಮಾತ್ರವೊ—ತೆಲುಗು

ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯರು—ತಮಿಳು

“ನಿನ್ನ ರಾಜ್ಯವು ಬರಲಿ”—ಇಂಗ್ಲಿಷ್‌, ಕನ್ನಡ, ತಮಿಳು

ಬೈಬಲ್‌—ದೇವರ ವಾಕ್ಯವೊ ಮನುಷ್ಯನದ್ದೊ?—ಇಂಗ್ಲಿಷ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