ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 1998ರ ಸೆಪ್ಟೆಂಬರ್ 7ರಿಂದ ಡಿಸೆಂಬರ್ 21ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. 2 ತಿಮೊಥೆಯ 1:6ರಲ್ಲಿರುವ “ಕೃಪಾವರ” ಎಂಬ ಪದವು, ದೇವರ ಪವಿತ್ರಾತ್ಮದ ಕಾರ್ಯಾಚರಣೆಯ ಮೂಲಕ ತಿಮೊಥೆಯನಿಗೆ ಕೊಡಲ್ಪಟ್ಟಿದ್ದ, ವಿಭಿನ್ನ ಭಾಷೆಗಳಲ್ಲಿ ಮಾತಾಡುವ ಸಾಮರ್ಥ್ಯಕ್ಕೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w85 5/1 ಪು. 16 ಪ್ಯಾರ. 15ನ್ನು ನೋಡಿರಿ.]
2. ಒಬ್ಬ ಪ್ರೌಢ ಕ್ರೈಸ್ತನು, ದೇವರ ವಾಕ್ಯದ ಕುರಿತಾಗಿ ತನಗಿರುವ ಯಾವುದೇ ಜ್ಞಾನವನ್ನು ಉಪಯೋಗಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳುವ ಮೂಲಕ, ‘ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ಮಾಡಲು ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸುತ್ತಾನೆ.’ (ಇಬ್ರಿ. 5:14) [ವಾರದ ಬೈಬಲ್ ವಾಚನ; w85 6/15 ಪು. 9 ಪ್ಯಾರ. 7ನ್ನು ನೋಡಿರಿ.]
3. ಯೆಹೋವನು, “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ” ಎಂಬ ನಿಜಾಂಶವು ಸೂಚಿಸುವುದೇನೆಂದರೆ, ಮಾನವ ಕುಟುಂಬದೊಂದಿಗಿನ ತನ್ನ ಎಲ್ಲ ವ್ಯವಹಾರಗಳಲ್ಲಿ, ಯೆಹೋವನು ಒಂದೇ ರೀತಿಯಲ್ಲಿ ನಿಷ್ಪಕ್ಷಪಾತವನ್ನು ಪ್ರದರ್ಶಿಸಿದ್ದಾನೆ. (ಮತ್ತಾ. 5:45) [w-KA96 11/15 ಪು. 25 ಪ್ಯಾರ. 7ನ್ನು ನೋಡಿರಿ.]
4. ಬೈಬಲ್ ಲೇಖಕನಾದ ಯಾಕೋಬನು, ಸುನ್ನತಿಯ ಕುರಿತಾದ ನಿರ್ಣಯವನ್ನು ಮಾಡಿದ ಸಮಯದಲ್ಲಿ “ಅಪೊಸ್ತಲರೂ ಸಭೆಯ ಹಿರಿಯ”ರಿಗೂ ಪ್ರತಿನಿಧಿಯಾಗಿ ಮಾತನಾಡಿದ ಯಾಕೋಬನೇ ಆಗಿದ್ದಾನೆ. (ಅ. ಕೃ. 15:6, 13; ಯಾಕೋ. 1:1) [si ಪು. 248 ಪ್ಯಾರ. 2-4]
5. ಪೇತ್ರನು ತನ್ನ ಪ್ರಥಮ ಪತ್ರವನ್ನು ಬರೆದಾಗ, ಅವನು ಬಾಬೆಲ್ನಲ್ಲಿ ಇದ್ದನೆಂದು 1 ಪೇತ್ರ 5:13 ತಿಳಿಸುವುದಾದರೂ, ಬಾಬೆಲ್ ಎಂಬ ಹೆಸರು, ರೋಮ್ ಅನ್ನು ಸೂಚಿಸುವ ಒಂದು ಗುಪ್ತನಾಮವಾಗಿತ್ತೆಂದು ರುಜುವಾತು ಸೂಚಿಸುತ್ತದೆ. [si ಪು. 251 ಪ್ಯಾರ. 4]
6. 1 ಯೋಹಾನ 2:18ನೇ ವಚನದಲ್ಲಿ “ಕ್ರಿಸ್ತವಿರೋಧಿ ಬರುತ್ತಾನೆ” ಎಂಬ ವಾಕ್ಸರಣಿಯು, ಕೇವಲ ಒಬ್ಬ ವ್ಯಕ್ತಿಗೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; rs ಪು. 32 ಪ್ಯಾರ. 3ನ್ನು ನೋಡಿರಿ.]
