ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 1998ರ ಮೇ 4ರಿಂದ ಆಗಸ್ಟ 24ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಬೈಬಲ್ ದಾಖಲೆಗನುಸಾರ, ಪೌಲನು ಮೂರು ಸಲ ಕೊರಿಂಥ ನಗರವನ್ನು ಸಂದರ್ಶಿಸಿದನು. [si ಪು. 214 ಪ್ಯಾರ. 3]
2. ದಹನಮಾಡಲ್ಪಟ್ಟಿರುವ ಮೃತ ವ್ಯಕ್ತಿಗಳ ಬೂದಿಯ ಚೆದರಿಸುವಿಕೆಯು ಶಾಸ್ತ್ರಗಳೊಂದಿಗೆ ಅಸಂಬದ್ಧವಾಗಿದೆ. [ಕಾ96 9/15 ಪು. 30 ಪ್ಯಾರ. 6-ಪು. 31 ಪ್ಯಾರ. 1]
3. ರಾಜ್ಯಾಭಿರುಚಿಗಳನ್ನು ಮುಂದುವರಿಸಲಿಕ್ಕಾಗಿರುವ ವಿಪರೀತ ಹುರುಪು, ಇತರರೊಂದಿಗಿನ ವ್ಯವಹಾರಗಳಲ್ಲಿ ಅತ್ಯಾವಶ್ಯಕವಾದ ಔಚಿತ್ಯಜ್ಞಾನ, ಸಹಾನುಭೂತಿ ಮತ್ತು ಕೋಮಲತೆಯ ಕೊರತೆಯಿರುವುದನ್ನು ಸಮರ್ಥಿಸುವುದಿಲ್ಲ. (1 ಕೊರಿಂ. 13:2, 3) [ವಾರದ ಬೈಬಲ್ ವಾಚನ; ಕಾ95 10/15 ಪು. 31 ಪ್ಯಾರ. 5 ನ್ನು ನೋಡಿರಿ.]
4. ಸ್ವರ್ಗೀಯ ಜೀವಿತಕ್ಕೆ ಆಗುವ ಪುನರುತ್ಥಾನವು, ಸಮಯದಲ್ಲಿ ಮತ್ತು ಶ್ರೇಣಿಯಲ್ಲಿ ಪ್ರಥಮವಾಗಿರುವುದರಿಂದ, ಅದನ್ನು “ಪ್ರಥಮ ಪುನರುತ್ಥಾನ”ವೆಂದು ಕರೆಯಲಾಗುತ್ತದೆ. (ಪ್ರಕ. 20:6) [ಕಾ96 10/15 ಪು. 6 ಪ್ಯಾರ. 5]
5. ಗಲಾತ್ಯ 5:26ರ ಪಾಠವು, ಸತ್ಕ್ರೈಸ್ತರಿಗಾಗಿ ಎಲ್ಲ ವಿಧದ ಸ್ಪರ್ಧಾತ್ಮಕ ಕ್ರೀಡೆಗಳನ್ನು ಮತ್ತು ಆಟಗಳನ್ನು ತಳ್ಳಿಹಾಕುತ್ತದೆ. [ವಾರದ ಬೈಬಲ್ ವಾಚನ; ಎ96 1/8 ಪು. 27 ಪ್ಯಾರ. 8 ನ್ನು ನೋಡಿರಿ.]
6. 2 ಕೊರಿಂಥ 10:4ರಲ್ಲಿ, “ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ” ಎಂದು ಪೌಲನು ಹೇಳಿದಾಗ, ಕ್ರೈಸ್ತರು ಸಭೆಯನ್ನು ಸುಳ್ಳು ಬೋಧನೆಗಳ ವಿರುದ್ಧ ಕಾಪಾಡಿಕೊಳ್ಳಲು, ಕಪಟೋಪಾಯ, ಶಬ್ದಾಡಂಬರದ ಭಾಷೆ, ಅಥವಾ ಪ್ರಾಪಂಚಿಕ ಆಯುಧಗಳಂತಹ ಲೋಕಸಂಬಂಧವಾದ ಆಯುಧಗಳನ್ನು ಆಶ್ರಯಿಸಬಾರದೆಂಬುದನ್ನು ಒತ್ತಿಹೇಳುತ್ತಿದ್ದನು. [ವಾರದ ಬೈಬಲ್ ವಾಚನ; rs ಪು. 271 ಪ್ಯಾರ. 3 ನ್ನು ನೋಡಿರಿ.]
