“ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ”—ಏಕೆ?
“ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.” ಅಪೊಸ್ತಲ ಪೌಲನ, ಸಾ.ಶ. 61ರಲ್ಲಿ ಬರೆಯಲ್ಪಟ್ಟ ಈ ಬುದ್ಧಿವಾದವು, ಯೂದಾಯದ ಇಬ್ರಿಯ ಕ್ರೈಸ್ತರಿಗೆ ನಿರ್ದೇಶಿಸಲ್ಪಟ್ಟಿತು. (ಇಬ್ರಿಯ 10:32) ಈ ಹೇಳಿಕೆಯನ್ನು ಯಾವುದು ಪ್ರೇರಿಸಿತು? ಆ ಒಂದನೆಯ ಶತಮಾನದ ಯೆಹೋವನ ಆರಾಧಕರು ಹಿಂದಿನದ್ದನ್ನು ಮರೆಯದಿರುವ ಅಗತ್ಯವು ಏಕೆ ಇತ್ತು? ನಾವು ಇಂದು ತದ್ರೀತಿಯ ಜ್ಞಾಪನಕ್ಕೆ ಲಕ್ಷ್ಯಕೊಡುವ ಮೂಲಕ ಪ್ರಯೋಜನ ಪಡೆಯಬಲ್ಲೆವೊ?
ಶತಮಾನಗಳಿಂದ ಬೈಬಲ್ ಲೇಖಕರು, ಹಿಂದಿನದ್ದನ್ನು ಅಲಕ್ಷಿಸುವ ಅಥವಾ ಅದಕ್ಕೆ ಗಮನ ಕೊಡದಿರುವ ವಿರುದ್ಧ ಪದೇ ಪದೇ ಎಚ್ಚರಿಸಿದ್ದಾರೆ. ಗತ ಸಮಯಗಳನ್ನೂ ಘಟನೆಗಳನ್ನೂ ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗಿತ್ತು, ಪರಿಗಣಿಸಬೇಕಾಗಿತ್ತು. ಯೆಹೋವನೇ ಹೀಗಂದಿದ್ದನು: “ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ.” (ಯೆಶಾಯ 46:9) ಈ ಬುದ್ಧಿವಾದಕ್ಕೆ ಕಿವಿಗೊಡಲು ಇರುವ ಮೂರು ಬಲವಾದ ಕಾರಣಗಳನ್ನು ನಾವು ಪರೀಕ್ಷಿಸೋಣ.
ಪ್ರೇರಕ ಶಕ್ತಿ ಮತ್ತು ಪ್ರೋತ್ಸಾಹನೆ
ಒಂದನೆಯದಾಗಿ, ಅದು ಪ್ರೇರಕ ಶಕ್ತಿ ಮತ್ತು ಪ್ರೋತ್ಸಾಹನೆಯ ಮಹಾ ಉಗಮವಾಗಿರಸಾಧ್ಯವಿದೆ. ಪೌಲನು ಇಬ್ರಿಯ ಸಭೆಗೆ ತನ್ನ ಪತ್ರವನ್ನು ಬರೆದಾಗ, ಯೆಹೂದ್ಯರಿಂದ ಬಂದ ವಿರೋಧದಿಂದಾಗಿ ಯಾರ ನಂಬಿಕೆಯು ಪ್ರತಿದಿನ ಪರೀಕ್ಷೆಗೊಳಗಾಗುತ್ತಿತ್ತೋ ಆ ಜೊತೆಕ್ರೈಸ್ತರಿಗೆ ಅವನು ಬರೆಯುತ್ತಿದ್ದನು. ತಾಳ್ಮೆಯನ್ನು ಬಲಗೊಳಿಸಲು ಅವರಿಗಿದ್ದ ಆವಶ್ಯಕತೆಯನ್ನು ಮಾನ್ಯಮಾಡುತ್ತ, ಪೌಲನು ಹೇಳಿದ್ದು: “ನೀವು ಜ್ಞಾನಪ್ರಕಾಶದಲ್ಲಿ ಸೇರಿ ಕಷ್ಟಾನುಭವವೆಂಬ ಬಲು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.” (ಇಬ್ರಿಯ 10:32) ಆತ್ಮಿಕ ಯುದ್ಧೋದ್ಯಮದಲ್ಲಿ ಹಿಂದಿನ ನಿಷ್ಠಾಕೃತ್ಯಗಳನ್ನು ಅವರು ನೆನಪಿಸಿಕೊಳ್ಳುವುದು, ಓಟವನ್ನು ತೀರಿಸಲು ಬೇಕಾದ ಧೈರ್ಯವನ್ನು ಅವರಿಗೆ ಕೊಡಲಿಕ್ಕಿತ್ತು. ಅಂತೆಯೇ, ಪ್ರವಾದಿ ಯೆಶಾಯನು ಬರೆದುದು: “ನೀವು ಧೈರ್ಯವನ್ನು ತಂದುಕೊಳ್ಳುವ ಸಲುವಾಗಿ ಇದನ್ನು ಜ್ಞಾಪಿಸಿಕೊಳ್ಳಿರಿ.” (ಯೆಶಾಯ 46:8, NW) ತದ್ರೀತಿಯ ಅಪೇಕ್ಷಣೀಯ ಪರಿಣಾಮವನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿಯೇ, ಯೇಸು ಕ್ರಿಸ್ತನು ಎಫೆಸದಲ್ಲಿನ ಸಭೆಗೆ ಹೇಳಿದ್ದು: “ಆದದರಿಂದ ನೀನು ಎಲ್ಲಿಂದ [ಮೊದಲಿದ್ದ ಪ್ರೀತಿಯಿಂದ] ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು.”—ಪ್ರಕಟನೆ 2:5.
“ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ; ಪೂರ್ವಿಕರ ಚರಿತ್ರೆಯನ್ನು ಆಲೋಚಿಸಿರಿ,” ಎಂಬ ಪ್ರಬೋಧನೆಯು, ಮೋಶೆಯು ಆ ಜನಾಂಗಕ್ಕೆ, ಅವರು ಯೆಹೋವನಿಗೆ ಭಯರಹಿತ ನಿಷ್ಠೆಯನ್ನು ತೋರಿಸುವಂತೆ ಕರೆಕೊಟ್ಟಾಗ ಅವನ ಭಾಷಣಗಳಲ್ಲಿ ಆವರ್ತಕವಾಗಿ ಬಂದ ವಿಷಯವಾಗಿತ್ತು. (ಧರ್ಮೋಪದೇಶಕಾಂಡ 32:7) ಧರ್ಮೋಪದೇಶಕಾಂಡ 7:18ರಲ್ಲಿ ದಾಖಲೆಯಾಗಿರುವ ಅವನ ಮಾತುಗಳನ್ನು ಗಮನಿಸಿರಿ: “ಅವರಿಗೆ [ಕಾನಾನ್ಯರಿಗೆ] ಹೆದರಬೇಡಿರಿ; ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಐಗುಪ್ತ್ಯರೆಲ್ಲರಿಗೂ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ.” ತನ್ನ ಜನರ ಪರವಾಗಿ ಯೆಹೋವನ ರಕ್ಷಣಾಕಾರ್ಯಗಳನ್ನು ಮನಸ್ಸಿಗೆ ತಂದುಕೊಳ್ಳುವುದು, ದೇವರ ನಿಯಮಗಳಿಗೆ ಅವರ ಮುಂದುವರಿಯುವ ನಂಬಿಗಸ್ತ ಅಂಟಿಕೊಳ್ಳುವಿಕೆಗೆ ಒಂದು ಪ್ರಚೋದನೆಯಾಗಿರಲಿತ್ತು.—ಧರ್ಮೋಪದೇಶಕಾಂಡ 5:15; 15:15.
ದುಃಖಕರವಾಗಿ, ಇಸ್ರಾಯೇಲ್ಯರು ಅನೇಕ ವೇಳೆ ವಿಸ್ಮರಣೆಯ ಪಾಪವಶವಾದರು. ಯಾವ ಪರಿಣಾಮದೊಂದಿಗೆ? “[ದೇವರನ್ನು] ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು. ಅವರು ಆತನ ಭುಜಬಲವನ್ನೂ ಶತ್ರುಗಳಿಂದ ಬಿಡಿಸಿದ ಸಮಯವನ್ನೂ ಮರೆತುಬಿಟ್ಟರು.” (ಕೀರ್ತನೆ 78:41, 42) ಅಂತಿಮವಾಗಿ, ಯೆಹೋವನ ಆಜ್ಞೆಗಳ ಅವರ ವಿಸ್ಮರಣೆಯು, ಆತನು ಅವರನ್ನು ತಳ್ಳಿಹಾಕುವುದರಲ್ಲಿ ಪರ್ಯವಸಾನಗೊಂಡಿತು.—ಮತ್ತಾಯ 21:42, 43.
“ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು. ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು,” ಎಂದು ಬರೆದ ಕೀರ್ತನೆಗಾರನಿಂದ ಒಂದು ಶ್ರೇಷ್ಠ ಮಾದರಿಯು ಇಡಲ್ಪಟ್ಟಿತು. (ಕೀರ್ತನೆ 77:11, 12) ಗತಕಾಲದ ನಿಷ್ಠಾವಂತ ಸೇವೆ ಮತ್ತು ಯೆಹೋವನ ಪ್ರೀತಿಯ ಕೃತ್ಯಗಳನ್ನು ಹೀಗೆ ಧ್ಯಾನಪೂರ್ವಕವಾಗಿ ನೆನಪಿಸಿಕೊಳ್ಳುವುದು, ನಮಗೆ ಬೇಕಾದ ಪ್ರೇರಕ ಶಕ್ತಿ, ಪ್ರೋತ್ಸಾಹನೆ, ಮತ್ತು ಗಣ್ಯತೆಯನ್ನು ಒದಗಿಸುವುದು. ಇನ್ನು, “ಹಿಂದಿನ ದಿನಗಳನ್ನು ನೆನಪಿಗೆ” ತಂದುಕೊಳ್ಳುವುದು, ನಮ್ಮ ದಣಿವನ್ನು ತೊಲಗಿಸುವ ಕಾರ್ಯವನ್ನು ಮಾಡಿ, ನಮಗೆ ಸಾಧ್ಯವಿರುವುದನ್ನೆಲ್ಲ ಮಾಡಲು ಮತ್ತು ನಂಬಿಗಸ್ತಿಕೆಯ ಸಹನೆಗೆ ನಮ್ಮನ್ನು ಉತ್ತೇಜಿಸಬಲ್ಲದು.
ಗತ ತಪ್ಪುಗಳಿಂದ ಕಲಿಯುವುದು
ಎರಡನೆಯದಾಗಿ, ಅವಿಸ್ಮರಣೆಯು ಗತ ದೋಷಗಳಿಂದ ಮತ್ತು ಅವುಗಳ ಪರಿಣಾಮಗಳಿಂದ ಕಲಿಯುವ ಮಾಧ್ಯಮವಾಗಬಲ್ಲದು. ಇದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ, ಮೋಶೆಯು ಇಸ್ರಾಯೇಲ್ಯರಿಗೆ ಸಲಹೆ ನೀಡಿದ್ದು: “ನೀವು ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಕೋಪಹುಟ್ಟಿಸಿದ್ದನ್ನು ನೆನಪುಮಾಡಿಕೊಳ್ಳಿರಿ; ಅದನ್ನು ಮರೆಯಬೇಡಿರಿ. ನೀವು ಐಗುಪ್ತದೇಶವನ್ನು ಬಿಟ್ಟಂದಿನಿಂದ ಈ ಸ್ಥಳಕ್ಕೆ ಬಂದ ದಿನದ ವರೆಗೂ ಯೆಹೋವನ ಆಜ್ಞೆಗಳನ್ನು ಧಿಕ್ಕರಿಸುವವರಾಗಿದ್ದಿರಿ.” (ಧರ್ಮೋಪದೇಶಕಾಂಡ 9:7) ಇಸ್ರಾಯೇಲ್ಯರ ಮಟ್ಟಿಗೆ ಅಂತಹ ಅವಿಧೇಯತೆಯ ಫಲಿತಾಂಶವು, ಮೋಶೆಯು ತೋರಿಸಿಕೊಟ್ಟಂತೆ, ‘ಅವರ ದೇವರಾದ ಯೆಹೋವನು ನಾಲ್ವತ್ತು ವರ್ಷ ಅವರನ್ನು ಅರಣ್ಯದಲ್ಲಿ ನಡಿಸಿದನು.’ ಇದನ್ನು ಜ್ಞಾಪಿಸಿಕೊಳ್ಳುವಂತೆ ಅವರನ್ನು ಏಕೆ ಪ್ರೋತ್ಸಾಹಿಸಲಾಯಿತು? ಅವರು “[ತಮ್ಮ] ಯೆಹೋವ ದೇವರ ಮಾರ್ಗಗಳಲ್ಲಿ ನಡೆಯುವ ಮೂಲಕ ಮತ್ತು ಆತನಿಗೆ ಭಯಪಡುವ ಮೂಲಕ ಆತನ ಆಜ್ಞೆಗಳನ್ನು ಅನುಸರಿಸು”ವವರಾಗುವಂತೆ (NW) ಅವರನ್ನು ತಗ್ಗಿಸಲಿಕ್ಕಾಗಿ ಮತ್ತು ಅವರ ಪ್ರತಿಭಟನಾ ಮಾರ್ಗಗಳನ್ನು ತಿದ್ದಲಿಕ್ಕಾಗಿಯೆ. (ಧರ್ಮೋಪದೇಶಕಾಂಡ 8:2-6) ತಮ್ಮ ಹಿಂದಿನ ತಪ್ಪುಗಳನ್ನು ಪುನರಾವೃತ್ತಿಸದಿರುವ ಅರ್ಥದಲ್ಲಿ ಅವರು ಕಲಿಯಬೇಕಾಗಿತ್ತು.
