ಸೆಪ್ಟೆಂಬರ್ಗಾಗಿ ಸೇವಾ ಕೂಟಗಳು
ಸೆಪ್ಟೆಂಬರ್ 7ರಿಂದ ಆರಂಭವಾಗುವ ವಾರ
ಸಂಗೀತ 28 (20)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. “ಒಂದು ಸಲಹೆ” ಎಂಬ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.
15 ನಿ: “ನಾವು ಮಹತ್ತಾದ ಕ್ರಿಯೆಗಳನ್ನು ಮಾಡಬಲ್ಲೆವು.” ಪ್ರಶ್ನೋತ್ತರಗಳು. ಹೊಸ ಸೇವಾ ವರ್ಷಕ್ಕಾಗಿ ಸಮಂಜಸವಾದ ಗುರಿಗಳನ್ನು ಇಡಲು ಮತ್ತು ಅವುಗಳನ್ನು ತಲಪಲು ಶ್ರಮಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.—ನಮ್ಮ ಶುಶ್ರೂಷೆ, 116-18ನೆಯ ಪುಟಗಳನ್ನು ನೋಡಿರಿ.
20 ನಿ: “ಪಯನೀಯರರು ಇತರರಿಗೆ ನೆರವು ನೀಡುತ್ತಾರೆ.” ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಒದಗಿಸಲ್ಪಡುವ ತರಬೇತಿಗೆ ಕೂಡಿಸಿ, ಪಯನೀಯರರು ಶುಶ್ರೂಷೆಯಲ್ಲಿ ಇತರರಿಗೆ ವೈಯಕ್ತಿಕವಾಗಿ ಸಹಾಯಮಾಡಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟಿವೆ ಎಂದು ಒಬ್ಬ ಹಿರಿಯನು ವಿವರಿಸುತ್ತಾನೆ. ಲೇಖನದ ಮೇಲೆ ಆಧರಿಸಲ್ಪಟ್ಟ ಪ್ರಶ್ನೆಗಳನ್ನು ಎಬ್ಬಿಸಿ, ಸಭಿಕರಿಂದ, ವಿಶೇಷವಾಗಿ ಆ ಕಾರ್ಯಕ್ರಮದಲ್ಲಿ ಒಳಗೂಡಿರುವ ಪಯನೀಯರರು ಮತ್ತು ಪ್ರಚಾರಕರಿಂದ ಉತ್ತರಗಳನ್ನು ಆಮಂತ್ರಿಸುತ್ತಾನೆ. ಅದರಿಂದ ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆದುಕೊಳ್ಳುವ ವಿಧವನ್ನು ಪರಿಗಣಿಸಿರಿ. ಇತರರಿಗೆ ನೆರವನ್ನು ನೀಡುವುದರಲ್ಲಿ ಪಾಲ್ಗೊಳ್ಳುವ ಮೂಲಕ, ತಾವು ಆನಂದಿಸಿರುವ ಮತ್ತು ಪ್ರಯೋಜನವನ್ನು ಪಡೆದಿರುವ ವಿಧವನ್ನು ಪಯನೀಯರರು ತಿಳಿಸಬಹುದು. ಸಹಾಯವನ್ನು ಪಡೆದುಕೊಂಡಿರುವ ಪ್ರಚಾರಕರು, ಈ ಪ್ರೀತಿಪರ ಒದಗಿಸುವಿಕೆಯನ್ನು ತಾವು ಎಷ್ಟು ಗಣ್ಯಮಾಡುತ್ತೇವೆ ಮತ್ತು ತಮಗೆ ಶುಶ್ರೂಷೆಯಲ್ಲಿ ಹೆಚ್ಚು ಯಶಸ್ಸು ಮತ್ತು ಆನಂದವನ್ನು ಪಡೆದುಕೊಳ್ಳಲು ಸಹಾಯಮಾಡಿರುವ ವಿಷಯಗಳ ಕುರಿತು ತಿಳಿಸಬಹುದು.
ಸಂಗೀತ 172 (4) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 14ರಿಂದ ಆರಂಭವಾಗುವ ವಾರ
ಸಂಗೀತ 160 (6)
5 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
10 ನಿ: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಒಂದು ಭಾಷಣ. ಮುಂದಿನ ವಾರ ಪುಸ್ತಕ ಅಭ್ಯಾಸದಲ್ಲಿ ನಾವು ಈ ಬ್ರೋಷರನ್ನು ಅಭ್ಯಾಸಿಸಲು ಆರಂಭಿಸುವೆವು. ಬ್ರೋಷರಿನೊಂದಿಗೆ ಪರಿಚಿತರಾಗಲು ಮತ್ತು ಅದನ್ನು ಇತರರೊಂದಿಗೆ ಅಭ್ಯಾಸಿಸುವ ವಿಧವನ್ನು ಕಲಿತುಕೊಳ್ಳಲು, ಮುಂಚಿತವಾಗಿ ತಯಾರಿಸಿ, ಪ್ರತಿಯೊಂದು ಅಭ್ಯಾಸಕ್ಕೆ ಹಾಜರಾಗಲು ಎಲ್ಲರನ್ನು ಉತ್ತೇಜಿಸಿರಿ. “ಈ ಬ್ರೋಷರನ್ನು ಉಪಯೋಗಿಸುವ ವಿಧ” ಎಂಬ ಬರಹದ ಕೆಳಗೆ ಇರುವ ಪ್ಯಾರಗ್ರಾಫನ್ನು ಓದಿರಿ. ಬ್ರೋಷರಿನಲ್ಲಿರುವ ಪ್ರಶ್ನೆಗಳು, ವಚನಗಳು ಮತ್ತು ಚಿತ್ರಗಳನ್ನು ಉಪಯೋಗಿಸುತ್ತಾ ಕಲಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಲು, 1997, ಜನವರಿ 15ರ ಕಾವಲಿನಬುರುಜು ಪತ್ರಿಕೆಯ, 16-17ನೆಯ ಪುಟಗಳಲ್ಲಿರುವ ವಿಷಯವನ್ನು ಉಪಯೋಗಿಸಿರಿ. ಪುಸ್ತಕ ಅಭ್ಯಾಸ ಚಾಲಕರು ಅತಿಯಾಗಿ ಮಾತಾಡದೆ ಮತ್ತು ಹೆಚ್ಚಿನ ವಿವರಗಳನ್ನು ಸೇರಿಸದೆ ಇರುವ ಮೂಲಕ, ಮನೆ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿರುವವರಿಗೆ ಒಂದು ಒಳ್ಳೆಯ ಮಾದರಿಯನ್ನು ಇಡಬೇಕು.—ನಮ್ಮ ರಾಜ್ಯದ ಸೇವೆ, ಜೂನ್ 1996, ಪುಟ 3, ಪ್ಯಾರಗ್ರಾಫ್ 5ನ್ನು ನೋಡಿರಿ.
10 ನಿ: ಕಳೆದ ವರ್ಷ ನಾವು ಎಷ್ಟು ಕೆಲಸವನ್ನು ಮಾಡಿದೆವು? ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕರು, ಕಳೆದ ವರ್ಷದ ಸಭಾ ಸೇವಾ ವರದಿ ಮತ್ತು ಸಭಾ ಹಾಜರಿಯ ಸಂಖ್ಯೆಗಳನ್ನು ಪುನರ್ವಿಮರ್ಶಿಸುತ್ತಾರೆ. ವರದಿಯ ಸಕಾರಾತ್ಮಕ ಅಂಶಗಳನ್ನು ಅವರು ತಿಳಿಸುತ್ತಾರೆ ಮತ್ತು ಸುಧಾರಣೆಯನ್ನು ಮಾಡಸಾಧ್ಯವಿರುವ ಕ್ಷೇತ್ರಗಳ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತಾರೆ. ಆಗಸ್ಟ್ ತಿಂಗಳಿನಲ್ಲಿ 100 ಪ್ರತಿಶತದಷ್ಟು ಪಾಲ್ಗೊಳ್ಳುವಿಕೆ ಇತ್ತೊ? ಎಲ್ಲರೂ ಕ್ರಮದ ಪ್ರಚಾರಕರಾಗುವಂತೆ ಸಹಾಯಮಾಡುವುದನ್ನು ಸೇರಿಸಿ, ಬರಲಿರುವ ತಿಂಗಳುಗಳಲ್ಲಿ ಹಿರಿಯರು ಯಾವ ಗುರಿಗಳ ಮೇಲೆ ಕೇಂದ್ರೀಕರಿಸುವರೆಂಬುದನ್ನು ತಿಳಿಸಿರಿ. ಸರ್ಕಿಟ್ ಮೇಲ್ವಿಚಾರಕರಿಂದ ಬಂದಿರುವ ಹಿಂದಿನ ವರದಿಯಿಂದ ಸೂಕ್ತವಾದ ಅಂಶಗಳನ್ನು ಹಂಚಿಕೊಳ್ಳಿರಿ.
20 ನಿ: “1998 ‘ದೇವರ ಜೀವನ ಮಾರ್ಗ’ ಜಿಲ್ಲಾ ಅಧಿವೇಶನಗಳು.” (ಪ್ಯಾರಗ್ರಾಫ್ಗಳು 1-16) ಪ್ರಶ್ನೋತ್ತರಗಳು. 10 ಮತ್ತು 11ನೆಯ ಪ್ಯಾರಗ್ರಾಫ್ಗಳನ್ನು ಓದಿರಿ. ನಮ್ಮ ಸಭ್ಯ ಕ್ರೈಸ್ತ ತೋರಿಕೆಯನ್ನು ಮತ್ತು ನಡತೆಯನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವ ಹಾಗೂ ನಮ್ಮ ಮಕ್ಕಳ ಮೇಲೆ ನಿಗಾವಹಿಸುವ ಶಾಸ್ತ್ರೀಯ ಮಹತ್ವವನ್ನು ಒತ್ತಿಹೇಳಿರಿ.
ಸಂಗೀತ 144 (4) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 21ರಿಂದ ಆರಂಭವಾಗುವ ವಾರ
ಸಂಗೀತ 122 (23)
5 ನಿ: ಸ್ಥಳಿಕ ತಿಳಿಸುವಿಕೆಗಳು.
20 ನಿ: “ನಿಮ್ಮ ಸಹೋದರರ ಪರಿಚಯಮಾಡಿಕೊಳ್ಳಿರಿ.” ಪ್ರಶ್ನೋತ್ತರಗಳು. 1988ರ ಅಕ್ಟೋಬರ್ 1ರ ವಾಚ್ಟವರ್ ಪತ್ರಿಕೆಯ, 10-11ನೆಯ ಪುಟಗಳಲ್ಲಿರುವ ವಿಷಯದ ಮೇಲೆ ಹೇಳಿಕೆಗಳನ್ನು ಸೇರಿಸಿರಿ. ಪರಸ್ಪರರೊಂದಿಗೆ ಹೆಚ್ಚು ಪರಿಚಿತರಾಗಲಿಕ್ಕಾಗಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಎಲ್ಲರನ್ನು ಉತ್ತೇಜಿಸಿರಿ.
20 ನಿ: “1998 ‘ದೇವರ ಜೀವನ ಮಾರ್ಗ’ ಜಿಲ್ಲಾ ಅಧಿವೇಶನಗಳು.” (ಪ್ಯಾರಗ್ರಾಫ್ಗಳು 17-22) ಪ್ರಶ್ನೋತ್ತರಗಳು. 17ನೆಯ ಪ್ಯಾರಗ್ರಾಫನ್ನು ಮತ್ತು ಉಲ್ಲೇಖಿತ ವಚನವನ್ನು ಓದಿರಿ. ಸುವ್ಯವಸ್ಥೆ ಮತ್ತು ಇತರರಿಗಾಗಿ ಪರಿಗಣನೆಯನ್ನು ತೋರಿಸುವ—ವಿಶೇಷವಾಗಿ ಆಸನವ್ಯವಸ್ಥೆಯ ಸಂಬಂಧದಲ್ಲಿ—ಅಗತ್ಯವನ್ನು ಒತ್ತಿಹೇಳಿರಿ. “ಅಧಿವೇಶನ ಮರುಜ್ಞಾಪನಗಳು” ಎಂಬ ರೇಖಾಚೌಕವನ್ನು ಪುನರ್ವಿಮರ್ಶಿಸುತ್ತಾ, ಒಂದು ಸಂಕ್ಷಿಪ್ತ ಭಾಷಣದೊಂದಿಗೆ ಸಮಾಪ್ತಿಗೊಳಿಸಿರಿ.
ಸಂಗೀತ 34 (9) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 28ರಿಂದ ಆರಂಭವಾಗುವ ವಾರ
ಸಂಗೀತ 17 (7)
12 ನಿ: ಸ್ಥಳಿಕ ತಿಳಿಸುವಿಕೆಗಳು. ಸೆಪ್ಟೆಂಬರ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಸಲ್ಲಿಸುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಪತ್ರಿಕೆಯ ವಿತರಣೆಯನ್ನು ಹೆಚ್ಚಿಸಲಿಕ್ಕಾಗಿ, ಎಲ್ಲರೂ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಮನೆಯಿಂದ ಮನೆಯ ಕೆಲಸವನ್ನು ಮಾಡಲಿಕ್ಕಾಗಿ ಯೋಜನೆಗಳನ್ನು ಮಾಡುವಂತೆ ಎಲ್ಲರನ್ನೂ ಉತ್ತೇಜಿಸಿರಿ. ನಿರೂಪಣೆಗಳನ್ನು ತಯಾರಿಸುವ ವಿಧದ ಕುರಿತು ಸಲಹೆಗಳಿಗಾಗಿ, ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟಕ್ಕೆ ಸೂಚಿಸಿರಿ. ಸದ್ಯದ ಪತ್ರಿಕೆಗಳ ನೀಡುವಿಕೆಯನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ: “ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು—ಸೇವಾ ಮೇಲ್ವಿಚಾರಕ.” ಸೇವಾ ಮೇಲ್ವಿಚಾರಕನಿಂದ ಒಂದು ಭಾಷಣ. ತನ್ನ ಕರ್ತವ್ಯಗಳನ್ನು ಪುನರ್ವಿಮರ್ಶಿಸಿದ ನಂತರ, ಸ್ಥಳಿಕವಾಗಿ ಶುಶ್ರೂಷೆಯ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲಿಕ್ಕಾಗಿ ಸಭೆಯು ಸಹಕರಿಸಸಾಧ್ಯವಿರುವ ನಿರ್ದಿಷ್ಟ ಮಾರ್ಗಗಳನ್ನು ಅವನು ವಿವರಿಸುತ್ತಾನೆ.
13 ನಿ: ಒಬ್ಬ ಒಳ್ಳೆಯ ಸಭಾ ಪ್ರಚಾರಕನಾಗಿರಲು ಏನು ಆವಶ್ಯಕ? ಸಭಿಕರ ಒಂದಿಷ್ಟು ಭಾಗವಹಿಸುವಿಕೆಯೊಂದಿಗೆ ಭಾಷಣ. ಶ್ರೇಷ್ಠಮಟ್ಟದ ಸಾಮರ್ಥ್ಯಗಳು ಅಥವಾ ವಿಶೇಷಶಕ್ತಿಗಳಿರುವ ಅಗತ್ಯವಿಲ್ಲ. ಬದಲಾಗಿ ಪ್ರೀತಿ, ನಮ್ರತೆ, ಹುರುಪು ಮತ್ತು ಗಣ್ಯತೆಯನ್ನು ಪ್ರತಿಬಿಂಬಿಸುವ ಒಂದು ಸಿದ್ಧಮನಸ್ಸಿನ ಮನೋಭಾವವು ನಮಗೆಲ್ಲರಿಗೂ ಇರುವುದು ಹೆಚ್ಚು ಅಪೇಕ್ಷಣೀಯವಾಗಿದೆ. ಈ ಮುಂದಿನ ವಿಷಯಗಳು ಏಕೆ ಅಪೇಕ್ಷಣೀಯವಾಗಿವೆ ಎಂಬ ಕಾರಣಗಳನ್ನು ಕೊಡುವಂತೆ ಸಭಿಕರನ್ನು ಆಮಂತ್ರಿಸಿರಿ: (1) ಒಂದು ಹರ್ಷಚಿತ್ತ ಆತ್ಮ, (2) ಕೂಟಗಳಿಗೆ ಕ್ರಮವಾದ ಹಾಜರಿ ಮತ್ತು ಭಾಗವಹಿಸುವಿಕೆ, (3) ನೇಮಕಗಳನ್ನು ಸ್ವೀಕರಿಸಲು ಮತ್ತು ಪೂರೈಸಲು ಸಿದ್ಧಮನಸ್ಸು, (4) ಹಿರಿಯರೊಂದಿಗೆ ಮತ್ತು ಸಭೆಗಾಗಿ ಮಾಡಲ್ಪಟ್ಟಿರುವ ಏರ್ಪಾಡುಗಳಿಗೆ ಸಹಕಾರ, (5) ಇತರರಿಗೆ ನೆರವನ್ನು ನೀಡುವುದರಲ್ಲಿ ಪ್ರಾಮಾಣಿಕವಾದ ಆಸಕ್ತಿ, ಮತ್ತು (6) ಕ್ಷೇತ್ರ ಸೇವೆಯಲ್ಲಿ ಕ್ರಮವಾದ ಭಾಗವಹಿಸುವಿಕೆ ಮತ್ತು ಪ್ರತಿ ತಿಂಗಳು ತಡವಿಲ್ಲದೆ ಅದನ್ನು ವರದಿಮಾಡುವುದು.
ಸಂಗೀತ 25 (2) ಮತ್ತು ಸಮಾಪ್ತಿಯ ಪ್ರಾರ್ಥನೆ.