ಪಯನೀಯರರು ಇತರರಿಗೆ ನೆರವು ನೀಡುತ್ತಾರೆ
1 ಯೇಸು ಹೇಳಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” ಪ್ರಥಮ ಶತಮಾನದ ಕೊಯ್ಲುಗಾರರ ಸಂಖ್ಯೆಯು ಕಡಿಮೆಯಾಗಿದ್ದುದರಿಂದ, ಮತ್ತು ಅವರಿಗೆ ಆವರಿಸಲು ತುಂಬ ಟೆರಿಟೊರಿಯಿದ್ದುದರಿಂದ, ಅವರು ಸಾಧ್ಯವಿರುವಷ್ಟು ಹೆಚ್ಚು ಜನರನ್ನು ತಲಪಲಿಕ್ಕಾಗಿ ಯೇಸು ಅವರನ್ನು ಒಬ್ಬೊಬ್ಬರಾಗಿ ಕಳುಹಿಸಬಹುದಿತ್ತು. ಅದಕ್ಕೆ ಬದಲಾಗಿ ಅವನು ಅವರನ್ನು “ಇಬ್ಬಿಬ್ಬರಾಗಿ” ಕಳುಹಿಸಿದನು. (ಲೂಕ 10:1, 2) ಇಬ್ಬಿಬ್ಬರಾಗಿ ಏಕೆ ಕಳುಹಿಸಿದನು?
2 ಆ ಶಿಷ್ಯರು ಹೊಸಬರೂ ಅನನುಭವಿಗಳೂ ಆಗಿದ್ದರು. ಜೊತೆಯಾಗಿ ಕೆಲಸಮಾಡುವ ಮೂಲಕ, ಅವರು ಒಬ್ಬರು ಇನ್ನೊಬ್ಬರಿಂದ ಕಲಿತುಕೊಳ್ಳಸಾಧ್ಯವಿತ್ತು ಮತ್ತು ಪರಸ್ಪರರನ್ನು ಉತ್ತೇಜಿಸಸಾಧ್ಯವಿತ್ತು. ಸೊಲೊಮೋನನು ಹೇಳಿದಂತೆ, “ಒಬ್ಬನಿಗಿಂತ ಇಬ್ಬರು ಲೇಸು.” (ಪ್ರಸಂ. 4:9, 10) ಸಾ.ಶ. 33ರ ಪಂಚಾಶತ್ತಮದಂದು, ಪವಿತ್ರಾತ್ಮವು ಸುರಿಸಲ್ಪಟ್ಟ ಬಳಿಕವೂ, ಪೌಲ, ಬಾರ್ನಬ ಮತ್ತು ಇತರರು ಶುಶ್ರೂಷೆಯಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ಜೊತೆಗೂಡಿ ಹೋಗುತ್ತಿದ್ದರು. (ಅ. ಕೃ. 15:35) ಇಂತಹ ಸಮರ್ಥ ಪುರುಷರಿಂದ ವೈಯಕ್ತಿಕವಾಗಿ ತರಬೇತಿಗೊಳಿಸಲ್ಪಡುವುದು, ಕೆಲವರಿಗೆ ಎಂತಹ ಒಂದು ಸುಯೋಗವಾಗಿದ್ದಿರಬೇಕು!
3 ಉತ್ತಮವಾದ ತರಬೇತಿ ಕಾರ್ಯಕ್ರಮ: ಆಧುನಿಕ ದಿನದ ಕ್ರೈಸ್ತ ಸಭೆಯು, ತನ್ನ ಪ್ರಥಮ ಶತಮಾನದ ಪಡಿರೂಪದಂತೆ, ಸಾರುವ ಕೆಲಸವನ್ನು ನಿರ್ವಹಿಸುವ ಒಂದು ಸಂಸ್ಥೆಯಾಗಿದೆ. ಅದು ನಮಗೆ ತರಬೇತಿಯನ್ನು ಸಹ ನೀಡುತ್ತದೆ. ಸುವಾರ್ತೆಯನ್ನು ಸಾಧ್ಯವಿರುವಷ್ಟು ಪರಿಣಾಮಕಾರಿಯಾಗಿ ಸಾದರಪಡಿಸುವುದು, ವ್ಯಕ್ತಿಗತವಾಗಿ ನಮ್ಮ ಹೃತ್ಪೂರ್ವಕ ಬಯಕೆಯಾಗಿರಬೇಕು. ಹೆಚ್ಚೆಚ್ಚು ಪ್ರಚಾರಕರು ತಮ್ಮ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಲು ಶಕ್ತರಾಗುವಂತೆ, ನೆರವು ಲಭ್ಯವಿದೆ.