ಒಬ್ಬ ಲೇಖಕನು ಅವಲೋಕಿಸಿದ್ದು: “ಒಬ್ಬ ಜಾಗರೂಕ ವ್ಯಕ್ತಿಯು ವೈಯಕ್ತಿಕ ಅನುಭವದಿಂದಲೂ ಒಬ್ಬ ವಿವೇಕಿಯು ಇತರರ ಅನುಭವದಿಂದಲೂ ಪ್ರಯೋಜನ ಪಡೆಯುತ್ತಾನೆ.” ಇಸ್ರಾಯೇಲಿನ ಜನರು ತಮ್ಮ ಸ್ವಂತ ಹಿಂದಿನ ತಪ್ಪುಗಳ ಪರಿಗಣಿಸುವಿಕೆಯಿಂದ ಲಾಭ ಪಡೆಯುವಂತೆ ಮೋಶೆಯು ಕರೆಕೊಟ್ಟಾಗ, ಅಪೊಸ್ತಲ ಪೌಲನು ಇತರರಿಗೆ—ಒಂದನೆಯ ಶತಮಾನದ ಕೊರಿಂಥ ಸಭೆಗೆ ಮತ್ತು ಅರ್ಥವಿಸ್ತಾರಕವಾಗಿ ನಮಗೆ—ಅದೇ ಐತಿಹಾಸಿಕ ದಾಖಲೆಯಿಂದ ಒಂದು ಪಾಠವನ್ನು ಹೀರಿಕೊಳ್ಳುವಂತೆ ಬುದ್ಧಿಹೇಳಿದನು. ಅವನು ಬರೆದುದು: “ಅವರಿಗೆ [ಇಸ್ರಾಯೇಲ್ಯರಿಗೆ] ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.” (1 ಕೊರಿಂಥ 10:11, ಓರೆಅಕ್ಷರಗಳು ನಮ್ಮವು.) ಯೇಸು ಕ್ರಿಸ್ತನು, “ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದಾಗ, ಇನ್ನೊಂದು ಪುರಾತನ ಬೈಬಲ್ ಸಂಬಂಧಿತ ಘಟನೆಯೂ ಅದರಿಂದ ಕಲಿಯುವ ಆವಶ್ಯಕತೆಯೂ, ಅವನ ಮನಸ್ಸಿನಲ್ಲಿತ್ತು. (ಲೂಕ 17:32; ಆದಿಕಾಂಡ 19:1-26) ಇಂಗ್ಲಿಷ್ ಕವಿಯೂ ತತ್ವಜ್ಞಾನಿಯೂ ಆದ ಸ್ಯಾಮುವೆಲ್ ಟೆಯ್ಲರ್ ಕೋಲ್ರಿಜ್ ಬರೆದುದು: “ಮನುಷ್ಯರು ಇತಿಹಾಸದಿಂದ ಕಲಿಯಬಲ್ಲರಾದರೆ, ಅದು ನಮಗೆ ಎಂತಹ ಪಾಠಗಳನ್ನು ಕಲಿಸೀತು!”
