ಪ್ರಕಟನೆಗಳು
◼ ಆಗಸ್ಟ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಈ ಕೆಳಗಿನ 32 ಪುಟಗಳ ಬ್ರೋಷರ್‌ಗಳಲ್ಲಿ ಯಾವುದನ್ನೇ ಆಗಲಿ ರೂ. 6.00ರ ಕಾಣಿಕೆಗೆ ನೀಡಬಹುದು: ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನೀವು ತ್ರಯೈಕ್ಯವನ್ನು ನಂಬ ಬೇಕೊ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರಲಿರುವ ಸರಕಾರ (ಇಂಗ್ಲಿಷ್), ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಸಕಲ ಜನರಿಗಾಗಿರುವ ಒಂದು ಗ್ರಂಥ, ಮತ್ತು ಸದಾಕಾಲ ಬಾಳಲಿರುವ ಆ ದೈವಿಕ ನಾಮ (ಇಂಗ್ಲಿಷ್), ಸತ್ತವರ ಆತ್ಮಗಳು—ಅವು ನಿಮಗೆ ಸಹಾಯ ಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? (ಇಂಗ್ಲಿಷ್) ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಮತ್ತು ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್) ಎಂಬ ಬ್ರೋಷರ್‌ಗಳನ್ನು ಸೂಕ್ತವಾದಲ್ಲಿ ನೀಡಬಹುದು. ಸೆಪ್ಟೆಂಬರ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಪರ್ಯಾಯ ನೀಡಿಕೆಯಾಗಿ, ಸೃಷ್ಟಿ (ಇಂಗ್ಲಿಷ್) ಪುಸ್ತಕ ಇಲ್ಲವೆ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಉಪಯೋಗಿಸಬಹುದು. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಚಂದಾಗಳು ನಿರಾಕರಿಸಲ್ಪಡುವಲ್ಲೆಲ್ಲ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳನ್ನು ನೀಡಬಹುದು. ನವೆಂಬರ್: ನಿತ್ಯಜೀವಕ್ಕೆ ನಡಿಸುವ ಜ್ಞಾನ.
◼ ಎಲ್ಲ ಪ್ರಚಾರಕರು ಆಗಸ್ಟ್ ತಿಂಗಳಿಗಾಗಿರುವ ತಮ್ಮ ಕ್ಷೇತ್ರ ಸೇವಾ ವರದಿಯನ್ನು, ಆಗಸ್ಟ್ 30ರ ಆದಿತ್ಯವಾರದೊಳಗೆ ಅಥವಾ ಕೊನೆಯ ಪಕ್ಷ ಆಗಸ್ಟ್ 31ರ ಸೋಮವಾರದೊಳಗೆ ಸಲ್ಲಿಸುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ತದನಂತರ, ಸೇವಾ ವರ್ಷಕ್ಕಾಗಿರುವ ವಾರ್ಷಿಕ ವರದಿಯನ್ನು ಸಂಕಲಿಸಲು ಸರಿಯಾದ ಸಮಯದಲ್ಲಿ ನಮಗೆ ತಲಪುವಂತೆ, ಸಭಾ ಸೆಕ್ರಿಟರಿಯು ಕಾಂಗ್ರಿಗೇಷನ್ ರಿಪೋರ್ಟ್ (S-1) ಅನ್ನು ಸೆಪ್ಟೆಂಬರ್ 3ರ ಗುರುವಾರದೊಳಗೆ ನಮಗೆ ಪೋಸ್ಟ್ ಮಾಡುವಂತೆ ಎಲ್ಲ ಪ್ರಯತ್ನವನ್ನು ಮಾಡಬೇಕು.
