ಕರಪತ್ರಗಳನ್ನು ಸದುಪಯೋಗಿಸಿರಿ
1 ಸಭಾ ಕರಪತ್ರಗಳು, ಸಮುದಾಯದಲ್ಲಿರುವ ಜನರಿಗೆ ರಾಜ್ಯ ಸಭಾಗೃಹದ ವಿಳಾಸ ಮತ್ತು ಕೂಟಗಳ ಸರಿಯಾದ ಸಮಯವನ್ನು ತಿಳಿಸುವುದಕ್ಕೆ ಉಪಯುಕ್ತವಾಗಿವೆ. ನೀವು ಸಂಪರ್ಕಿಸುವ ಪ್ರತಿಯೊಬ್ಬ ವ್ಯಕ್ತಿಗೆ ಒಂದನ್ನು ನೀಡುವುದು ಸೂಕ್ತವಾಗಿರುವುದು. ಆ ಉದ್ದೇಶಕ್ಕೋಸ್ಕರ, ಪ್ರತಿಯೊಂದು ಸಭೆಯು, ಸ್ಟಾಕ್ನಲ್ಲಿ ಕರಪತ್ರಗಳ ಹೇರಳವಾದ ಸರಬರಾಯಿಯನ್ನು ಹೊಂದಿರತಕ್ಕದ್ದು. ಒಂದು ಸಭೆಯು ಅದರ ಕೂಟದ ಸ್ಥಳ ಅಥವಾ ಕೂಟದ ಸಮಯಗಳನ್ನು ಬದಲಾಯಿಸಲಿರುವುದಾದರೆ, ಆ ಬದಲಾವಣೆಗಳು ಕಾರ್ಯರೂಪಕ್ಕೆ ಹಾಕಲ್ಪಡುವ ಸುಮಾರು ಮೂರು ತಿಂಗಳುಗಳ ಮುಂಚೆಯೇ ಹೊಸ ಕರಪತ್ರಗಳು ಆರ್ಡರ್ ಮಾಡಲ್ಪಡಬೇಕು. ಹೀಗೆ ಮಾಡುವುದರಿಂದ, ಸದ್ಯದ ಕೂಟದ ಸಮಯಗಳ ಕರಪತ್ರಗಳ ಸರಬರಾಯಿಯು ಯಾವಾಗಲೂ ಸಿದ್ಧವಿರುವುದು. ಹ್ಯಾಂಡ್ಬಿಲ್ ರಿಕ್ವೆಸ್ಟ್ ಫಾರ್ಮ್ ಈ ಉದ್ದೇಶಕ್ಕಾಗಿ ಉಪಯೋಗಿಸಲ್ಪಡಬೇಕು. ಕರಪತ್ರಗಳು 1,000 ಪ್ರತಿಗಳಿಗೆ ರೂ. 40.00ರ ದರದಲ್ಲಿ ಸರಬರಾಯಿ ಮಾಡಲ್ಪಡುತ್ತವೆ; ಅವುಗಳನ್ನು ಕೇವಲ 1,000ಗಳ ಮೊತ್ತಗಳಲ್ಲಿಯೇ ಆರ್ಡರ್ ಮಾಡಬೇಕು. ನಿಮಗೆ ಕರಪತ್ರಗಳು ಸಿಕ್ಕಿದೊಡನೆ, ಅತ್ಯುತ್ತಮವಾದ ಲಾಭವನ್ನು ಪಡೆದುಕೊಳ್ಳುವಂತಹ ರೀತಿಯಲ್ಲಿ ನೀವು ಅವುಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ?