7. 2 ಯೋಹಾನ 10ರಲ್ಲಿ, ನಿರ್ದಿಷ್ಟ ವ್ಯಕ್ತಿಗಳನ್ನು ಮನೆಯೊಳಗೆ ಸೇರಿಸಿಕೊಳ್ಳದಿರುವ ಅಥವಾ ಅಭಿವಂದಿಸದಿರುವ ಆಜ್ಞೆಯು, ಸುಳ್ಳು ಬೋಧನೆಗಳನ್ನು ಪ್ರವರ್ಧಿಸುವವರಿಗೆ ಮಾತ್ರ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w85 7/15 ಪು. 30 ಪ್ಯಾರ. 1-3 ನ್ನು ನೋಡಿರಿ.]
8. ಪ್ರಕಟನೆ ಪುಸ್ತಕವು ಅಪೊಸ್ತಲ ಯೋಹಾನನಿಂದ ಬರೆಯಲ್ಪಟ್ಟ ಕೊನೆಯ ಪುಸ್ತಕವಾಗಿರುವುದರಿಂದ, ಅದನ್ನು ಬೈಬಲಿನ ಕೊನೆಯಲ್ಲಿ ಇರಿಸಲಾಗಿದೆ. [si ಪು. 263 ಪ್ಯಾರ. 1]
9. ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿಯಾದ ವಿಶ್ವ ಸಂಸ್ಥೆಗೆ, ಆ್ಯಂಗ್ಲೋ ಅಮೆರಿಕನ್ ಲೋಕ ಶಕ್ತಿಯು ಮುಖ್ಯ ಪ್ರಾಯೋಜಕವಾದ ಮತ್ತು ಜೀವದಾತನಾಗಿರುವ, ಪ್ರಕಟನೆ 13:11-15 ನಿಷ್ಕೃಷ್ಟವಾಗಿ ಚಿತ್ರಿಸುತ್ತದೆ. [ವಾರದ ಬೈಬಲ್ ವಾಚನ; w88 12/15 ಪು. 19 ಪ್ಯಾರ. 3ನ್ನು ನೋಡಿರಿ.]
10. ಮದ್ಯಪಾನೀಯಗಳ ಕುಡಿಯುವಿಕೆಯನ್ನು ಬೈಬಲ್ ಅನುಮತಿಸುವುದರಿಂದ, ಎಷ್ಟು ಕುಡಿಯಬೇಕೆಂಬುದನ್ನು ಸ್ಥಳಿಕ ಪದ್ಧತಿಗಳು ಮತ್ತು ಸಂಪ್ರದಾಯಗಳು ವಿಧಿಸುವಂತೆ ಅನುಮತಿಸುವುದು ಸೂಕ್ತವಾಗಿದೆ. [wKA96 12/15 ಪು. 27 ಪ್ಯಾರ. 5]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಒಬ್ಬ ಮೇಲ್ವಿಚಾರಕನು “ಹೊಡೆದಾಡುವವನು” ಆಗಿರಬಾರದೆಂಬುದರ ಅರ್ಥವೇನು? (ತೀತ 1:7) [ವಾರದ ಬೈಬಲ್ ವಾಚನ; w90 9/1 ಪು. 27 ಪ್ಯಾರ. 21 ನ್ನು ನೋಡಿರಿ.]
