ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 1998ರ ಜನವರಿ 5ರಿಂದ ಏಪ್ರಿಲ್ 20ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಅ. ಕೃತ್ಯಗಳು 15:29ರಲ್ಲಿರುವ “ನಿಮಗೆ ಒಳ್ಳೇ ಆರೋಗ್ಯವಿರಲಿ” (NW) ಎಂಬ ಹೇಳಿಕೆಯು, ‘ನೀವು ರಕ್ತ ಮತ್ತು ವ್ಯಭಿಚಾರದಿಂದ ದೂರವಿರುವಲ್ಲಿ, ನಿಮಗೆ ಒಳ್ಳೇ ಆರೋಗ್ಯವಿರುವುದು’ ಎಂಬ ಅರ್ಥವಿರುವ ಒಂದು ವಾಗ್ದಾನವಾಗಿತ್ತು. [ವಾರದ ಬೈಬಲ್ ವಾಚನ; ಕಾ92 3/1 ಪು. 25 ಪ್ಯಾರ. 7 ಪಾದಟಿಪ್ಪಣಿ ನೋಡಿರಿ.]
2. ಕೊರಿಂಥದ ಕ್ರೈಸ್ತರ ಆತ್ಮಿಕ ಹಿತಕ್ಕಾಗಿ ಗಾಢವಾದ ಚಿಂತೆಯು, ಪೌಲನು ತನ್ನ ಎರಡನೆಯ ಮಿಷನೆರಿ ಪ್ರಯಾಣದಲ್ಲಿದ್ದಾಗ ಅವರಿಗೆ ತನ್ನ ಪ್ರಥಮ ಪತ್ರವನ್ನು ಬರೆಯಲು ಪ್ರಚೋದಿಸಿತು. [si ಪು. 210 ಪ್ಯಾರ. 3]
3. ಐಗುಪ್ತ್ಯರು, ಫರೋಹನನ್ನು ಶೇನ್ಯಶಿರದ ದೇವತೆಯಾದ ಹೋರಸ್ನ ನೇರವಾದ ಅವತಾರವಾಗಿ ವೀಕ್ಷಿಸುತ್ತಿದ್ದರು. [ಕಾ96 1/15 ಪು. 24 ಪ್ಯಾರ. 1]
4. ಅ. ಕೃತ್ಯಗಳು 8:9-24ರಲ್ಲಿ ದಾಖಲಿಸಲ್ಪಟ್ಟಿರುವ ಘಟನೆಯಿಂದ ತೆಗೆಯಲ್ಪಟ್ಟಿರುವ “ಸಿಮೊನಿ” ಎಂಬ (ಇಂಗ್ಲಿಷ್) ಪದವು, ಇಂದ್ರಜಾಲದ ವಿದ್ಯೆಯ ಆಚರಣೆಗೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; ಕಾ91 1/1 ಪು. 13 ಪ್ಯಾರ. 8 ನ್ನು ನೋಡಿರಿ.]
5. ರೋಮಾಪುರ 8:6, 7ರಲ್ಲಿ “ಶರೀರ” ಎಂಬ ಪದವು, ಬಾಧ್ಯತೆಯಾಗಿ ಪಡೆದ ಪಾಪಪೂರ್ಣ ಪ್ರವೃತ್ತಿಗಳಿರುವ ಅಪರಿಪೂರ್ಣ ಮಾನವರೋಪಾದಿ ನಮ್ಮ ಪತಿತ ಸ್ಥಿತಿಗೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w91 3/1 ಪು. 21 ಪ್ಯಾರ. 4 ನ್ನು ನೋಡಿರಿ.]