ಮಿತವರ್ತನೆ ಮತ್ತು ಕೃತಜ್ಞತೆ
ಮೂರನೆಯದಾಗಿ, ಜ್ಞಾಪಿಸಿಕೊಳ್ಳುವಿಕೆಯು ನಮ್ಮಲ್ಲಿ ದೇವರನ್ನು ಮೆಚ್ಚಿಸುವ ಗುಣಗಳಾದ ಮಿತವರ್ತನೆ ಮತ್ತು ಕೃತಜ್ಞತೆಗಳನ್ನು ಉಂಟುಮಾಡಬಲ್ಲದು. ನಮ್ಮ ಲೋಕವ್ಯಾಪಕವಾದ ಆತ್ಮಿಕ ಪ್ರಮೋದವನದ ಅನೇಕ ಅಂಶಗಳಲ್ಲಿ ನಾವು ಹರ್ಷಿಸುವಾಗ, ಅದು ನಿರ್ದಿಷ್ಟ ಕಟ್ಟುವ ಕಲ್ಲುಗಳ ಮೇಲೆ ಆಧಾರಿಸುತ್ತದೆಂಬುದನ್ನು ನಾವು ಎಂದಿಗೂ ಮರೆಯದಿರುವಂತಾಗಲಿ. ಇವುಗಳಲ್ಲಿ ನಿಷ್ಠೆ, ಪ್ರೀತಿ, ಸ್ವತ್ಯಾಗ, ಆಪತ್ತಿನ ಎದುರಿನಲ್ಲಿ ಧೈರ್ಯ, ಸಹನೆ, ದೀರ್ಘಶಾಂತಿ ಮತ್ತು ನಂಬಿಕೆ ಎಂಬ ಗುಣಗಳು—ದಶಕಗಳ ಹಿಂದೆ ವಿವಿಧ ದೇಶಗಳಲ್ಲಿ ಕಾರ್ಯಾರಂಭವನ್ನು ಮಾಡಿದ ನಮ್ಮ ಕ್ರೈಸ್ತ ಸಹೋದರ, ಸಹೋದರಿಯರು ತೋರಿಸಿದ ಗುಣಗಳು ಸೇರಿವೆ. ಮೆಕ್ಸಿಕೊ ದೇಶದಲ್ಲಿ ದೇವರ ಜನರ ಆಧುನಿಕ ದಿನಗಳ ಇತಿಹಾಸದ ಕುರಿತ ತನ್ನ ವರದಿಯನ್ನು ಮುಗಿಸುವಾಗ, ಯೆಹೋವನ ಸಾಕ್ಷಿಗಳ 1995 ವರ್ಷಪುಸ್ತಕ (ಇಂಗ್ಲಿಷ್) ಹೇಳಿದ್ದು: “ಯೆಹೋವನ ಸಾಕ್ಷಿಗಳೊಂದಿಗೆ ಕೇವಲ ಇತ್ತೀಚೆಗೆ ಜೊತೆಗೊಂಡಿರುವವರಿಗೆ, ಮೆಕ್ಸಿಕೋದಲ್ಲಿ ಕೆಲಸವನ್ನು ಪ್ರಾರಂಭಿಸುವುದರಲ್ಲಿ ಭಾಗಿಗಳಾದವರು ಎದುರಿಸಿದ ಪರೀಕ್ಷೆಗಳು ಬೆರಗನ್ನುಂಟುಮಾಡಬಹುದು. ಸಮೃದ್ಧವಾದ ಆತ್ಮಿಕಾಹಾರವಿರುವ, ದೇವರಿಗೆ ಭಯಪಡುವ ಲಕ್ಷಾಂತರ ಮಂದಿ ಜೊತೆಗಾರರಿರುವ ಮತ್ತು ದೇವರಿಗೆ ಸೇವೆಯು ಸುವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲ್ಪಡುವ ಒಂದು ಆತ್ಮಿಕ ಪ್ರಮೋದವನವು ಅವರಿಗೆ ರೂಢಿಯಾಗಿದೆ.”
ಆ ಆದಿಯ ಮಾರ್ಗಕಲ್ಪಕರು ಅನೇಕ ವೇಳೆ ಒಬ್ಬೊಂಟಿಗರಾಗಿ ಅಥವಾ ಚಿಕ್ಕ ಚೆದರಿರುವ ಗುಂಪುಗಳಲ್ಲಿ ಕೆಲಸಮಾಡಿದರು. ಅವರು ರಾಜ್ಯಸಂದೇಶವನ್ನು ಘೋಷಿಸುವುದರಲ್ಲಿ ಸತತ ಸಾಧನೆ ಮಾಡುತ್ತಿದ್ದಾಗ, ಏಕಾಂತತೆ, ಅಭಾವ ಮತ್ತು ಸಮಗ್ರತೆಯ ಇತರ ಕಠಿನ ಪರೀಕ್ಷೆಗಳನ್ನು ಎದುರಿಸಿದರು. ಹಿಂದಿನ ಸಮಯಗಳ ಈ ಅನೇಕ ಮಂದಿ ಸೇವಕರು ಮರಣಪಟ್ಟು ಭೂದೃಶ್ಯದಿಂದ ಅಗಲಿದ್ದಾರಾದರೂ, ಯೆಹೋವನು ಅವರ ನಂಬಿಗಸ್ತಿಕೆಯ ಸೇವೆಯನ್ನು ಜ್ಞಾಪಿಸಿಕೊಳ್ಳುತ್ತಾನೆಂದು ತಿಳಿಯುವುದು ಎಷ್ಟೊಂದು ಹೃದಯೋಲ್ಲಾಸಗೊಳಿಸುವ ವಿಷಯ! “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ,” ಎಂದು ಬರೆದಾಗ ಅಪೊಸ್ತಲ ಪೌಲನು ಇದನ್ನು ದೃಢೀಕರಿಸಿದನು. (ಇಬ್ರಿಯ 6:10) ಯೆಹೋವನು ಗಣ್ಯತೆಯಿಂದ ಜ್ಞಾಪಿಸಿಕೊಳ್ಳುವಲ್ಲಿ, ನಾವೂ ಕೃತಜ್ಞತಾ ಮನೋಭಾವದಿಂದ ತದ್ರೀತಿ ಮಾಡಬಾರದೊ?