7. ಫಿಲಿಪ್ಪಿಯವರಿಗೆ ಪೌಲನು ಬರೆದಂತಹ ಪತ್ರವು, ಅವನು ಫಿಲಿಪ್ಪಿಯಲ್ಲಿ ಸಭೆಯನ್ನು ಸ್ಥಾಪಿಸಿದ ಕೆಲವೇ ತಿಂಗಳುಗಳ ಬಳಿಕ ಬರೆಯಲ್ಪಟ್ಟಿತು, ಮತ್ತು ಇದು ಅವರ ನಡುವೆ ಎದ್ದಂತಹ ಗಂಭೀರವಾದ ಸಮಸ್ಯೆಗಳಿಂದಾಗಿ ಪ್ರಚೋದಿಸಲ್ಪಟ್ಟಿತು. [si ಪು. 224 ಪ್ಯಾರ. 3]
8. 1 ತಿಮೊಥೆಯ 3:16ರಲ್ಲಿ ತಿಳಿಸಲ್ಪಟ್ಟಿರುವಂತೆ, ಯೇಸುವಿನ ಪುನರುತ್ಥಾನವಾದಾಗ ಅವನಿಗೆ ಆತ್ಮ ಜೀವನವು ಬಹುಮಾನಿಸಲ್ಪಡುವ ಮೂಲಕ, ಅವನು “ಆತ್ಮದಲ್ಲಿ ನೀತಿವಂತನೆಂದು ಪ್ರಕಟಿಸಲ್ಪಟ್ಟನು.” ಇದು ಯೇಸು ಪೂರ್ತಿ ನೀತಿವಂತನೆಂದೂ ಇನ್ನೂ ಹೆಚ್ಚು ಮಹಿಮೆಯ ನೇಮಕಗಳಿಗೆ ಯೋಗ್ಯನೆಂದೂ ದೇವರು ಪ್ರಕಟಿಸಿದ ಅರ್ಥದಲ್ಲಿತ್ತು. [ವಾರದ ಬೈಬಲ್ ವಾಚನ; ಕಾ90 8/1 ಪು. 17 ಪ್ಯಾರ. 12 ನ್ನು ನೋಡಿರಿ.]
9. ಫಿಲಿಪ್ಪಿ 1:23ರಲ್ಲಿ ಸೂಚಿಸಲ್ಪಟ್ಟಿರುವ “ಬಿಡುಗಡೆ”ಯು, ಮರಣದ ತರುವಾಯ ಕೂಡಲೇ ಕ್ರಿಸ್ತನೊಂದಿಗೆ ಇರುವ ಪೌಲನ ಪ್ರತೀಕ್ಷೆಯಾಗಿದೆಯೆಂದು ವ್ಯಕ್ತವಾಗುತ್ತದೆ. [ವಾರದ ಬೈಬಲ್ ವಾಚನ; ಕಾ95 3/1 ಪು. 30 ಪ್ಯಾರ. 4 ನ್ನು ನೋಡಿರಿ.]
10. ಪೌಲನು 1 ತಿಮೊಥೆಯ ಪತ್ರವನ್ನು, ರೋಮ್ನಲ್ಲಿನ ಅವನ ಪ್ರಥಮ ಸೆರೆವಾಸದಿಂದ ಬಿಡುಗಡೆಯಾದ ನಂತರ ಮತ್ತು ಅಲ್ಲಿಯೇ ಅವನ ಕೊನೆಯ ಸೆರೆವಾಸವನ್ನು ಅನುಭವಿಸುವುದಕ್ಕೆ ಮೊದಲಿನ ಸಮಯಾವಧಿಯಲ್ಲಿ ಬರೆದನು. [si ಪು. 234 ಪ್ಯಾರ. 2]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಕೊರಿಂಥದಲ್ಲಿ ಕೆಲವರು, ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸಲು ಜೊತೆಗೂಡಿದಾಗ, ಯಾವ ವಿಧದಲ್ಲಿ ಕುರುಹುಗಳಲ್ಲಿ “ಅಯೋಗ್ಯವಾಗಿ” ಪಾಲು ತೆಗೆದುಕೊಳ್ಳುತ್ತಿದ್ದರು? (1 ಕೊರಿಂ. 11:27) [ವಾರದ ಬೈಬಲ್ ವಾಚನ; ಕಾ91 2/1 ಪು. 19 ಪ್ಯಾರ. 17 ನ್ನು ನೋಡಿರಿ.]