6. ಯೆಹೋವನು ಆ ಬಳಿಕ ಧಾನ್ಯ ಮತ್ತು ನೆಲದ ಇತರ ಫಲಗಳ ಕಾಣಿಕೆಗಳನ್ನು ಸ್ವೀಕರಿಸಿದ್ದರಿಂದ, ಕಾಯಿನನ ಹೃದಯದಲ್ಲಿ ಏನೋ ತಪ್ಪಿದ್ದುದ್ದರಿಂದಲೇ ಅವನ ಕಾಣಿಕೆಯು ತಿರಸ್ಕರಿಸಲ್ಪಟ್ಟಿತ್ತೆಂಬುದು ವ್ಯಕ್ತ. (ಆದಿ. 4:3-5) [ಕಾ96 6/15 ಪು. 4 ಪ್ಯಾರ. 8]
7. ಒಬ್ಬ ಕ್ರೈಸ್ತನು ತನ್ನ ಜೀವಿತದಲ್ಲಿ ಬೈಬಲಿನ ನೈತಿಕ ಮತ್ತು ಆತ್ಮಿಕ ಮಟ್ಟಗಳನ್ನು ಅನ್ವಯಿಸಿಕೊಂಡಂತೆ, ಯೆಹೋವ ದೇವರು ದ್ವೇಷಿಸುವಂತಹ ಎಲ್ಲ ಆಚರಣೆಗಳಿಂದ ‘ತೊಳೆದುಕೊಳ್ಳುತ್ತಾ,’ ಅವನು ಯೆಹೋವನ ವಾಕ್ಯದಿಂದ ಶುದ್ಧಗೊಳಿಸಲ್ಪಡುತ್ತಾನೆ. (1 ಕೊರಿಂ. 6:9-11) [ಕಾ96 1/1 ಪು. 30 ಪ್ಯಾರ. 4]
8. ಸ್ವತಃ ಅಪೊಸ್ತಲ ಪೌಲನು, ಕೊರಿಂಥದಲ್ಲಿದ್ದ ಸ್ತೆಫಾನಸ್ನ ಮನೆವಾರ್ತೆಯ ಸದಸ್ಯರನ್ನು ದೀಕ್ಷಾಸ್ನಾನ ಮಾಡಿಸಿದನು. [ಕಾ96 6/15 ಪು. 29 ಪ್ಯಾರ. 2]
9. ಅ. ಕೃತ್ಯಗಳು 20:20ರ ಪೂರ್ವಾಪರ ವಚನವು, ಪೌಲನು ಸಭೆಯ ಹಿರಿಯ ಪುರುಷರನ್ನು ಸಂಭೋದಿಸುತ್ತಿದ್ದನೆಂಬುದನ್ನು ತೋರಿಸುತ್ತದಾದುದರಿಂದ ಆ ವಚನದಲ್ಲಿರುವ “ಮನೆಮನೆಯಲ್ಲಿಯೂ” ಎಂಬ ಅಭಿವ್ಯಕ್ತಿಯು, ಜೊತೆ ವಿಶ್ವಾಸಿಗಳ ಮನೆಗಳಲ್ಲಿನ ಕುರಿಪಾಲನಾ ಭೇಟಿಗಳಿಗೆ ಮಾತ್ರವೇ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w91 1/15 ಪು. 11 ಪ್ಯಾರ. 5 ನ್ನು ನೋಡಿರಿ.]
10. ಆತ್ಮಿಕ ವಿಷಯಗಳನ್ನು ಗಣ್ಯಮಾಡುವಂತೆ ನಾವು ನಮ್ಮ ಹೃದಯವನ್ನು ತರಬೇತುಗೊಳಿಸುವಲ್ಲಿ, ಮತ್ತು ಇದನ್ನು ಮಾಡುವುದಕ್ಕಾಗಿ ನಮಗೆ ಸಹಾಯಮಾಡಲು ದೇವರ ಆತ್ಮಕ್ಕಾಗಿ ಪ್ರಾರ್ಥಿಸುವಲ್ಲಿ, ನಾವು ‘ಶರೀರಭಾವದವುಗಳ ಮೇಲೆ ಮನಸ್ಸಿಡುವುದರಿಂದ’ ದೂರವಿರುವೆವು. (ರೋಮಾ. 8:6, 7) [ವಾರದ ಬೈಬಲ್ ವಾಚನ; w91 3/1 ಪು. 21 ಪ್ಯಾರ. 5 ನ್ನು ನೋಡಿರಿ.]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಜೀವಿತದ ಮಾರ್ಗಕ್ಕೆ ನಡಿಸುವ ನಿಷ್ಕೃಷ್ಟ ಜ್ಞಾನವನ್ನು ಗಳಿಸಲಿಕ್ಕಾಗಿ, ದೇವರ ವಾಕ್ಯವನ್ನು ಹೊಂದಿರುವುದು ಮತ್ತು ಅದನ್ನು ವೈಯಕ್ತಿಕವಾಗಿ ಓದುವುದು ಮಾತ್ರ ಸಾಕಾಗಿರುವುದಿಲ್ಲವೆಂಬುದನ್ನು ಅ. ಕೃತ್ಯಗಳು ಪುಸ್ತಕದಲ್ಲಿನ ಯಾವ ವೃತ್ತಾಂತವು ತೋರಿಸುತ್ತದೆ? [ವಾರದ ಬೈಬಲ್ ವಾಚನ; w91 9/1 ಪು. 19 ಪ್ಯಾರ. 16 ನ್ನು ನೋಡಿರಿ.]
12. ನಮ್ಮ ಆತ್ಮಿಕ ಸಹೋದರರನ್ನು ಟೀಕಾತ್ಮಕವಾಗಿ ತೀರ್ಪುಮಾಡುವುದರಿಂದ ನಮ್ಮನ್ನು ಯಾವುದು ತಡೆದು ಹಿಡಿಯಬೇಕು? [ಕಾ96 3/15 ಪು. 22 ಪ್ಯಾರ. 5]
13. ಅ. ಕೃತ್ಯಗಳು 11:26ರಲ್ಲಿ, ಇತರ ಬೈಬಲ್ ಭಾಷಾಂತರಗಳು “ದೈವಿಕ ಅನುಗ್ರಹ”ದ ವಿಚಾರವನ್ನೇ ಸೇರಿಸದಿರುವಾಗ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಭಾಷಾಂತರವು “ದೈವಿಕ ಅನುಗ್ರಹದಿಂದ ಕ್ರೈಸ್ತರೆಂದು ಕರೆಯಲ್ಪಟ್ಟರು” ಎಂಬ ವಾಕ್ಸರಣಿಯನ್ನು ಏಕೆ ಉಪಯೋಗಿಸುತ್ತದೆ? [ವಾರದ ಬೈಬಲ್ ವಾಚನ; ಕಾ91 1/1 ಪು. 15 ಪ್ಯಾರ. 19 ನ್ನು ನೋಡಿರಿ.]
14. ಒಬ್ಬ ಕ್ರೈಸ್ತ ಪತ್ನಿಯು ತನ್ನ ಪತಿಗಾಗಿ ಆಳವಾದ ಗೌರವವನ್ನು ಹೊಂದಲು ಯಾವುದು ಸಹಾಯ ಮಾಡುವುದು? (ಎಫೆ. 5:33) [ಕಾ96 3/1 ಪು. 21 ಪ್ಯಾರ. 8]
15. ಅ. ಕೃತ್ಯಗಳು 17:11ರಲ್ಲಿ ಯಾವ ವಿಧದ ವೈಯಕ್ತಿಕ ಅಭ್ಯಾಸವು ಉತ್ತೇಜಿಸಲ್ಪಟ್ಟಿದೆ? [si ಪು. 205 ಪ್ಯಾರ. 38]
16. ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ, ಯೆಹೂದ್ಯರು ಮತ್ತು ಯೆಹೂದ್ಯೇತರರ ಕುರಿತಾಗಿ ಏನನ್ನು ದೃಢವಾಗಿ ಸ್ಥಾಪಿಸಿದನು? [si ಪು. 206 ಪ್ಯಾರ. 2]
17. ರೋಮಾಪುರ 12:2ಕ್ಕನುಸಾರ, ದೇವರ ವಾಕ್ಯದ ಶಕ್ತಿಯಿಂದ ಕ್ರೈಸ್ತರ ವ್ಯಕ್ತಿತ್ವಗಳು ಎಷ್ಟರ ಮಟ್ಟಿಗೆ ಬದಲಾಗುತ್ತವೆ? [ವಾರದ ಬೈಬಲ್ ವಾಚನ; ಕಾ90 11/1 ಪು. 23 ಪ್ಯಾರ. 3 ನ್ನು ನೋಡಿರಿ.]
