ಪ್ರಶ್ನಾ ರೇಖಾಚೌಕ
◼ ಲೊನಾವ್ಲದಲ್ಲಿರುವ ಸೊಸೈಟಿಯ ಬ್ರಾಂಚ್ ಆಫೀಸ್ ಅಥವಾ ಬೆಂಗಳೂರಿನಲ್ಲಿನ ಕಟ್ಟಡ ನಿರ್ಮಾಣದ ನಿವೇಶನಕ್ಕೆ ನಾವು ಭೇಟಿ ನೀಡುವಾಗ, ನಮ್ಮ ಉಡುಪು ಮತ್ತು ತೋರಿಕೆಗೆ ನಾವು ವಿಶೇಷವಾದ ಗಮನವನ್ನು ಏಕೆ ಕೊಡಬೇಕು?
ಕ್ರೈಸ್ತರು ಯೋಗ್ಯವಾದ ಸಭ್ಯತೆಯನ್ನು ಕಾಪಾಡಿಕೊಳ್ಳುವಂತೆ ನಿರೀಕ್ಷಿಸಲಾಗುತ್ತದೆ. ಎಲ್ಲ ಸಮಯಗಳಲ್ಲಿ ನಮ್ಮ ಉಡುಪು ಮತ್ತು ತೋರಿಕೆಯು, ಯೆಹೋವ ದೇವರ ಸೇವಕರಿಗೆ ತಕ್ಕದ್ದಾಗಿರುವ ಸೌಜನ್ಯತೆ ಮತ್ತು ಘನತೆಯನ್ನು ಪ್ರತಿಬಿಂಬಿಸತಕ್ಕದ್ದು. ಲೋಕದಲ್ಲಿ ಸೊಸೈಟಿಯ ಬ್ರಾಂಚ್ ಆಫೀಸುಗಳು ಎಲ್ಲೇ ಇರಲಿ, ಅವುಗಳನ್ನು ಸಂದರ್ಶಿಸುವಾಗ ಇದು ವಿಶೇಷವಾಗಿ ಸತ್ಯವಾಗಿದೆ.
1998ರಲ್ಲಿ, ಲೋಕದ ಅನೇಕ ಭಾಗಗಳಲ್ಲಿ ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು ನಡೆಸಲ್ಪಡುವವು. ಅನೇಕ ದೇಶಗಳಿಂದ ಬರುವ ನಮ್ಮ ಸಾವಿರಾರು ಸಹೋದರರು, ನ್ಯೂ ಯಾರ್ಕ್‌ನಲ್ಲಿರುವ ಸೊಸೈಟಿಯ ಮುಖ್ಯಕಾರ್ಯಾಲಯವನ್ನು, ಹಾಗೂ ಭಾರತವನ್ನು ಸೇರಿಸಿ ಇತರ ದೇಶಗಳಲ್ಲಿರುವ ಬ್ರಾಂಚ್ ಆಫೀಸುಗಳನ್ನು ಸಂದರ್ಶಿಸುವರು. ಈ ಬ್ರಾಂಚ್ ಆಫೀಸುಗಳಿಗೆ ಭೇಟಿ ನೀಡುವಾಗ ಮಾತ್ರವಲ್ಲ, ಬೇರೆ ಸಮಯದಲ್ಲೂ, ನಮ್ಮ ಸೂಕ್ತವಾದ ಉಡುಪು ಮತ್ತು ಕೇಶಶೈಲಿಯನ್ನು ಒಳಗೂಡಿಸಿ, ‘ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುವ’ ಅಗತ್ಯವಿದೆ.—2 ಕೊರಿಂ. 6:3, 4.
ಯೋಗ್ಯವಾದ ಉಡುಪು ಮತ್ತು ತೋರಿಕೆಯ ಮಹತ್ವವನ್ನು ಚರ್ಚಿಸುತ್ತಾ, ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕವು, ನಾವು ಕ್ಷೇತ್ರ ಸೇವೆಯಲ್ಲಿ ತೊಡಗಿರುವಾಗ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ, ದೈಹಿಕ ಶುದ್ಧತೆ, ಸಭ್ಯ ಉಡುಪು ಮತ್ತು ಒಳ್ಳೆಯ ಕೇಶಶೈಲಿಯ ಅಗತ್ಯದ ಕುರಿತು ಹೇಳಿಕೆಯನ್ನೀಯುತ್ತದೆ. ಅನಂತರ 131ನೆಯ ಪುಟದ, 2ನೆಯ ಪ್ಯಾರಗ್ರಾಫ್‌ನಲ್ಲಿ ಅದು ತಿಳಿಸುವುದು: “ಬ್ರೂಕ್ಲಿನ್‌ನಲ್ಲಿರುವ ಬೆತೆಲ್ ಗೃಹ ಅಥವಾ ಸೊಸೈಟಿಯ ಯಾವ ಬ್ರಾಂಚ್ ಆಫೀಸನ್ನು ಸಂದರ್ಶಿಸುವಾಗಲೂ ಇದು ಅನ್ವಯಿಸುತ್ತದೆ. ಬೆತೆಲ್ ಅಂದರೆ ‘ದೇವರ ಮನೆ’ ಎಂಬುದನ್ನು ನೆನಪಿಡಿರಿ. ಆದುದರಿಂದ ಇಲ್ಲಿಯೂ ನಮ್ಮ ಉಡುಪು, ಸ್ವಚ್ಛ ತೋರಿಕೆ ಮತ್ತು ವರ್ತನೆಗಳು ನಾವು ರಾಜ್ಯ ಸಭಾಗೃಹದಲ್ಲಿ ಕೂಡಿಬರುವಾಗ ಅಪೇಕ್ಷಿಸಲ್ಪಡುವುದಕ್ಕೆ ಸದೃಶವಾಗಿರಬೇಕು.” ಇದೇ ಉಚ್ಚ ಮಟ್ಟವು, ಸ್ಥಳಿಕ ಕ್ಷೇತ್ರದಲ್ಲಿರುವ ರಾಜ್ಯ ಪ್ರಚಾರಕರಿಂದ ಹಾಗೂ ಬೆತೆಲ್ ಕುಟುಂಬದ ಸದಸ್ಯರನ್ನು ನೋಡಲು ಮತ್ತು ಅವರೊಂದಿಗೆ ಸಹವಾಸಿಸಲು ಮತ್ತು ಬ್ರಾಂಚ್ ಸೌಕರ್ಯಗಳನ್ನು ಸಂದರ್ಶಿಸಲು, ಹೆಚ್ಚು ದೂರದ ಸ್ಥಳಗಳಿಂದ ಬರುವವರಿಂದಲೂ ಗಮನಿಸಲ್ಪಡಬೇಕು.
