ಪ್ರಕಟನೆಗಳು
◼ ಡಿಸೆಂಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ನೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಜನವರಿ: ಅರ್ಧ ದರ ಮತ್ತು ವಿಶೇಷ ದರದಂತೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟದ ಹಳೆಯ ಪುಸ್ತಕ. ಫೆಬ್ರವರಿ: ಕುಟುಂಬ ಸಂತೋಷದ ರಹಸ್ಯ. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ವಿಶೇಷವಾದ ಪ್ರಯತ್ನವನ್ನು ಮಾಡಲಾಗುವುದು.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವನು ಸಭೆಯ ಅಕೌಂಟ್ಸನ್ನು ಡಿಸೆಂಬರ್ 1 ಅಥವಾ ಆದಷ್ಟು ಬೇಗನೆ ಲೆಕ್ಕಪರೀಕ್ಷೆಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯು ಓದಲ್ಪಟ್ಟ ನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.
◼ ಜನವರಿ 1999ರಿಂದ, ಸರ್ಕಿಟ್ ಮೇಲ್ವಿಚಾರಕರು “ನೀವು ದೇವರೊಂದಿಗೆ ನಡೆಯುತ್ತಿದ್ದೀರೋ?” ಎಂಬ ಸಾರ್ವಜನಿಕ ಭಾಷಣವನ್ನು ನೀಡುವರು. ಮಂಗಳವಾರದ ಸಂಜೆಯಂದು, ಸರ್ಕಿಟ್ ಮೇಲ್ವಿಚಾರಕನು, “ಯೆಹೋವನ ಮೇಜಿನಿಂದ ಕ್ರಮವಾಗಿ ಉಣ್ಣುವುದು” ಎಂಬ ಶೀರ್ಷಿಕೆಯುಳ್ಳ ಭಾಷಣವನ್ನು ಕೊಡುವನು. ಮತ್ತು ಗುರುವಾರ (ಅಥವಾ ಶುಕ್ರವಾರ)ದ ಸಂಜೆಯಂದು, “ದೇವರ ರಾಜ್ಯ—ಅದರ ಅರ್ಥವನ್ನು ನೀವು ಗ್ರಹಿಸಿಕೊಳ್ಳುತ್ತಿದ್ದೀರೋ?” ಎಂಬ ವಿಷಯದ ಬಗ್ಗೆ ಮಾತಾಡುವನು.
◼ 1999ರ ವಾರ್ಷಿಕ ವಚನವು, “ಇದೇ ಆ ರಕ್ಷಣೆಯ ದಿನ”—2 ಕೊರಿಂಥ 6:2 ಆಗಿದೆ. ಸಭೆಗಳು ಹೊಸ ವಾರ್ಷಿಕವಚನವನ್ನು ಬೋರ್ಡಿನ ಮೇಲೆ ಬರೆಸಿ ತಯಾರುಮಾಡಿಟ್ಟರೆ ಒಳ್ಳೆಯದಾಗಿರುವುದು. ಹೀಗೆ ಮಾಡುವುದರಿಂದ ಜನವರಿ 1, 1999ರಂದು ಅಥವಾ ಅನಂತರ ಆದಷ್ಟು ಬೇಗನೇ ಅದನ್ನು ತೂಗುಹಾಕಸಾಧ್ಯವಿದೆ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ (ಮುಸಲ್ಮಾನರಿಗೆ)—ಅಸ್ಸಾಮಿ, ಇಂಗ್ಲಿಷ್, ಒರಿಯ, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಬಂಗಾಲಿ, ಮರಾಠಿ, ಮಲಯಾಳಂ, ಮತ್ತು ಹಿಂದಿ
◼ ಲಭ್ಯವಿರುವ ಹೊಸ ಕಾಂಪ್ಯಾಕ್ಟ್ ಡಿಸ್ಕ್:
CD-ROM ವಾಚ್‌ಟವರ್ ಲೈಬ್ರರಿ—1997
CD-ROMನ ಬೆಲೆ ಪಯನೀಯರು ಮತ್ತು ಪ್ರಚಾರಕರಿಗೆ ರೂ. 400.00 ಆಗಿದೆ. ಮೇಲೆ ತಿಳಿಸಲ್ಪಟ್ಟಿರುವ ಈ CD-ROM ಕೇವಲ ಸಭೆಯ ಸದಸ್ಯರಿಗಾಗಿ ಮಾತ್ರವೇ ಸಿಗುವುದು.
ವಾಚ್‌ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ 1997—ಇಂಗ್ಲಿಷ್ (ಪಯನೀಯರಿಗೆ ರೂ. 8.00 ಮತ್ತು ಸಭೆ/ಸಾರ್ವಜನಿಕರಿಗೆ: ರೂ. 12.00)