18. ರೋಮಾಪುರ 11:25ರಲ್ಲಿ ಪೌಲನಿಂದ ತಿಳಿಸಲ್ಪಟ್ಟಿರುವ “ಪವಿತ್ರ ರಹಸ್ಯ” (NW) ಏನಾಗಿದೆ? [ವಾರದ ಬೈಬಲ್ ವಾಚನ; w83 8/15 ಪು. 16 ಪ್ಯಾರ. 16 ನ್ನು ನೋಡಿರಿ.]
19. ಪಶ್ಚಾತ್ತಾಪರಹಿತ ತಪ್ಪಿತಸ್ಥರನ್ನು ಬಹಿಷ್ಕರಿಸುವುದರಲ್ಲಿ ಕ್ರೈಸ್ತ ಸಭೆಯು ಏಕೆ ಸಮರ್ಥಿಸಲ್ಪಡುತ್ತದೆ? (1 ಕೊರಿಂ. 5:11, 13) [ವಾರದ ಬೈಬಲ್ ವಾಚನ; ಎ96 10/8 ಪು. 26 ಪ್ಯಾರ. 3-4 ನ್ನು ನೋಡಿರಿ.]
20. ಒಬ್ಬ ವೈರಿಯ ತಲೆಯ ಮೇಲೆ ಅಗ್ನಿಮಯ ಕೆಂಡಗಳನ್ನು ಕೂಡಿಸಿಟ್ಟುಕೊಳ್ಳುವುದು ಕೆಟ್ಟತನವನ್ನು ಸೋಲಿಸುವುದರಲ್ಲಿ ಹೇಗೆ ಸಹಾಯಮಾಡುವುದು? (ರೋಮಾ. 12:20, 21) [ವಾರದ ಬೈಬಲ್ ವಾಚನ; g86 1/22 ಪು. 6 ಪ್ಯಾರ. 5 ನ್ನು ನೋಡಿರಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. _________________________ರ ಪ್ರವಾದನೆಯು ಹೇಗೆ ನೆರವೇರಿತ್ತೆಂಬುದನ್ನು ಫಿಲಿಪ್ಪನು ಐಥಿಯೋಪ್ಯದ ಕಂಚುಕಿಗೆ ವಿವರಿಸಿದನು, ಮತ್ತು ಈ ಕಂಚುಕಿಗೆ ಜ್ಞಾನೋದಯವಾದಾಗ ಅವನು ನಮ್ರತೆಯಿಂದ _________________________ವನ್ನು ವಿನಂತಿಸಿದನು. (ಅ. ಕೃತ್ಯಗಳು 8:28-35) [si ಪು. 204 ಪ್ಯಾರ. 33]
22. _________________________ ವಿಷಯದ ಕುರಿತು ವಾಗ್ವಾದ ನಡೆಯುತ್ತಿದ್ದಾಗ, _________________________ ತನ್ನ ನಿರ್ಣಯವನ್ನು ಹೀಗೆ ಹೇಳುವ ಮೂಲಕ ಬೆಂಬಲಿಸಿದನು: “ಇದಕ್ಕೆ ಪ್ರವಾದಿಗಳ ಮಾತುಗಳೂ ಒಪ್ಪುತ್ತವೆ.” (ಅ. ಕೃತ್ಯಗಳು 15:15-18) [ವಾರದ ಬೈಬಲ್ ವಾಚನ; si ಪು. 204 ಪ್ಯಾರ. 33 ನ್ನು ನೋಡಿರಿ.]
23. _________________________ ಗುಣವು ನಮಗೆ ‘ಮತ್ತೊಬ್ಬರನ್ನು ನಮಗಿಂತಲೂ ಶ್ರೇಷ್ಠರೆಂದು ಎಣಿಸ’ಲು ಶಕ್ತರನ್ನಾಗಿ ಮಾಡುವಾಗ, _________________________ ನಾವು “ಕೇಡನ್ನು ಸಹಿಸಿ”ಳ್ಳುವಂತೆ ಮಾಡುತ್ತದೆ. (ಫಿಲಿ. 2:3; 2 ತಿಮೊ. 2:24, 25) [ಕಾ96 5/15 ಪು. 21 ಪ್ಯಾರ. 5]
24. ರೋಮಾಪುರ ಅಧ್ಯಾಯ 11ರಲ್ಲಿನ ಸಾಂಕೇತಿಕ ಎಣ್ಣೆ ಮರದ ಪೌಲನ ದೃಷ್ಟಾಂತಕ್ಕನುಸಾರ, ಇಸ್ರಾಯೇಲಿನ 12 ಕುಲಗಳು ಇಸಾಕನ ಮೂಲಕ ಅಬ್ರಹಾಮನಿಂದ ಬಂದಿರುವಂತೆಯೇ, _________________________ನ 12 ಸಾಂಕೇತಿಕ ಕುಲಗಳು _________________________ವಿನ ಮೂಲಕ _________________________ನಿಂದ ಬರುತ್ತವೆ. [ವಾರದ ಬೈಬಲ್ ವಾಚನ; w83 8/15 ಪು. 16 ಪ್ಯಾರ. 15 ನ್ನು ನೋಡಿರಿ.]
25. _________________________ ಅರಣ್ಯದಲ್ಲಿ ಬೀಡುಬಿಟ್ಟ ಇಸ್ರಾಯೇಲ್ಯರನ್ನು ಯೆಹೋವನು ಪೋಷಿಸಿದಂತೆ, ಈ _________________________ದಲ್ಲಿ ಆತನು ನಮ್ಮನ್ನು ಪೋಷಿಸಬಲ್ಲನು. [ಕಾ96 8/15 ಪು. 7 ಪ್ಯಾರ. 1-2]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಪೌಲನು, ಅ. ಕೃತ್ಯಗಳು ಅಧ್ಯಾಯ 17ರಲ್ಲಿರುವ ತನ್ನ ಭಾಷಣದಿಂದ, ಜೀವಂತ ದೇವರ (ಪರಮಾಧಿಕಾರವನ್ನು; ನೀತಿಯನ್ನು; ಪ್ರೀತಿಯನ್ನು) ಔಚಿತ್ಯ ಜ್ಞಾನದಿಂದ ಸ್ಥಾಪಿಸುತ್ತಾನೆ. [ವಾರದ ಬೈಬಲ್ ವಾಚನ; si ಪು. 204 ಪ್ಯಾರ. 37 ನ್ನು ನೋಡಿರಿ.]
27. ಶಾಸ್ತ್ರವಚನಗಳನ್ನು ಪರೀಕ್ಷಿಸುವುದರಲ್ಲಿ ಅವರಿಗಿದ್ದ ಶ್ರದ್ಧೆಯ ಕಾರಣದಿಂದ (ಪೌಲ; ಪೇತ್ರ; ಲೂಕ)ನು (ಬೆರೋಯದ; ಮಕೆದೋನ್ಯದ; ಯೆರೂಸಲೇಮ್ನ) ಜನರನ್ನು ಹೃದಯೋಲ್ಲಾಸದಿಂದ ಶ್ಲಾಘಿಸಿದನು. (ಅ. ಕೃತ್ಯಗಳು 17:11) [ವಾರದ ಬೈಬಲ್ ವಾಚನ; ಕಾ95 5/1 ಪು. 14 ಪ್ಯಾರ. 3 ನ್ನು ನೋಡಿರಿ.]
28. ರೋಮಾಪುರ 1:25ರಲ್ಲಿ ತಿಳಿಸಲ್ಪಟ್ಟಿರುವ ಸುಳ್ಳು ಅಥವಾ ಅಸತ್ಯವು, (ವಿಗ್ರಹಾರಾಧನೆ; ಅಶುದ್ಧ ಲೈಂಗಿಕ ಆಚರಣೆಗಳು; ಸುಳ್ಳು ಹೇಳುವ ರೂಢಿ)ಗೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; ಕಾ92 2/15 ಪು. 6 ಪ್ಯಾರ. 6 ನ್ನು ನೋಡಿರಿ.]