ನಮ್ಮ ಬಟ್ಟೆಯು, ಇತರರು ಯೆಹೋವನ ಸತ್ಯಾರಾಧನೆಯನ್ನು ದೃಷ್ಟಿಸುವ ವಿಧದ ಮೇಲೆ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರತಕ್ಕದ್ದು. ಆದರೆ, ಸೊಸೈಟಿಯ ಸೌಕರ್ಯಗಳನ್ನು ಸಂದರ್ಶಿಸುವಾಗ, ಕೆಲವು ಸಹೋದರ ಸಹೋದರಿಯರು ವಿಪರೀತವಾಗಿ ಮಾಮೂಲು ಆಗಿರುವ ಉಡುಪುಗಳನ್ನು ಧರಿಸುವುದನ್ನು ಗಮನಿಸಲಾಗಿದೆ. ಯಾವುದೇ ಬೆತೆಲ್ ಮನೆಯನ್ನು ಸಂದರ್ಶಿಸುವಾಗ ಅಂತಹ ಉಡುಪು ಸೂಕ್ತವಾಗಿರುವುದಿಲ್ಲ. ನಮ್ಮ ಕ್ರೈಸ್ತ ಜೀವಿತದ ಇತರ ಕ್ಷೇತ್ರಗಳಂತೆ, ಈ ವಿಷಯದಲ್ಲಿಯೂ, ಎಲ್ಲ ಸಂಗತಿಗಳನ್ನು ದೇವರ ಮಹಿಮೆಗಾಗಿ ಮಾಡುವ ಮೂಲಕ ದೇವರ ಜನರನ್ನು ಲೋಕದಿಂದ ಪ್ರತ್ಯೇಕಿಸುವಂತಹ ಉಚ್ಚ ಮಟ್ಟಗಳನ್ನು ನಾವು ಕಾಪಾಡಲು ಬಯಸುತ್ತೇವೆ. (ರೋಮಾ. 12:2; 1 ಕೊರಿಂ. 10:31) ಪ್ರಥಮ ಬಾರಿ ಬೆತೆಲನ್ನು ಸಂದರ್ಶಿಸುತ್ತಿರುವ ನಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ ಮತ್ತು ಇತರರೊಂದಿಗೂ ಮಾತಾಡಿ, ಯೋಗ್ಯವಾದ ಉಡುಪು ಮತ್ತು ತೋರಿಕೆಗೆ ಗಮನವನ್ನು ಕೊಡುವ ಪ್ರಾಮುಖ್ಯದ ಕುರಿತಾಗಿ ಜ್ಞಾಪಕಹುಟ್ಟಿಸುವುದು ಉತ್ತಮ.
ಆದುದರಿಂದ, ಸೊಸೈಟಿಯ ಸೌಕರ್ಯಗಳನ್ನು ಸಂದರ್ಶಿಸುತ್ತಿರುವಾಗ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ: ‘ನನ್ನ ಉಡುಪು ಮತ್ತು ತೋರಿಕೆಯು ಸಭ್ಯವಾಗಿದೆಯೊ?’ (ಮೀಕ 6:8ನ್ನು ಹೋಲಿಸಿರಿ.) ‘ನಾನು ಆರಾಧಿಸುತ್ತಿರುವ ದೇವರಿಗೆ ಅದು ಕೀರ್ತಿಯನ್ನು ತರುತ್ತದೊ? ನನ್ನ ತೋರಿಕೆಯಿಂದ ಇತರರು ಅಪಕರ್ಷಿಸಲ್ಪಡುವರೊ ಅಥವಾ ಅಸಮಾಧಾನಗೊಳ್ಳುವರೊ? ಪ್ರಥಮ ಬಾರಿಗೆ ಸಂದರ್ಶಿಸುತ್ತಿರುವ ಇತರರಿಗೆ ನಾನೊಂದು ಉತ್ತಮ ಮಾದರಿಯನ್ನು ಇಡುತ್ತಿದ್ದೇನೊ?’ ನಾವು ಯಾವಾಗಲೂ, ನಮ್ಮ ಉಡುಪು ಮತ್ತು ತೋರಿಕೆಯಿಂದ “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿ”ರೋಣ.—ತೀತ 2:10.