12. ಕೊರಿಂಥದವರಿಗೆ ತನ್ನ ಎರಡನೆಯ ಪತ್ರವನ್ನು ಬರೆಯುವಂತೆ ಪೌಲನನ್ನು ಪ್ರಚೋದಿಸುತ್ತಾ, ಯಾರ ಉಪಸ್ಥಿತಿಯು ಕೊರಿಂಥದ ಸಭೆಯ ಹಿತವನ್ನು ಅಪಾಯಕ್ಕೊಡ್ಡಿತ್ತು? [si ಪು. 214 ಪ್ಯಾರ. 2]
13. ತಾನು ಯಾವುದೇ ತಪ್ಪನ್ನು ಮಾಡಿಲ್ಲವೆಂಬ ಅನಿಸಿಕೆ ಒಬ್ಬ ಕ್ರೈಸ್ತನಿಗಾಗಬಹುದಾದರೂ, ಅವನು ತಪ್ಪೊಪ್ಪಿಕೊಳ್ಳಲು ಸಿದ್ಧನಿರಬೇಕು ಏಕೆ? [ಕಾ96 9/15 ಪು. 22 ಪ್ಯಾರಗಳು 4, 7]
14. ಎಫೆಸದವರಿಗೆ ಬರೆಯಲ್ಪಟ್ಟ ಪೌಲನ ಪತ್ರದಲ್ಲಿ, “ಪವಿತ್ರ ರಹಸ್ಯ”ದ (NW) ಯಾವ ಪ್ರಮುಖ ಅಂಶವನ್ನು ಸ್ಪಷ್ಟಪಡಿಸಲಾಗಿದೆ? (ಎಫೆ. 3:4-6) [si ಪು. 223 ಪ್ಯಾರ. 18]
15. ದೇವರ ವಾಕ್ಯದ ತನ್ನ ಬಳಕೆಯಲ್ಲಿ, ಪೌಲನು ಇಂದಿನ ಕ್ರೈಸ್ತ ಶುಶ್ರೂಷಕರಿಗೆ ಹೇಗೆ ಒಂದು ಅತ್ಯುತ್ಕೃಷ್ಟ ಮಾದರಿಯನ್ನು ಒದಗಿಸುತ್ತಾನೆ? [si ಪು. 217 ಪ್ಯಾರ. 19]
16. ಧರ್ಮಶಾಸ್ತ್ರವು, “ಉಲ್ಲಂಘನೆಗಳನ್ನು ಬಹಿರಂಗಪಡಿಸಲಿಕ್ಕಾಗಿ ಕೂಡಿಸಲ್ಪಟ್ಟಿತು” (NW) ಎಂದು ಪೌಲನು ಹೇಳಿದಾಗ, ಅವನೇನನ್ನು ಅರ್ಥೈಸಿದನು? (ಗಲಾ. 3:19) [ವಾರದ ಬೈಬಲ್ ವಾಚನ; uw ಪು. 147 ಪ್ಯಾರ. 3-4 ನ್ನು ನೋಡಿರಿ.]
17. ಫಿಲಿಪ್ಪಿ 1:3-7ರಲ್ಲಿ, ಯಾವ ಕಾರಣಗಳಿಗಾಗಿ ಪೌಲನು ಸಹೋದರರನ್ನು ಶ್ಲಾಘಿಸುತ್ತಾನೆ, ಮತ್ತು ಅವರ ಮಾದರಿಯಿಂದ ನಾವು ಹೇಗೆ ಪ್ರಯೋಜನ ಪಡೆಯಸಾಧ್ಯವಿದೆ? [si ಪು. 225 ಪ್ಯಾರ. 12]
18. ಕೊಲೊಸ್ಸೆ 4:6ರಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವನ್ನು ಎಲ್ಲ ಕ್ರೈಸ್ತ ಶುಶ್ರೂಷಕರು ಏಕೆ ಅನುಸರಿಸಬೇಕು? [si ಪು. 228 ಪ್ಯಾರ. 13]
19. ಸ್ತ್ರೀಯರು “ಮರ್ಯಾದೆಗೆ ತಕ್ಕ [“ಸಭ್ಯ,” NW] ಉಡುಪನ್ನುಟ್ಟು”ಳ್ಳುವುದನ್ನು ತಾನು ಅಪೇಕ್ಷಿಸುತ್ತೇನೆಂದು ಅಪೊಸ್ತಲ ಪೌಲನು ಹೇಳಿದಾಗ, ಅವನೇನನ್ನು ಅರ್ಥೈಸಿದನು? (1 ತಿಮೊ. 2:9) [ವಾರದ ಬೈಬಲ್ ವಾಚನ; g90 6/22 ಪು. 19 ಪ್ಯಾರ. 2 ನ್ನು ನೋಡಿರಿ.]
20. “ಪದಗಳ ಕುರಿತಾದ ವಾಗ್ವಾದ”ದ (NW) ವಿಷಯದಲ್ಲಿ 1 ತಿಮೊಥೆಯ 6:4ರಲ್ಲಿರುವ ಪೌಲನ ಎಚ್ಚರಿಕೆಯನ್ನು ಕ್ರೈಸ್ತರು ಏಕೆ ಪಾಲಿಸಬೇಕು? [si ಪು. 236 ಪ್ಯಾರ. 15]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ಎರಡನೆಯ ಕೊರಿಂಥದ ಪತ್ರವು _________________________ದಿಂದ ಬರೆಯಲ್ಪಟ್ಟಿತು ಮತ್ತು ಪ್ರಾಯಶಃ _________________________ ಅದನ್ನು ತಲಪಿಸಿದನು. [si ಪು. 214 ಪ್ಯಾರ. 2]
22. ಕೊರಿಂಥದವರಿಗೆ ಪೌಲನು ಬರೆದ ಪ್ರಥಮ ಪತ್ರವು ________________________ ಕುರಿತಾದ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವುದರಲ್ಲಿ ಅತಿ ಉಪಯುಕ್ತವಾಗಿದೆ, ಯಾಕಂದರೆ ಅದು ಆ ಶಾಸ್ತ್ರಗಳಿಂದ ಅನೇಕ ವಿಷಯಗಳನ್ನು ಉಲ್ಲೇಖಿಸುತ್ತದೆ. [si ಪು. 213 ಪ್ಯಾರ. 23]
23. ದೇವರಿಂದ ಬರುವ ಸಮರ್ಥನೆಯು, _________________________ದ ಕಾರ್ಯಗಳಿಂದಲ್ಲ, ಬದಲಾಗಿ ಕ್ರಿಸ್ತ ಯೇಸುವಿನಲ್ಲಿ ________________________ಯ ಮೂಲಕವೇ ಆಗುತ್ತದೆ ಮತ್ತು ಈ ಕಾರಣದಿಂದ ಕ್ರೈಸ್ತರಿಗೆ ________________________ ಅನಾವಶ್ಯಕವೆಂಬುದನ್ನು ಗಲಾತ್ಯದವರಿಗೆ ಬರೆದ ಪತ್ರದಲ್ಲಿ ಪೌಲನು ರುಜುಪಡಿಸುತ್ತಾನೆ. [si ಪು. 218 ಪ್ಯಾರ. 6]
24. ಥೆಸಲೊನೀಕದವರಿಗೆ ಬರೆದ ತನ್ನ ಪ್ರಥಮ ಪತ್ರದಲ್ಲಿ, ಪೌಲನು ನಾಲ್ಕು ಸಲ ಯೇಸು ಕ್ರಿಸ್ತನ _________________________ದ ಕುರಿತು ಉಲ್ಲೇಖಿಸುತ್ತಾನೆ, ಪ್ರಾಯಶಃ ಈ ಬೋಧನೆಯಲ್ಲಿ ಆ ಸಭೆಗಿದ್ದ ಆಸಕ್ತಿಯಿಂದಾಗಿರಬಹುದು. [si ಪು. 231 ಪ್ಯಾರ. 15]
25. ಥೆಸಲೊನೀಕದವರಿಗೆ ಬರೆಯಲ್ಪಟ್ಟ ಎರಡನೆಯ ಪತ್ರವು, _________________________ನೆಯ ಇಸವಿಯಲ್ಲಿ, ________________________ದಲ್ಲಿದ್ದಾಗ ________________________ನಿಂದ ಬರೆಯಲ್ಪಟ್ಟಿತು. [si ಪು. 232 ಪ್ಯಾರ. 4]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಶುಶ್ರೂಷೆಯ ಮೂಲಕ ತನ್ನ ಜೀವನಾವಶ್ಯಕತೆಗಳನ್ನು ಪಡೆದುಕೊಳ್ಳುವ ತನ್ನ ಹಕ್ಕಿನ ಕುರಿತು ಚರ್ಚಿಸುವಾಗ, ಪೌಲನು (ಟಾಲ್ಮುಡ್, ಮಿಷ್ನ; ಮೋಶೆಯ ಧರ್ಮಶಾಸ್ತ್ರ)ಕ್ಕೆ ಸೂಚಿಸುತ್ತಿದ್ದನು. ದುಡಿಯುತ್ತಿರುವ ಪ್ರಾಣಿಗಳ ಬಾಯಿ ಕಟ್ಟಬಾರದು ಮತ್ತು ದೇವಾಲಯದಲ್ಲಿ ಸೇವೆಯನ್ನು ಮಾಡುತ್ತಿದ್ದ (ಲೇವಿಯರು; ನೆತಿನಿಮರು; ಆರೋನನ ಯಾಜಕೀಯ ಕುಟುಂಬ) ವೇದಿಯಿಂದ ತಮ್ಮ ಭಾಗವನ್ನು ಪಡೆದುಕೊಂಡರೆಂಬುದನ್ನು ಅದು ಹೇಳುತ್ತದೆ. [si ಪು. 213 ಪ್ಯಾರ. 24]
27. ಪೌಲನು ಗಲಾತ್ಯದವರಿಗೆ ಬರೆದ ಪತ್ರವು, ಯೆಶಾಯ 54:1-6ರ ಅರ್ಥವಿವರಣೆಯನ್ನು ಕೊಡುತ್ತಾ, ಯೆಹೋವನ ಸ್ತ್ರೀಯನ್ನು (ಐಹಿಕ ಯೆರೂಸಲೇಮ್; ಮೇಲಣ ಯೆರೂಸಲೇಮ್; ಹೊಸ ಯೆರೂಸಲೇಮ್) ಎಂದು ಗುರುತಿಸುತ್ತದೆ. (ಗಲಾ. 4:21-26) [si ಪು. 219 ಪ್ಯಾರ. 16]
28. ಎಫೆಸ 1:10ರಲ್ಲಿ, “ಆಡಳಿತ”ವು (NW), (ಮೆಸ್ಸೀಯ ಸಂಬಂಧಿತ ರಾಜ್ಯ; ಆಡಳಿತ ಮಂಡಳಿ; ತನ್ನ ಮನೆವಾರ್ತೆಯ ವ್ಯವಹಾರಗಳನ್ನು ನಿರ್ವಹಿಸುವ ದೇವರ ವಿಧ)ವನ್ನು ಸೂಚಿಸುತ್ತದೆ. [si ಪು. 221 ಪ್ಯಾರ. 8]
29. 2 ಥೆಸಲೊನೀಕ 2:3ರಲ್ಲಿ ತಿಳಿಸಲ್ಪಟ್ಟಿರುವ “ಅಧರ್ಮಸ್ವರೂಪನು” (ಯೆಹೂದ್ಯಮತದವರು; ಕ್ರೈಸ್ತಪ್ರಪಂಚದ ವೈದಿಕ ವರ್ಗ; ಮಹಾ ಬಾಬೆಲ್) ಎಂದು ಗುರುತಿಸಸಾಧ್ಯವಿದೆ. [ವಾರದ ಬೈಬಲ್ ವಾಚನ; ಕಾ90 1/15 ಪು. 18 ಪ್ಯಾರ. 11 ನ್ನು ನೋಡಿರಿ.]