2 ಒಂದು ಕರಪತ್ರವನ್ನು ಒಬ್ಬ ವ್ಯಕ್ತಿಗೆ ಕೊಡುವುದು, ತಮ್ಮನ್ನು ಪರಿಚಯಿಸಿಕೊಳ್ಳುವ ಮತ್ತು ಸಂಭಾಷಣೆಗಳನ್ನು ಆರಂಭಿಸುವುದಕ್ಕೆ ಒಂದು ಪರಿಣಾಮಕಾರಿಯಾದ ವಿಧವಾಗಿದೆಯೆಂದು ಅನೇಕ ಪ್ರಚಾರಕರು ಕಂಡುಕೊಳ್ಳುತ್ತಾರೆ. ಕೂಟದ ಶೆಡ್ಯೂಲನ್ನು ಅಥವಾ ಹಿಂಭಾಗದಲ್ಲಿರುವ ಸಂದೇಶವನ್ನು ತೋರಿಸುವುದು, ನಮ್ಮ ಕೆಲಸ ಮತ್ತು ಅದರ ಉದ್ದೇಶದ ಕುರಿತ ಒಂದು ಚರ್ಚೆಗೆ ಮಾರ್ಗವನ್ನು ತೆರೆಯುವುದು. ಬಾಗಿಲಲ್ಲಿ ಒಂದು ಕರಪತ್ರವನ್ನು ನೀಡುವಂತೆ ಮಾಡುವ ಮೂಲಕ ಹೆತ್ತವರು ತಮ್ಮ ಎಳೆಯ ಮಕ್ಕಳನ್ನು ಶುಶ್ರೂಷೆಯಲ್ಲಿ ಒಳಗೂಡಿಸಸಾಧ್ಯವಿದೆ. ಪತ್ರ ಬರೆಯುವ ಮೂಲಕ ಸಾಕ್ಷಿಕಾರ್ಯದಲ್ಲಿ ಪಾಲಿಗರಾಗುವ ಪ್ರಚಾರಕರು, ತಮ್ಮ ಪತ್ರದಲ್ಲಿ ಒಂದು ಕರಪತ್ರವನ್ನು ಸೇರಿಸಿ, ಆ ವ್ಯಕ್ತಿಗೆ ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸಬೇಕು. ಎಲ್ಲಿ ಯಾರೂ ಮನೆಯಲ್ಲಿರುವುದಿಲ್ಲವೊ ಅಲ್ಲಿ ಕರಪತ್ರಗಳನ್ನು ಬಿಟ್ಟುಬರಬಹುದು. ಆದರೆ ಅವು ಸಂಪೂರ್ಣವಾಗಿ ದೃಷ್ಟಿಗೆ ಮರೆಯಾಗಿರುವಂತೆ ಬಾಗಿಲಿನ ಅಡಿಯಲ್ಲಿ ಹಾಕುವಂತೆ ಜಾಗರೂಕತೆ ವಹಿಸಬೇಕು.
3 ಪ್ರಾಮಾಣಿಕ ಹೃದಯದ ವ್ಯಕ್ತಿಗಳನ್ನು ಸತ್ಯದ ಕಡೆಗೆ ನಿರ್ದೇಶಿಸುವುದರಲ್ಲಿ ಕರಪತ್ರಗಳು ಸಾಧನವಾಗಿವೆ. ಬೈಬಲನ್ನು ಅರ್ಥಮಾಡಿಕೊಳ್ಳಲು ತನ್ನ ಜೀವನುದುದ್ದಕ್ಕೂ ಇದ್ದ ಬಯಕೆಯನ್ನು ನೆರವೇರಿಸಲು ಒಂದು ಕರಪತ್ರವು ಸಹಾಯಮಾಡಿರುವುದನ್ನು ಒಬ್ಬ ಸ್ತ್ರೀಯ ಅನುಭವವು ತಿಳಿಸುತ್ತದೆ. ಆಕೆ ದೇವರಿಗೆ ಪ್ರಾರ್ಥನೆ ಮಾಡುತ್ತಾ ಒಂದು ರಾತ್ರಿಯನ್ನು ಕಳೆದ ಬಳಿಕ, ಬೆಳಗ್ಗೆ ಒಬ್ಬ ಸಾಕ್ಷಿ ದಂಪತಿಗಳು ಆಕೆಯ ಬಾಗಿಲಿನ ಕರೆಗಂಟೆಯನ್ನು ಒತ್ತಿದರು. ಆಕೆ ಇಣಿಕುಗುಂಡಿಯ ಮೂಲಕ ನೋಡುತ್ತಾ, ತಾನು ಈಗ ಬಾಗಿಲನ್ನು ತೆರೆಯುವುದಿಲ್ಲ ಎಂದು ಹೇಳಿದಳು. ಸಾಕ್ಷಿಗಳು ಆ ಕರಪತ್ರವನ್ನು ಬಾಗಿಲಿನ ಕೆಳಗೆ ಹಾಕಿದರು. ಅದರಲ್ಲಿ ಹೀಗೆ ಬರೆದಿತ್ತು: “ನಿಮ್ಮ ಬೈಬಲನ್ನು ತಿಳಿದುಕೊಳ್ಳಿರಿ.” ಆಕೆ ಅದನ್ನು ನೋಡಿ, ಬಾಗಿಲನ್ನು ತೆರೆದಳು. ತತ್ಕ್ಷಣವೇ ಒಂದು ಅಭ್ಯಾಸವು ಆರಂಭಿಸಲ್ಪಟ್ಟಿತು ಮತ್ತು ತದನಂತರ ಅವಳ ದೀಕ್ಷಾಸ್ನಾನವಾಯಿತು. ದೇವರ ಆತ್ಮದ ಶಕ್ತಿಯನ್ನು ಎಂದೂ ಕಡಿಮೆಯಾಗಿ ಎಣಿಸದೆ, ನಮ್ಮ ಶುಶ್ರೂಷೆಯನ್ನು ನಾವು ಪೂರ್ಣವಾಗಿ ನೆರವೇರಿಸಿದಂತೆ ನಾವು ಕ್ರಮವಾಗಿ ಕರಪತ್ರಗಳನ್ನು ಸದುಪಯೋಗಿಸೋಣ.—ಫೆಬ್ರವರಿ 1994ರ ನಮ್ಮ ರಾಜ್ಯದ ಸೇವೆ, ಪುಟ 1ನ್ನೂ ನೋಡಿರಿ.