12. ಯೆಹೋವನು ಕೊಡುವಿಕೆಯನ್ನು, ಶುದ್ಧಾರಾಧನೆಯ ಭಾಗವನ್ನಾಗಿ ಏಕೆ ಮಾಡುತ್ತಾನೆಂಬುದಕ್ಕೆ ಎರಡು ಕಾರಣಗಳನ್ನು ಕೊಡಿರಿ. [wKA96 11/1 ಪು. 29 ಪ್ಯಾರ. 3-6; ಪು. 30 ಪ್ಯಾರ. 3]
13. “ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ,” ಎಂದು ಯೇಸು ಹೇಳಿದಾಗ, ಅವನು ಏನನ್ನು ಅರ್ಥೈಸಿದನು? (ಇಬ್ರಿ. 10:5) [ವಾರದ ಬೈಬಲ್ ವಾಚನ; wKA96 7/1 ಪು. 14 ಪ್ಯಾರ. 3 ನ್ನು ನೋಡಿರಿ.]
14. ಕ್ರೈಸ್ತರು ಹೇಗೆ ‘ಲೋಕವನ್ನು ಜಯಿಸ’ಸಾಧ್ಯವಿದೆ? (1 ಯೋಹಾ. 5:3, 4) [si ಪು. 258 ಪ್ಯಾರ. 12]
15. ‘ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದು’ ಎಂಬ ಪೇತ್ರನ ವಾಕ್ಸರಣಿಯಲ್ಲಿ ಏನು ಒಳಗೂಡಿದೆ? (2 ಪೇತ್ರ 3:12) [ವಾರದ ಬೈಬಲ್ ವಾಚನ; wKA97 9/1 ಪು. 19 ಪ್ಯಾರ. 2 ನ್ನು ನೋಡಿರಿ.]
16. ಯೇಸುವಿನ ಯಜ್ಞಾರ್ಪಣೆಯ ಮರಣದಿಂದ ಪ್ರಯೋಜನ ಪಡೆದುಕೊಳ್ಳುವ ಎರಡು ಗುಂಪುಗಳನ್ನು ಗುರುತಿಸಲು 1 ಯೋಹಾನ 2:2ರಲ್ಲಿರುವ ಯಾವ ಮುಖ್ಯ ಪದಗಳು ನಮಗೆ ಸಹಾಯಮಾಡುತ್ತವೆ? [ವಾರದ ಬೈಬಲ್ ವಾಚನ; w90 1/15 ಪು. 12 ಪ್ಯಾರ. 11 ನ್ನು ನೋಡಿರಿ.]
17. ಪ್ರಕಟನೆ 1:7ಕ್ಕೆ ಹೊಂದಿಕೆಯಲ್ಲಿ, ಯೇಸುವನ್ನು ಇರಿದವರು ಅವನು ‘ಮೇಘಗಳೊಂದಿಗೆ ಬರುವುದನ್ನು’ ಹೇಗೆ ನೋಡುವರು? [ವಾರದ ಬೈಬಲ್ ವಾಚನ; w93 5/1 ಪು. 22 ಪ್ಯಾರ. 7 ನ್ನು ನೋಡಿರಿ.]
18. ಇಸ್ರಾಯೇಲ್ಯರಿಗೆ ಸಾರುತ್ತಾ ಯೇಸು ಕ್ರಿಸ್ತನು ಮೂರುವರೆ ವರ್ಷಗಳನ್ನು ಕಳೆದರೂ, ಅಧಿಕಾಂಶ ಮಂದಿ ಅವನನ್ನು ಮೆಸ್ಸೀಯನೋಪಾದಿ ತಿರಸ್ಕರಿಸಿದ್ದೇಕೆ? [wKA96 11/15 ಪು. 29 ಪ್ಯಾರ. 1, 6; ಪು. 30 ಪ್ಯಾರ. 3]
19. ಪ್ರಕಟನೆ 13:1, 2ರಲ್ಲಿ (NW), ಲೋಕ ಸರಕಾರವು “ಕಾಡು ಮೃಗ”ದೋಪಾದಿ ಚಿತ್ರಿಸಲ್ಪಟ್ಟಿರುವುದು ಏಕೆ ಸೂಕ್ತವಾಗಿದೆ? [ವಾರದ ಬೈಬಲ್ ವಾಚನ; w89 4/1 ಪು. 20 ಪ್ಯಾರ. 17 ನ್ನು ನೋಡಿರಿ.]