ಸತ್ಯದೊಂದಿಗೆ ಹೊಸದಾಗಿ ಪರಿಚಯ ಮಾಡಿಕೊಂಡಿರುವವರು, ಈ ಐತಿಹಾಸಿಕ ಪರಿದೃಶ್ಯವನ್ನು ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪ್ರಕಾಶನದ ಮೂಲಕ ಪಡೆದುಕೊಳ್ಳಬಲ್ಲರು.a ಅಲ್ಲದೆ, ಯಾವುದರ ಸದಸ್ಯರು ದೀರ್ಘಕಾಲ ಸೇವೆಮಾಡಿರುವ ಪ್ರಾಯಸ್ಥ ಸಹೋದರರನ್ನು ಅಥವಾ ಸಹೋದರಿಯರನ್ನು ಒಳಗೊಂಡಿರುತ್ತವೆಯೊ, ಆ ಕುಟುಂಬ ಅಥವಾ ಕ್ರೈಸ್ತ ಸಭೆಗೆ ಸೇರಿರುವ ಸುಯೋಗ ನಮ್ಮದಾಗಿರುವುದಾದರೆ, ಧರ್ಮೋಪದೇಶಕಾಂಡ 32:7ರ ಆತ್ಮದಲ್ಲಿ ನಾವು ಹೀಗೆ ಪ್ರೇರೇಪಿಸಲ್ಪಡುತ್ತೇವೆ: “ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ; ಪೂರ್ವಿಕರ ಚರಿತ್ರೆಯನ್ನು ಆಲೋಚಿಸಿರಿ. ನಿಮ್ಮ ನಿಮ್ಮ ತಂದೆಗಳನ್ನು ವಿಚಾರಿಸಿದರೆ ಅವರು ತಿಳಿಸುವರು; ಹಿರಿಯರನ್ನು ಕೇಳಿದರೆ ಅವರು ವಿವರಿಸುವರು.”
ಹೌದು, ಹಿಂದಿನ ದೇವಭಕ್ತಿಯ ಕೃತ್ಯಗಳ ಜ್ಞಾಪಿಸಿಕೊಳ್ಳುವಿಕೆಯು, ನಮ್ಮ ಕ್ರೈಸ್ತ ಸೇವೆಯಲ್ಲಿ ನಾವು ಆನಂದದಿಂದ ತಾಳಿಕೊಳ್ಳುತ್ತ ಮುಂದುವರಿಯುವಂತೆ ನಮ್ಮನ್ನು ಪ್ರಚೋದಿಸಬಲ್ಲದು. ಅಲ್ಲದೆ, ನಾವು ಕಲಿಯಲು ಅಗತ್ಯವಿರುವ ಪಾಠಗಳು ಇತಿಹಾಸದಲ್ಲಿ ಸೇರಿವೆ. ಮತ್ತು ನಮ್ಮ ದೇವಾಶೀರ್ವದಿತ ಪ್ರಮೋದವನದ ಕುರಿತು ಮನನ ಮಾಡುವಿಕೆಯು, ಮಿತವರ್ತನೆ ಮತ್ತು ಕೃತಜ್ಞತೆ ಎಂಬ ಶೋಭಿಸುವ ಗುಣಗಳನ್ನು ಉಂಟುಮಾಡುತ್ತದೆ. ನಿಜವಾಗಿಯೂ, “ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.”
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ.