ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು —ಸೇವಾ ಮೇಲ್ವಿಚಾರಕ
1 ಸೇವಾ ಮೇಲ್ವಿಚಾರಕನು, ಸಭೆಯ ನೇಮಿತ ಟೆರಿಟೊರಿಯಲ್ಲಿ ಸೌವಾರ್ತಿಕ ಕೆಲಸಕ್ಕೆ ಸಂಬಂಧಿಸಲ್ಪಟ್ಟಿರುವ ಎಲ್ಲ ವಿಷಯದಲ್ಲಿ ಆಳವಾದ ಆಸಕ್ತಿಯನ್ನು ತೋರಿಸುವವನಾಗಿದ್ದಾನೆ. ಈ ರೀತಿಯಲ್ಲಿ ಅವನು, ಸುವಾರ್ತೆಯನ್ನು ಸಾರಲು ನಮಗಿರುವ ಜವಾಬ್ದಾರಿಯನ್ನು ಪೂರೈಸಲಿಕ್ಕಾಗಿ ಸಹಾಯಮಾಡುವುದರಲ್ಲಿ, ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಒಬ್ಬ ಹುರುಪಿನ ಸೌವಾರ್ತಿಕನೋಪಾದಿ, ಅವನು ಸೇವೆಗೆ ಸಂಬಂಧಿಸಿರುವ ಎಲ್ಲ ವಿಷಯಗಳಲ್ಲಿ ಮುಂದಾಳತ್ವವನ್ನು ವಹಿಸುತ್ತಾನೆ. ಒಬ್ಬ ಸಮರ್ಥ ಶಿಕ್ಷಕನೋಪಾದಿ ಅವನು, ಪ್ರತಿಯೊಬ್ಬ ಪ್ರಚಾರಕನು ಶುಶ್ರೂಷೆಯಲ್ಲಿ ತನ್ನ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಿಕೊಳ್ಳಲು ಸಹಾಯಮಾಡುತ್ತಾನೆ.—ಎಫೆ. 4:11, 12.
2 ಸಾಹಿತ್ಯ, ಪತ್ರಿಕೆಗಳು, ಮತ್ತು ಟೆರಿಟೊರಿಗಳನ್ನು ನಿರ್ವಹಿಸಲು ನೇಮಿಸಲ್ಪಟ್ಟಿರುವ ಶುಶ್ರೂಷಾ ಸೇವಕರ ಕೆಲಸವನ್ನು, ಈ ಹಿರಿಯನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಾನೆ. ನಮ್ಮ ಉಪಯೋಗಕ್ಕಾಗಿ ಪ್ರತಿ ತಿಂಗಳು ಸಾಹಿತ್ಯ, ಪತ್ರಿಕೆಗಳು ಮತ್ತು ಸರ್ವಿಸ್ ಫಾರ್ಮ್ಗಳ ಸಾಕಷ್ಟು ಸರಬರಾಯಿಯು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವುದು ಅವನ ಜವಾಬ್ದಾರಿಯಾಗಿದೆ. ವರ್ಷದಲ್ಲೊಮ್ಮೆ ಅವನು, ನಾವು ಸಂದರ್ಶಿಸಬಾರದೆಂದು ಹೇಳಲಾಗಿರುವ ಎಲ್ಲ ಮನೆಗಳ ವಿಳಾಸಗಳಿಗಾಗಿ ಟೆರಿಟೊರಿ ಫೈಲನ್ನು ಪುನರ್ವಿಮರ್ಶಿಸಿ, ಈ ಮನೆಗಳನ್ನು ಸಂದರ್ಶಿಸಲಿಕ್ಕಾಗಿ ಅರ್ಹ ಸಹೋದರರನ್ನು ನೇಮಿಸುತ್ತಾನೆ.