20. ಪ್ರಕಟನೆ 4:4ರ ‘ಇಪ್ಪತ್ತನಾಲ್ಕು ಹಿರಿಯರಿಂದ’ ಯಾರು ಪ್ರತಿನಿಧಿಸಲ್ಪಟ್ಟಿದ್ದಾರೆ, ಮತ್ತು ಅವರ ‘ಕಿರೀಟಗಳು’ ಹಾಗೂ ‘ಸಿಂಹಾಸನಗಳು’ ನಮಗೆ ಏನನ್ನು ಜ್ಞಾಪಕಹುಟ್ಟಿಸುತ್ತವೆ? [ವಾರದ ಬೈಬಲ್ ವಾಚನ; w-KA95 7/1 ಪು. 13 ಪ್ಯಾರ. 17 ನ್ನು ನೋಡಿರಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ತಿಮೊಥೆಯನಿಗೆ ಪೌಲನು ಬರೆದ ಎರಡನೆಯ ಪತ್ರವು, ಸಾ.ಶ. _________________________ರಲ್ಲಿ _________________________ನಿಂದ ಬರೆಯಲ್ಪಟ್ಟಿತ್ತು, ಮತ್ತು ತಿಮೊಥೆಯನು ಪ್ರಾಯಶಃ ಇನ್ನೂ _________________________ದಲ್ಲಿದ್ದನು. [si ಪು. 237 ಪ್ಯಾರ. 3]
22. ನಮ್ಮ ಮುಂದಿರುವ ಓಟದಲ್ಲಿ ಓಡಲಿಕ್ಕಾಗಿ ನಾವು ಪ್ರತಿಯೊಂದು ಹೊರೆಯನ್ನು ಮತ್ತು _________________________ ಎಂಬ ಸುಲಭವಾಗಿ ಹತ್ತಿಕೊಳ್ಳುವ _________________________ ತೆಗೆದುಹಾಕಬೇಕು. [ವಾರದ ಬೈಬಲ್ ವಾಚನ; w-KA98 1/1 ಪು. 10 ಪ್ಯಾರ. 15 ನ್ನು ನೋಡಿರಿ.]
23. 2 ಪೇತ್ರ 1:5-8ರಲ್ಲಿ ಅಪೊಸ್ತಲ ಪೇತ್ರನು, ನಾವು _________________________ ಅಥವಾ _________________________ ಆಗುವುದರಿಂದ ತಡೆಗಟ್ಟುವಂತಹ ದೈವಿಕ ಗುಣಗಳನ್ನು ವಿಕಸಿಸಿಕೊಳ್ಳಲು _________________________ ಶಿಫಾರಸ್ಸುಮಾಡುತ್ತಾನೆ. [si ಪು. 255 ಪ್ಯಾರ. 9]
24. ಪ್ರಕಟನೆ 6:1-8ರಲ್ಲಿ, ಕೆಂಪು ಕುದುರೆಯ ರಾಹುತನು _________________________ ಚಿತ್ರಿಸುತ್ತಾನೆ; ಕಪ್ಪು ಕುದುರೆಯ ರಾಹುತನು _________________________ ಚಿತ್ರಿಸುತ್ತಾನೆ; ರೋಗ ಮತ್ತು ಇತರ ಕಾರಣಗಳಿಂದಾಗುವ _________________________ ಸೂಚಿಸುತ್ತಾ, ಮರಣವು ಬೂದಿ ಬಣ್ಣದ ಕುದುರೆಯ ಮೇಲೆ ಸವಾರಿಮಾಡುತ್ತದೆ. [ವಾರದ ಬೈಬಲ್ ವಾಚನ; w86 1/15 ಪು. 3 ರೇಖಾಚೌಕವನ್ನು ನೋಡಿರಿ.]