◼ ಪ್ರತಿಯೊಂದು ಸಭೆಯು ಮೂರು ಲಿಟರೇಚರ್ ಇನ್‌ವೆಂಟರಿ ಫಾರ್ಮ್‌ಗಳನ್ನು (S-AB-18) ಪಡೆಯುವುದು. ಆಗಸ್ಟ್ ತಿಂಗಳಿನ ಆದಿಭಾಗದಲ್ಲಿ ಸಭಾ ಸೆಕ್ರಿಟರಿಯು, ಸಾಹಿತ್ಯ ಸೇವಕನೊಂದಿಗೆ ಸಂಧಿಸಿ, ತಿಂಗಳ ಅಂತ್ಯದಲ್ಲಿ ಸಭೆಯ ಸಾಹಿತ್ಯದ ಸ್ಟಾಕ್‌ನ ಇನ್‌ವೆಂಟರಿಯನ್ನು ತೆಗೆದುಕೊಳ್ಳುವುದಕ್ಕಾಗಿ ಒಂದು ತಾರೀಖನ್ನು ಗೊತ್ತುಮಾಡಬೇಕು. ವಶದಲ್ಲಿರುವ ಎಲ್ಲ ಸಾಹಿತ್ಯದ ವಾಸ್ತವಿಕ ಲೆಕ್ಕವು ಮಾಡಲ್ಪಡತಕ್ಕದ್ದು, ಮತ್ತು ಮೊತ್ತಗಳು ಲಿಟರೇಚರ್ ಇನ್‌ವೆಂಟರಿ ಫಾರ್ಮ್‌ನ ಮೇಲೆ ಬರೆಯಲ್ಪಡಬೇಕು. ವಶದಲ್ಲಿರುವ ಪತ್ರಿಕೆಗಳ ಒಟ್ಟು ಸಂಖ್ಯೆಯನ್ನು ಪತ್ರಿಕಾ ಸೇವಕನಿಂದ ಪಡೆದುಕೊಳ್ಳಸಾಧ್ಯವಿದೆ. ದಯವಿಟ್ಟು ಮೂಲ ಪ್ರತಿಯನ್ನು ಸೆಪ್ಟೆಂಬರ್ 6ನೆಯ ತಾರೀಖಿನೊಳಗೆ ಸೊಸೈಟಿಗೆ ಅಂಚೆಯ ಮೂಲಕ ರವಾನಿಸಿರಿ. ನಿಮ್ಮ ಫೈಲ್‌ಗಳಿಗಾಗಿ ಒಂದು ನಕಲಿ ಪ್ರತಿಯನ್ನು ಇಡಿರಿ. ಮೂರನೆಯ ಪ್ರತಿಯು ಒಂದು ವರ್ಕ್ ಷೀಟ್ ಆಗಿ ಉಪಯೋಗಿಸಲ್ಪಡಬಹುದು. ಇನ್‌ವೆಂಟರಿಯು ಸೆಕ್ರಿಟರಿಯಿಂದ ಪರಿಶೀಲಿಸಲ್ಪಡಬೇಕು, ಮತ್ತು ಪೂರ್ಣಗೊಳಿಸಲ್ಪಟ್ಟ ಫಾರ್ಮ್ ಅಧ್ಯಕ್ಷ ಮೇಲ್ವಿಚಾರಕರಿಂದ ಪರೀಕ್ಷಿಸಲ್ಪಡಬೇಕು. ಸೆಕ್ರಿಟರಿ ಹಾಗೂ ಅಧ್ಯಕ್ಷ ಮೇಲ್ವಿಚಾರಕರು ಫಾರ್ಮ್‌ನ ಮೇಲೆ ಸಹಿಹಾಕುವರು.
◼ ಸಭಾ ಸೆಕ್ರಿಟರಿಯು, ಕಾಂಗ್ರಿಗೇಷನ್ ಆ್ಯನಾಲಿಸಿಸ್ ರಿಪೋರ್ಟ್ ಫಾರ್ಮ್ (S-10) ಮೇಲೆ ಬರೆಯುವುದಕ್ಕಾಗಿ ಸಂಖ್ಯೆಗಳನ್ನು ಸಹ ಸಂಕಲಿಸುವನು. ಅವನು ಪಬ್ಲಿಷರ್ ರೆಕಾರ್ಡ್ ಕಾರ್ಡ್ (S-21)ಗಳಿಂದ ಅಗತ್ಯವಿರುವ ಮಾಹಿತಿಯ ಒಂದು ನಿಷ್ಕೃಷ್ಟ ಪಟ್ಟಿಮಾಡುವಿಕೆಯನ್ನು ಖಚಿತಪಡಿಸಿಕೊಳ್ಳಲು, ವರದಿಯನ್ನು ಸಂಕಲಿಸುವುದಕ್ಕೆ ಸಹಾಯಮಾಡುತ್ತಿರಬಹುದಾದ ಯಾವನೇ ಹಿರಿಯನನ್ನು ಅಥವಾ ಶುಶ್ರೂಷಾ ಸೇವಕನನ್ನು ಜಾಗರೂಕತೆಯಿಂದ ನಿರ್ದೇಶಿಸುವನು. ಫಾರ್ಮ್ ಅನ್ನು ತುಂಬಿಸುವ ಮುಂಚೆ, ಅದರ ಮೇಲಿರುವ ಎಲ್ಲ ಸೂಚನೆಗಳನ್ನು ದಯವಿಟ್ಟು ಜಾಗರೂಕತೆಯಿಂದ ಓದಿರಿ. ಕಾಂಗ್ರಿಗೇಷನ್ ಆ್ಯನಾಲಿಸಿಸ್ ರಿಪೋರ್ಟ್ ಫಾರ್ಮ್ ನಿಷ್ಕೃಷ್ಟವಾಗಿ ಮತ್ತು ನೀಟಾಗಿ ತುಂಬಿಸಲ್ಪಡಬೇಕು ಮತ್ತು ಸಹಿಮಾಡಲ್ಪಡುವ ಮುನ್ನ ಸರ್ವಿಸ್ ಕಮಿಟಿಯಿಂದ ಜಾಗರೂಕವಾಗಿ ಪರಿಶೀಲಿಸಲ್ಪಡಬೇಕು. ದಯವಿಟ್ಟು S-10 ಫಾರ್ಮ್‌ನ ಮೂಲಪ್ರತಿಯನ್ನು ಸೆಪ್ಟೆಂಬರ್ 10ರೊಳಗೆ ಸೊಸೈಟಿಗೆ ಕಳುಹಿಸಿರಿ; ನಿಮ್ಮ ಫೈಲ್‌ನಲ್ಲಿ ಒಂದು ನಕಲು ಪ್ರತಿಯನ್ನಿಡಿರಿ.
◼ ಕ್ರಮದ ಪಯನೀಯರ್ ಸೇವೆಗಾಗಿರುವ ಎಲ್ಲ ಅರ್ಜಿಗಳಿಗೆ, ಸಭಾ ಸೇವಾ ಕಮಿಟಿಯು ತಡವಿಲ್ಲದೆ ಗಮನವನ್ನು ಕೊಡತಕ್ಕದ್ದು. ಅರ್ಜಿಹಾಕಿರುವವನು, ತಾಸಿನ ಆವಶ್ಯಕತೆಯನ್ನು ಪೂರೈಸಲು ಶಕ್ತನೊ ಎಂದು ನೋಡಲಿಕ್ಕಾಗಿ ಸೇವಾ ಕಮಿಟಿಯು ಆ ಅರ್ಜಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬಾರದು. ವಿನಂತಿಸಲ್ಪಟ್ಟಿರುವ ತಾರೀಖಿನ ನಂತರ ಅರ್ಜಿಗಳನ್ನು ಪಡೆಯಲಾಗುವಲ್ಲಿ ನೇಮಕದ ತಾರೀಖು ತನ್ನಷ್ಟಕ್ಕೆ ಬದಲಾಗಬಹುದು. ಅರ್ಥವತ್ತಾದ ಕಾರಣಗಳುಳ್ಳ ಪರಿಸ್ಥಿತಿಗಳ ಹೊರತು, ಸೊಸೈಟಿಯು ತಾರೀಖನ್ನು ಬದಲಾಯಿಸುವುದಿಲ್ಲ. ಅಂತಹ ಪರಿಸ್ಥಿತಿಗಳಿರುವಲ್ಲಿ, ಅರ್ಜಿಯೊಂದಿಗೆ ಒಂದು ಪತ್ರವು ಇರಬೇಕು.—ಅಕ್ಟೋಬರ್ 1986ರ ನಮ್ಮ ರಾಜ್ಯದ ಸೇವೆ (ಇಂಗ್ಲಿಷ್)ಯ ಪುರವಣಿಯ, 24-6ನೆಯ ಪ್ಯಾರಗ್ರಾಫ್‌ಗಳನ್ನು ನೋಡಿರಿ.
◼ ಸೆಪ್ಟೆಂಬರ್ 21ರ ವಾರದಿಂದ ಆರಂಭಿಸಿ, ಸಭಾ ಪುಸ್ತಕ ಅಭ್ಯಾಸದಲ್ಲಿ ಅಪೇಕ್ಷಿಸು ಬ್ರೋಷರ್ ಅಭ್ಯಾಸಿಸಲ್ಪಡುವುದೆಂದು, ನಮ್ಮ ರಾಜ್ಯದ ಸೇವೆಯ ಜುಲೈ 1998ರ ಸಂಚಿಕೆಯಲ್ಲಿನ ಒಂದು ಪ್ರಕಟನೆಯು ತಿಳಿಸಿತು. ಅದರ ಅನಂತರ, ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಮತ್ತು ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರುಗಳನ್ನು ಪರಿಗಣಿಸಲಾಗುವುದು.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಎಂಫಟಿಕ್ ಡೈಯಗ್ಲಟ್—ಇಂಗ್ಲಿಷ್
ಕಿಂಗ್‌ಡಮ್ ಇಂಟರ್‌ಲೀನಿಯರ್—ಇಂಗ್ಲಿಷ್
ದ ಬೈಬಲ್ ಇನ್ ಲಿವಿಂಗ್ ಇಂಗ್ಲಿಷ್
ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು (ಪರಿಷ್ಕೃತ)—ಇಂಗ್ಲಿಷ್
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್, (ದೊಡ್ಡ ಲಿಪಿ) [ನಾಲ್ಕು ವಾಲ್ಯೂಮ್‌ಗಳ ಸೆಟ್]—ಇಂಗ್ಲಿಷ್