ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು. ಪಾಕ್ಷಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗಾಗಿ ಆರು ತಿಂಗಳ ಚಂದಾಗಳಿಗೆ ರೂ. 45.00. ಮಾಸಿಕ ಮುದ್ರಣಗಳಿಗೆ ಆರು ತಿಂಗಳುಗಳ ಚಂದಾ ಇಲ್ಲ. ಚಂದಾ ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಬಿಡಿ ಪ್ರತಿಗಳನ್ನು, ಪ್ರತಿಯೊಂದನ್ನು ರೂ. 4.00ರಂತೆ ನೀಡಬೇಕು.
ಚಂದಾಗಳನ್ನು ಪಡೆದುಕೊಳ್ಳುವಾಗ, ಕಾವಲಿನಬುರುಜು ಪತ್ರಿಕೆಯು ಪಂಜಾಬಿ ಮತ್ತು ಉರ್ದು (ಈ ಭಾಷೆಗಳಲ್ಲಿ ಅದು ಮಾಸಿಕವಾಗಿದೆ) ಭಾಷೆಗಳ ಹೊರತಾಗಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿದೆ ಎಂಬುದನ್ನು ದಯವಿಟ್ಟು ಜ್ಞಾಪಕದಲ್ಲಿಡಿರಿ.
ಎಚ್ಚರ! ಪತ್ರಿಕೆಯು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ತೆಲುಗು, ನೇಪಾಲಿ, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲಿ ಮಾಸಿಕವಾಗಿದೆ. ಉರ್ದು, ಪಂಜಾಬಿ ಮತ್ತು ಬಂಗಾಲಿ ಭಾಷೆಗಳಲ್ಲಿ ಎಚ್ಚರ! ಪತ್ರಿಕೆಯ ತ್ರೈಮಾಸಿಕ ವಿತರಣಾ ಪ್ರತಿಗಳು ಸಭೆಗಳಿಗೆ ದೊರಕುತ್ತವೆ, ಆದರೆ ಈ ಮೂರು ಭಾಷೆಗಳಲ್ಲಿ ವೈಯಕ್ತಿಕ ಚಂದಾಗಳು ದೊರಕುವುದಿಲ್ಲ.
ಜೂನ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕ, ರೂ. 20.00ರ ಕಾಣಿಕೆಗೆ. (ಪಯನೀಯರರಿಗಾಗಿ ದರವು ರೂ. 15.00 ಆಗಿದೆ.) ಪರ್ಯಾಯವಾಗಿ, ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳೆಂದು ಪಟ್ಟಿಮಾಡಲ್ಪಟ್ಟಿರುವ 192 ಪುಟಗಳ ಹಳೆಯ ಪುಸ್ತಕಗಳಲ್ಲಿ ಯಾವುದನ್ನಾದರೂ ನೀಡಬಹುದು. ಜುಲೈ ಮತ್ತು ಆಗಸ್ಟ್: ನಮ್ಮ 32 ಪುಟಗಳ ಬ್ರೋಷರ್‌ಗಳಲ್ಲಿ ಯಾವುದನ್ನೇ ರೂ. 6.00ರ ಕಾಣಿಕೆಗೆ ನೀಡಬಹುದು.
◼ಐದು ಇಡೀ ವಾರಾಂತ್ಯಗಳಿರುವುದರಿಂದ, ಮೇ ತಿಂಗಳು ಅನೇಕರಿಗೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಅನುಕೂಲಕರವಾದ ಸಮಯವಾಗಿದೆ.
ಲಭ್ಯವಿರುವ ಹೊಸ ಪ್ರಕಾಶನಗಳು:
ಖಿನ್ನರಿಗಾಗಿ ಸಾಂತ್ವನ, ಟ್ರ್ಯಾಕ್ಟ್ ನಂ. 20—ಒರಿಯಾ
◼ಪುನಃ ಲಭ್ಯವಿರುವ ಪ್ರಕಾಶನಗಳು:
ದೇವರು ನಿಜವಾಗಿಯೂ ನಮ್ಮ ಕುರಿತು ಚಿಂತಿಸುತ್ತಾನೊ?—ಉರ್ದು
ಪ್ರದವನವನ್ನು ತರಲಿರುವ ಸರಕಾರ—ಉರ್ದು
ವಾಚ್‌ಟವರ್ ಬೌಂಡ್ ವಾಲ್ಯೂಮ್, 1994—ಇಂಗ್ಲಿಷ್
ವಾಚ್‌ಟವರ್ ಬೌಂಡ್ ವಾಲ್ಯೂಮ್, 1995—ಇಂಗ್ಲಿಷ್
◼ಲಭ್ಯವಿರುವ ಹೊಸ ವಿಡಿಯೊಕ್ಯಾಸೆಟ್‌ಗಳು:
ಬೈಬಲ್—ನಿಮ್ಮ ಜೀವಿತದಲ್ಲಿ ಅದರ ಶಕ್ತಿ (ಸಂಪುಟ III)—ಇಂಗ್ಲಿಷ್