3 ವ್ಯಾಪಾರ ಕ್ಷೇತ್ರದಲ್ಲಿ, ಬೀದಿಯಲ್ಲಿ ಮತ್ತು ಟೆಲಿಫೋನ್ ಮೂಲಕ ಸಾಕ್ಷಿಕೊಡುವಂತಹ, ಸಾರುವಿಕೆಯ ವಿಭಿನ್ನ ವಿಧಗಳ ಮೇಲ್ವಿಚಾರಣೆಗಾಗಿ ಸೇವಾ ಮೇಲ್ವಿಚಾರಕನು ಜವಾಬ್ದಾರನಾಗಿದ್ದಾನೆ. ರಜಾದಿನಗಳನ್ನು ಸೇರಿಸಿ, ವಾರದಾದ್ಯಂತ ಸೇವೆಗಾಗಿ ಕೂಡಿಬರುವಂತೆ ವ್ಯಾವಹಾರಿಕ ಏರ್ಪಾಡುಗಳನ್ನು ಮಾಡಲು ಅವನು ಎಚ್ಚರದಿಂದಿರುತ್ತಾನೆ. ಬೈಬಲ್ ಅಭ್ಯಾಸದ ಚಟುವಟಿಕೆಯಲ್ಲಿ ಅವನು ನಿಜವಾದ ಆಸಕ್ತಿಯನ್ನು ತೋರಿಸುತ್ತಾನೆ. ಶುಶ್ರೂಷೆಯಲ್ಲಿ ಅನಿಯಮಿತರು ಅಥವಾ ನಿಷ್ಕ್ರಿಯ
ರಾಗುವವರಿಗೆ ಆತ್ಮಿಕ ನೆರವನ್ನು ಕೊಡಲು ಅವನು ಮಾರ್ಗಗಳನ್ನು ಹುಡುಕುತ್ತಾನೆ. ಅವನು ಪಯನೀಯರರ ಕೆಲಸದ ಕುರಿತಾಗಿ ಸಕ್ರಿಯ ಚಿಂತೆಯನ್ನು ತೋರಿಸುತ್ತಾನೆ, ಮತ್ತು ಪಯನೀಯರರು ಇತರರಿಗೆ ನೆರವು ನೀಡುತ್ತಾರೆ ಎಂಬ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುತ್ತಾನೆ.
4 ಸಭಾ ಸೇವಾ ಕಮಿಟಿಯ ಸದಸ್ಯನೋಪಾದಿ, ಸೇವಾ ಮೇಲ್ವಿಚಾರಕನು ಸಭಾ ಪುಸ್ತಕ ಅಭ್ಯಾಸ ಗುಂಪುಗಳಲ್ಲಿ ಮಾಡಬೇಕಾದ ಯಾವುದೇ ಹೊಂದಾಣಿಕೆಗಳನ್ನು ಪ್ರಸ್ತಾಪಿಸುತ್ತಾನೆ. ಅವನು ನಿಮ್ಮ ಗುಂಪನ್ನು ಸಂದರ್ಶಿಸುವಾಗ, ಅಲ್ಲಿ ಹಾಜರಿರಲು ಮತ್ತು ಅವನೊಂದಿಗೆ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳಿರಿ.
5 ಸಭೆಯಲ್ಲಿರುವವರೆಲ್ಲರೂ, ಸೇವಾ ಮೇಲ್ವಿಚಾರಕನಿಂದ ಕೊಡಲ್ಪಡುವ ನಿರ್ದೇಶನದೊಂದಿಗೆ ಸಿದ್ಧಮನಸ್ಸಿನಿಂದ ಸಹಕರಿಸಬೇಕು. ಇದು, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿನ ನಮ್ಮ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಮತ್ತು ನಮ್ಮ ಶುಶ್ರೂಷೆಯಲ್ಲಿ ಹೆಚ್ಚಿನ ಆನಂದವನ್ನು ಕಂಡುಕೊಳ್ಳಲು ನಮಗೆ ಸಹಾಯಮಾಡುವುದು.