29. ವಾಸ್ತವದಲ್ಲಿ, ವಿಷಯಗಳು ಕೆಟ್ಟುಹೋಗುವಾಗ (ಜನರು; ದೇವರು ಮತ್ತು ಕ್ರಿಸ್ತನು; ಸೈತಾನನು ಮತ್ತು ದೆವ್ವಗಳು) ಅನೇಕವೇಳೆ ದೂಷಣಾರ್ಹರಾಗಿದ್ದಾರೆ. [ಕಾ96 9/1 ಪು. 5 ಪ್ಯಾರ. 3]
30. ಪೌಲನು ಕೊರಿಂಥದವರಿಗೆ ತನ್ನ ಪ್ರಥಮ ಪತ್ರವನ್ನು ಸುಮಾರು ಸಾ.ಶ. (52; 55; 56)ರ ಇಸವಿಯಷ್ಟಕ್ಕೆ (ರೋಮ್; ಎಫೆಸ; ಕೊರಿಂಥ)ದಲ್ಲಿರುವಾಗ ಬರೆದನು. [si ಪು. 210 ಪ್ಯಾರ. 3]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಜ್ಞಾನೋ. 17:27; ಪ್ರಸಂ. 9:11; ಮತ್ತಾ. 10:16; ಅ. ಕೃತ್ಯಗಳು 10:34, 35; 2 ಕೊರಿಂ. 4:18
31. ಯೆಹೋವನ ಸಾಕ್ಷಿಗಳೋಪಾದಿ, ನಾವು ಎಲ್ಲ ಕುಲಸಂಬಂಧಿತ ಗುಂಪುಗಳ ಜನರನ್ನು ಆತನು ವೀಕ್ಷಿಸುವಂತೆಯೇ ವೀಕ್ಷಿಸಬೇಕು. [ವಾರದ ಬೈಬಲ್ ವಾಚನ; w88 5/15 ಪು. 16 ಪ್ಯಾರ. 6 ನ್ನು ನೋಡಿರಿ.]
32. ಕ್ರೈಸ್ತ ಮಾರ್ಗಕ್ರಮದ ಸಂತೋಷಕರ ಫಲಿತಾಂಶದ ಮೇಲೆ ನಮ್ಮ ಕಣ್ಣುಗಳನ್ನು ನೆಡುತ್ತಾ, ನಾವು ನಮ್ಮ ಸದ್ಯದ ಪರಿಸ್ಥಿತಿಗಳಾಚೆಗೆ ನೋಡಬೇಕು. [ಕಾ96 2/15 ಪು. 27 ಪ್ಯಾರ. 3-4]
33. ವಿವೇಚನಾಶಕ್ತಿ ಮತ್ತು ಸಹೋದರ ಪ್ರೀತಿಯು, ಯಾವುದು ಹಾನಿಕಾರಕವಾಗಿದೆಯೋ ಅದನ್ನು ಥಟ್ಟನೆ ಹೇಳಿಬಿಡುವ ನಮ್ಮ ಪ್ರಚೋದನೆಯನ್ನು ನಿಯಂತ್ರಿಸಲಿಕ್ಕಾಗಿ ನಮಗೆ ಸಹಾಯ ಮಾಡುವುದು. [ಕಾ96 5/15 ಪು. 22 ಪ್ಯಾರ. 7]
34. ನಿಜ ಕ್ರೈಸ್ತರು ಹಿಂಸೆಯನ್ನು ಎದುರಿಸುವಾಗ, ಇತರರಿಗೆ ರಾಜ್ಯ ಸಂದೇಶವನ್ನು ಪ್ರಕಟಿಸುವ ಸಮಯದಲ್ಲಿ ಜಾಣ್ಮೆಯನ್ನು ನಿರ್ಮಲತೆಯೊಂದಿಗೆ ಜೋಡಿಸುವ ಅಗತ್ಯವಿದೆ. [ಕಾ96 7/15 ಪು. 22 ಪ್ಯಾರ. 5]
35. ಸೃಷ್ಟಿಕರ್ತನು ಅಪಘಾತಗಳಿಗೆ ಕಾರಣನಾಗಿದ್ದಾನೆ ಅಥವಾ ಅಪಘಾತಗಳ ಬಲಿವ್ಯಕ್ತಿಗಳು ಯಾವುದೊ ರೀತಿಯಲ್ಲಿ ಶಿಕ್ಷಿಸಲ್ಪಡುತ್ತಿದ್ದಾರೆಂಬುದನ್ನು ನಂಬಲು ಯಾವುದೇ ಕಾರಣವಿಲ್ಲ. [ಕಾ96 9/1 ಪು. 5 ಪ್ಯಾರ. 4]