4 ಇತ್ತೀಚೆಗೆ ನಡೆಸಲ್ಪಟ್ಟ ರಾಜ್ಯ ಶುಶ್ರೂಷಾ ಶಾಲೆಯಲ್ಲಿ, ಕ್ಷೇತ್ರ ಸೇವೆಯಲ್ಲಿ ಪಯನೀಯರರು ಇತರರಿಗೆ ಸಹಾಯಮಾಡಲಿಕ್ಕಾಗಿರುವ ಒಂದು ಕಾರ್ಯಕ್ರಮವನ್ನು ಸೊಸೈಟಿಯು ಪ್ರಕಟಿಸಿತು. ಇದರ ಅಗತ್ಯವಿದೆಯೊ? ಹೌದು, ಇದೆ. ಕಳೆದ ಮೂರು ವರ್ಷಗಳಲ್ಲಿ, ಒಂದು ಮಿಲಿಯಕ್ಕಿಂತಲೂ ಹೆಚ್ಚು ಪ್ರಚಾರಕರು ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾರೆ, ಮತ್ತು ಇವರಲ್ಲಿ ಹೆಚ್ಚಿನವರಿಗೆ ಸಾರುವ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗಲು ತರಬೇತಿಯ ಅಗತ್ಯವಿದೆ. ಆ ಅಗತ್ಯವನ್ನು ಪೂರೈಸಲು ಯಾರನ್ನು ಉಪಯೋಗಿಸಸಾಧ್ಯವಿದೆ?
5 ಪೂರ್ಣ ಸಮಯದ ಪಯನೀಯರರು ಸಹಾಯಮಾಡಬಲ್ಲರು. ಯೆಹೋವನ ಸಂಸ್ಥೆಯು ಅವರಿಗೆ ಬಹಳಷ್ಟು ಸಲಹೆ ಮತ್ತು ತರಬೇತಿಯನ್ನು ಒದಗಿಸುತ್ತದೆ. ಪಯನೀಯರರು, ಎರಡು ವಾರಗಳ ಪಯನೀಯರ್ ಸೇವಾ ಶಾಲೆಯಲ್ಲಿ ತಮ್ಮ ಅಗತ್ಯಗಳಿಗೆ ತಕ್ಕಂತೆ ಹೊಂದಿಸಲ್ಪಟ್ಟಿರುವ ಉಪದೇಶವನ್ನು ಪಡೆದುಕೊಳ್ಳುತ್ತಾರೆ. ಅವರು ಸರ್ಕಿಟ್ ಮತ್ತು ಜಿಲ್ಲಾ ಮೇಲ್ವಿಚಾರಕರೊಂದಿಗಿನ ಕೂಟಗಳಿಂದ ಹಾಗೂ ಹಿರಿಯರು ಕೊಡುವಂತಹ ಮಾರ್ಗದರ್ಶನದಿಂದಲೂ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಎಲ್ಲ ಪಯನೀಯರರು ಪೌಲ ಮತ್ತು ಬಾರ್ನಬರಷ್ಟು ಅನುಭವಿಗಳಾಗಿರದಿದ್ದರೂ, ಅವರು ಹಂಚಿಕೊಳ್ಳಲು ಸಂತೋಷಪಡುವ ಅಮೂಲ್ಯವಾದ ತರಬೇತಿಯನ್ನು ಪಡೆದಿರುತ್ತಾರೆ.
6 ಯಾರು ಪ್ರಯೋಜನಪಡೆದುಕೊಳ್ಳುವರು? ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆಯು, ಹೊಸ ಪ್ರಚಾರಕರು ಅಥವಾ ಹೊಸತಾಗಿ ದೀಕ್ಷಾಸ್ನಾನ ಪಡೆದುಕೊಂಡವರಿಗೆ ಮಾತ್ರ ಸೀಮಿತವಾಗಿದೆಯೊ? ಖಂಡಿತವಾಗಿಯೂ ಇಲ್ಲ! ಅನೇಕ ವರ್ಷಗಳಿಂದ ಸತ್ಯವನ್ನು ತಿಳಿದುಕೊಂಡಿರುವುದಾದರೂ ಶುಶ್ರೂಷೆಯ ನಿರ್ದಿಷ್ಟ ವೈಶಿಷ್ಟ್ಯಗಳಲ್ಲಿ ಸಹಾಯವನ್ನು ಪಡೆಯಲು ಇಚ್ಛಿಸುವ ಯುವಜನರು ಮತ್ತು ವೃದ್ಧರು ಇದ್ದಾರೆ. ಕೆಲವರಿಗೆ ಸಾಹಿತ್ಯವನ್ನು ನೀಡುವುದು ತುಂಬ ಸುಲಭವಾಗಿರುವುದಾದರೂ, ಪುನರ್ಭೇಟಿಗಳನ್ನು ಮಾಡುವುದು ಅಥವಾ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು ಕಷ್ಟಕರವಾಗಿರುತ್ತದೆ. ಇತರರು ಬೈಬಲ್ ಅಭ್ಯಾಸಗಳನ್ನು ಸುಲಭವಾಗಿ ಆರಂಭಿಸಬಹುದಾದರೂ, ತಮ್ಮ ವಿದ್ಯಾರ್ಥಿಗಳು ಪ್ರಗತಿ ಮಾಡದಿರುವುದನ್ನು ಗಮನಿಸುತ್ತಾರೆ. ಆ ವಿದ್ಯಾರ್ಥಿಗಳನ್ನು ಯಾವುದು ತಡೆದುಹಿಡಿಯುತ್ತದೆ? ಅನುಭವಸ್ಥ ಪಯನೀಯರರು ಈ ಕ್ಷೇತ್ರಗಳಲ್ಲಿ ಸಹಾಯನೀಡುವಂತೆ ವಿನಂತಿಸಲ್ಪಡಬಹುದು. ಕೆಲವು ಪಯನೀಯರರು ಆಸಕ್ತಿಯನ್ನು ವಿಕಸಿಸುವುದರಲ್ಲಿ, ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ, ಮತ್ತು ಹೊಸ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಡೆಗೆ ನಿರ್ದೇಶಿಸುವುದರಲ್ಲಿ ಪರಿಣಾಮಕಾರಿಯಾಗಿದ್ದಾರೆ. ಅವರ ಅನುಭವವು ಈ ಹೊಸ ಕಾರ್ಯಕ್ರಮದಲ್ಲಿ ಸಹಾಯಕಾರಿಯಾಗಿರುವುದು.
7 ಕ್ಷೇತ್ರ ಸೇವೆಗಾಗಿ ಸಭೆಯು ಏರ್ಪಡಿಸುವ ಕ್ರಮವಾದ ಕೂಟಗಳನ್ನು, ನೀವು ಬಯಸುವಷ್ಟು ಬೆಂಬಲಿಸುವಂತೆ ನಿಮ್ಮ ಕಾಲತಖ್ತೆಯು ಅನುಮತಿಸದಿರುವುದನ್ನು ನೀವು ಕಂಡುಕೊಳ್ಳುತ್ತೀರೊ? ಇತರ ಪ್ರಚಾರಕರು ನಿಮ್ಮನ್ನು ಜೊತೆಗೂಡಲು ಸಾಧ್ಯವಿಲ್ಲದಿರುವಾಗ, ಒಬ್ಬ ಪಯನೀಯರನು ನಿಮ್ಮೊಂದಿಗೆ ಆಗಾಗ ಕೆಲಸಮಾಡಲು ಶಕ್ತನಾಗಿರಬಹುದು.
8 ಉತ್ತಮ ಸಹಕಾರವು ಅಗತ್ಯ: ಪಯನೀಯರರು ಇತರರಿಗೆ ನೆರವು ನೀಡುತ್ತಾರೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವೈಯಕ್ತಿಕ ನೆರವನ್ನು ಪಡೆದುಕೊಳ್ಳಲು ಬಯಸುವ ಪ್ರಚಾರಕರಿಗಾಗಿ ಹಿರಿಯರು ವರ್ಷದಲ್ಲಿ ಎರಡು ಬಾರಿ ಏರ್ಪಾಡುಗಳನ್ನು ಮಾಡುವರು. ನೀವು ಅಂತಹ ನೆರವನ್ನು ಪಡೆದುಕೊಳ್ಳಲು ಒಪ್ಪಿಕೊಳ್ಳುವಲ್ಲಿ, ನಿಮಗೆ ಸಹಾಯಮಾಡಲು ನೇಮಿಸಲ್ಪಟ್ಟಿರುವ ಪಯನೀಯರ್ ಪ್ರಚಾರಕರೊಂದಿಗೆ ಜೊತೆಗೂಡಿ, ಸೇವೆಗಾಗಿ ಒಂದು ವ್ಯಾವಹಾರಿಕ ಕಾಲತಖ್ತೆಯನ್ನು ತಯಾರಿಸಿ, ಅದಕ್ಕೆ ಅಂಟಿಕೊಳ್ಳಿರಿ. ನೀವು ಜೊತೆಯಾಗಿ ಕೆಲಸಮಾಡಲು ಗೊತ್ತುಮಾಡಿರುವ ದಿನ ಮತ್ತು ಸಮಯಕ್ಕನುಸಾರವಾಗಿ ನಡೆಯಿರಿ. ನೀವು ಜೊತೆಯಾಗಿ ಕೆಲಸಮಾಡಿದಂತೆ, ಸುವಾರ್ತೆಯನ್ನು ಸಾದರಪಡಿಸುವ ಪರಿಣಾಮಕಾರಿ ವಿಧಗಳನ್ನು ಗಮನಿಸಿರಿ. ಕೆಲವೊಂದು ಪ್ರಸ್ತಾವನೆಗಳು ಏಕೆ ಪರಿಣಾಮಕಾರಿಯಾಗಿವೆ ಎಂಬುದನ್ನು ವಿಶ್ಲೇಷಿಸಿರಿ. ನಿಮ್ಮ ನಿರೂಪಣೆಯನ್ನು ಉತ್ತಮಗೊಳಿಸಲಿಕ್ಕಾಗಿ ಆ ಪಯನೀಯರ್ ಪ್ರಚಾರಕನು ನಿಮಗೆ ನೀಡಬಹುದಾದ ಸಲಹೆಗಳನ್ನು ಪರಿಗಣಿಸಿರಿ. ಕಲಿತುಕೊಳ್ಳುವ ವಿಷಯಗಳನ್ನು ನೀವು ಅನ್ವಯಿಸಿಕೊಂಡಂತೆ, ಶುಶ್ರೂಷೆಯಲ್ಲಿನ ನಿಮ್ಮ ಪ್ರಗತಿಯು ನಿಮಗೂ ಇತರರಿಗೂ ಸುಸ್ಪಷ್ಟವಾಗಿ ತೋರಿಬರುವುದು. (1 ತಿಮೊಥೆಯ 4:15ನ್ನು ನೋಡಿರಿ.) ಸಾಧ್ಯವಿರುವಷ್ಟು ಹೆಚ್ಚಾಗಿ ಜೊತೆಯಾಗಿ ಕೆಲಸಮಾಡಿರಿ. ಅನೌಪಚಾರಿಕ ಸಾಕ್ಷಿಕಾರ್ಯವನ್ನು ಸೇರಿಸಿ, ಶುಶ್ರೂಷೆಯ ಎಲ್ಲ ವೈಶಿಷ್ಟ್ಯಗಳಲ್ಲಿ ಪಾಲ್ಗೊಳ್ಳಿರಿ. ಆದರೆ ನಿಮಗೆ ವೈಯಕ್ತಿಕ ನೆರವು ಅಗತ್ಯವಿರುವ ನಿರ್ದಿಷ್ಟ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ.
9 ಸೇವಾ ಮೇಲ್ವಿಚಾರಕನು ಮಾಡಲ್ಪಡುವಂತಹ ಪ್ರಗತಿಯ ಕುರಿತು ಆಸಕ್ತನಾಗಿರುವನು. ನೀವು ಕಾರ್ಯಕ್ರಮದಿಂದ ಹೇಗೆ ಪ್ರಯೋಜನ ಪಡೆದುಕೊಳ್ಳುತ್ತಿದ್ದೀರಿ ಎಂಬುದನ್ನು ನೋಡಲು, ಅವನು ಸಭಾ ಪುಸ್ತಕ ಅಭ್ಯಾಸ ಚಾಲಕನೊಂದಿಗೆ ಆಗಾಗ ಪರಿಶೀಲಿಸುವನು. ಸಭೆಯನ್ನು ಸಂದರ್ಶಿಸುವಾಗ ಸರ್ಕಿಟ್ ಮೇಲ್ವಿಚಾರಕನು ಸಹ ತದ್ರೀತಿಯಲ್ಲಿ ನಿಮಗೆ ಸಹಾಯಮಾಡುವನು.
10 ತನ್ನ ಜನರು ತರಬೇತಿಗೊಳಿಸಲ್ಪಟ್ಟು, “ಸಕಲಸತ್ಕಾರ್ಯಕ್ಕೆ ಸನ್ನದ್ಧ”ರಾಗಬೇಕೆಂದು ಯೆಹೋವನು ಬಯಸುತ್ತಾನೆ. (2 ತಿಮೊ. 3:17) ಪಯನೀಯರರು ಇತರರಿಗೆ ನೆರವು ನೀಡುತ್ತಾರೆ ಎಂಬ ಏರ್ಪಾಡನ್ನು, ವಾಕ್ಯವನ್ನು ಸಾರುವ ಸಾಮರ್ಥ್ಯವನ್ನು ಉತ್ತಮಗೊಳಿಸುವ ಅಪೇಕ್ಷೆಯುಳ್ಳವರಿಗೆ ಸಹಾಯಮಾಡಲಿಕ್ಕಾಗಿರುವ ಒಂದು ಉತ್ತಮ ಒದಗಿಸುವಿಕೆಯಾಗಿ ವೀಕ್ಷಿಸಿರಿ. ಅದರಲ್ಲಿ ಪಾಲ್ಗೊಳ್ಳುವ ಸುಯೋಗವು ನಿಮಗಿರುವಲ್ಲಿ, ಅದನ್ನು ಕೃತಜ್ಞತಾಭಾವ, ನಮ್ರತೆ ಹಾಗೂ ಆನಂದದಿಂದ ಮಾಡಿರಿ.