25. ಕ್ರಿಸ್ತನಿಗಿಂತ ಮುಂಚೆ _________________________ದಲ್ಲಿ, ಯೆಹೂದ್ಯರು ಗ್ರೀಕರಿಂದ _________________________ ಬೋಧನೆಯನ್ನು ಮೈಗೂಡಿಸಿಕೊಳ್ಳಲು ಆರಂಭಿಸಿದರು. [w-KA96 8/1 ಪು. 6 ಪ್ಯಾರ. 2-3]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ರೋಮ್ನಲ್ಲಿ ಪೌಲನ ಪ್ರಥಮ ಸೆರೆವಾಸದ ಸಮಯದಲ್ಲಿ, (ಫಿಲಿಪ್ಪ, ಫೆಸ್ಟಸ್, ಫಿಲೆಮೋನ)ನ ಮನೆತನದಿಂದ ಓಡಿಹೋದ ದಾಸನಾದ (ಓನೇಸಿಫೊರನು; ಓನೇಸಿಮನು; ಓನಾನ್), ಪೌಲನ ಸಾರುವಿಕೆಗೆ ಕಿವಿಗೊಟ್ಟವರಲ್ಲಿ ಒಬ್ಬನಾಗಿದ್ದನು. [si ಪು. 241 ಪ್ಯಾರ. 2]
27. ಇಬ್ರಿಯರಿಗೆ ಪೌಲನು ಪತ್ರವನ್ನು ಬರೆದನೆಂಬ ವಿಷಯವು, ಪೌಲನು (ಸ್ಪೆಯ್ನ್; ಕ್ರೇತ; ಇಟಲಿ)ಯಲ್ಲಿ, (ತಿಮೊಥೆಯ; ತೀತ; ಯಾಕೋಬ)ನೊಂದಿಗೆ ಇದ್ದನು ಎಂಬಂತಹ (ಬಾಹ್ಯ, ಆಂತರಿಕ; ಐಹಿಕ) ರುಜವಾತಿನಿಂದ ಬೆಂಬಲಿಸಲ್ಪಟ್ಟಿದೆ. [si ಪು. 243 ಪ್ಯಾರ. 3]
28. ಇಬ್ರಿಯ 11:10ರಲ್ಲಿ, “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣ”ವು (ಪುನರ್ನಿರ್ಮಿತವಾದ ಯೆರೂಸಲೇಮ್; ಯೆಹೆಜ್ಕೇಲ 48:35ರಲ್ಲಿ ತಿಳಿಸಲ್ಪಟ್ಟಿಟರುವ ಪಟ್ಟಣ; ಮೆಸ್ಸೀಯ ರಾಜ್ಯ) ಕ್ಕೆ ಸೂಚಿಸುತ್ತದೆ. [si ಪು. 247 ಪ್ಯಾರ. 26]
29. ಯೂದ 8ರಲ್ಲಿ ತಿಳಿಸಲ್ಪಟ್ಟಿರುವ “ಪ್ರಭುತ್ವವು” (ಯೇಸುವಿನ ಸ್ಥಾನ; ಯೆಹೋವನ ಪರಮಾಧಿಕಾರ; ಕ್ರೈಸ್ತ ಸಭೆಯಲ್ಲಿ ದೇವದತ್ತ ಅಧಿಕಾರ)ಕ್ಕೆ ಸೂಚಿಸುತ್ತದೆ. [si ಪು. 263 ಪ್ಯಾರ. 9]
30. ಪ್ರಕಟನೆ 11:11ರಲ್ಲಿ, ಅಭಿಷಿಕ್ತ ಉಳಿಕೆಯವರು ತಮ್ಮ ಶತ್ರುಗಳ ದೃಷ್ಟಿಯಲ್ಲಿ ಸತ್ತುಬಿದ್ದ ಶವಗಳಂತೆ ತೋರಿದಂತಹ ‘ಮೂರುವರೆ ದಿನಗಳು’ (ಮೂರುವರೆ ವರ್ಷಗಳನ್ನು; ಒಂದು ಅಲ್ಪಾವಧಿಯನ್ನು; ಮೂರುವರೆ ತಿಂಗಳುಗಳನ್ನು) ಸೂಚಿಸುತ್ತದೆ. [ವಾರದ ಬೈಬಲ್ ವಾಚನ; re-KA ಪು. 167 ಪ್ಯಾರ. 21 ನ್ನು ನೋಡಿರಿ.]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
