ದೇವಪ್ರಭುತ್ವ ವಾರ್ತೆಗಳು
◼ ಕ್ಯಾಮರೂನ್, ಕೋಟ್‌ಡೀವಾರ್, ಘಾನ, ನೈಜಿರೀಯ ಮತ್ತು ಬೆನಿನ್ ಎಂಬ ಪಶ್ಚಿಮ ಆಫ್ರಿಕದ ದೇಶಗಳೆಲ್ಲವು, ಫೆಬ್ರವರಿಯಲ್ಲಿ ಹೊಸ ಪ್ರಚಾರಕರ ಉಚ್ಚಾಂಕಗಳನ್ನು ತಲಪಿದವು.
◼ ಅನೇಕ ನಿರಾಶ್ರಿತರು ಲೈಬೀರಿಯಕ್ಕೆ ಹಿಂದಿರುಗುತ್ತಿದ್ದಾರೆ, ಮತ್ತು ಆ ದೇಶದಲ್ಲಿ ಸತ್ಯಕ್ಕಾಗಿ ನಿಜವಾದ ಹಸಿವು ಇದೆ. ಅವರ ಫೆಬ್ರವರಿ ತಿಂಗಳಿನ ಉಚ್ಚಾಂಕವಾದ 2,286 ಪ್ರಚಾರಕರು, 6,277 ಮನೆ ಬೈಬಲ್ ಅಭ್ಯಾಸಗಳನ್ನು ವರದಿಸಿದರು.
◼ ಮಕಾವ್, ಪ್ರಚಾರಕರ ಸಂಖ್ಯೆಯಲ್ಲಿ ಕಳೆದ ವರ್ಷದ ಸರಾಸರಿಗಿಂತ 16 ಪ್ರತಿಶತ ಹೆಚ್ಚು ವೃದ್ಧಿಯನ್ನು ಪಡೆಯಿತು. ಫೆಬ್ರವರಿಯಲ್ಲಿ 135 ಮಂದಿ ವರದಿಸುತ್ತಿದ್ದರು.
◼ ದಕ್ಷಿಣ ಪೆಸಫಿಕ್ ಕ್ಷೇತ್ರದಿಂದ, ಫಿಜಿ, ಟಹೀಟಿ ಮತ್ತು ಸಾಲೊಮನ್ ಐಲೆಂಡ್ಸ್, ಇವೆಲ್ಲವೂ ಫೆಬ್ರವರಿ ತಿಂಗಳಿನಲ್ಲಿ ಹೊಸ ಪ್ರಚಾರಕರ ಉಚ್ಚಾಂಕಗಳನ್ನು ವರದಿಸಿದವು.
◼ ಮಡಗಾಸ್ಕರ್ ದ್ವೀಪವು, 9,484 ಪ್ರಚಾರಕರ ಹೊಸ ಉಚ್ಚಾಂಕವನ್ನು ಪಡೆಯಿತು. ಇದು ಕಳೆದ ವರ್ಷದ ಸರಾಸರಿಗಿಂತ 14 ಪ್ರತಿಶತ ವೃದ್ಧಿಯಾಗಿತ್ತು. ಅವರು ಫೆಬ್ರವರಿಯಲ್ಲಿ 20,000ಕ್ಕಿಂತಲೂ ಹೆಚ್ಚಿನ ಮನೆ ಬೈಬಲ್ ಅಭ್ಯಾಸಗಳನ್ನೂ ವರದಿಸಿದರು.