ಪ್ರಕಟನೆಗಳು
◼ ಸೆಪ್ಟೆಂಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ನಿತ್ಯಜೀವಕ್ಕೆ ನಡಿಸುವ ಜ್ಞಾನ. ಪರ್ಯಾಯ ನೀಡಿಕೆಯಾಗಿ, ಸೃಷ್ಟಿ (ಇಂಗ್ಲಿಷ್) ಪುಸ್ತಕ ಇಲ್ಲವೆ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಉಪಯೋಗಿಸಬಹುದು. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಚಂದಾಗಳು ನಿರಾಕರಿಸಲ್ಪಡುವಲ್ಲೆಲ್ಲ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳನ್ನು ನೀಡಬಹುದು. ನವೆಂಬರ್: ನಿತ್ಯಜೀವಕ್ಕೆ ನಡಿಸುವ ಜ್ಞಾನ. ಡಿಸೆಂಬರ್: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ನೊಂದಿಗೆ ನಿತ್ಯಜೀವಕ್ಕೆ ನಡಿಸುವ ಜ್ಞಾನ.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಸೆಪ್ಟೆಂಬರ್ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೆ ಲೆಕ್ಕ ತಪಾಸಣೆ ಮಾಡಬೇಕು. ಇದು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.
◼ ಪುನಸ್ಸ್ಥಾಪಿತರಾಗುವ ಪ್ರವೃತ್ತಿಯಿರಬಹುದಾದ ಯಾವುದೇ ಬಹಿಷ್ಕೃತರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ, ಏಪ್ರಿಲ್ 15, 1991ರ ವಾಚ್‌ಟವರ್ ಪತ್ರಿಕೆಯ, 21-3ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವಂತೆ ಹಿರಿಯರನ್ನು ಜ್ಞಾಪಿಸಲಾಗುತ್ತದೆ.
◼ ಒಂದು ಸಭೆಯೊಂದಿಗೆ ಸಹವಸಿಸುವವರು ತಮ್ಮ ವೈಯಕ್ತಿಕ ಚಂದಾಗಳನ್ನು ಸೇರಿಸಿ, ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಿಗಾಗಿರುವ ಎಲ್ಲ ಹೊಸ ಹಾಗೂ ನವೀಕರಣ ಚಂದಾಗಳನ್ನು ಸಭೆಯ ಮುಖಾಂತರ ಕಳುಹಿಸಬೇಕು.
◼ ಸಾಹಿತ್ಯಕ್ಕಾಗಿ ವ್ಯಕ್ತಿಗತ ಪ್ರಚಾರಕರ ವಿನಂತಿಗಳನ್ನು ಸೊಸೈಟಿಯು ಪೂರೈಸುವುದಿಲ್ಲ. ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳಲು ಆಸಕ್ತರಾಗಿರುವವರೆಲ್ಲರೂ, ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ಹೇಳಲು ಸಾಧ್ಯವಾಗುವಂತೆ, ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.
◼ ಈ ವರ್ಷ ತಮಿಳುನಾಡಿನಲ್ಲಿ ಇನ್ನೆರಡು ಜಿಲ್ಲಾ ಅಧಿವೇಶನಗಳನ್ನು ಏರ್ಪಡಿಸಲಾಗಿದೆ. ಅಧಿವೇಶನದ ನಿವೇಶನಗಳು, ತಾರೀಖುಗಳು ಮತ್ತು ಅಧಿವೇಶನ ಮುಖ್ಯ ಕಾರ್ಯಾಲಯಗಳು ಈ ಮುಂದಿನಂತೆ ಇವೆ:
COIMBATORE: November 27-29 — D. P. Chellapa, 105, Sanganoor Main Road, Ganapathy, Coimbatore, TN - 641 006
MADURAI: December 25-27 — K. P. Samuel, 123, Lake View Garden, 1st Street, K.K. Nagar, Madurai, TN - 625 020
◼ ಚೆನ್ನೈ (ತಮಿಳು) ಜಿಲ್ಲಾ ಅಧಿವೇಶನವನ್ನು, 1998ರ ಅಕ್ಟೋಬರ್ 9-11ಕ್ಕೆ ಬದಲಾಯಿಸಲಾಗಿದೆ.
◼ ಪ್ರತಿಯೊಂದು ಸಭೆಯಲ್ಲಿರುವ ಸೆಕ್ರಿಟರಿಯು, ಜಿಲ್ಲಾ ಅಧಿವೇಶನಕ್ಕೆ ಸಂಬಂಧಿಸಿದ ವಿಷಯಗಳ ಮೇಲ್ವಿಚಾರಣೆ ಮಾಡುವನು.
◼ ಲಭ್ಯವಿರುವ ಹೊಸ ಪ್ರಕಾಶನ:
ನಿಮ್ಮ ಮಾತನಾಡುವ ಮತ್ತು ಕಲಿಸುವ ಸಾಮರ್ಥ್ಯವನ್ನು ಉತ್ತಮಗೊಳಿಸುವ ವಿಧ (ಸ್ಕೂಲ್ ಗೈಡ್‌ಬುಕ್ ಪುಸ್ತಕದಿಂದ 20-38ನೆಯ ಅಧ್ಯಾಯಗಳು)—ಹಿಂದಿ