1 ಕೊರಿಂ. 6:9-11; ಇಬ್ರಿ. 2:1; ಇಬ್ರಿ. 10:32; ಯಾಕೋ. 4:15; 1 ಪೇತ್ರ 3:4
31. ಈ ಲೋಕದಿಂದ ನಾವು ಎದುರಿಸುವ ಸತತವಾದ ಪ್ರಚಾರದ ಪ್ರಭಾವವನ್ನು ಪ್ರತಿಭಟಿಸಲು, ನಾವು ಒಳ್ಳೆಯ ಅಭ್ಯಾಸದ ರೂಢಿಗಳು ಮತ್ತು ಒಂದು ಒಳ್ಳೆಯ ಬೈಬಲ್ ವಾಚನದ ಶೆಡ್ಯೂಲಿನ ಮೂಲಕ, ದೇವರ ವಾಕ್ಯಕ್ಕೆ “ಸಾಮಾನ್ಯವಾದುದಕ್ಕಿಂತಲೂ ಹೆಚ್ಚಿನ ಗಮನವನ್ನು” ಕೊಡಬೇಕು. [ವಾರದ ಬೈಬಲ್ ವಾಚನ; w-KA98 1/1 ಪು. 7 ಪ್ಯಾರ. 9ನ್ನು ನೋಡಿರಿ.]
32. ನಾವು ಭವಿಷ್ಯತ್ತಿಗಾಗಿ ಯೋಜನೆಗಳನ್ನು ಮಾಡುವಾಗಲೆಲ್ಲಾ, ಅವು ದೇವರ ಉದ್ದೇಶಕ್ಕೆ ಹೇಗೆ ಹೊಂದಿಕೊಳ್ಳುವವು ಎಂಬುದನ್ನು ನಾವು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು. [ವಾರದ ಬೈಬಲ್ ವಾಚನ; w-KA97 11/15 ಪು. 21 ಪ್ಯಾರ. 10-11 ನ್ನು ನೋಡಿರಿ.]
33. ಒಬ್ಬ ಕ್ರೈಸ್ತ ಹೆಂಡತಿ ಮತ್ತು ತಾಯಿಯ “ಸಾತ್ವಿಕವಾದ ಶಾಂತಮನಸ್ಸು” ಅವಳ ಗಂಡನನ್ನು ಸಂತೋಷಪಡಿಸುತ್ತದೆ ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ ದೇವರನ್ನು ಸಂತೋಷಪಡಿಸುತ್ತದೆ. [ವಾರದ ಬೈಬಲ್ ವಾಚನ; w89 5/15 ಪು. 19 ಪ್ಯಾರ. 12 ನ್ನು ನೋಡಿರಿ.]
34. ಆತ್ಮಿಕ ಯುದ್ಧದಲ್ಲಿ ಗತಕಾಲದ ನಿಷ್ಠೆಯ ಕೃತ್ಯಗಳನ್ನು ನಾವು ಜ್ಞಾಪಕಕ್ಕೆ ತರುವುದು, ಜೀವಕ್ಕಾಗಿರುವ ಓಟವನ್ನು ಮುಗಿಸಲು ನಮಗೆ ಬೇಕಾಗಿರುವ ಧೈರ್ಯವನ್ನು ಕೊಡಲು ಸಹಾಯಮಾಡುವುದು. [w-KA96 12/1 ಪು. 29 ಪ್ಯಾರ. 3]
35. ಪಶ್ಚಾತ್ತಾಪರಹಿತ ಕುಡುಕನಾಗುವ ಯಾವನೇ ವ್ಯಕ್ತಿಯನ್ನು, ಯೆಹೋವನ ಸಾಕ್ಷಿಗಳು ಕ್ರೈಸ್ತ ಸಭೆಯೊಳಗೆ ಇರಲು ಅನುಮತಿಸುವುದಿಲ್ಲ. [w-KA96 12/15 ಪು. 25 ಪ್ಯಾರ. 3]