30. 1 ಕೊರಿಂಥ 12:31ರಲ್ಲಿ ತಿಳಿಸಲ್ಪಟ್ಟಿರುವ “ಉತ್ಕೃಷ್ಟ ಮಾರ್ಗ”ವು, (ಸತ್ಯದ; ಪ್ರೀತಿಯ; ಆತ್ಮಿಕ ವರಗಳಿಂದ ತುಂಬಿರುವ ಜೀವನದ) ಮಾರ್ಗಕ್ಕೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; ಕಾ92 7/15 ಪು. 28 ಪ್ಯಾರ. 1 ನ್ನು ನೋಡಿರಿ.]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
1 ಕೊರಿಂ. 10:11, 12; 2 ಕೊರಿಂ. 4:7; 2 ಕೊರಿಂ. 8:14; ಫಿಲಿ. 4:6, 7; 2 ಥೆಸ. 1:8, 9, 12
31. ಒಬ್ಬ ವ್ಯಕ್ತಿಯು ಕ್ರೈಸ್ತ ಶುಶ್ರೂಷೆಯನ್ನು ತನ್ನ ಜೀವಿತದಲ್ಲಿ ಪ್ರಥಮವಾಗಿಡುವಾಗ, ಅವನು ದೇವದತ್ತ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. [ವಾರದ ಬೈಬಲ್ ವಾಚನ; w90 3/1 ಪು. 29 ಪ್ಯಾರ. 5 ನ್ನು ನೋಡಿರಿ.]
32. ಮೋಶೆಯ ನಾಯಕತ್ವದ ಅಧೀನದಲ್ಲಿದ್ದ ಇಸ್ರಾಯೇಲ್ಯರ ಎಚ್ಚರಿಕೆಯ ಮಾದರಿಗೆ ನಾವು ಲಕ್ಷ್ಯಕೊಟ್ಟು, ಸ್ವಾವಲಂಬನೆಯನ್ನು ದೂರಮಾಡಬೇಕು. [si ಪು. 213 ಪ್ಯಾರ. 23]
33. ಅನುಕೂಲಸ್ಥರಾದ ಕ್ರೈಸ್ತರಿಂದ ಕೊಡಲ್ಪಡುವ ಉದಾರಭಾವದ ಕೊಡುಗೆಗಳು, ಕಡಿಮೆ ಅನುಕೂಲಸ್ಥ ದೇಶಗಳಲ್ಲಿರುವ ಜನರ ಅಗತ್ಯಗಳನ್ನು ಪರಿಹರಿಸಲು ಸಹಾಯಮಾಡಸಾಧ್ಯವಿದೆ. ಅದೇ ಸಮಯದಲ್ಲಿ, ಪೀಡಿತರ ಹುರುಪು ಮತ್ತು ತಾಳ್ಮೆಯು, ದಾನಮಾಡಿದವರಿಗೆ ಆನಂದ ಮತ್ತು ಪ್ರೋತ್ಸಾಹನೆಯ ಮೂಲವಾಗಿರಸಾಧ್ಯವಿದೆ. [ವಾರದ ಬೈಬಲ್ ವಾಚನ; ಕಾ93 12/15 ಪು. 21 ಪ್ಯಾರ. 20 ನ್ನು ನೋಡಿರಿ.]
34. ಸುವಾರ್ತೆಯನ್ನು ಸಾರುವುದರಲ್ಲಿ ನಾವು ತೀವ್ರತೆಯನ್ನು ಕಡಮೆಮಾಡಬಾರದು, ಯಾಕೆಂದರೆ ಬೈಬಲಿಗನುಸಾರ, ಈ ದುಷ್ಟ ವ್ಯವಸ್ಥೆಯ ಅಂತ್ಯದ ವರೆಗೆ ಜೀವಿಸುತ್ತಾ ಮುಂದುವರಿದು, ಸತ್ಯಾರಾಧನೆಯ ಶತ್ರುಗಳೆಂದು ತೀರ್ಪುಪಡೆಯುವ, ಇಂದು ಜೀವಿಸುತ್ತಿರುವ ಜನರೆಲ್ಲರೂ ನಿತ್ಯ ನಾಶನವನ್ನು ಅನುಭವಿಸುವರು. [ವಾರದ ಬೈಬಲ್ ವಾಚನ; w89 5/1 ಪು. 19 ಪ್ಯಾರ. 4 ನ್ನು ನೋಡಿರಿ.]
35. ತೀವ್ರವಾದ ಸಂಕಷ್ಟಕರ ಪರಿಸ್ಥಿತಿಗಳ ನಡುವೆ ಯೆಹೋವನು ನೆಮ್ಮದಿ ಮತ್ತು ಪ್ರಶಾಂತಭಾವವನ್ನು ಕೊಡುತ್ತಾನೆ. [ವಾರದ ಬೈಬಲ್ ವಾಚನ; w88 11/1 ಪು. 30 ಪ್ಯಾರಗಳು 19-20 ನ್ನು ನೋಡಿರಿ.]