ಡಿಸೆಂಬರ್ಗಾಗಿ ಸೇವಾ ಕೂಟಗಳು
ಡಿಸೆಂಬರ್ 7ರಿಂದ ಆರಂಭವಾಗುವ ವಾರ
ಸಂಗೀತ 186 (22)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ನಾವು ಪುನಃ ಪುನಃ ಭೇಟಿಮಾಡಬೇಕು.” ಪ್ರಶ್ನೋತ್ತರಗಳು. ಎಚ್ಚರಿಕೆಯ ಸಂದೇಶವನ್ನು ಹೇಳುತ್ತಾ ಇರುವ ನಮ್ಮ ಜವಾಬ್ದಾರಿಯನ್ನು ಎತ್ತಿಹೇಳುತ್ತಾ, ಯೆಹೆಜ್ಕೇಲ 3:17-19ರ ಕುರಿತಾಗಿ ಸಂಕ್ಷಿಪ್ತ ಹೇಳಿಕೆಯನ್ನು ನೀಡಿರಿ.
20 ನಿ: “ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ನೀಡುವುದು.” ಈ ಲೇಖನವನ್ನು ಒಬ್ಬ ಹಿರಿಯನು ಇಬ್ಬರು ಅಥವಾ ಮೂವರು ಸಮರ್ಥ ಪ್ರಚಾರಕರೊಂದಿಗೆ ಚರ್ಚಿಸುತ್ತಾನೆ. “ಆಲ್ ಸ್ಕ್ರಿಪ್ಚರ್” ಪುಸ್ತಕದ, 327-31ನೆಯ ಪುಟಗಳಿಂದ ಕೆಲವೊಂದು ಸೂಕ್ತ ಅಂಶಗಳನ್ನು ಸೇರಿಸಿರಿ. ಡಿಸೆಂಬರ್ ತಿಂಗಳಿನಲ್ಲಿ ಬೈಬಲನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 176 (8) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 14ರಿಂದ ಆರಂಭವಾಗುವ ವಾರ
ಸಂಗೀತ 206 (6)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಲೌಕಿಕ ರಜಾ ದಿನದ ಅಭಿವಂದನೆಗಳಿಗೆ ಹೇಗೆ ಜಾಣತನದಿಂದ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿರಿ. ಅತ್ಯಂತ ಮಹಾನ್ ಪುರುಷ ಅಥವಾ ಮಹಾ ಬೋಧಕ ಪುಸ್ತಕಗಳ ಪ್ರತಿಗಳು ಸಭೆಯಲ್ಲಿರುವುದಾದರೆ, ಕ್ರಿಸ್ಮಸ್ ರಜಾದಿನಗಳಲ್ಲಿ ಇವುಗಳನ್ನು ಶುಶ್ರೂಷೆಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ ಎಂಬುದನ್ನು ತೋರಿಸಿರಿ. ಡಿಸೆಂಬರ್ 25 ಮತ್ತು ಜನವರಿ 1ರಂದು ವಿಶೇಷ ಕ್ಷೇತ್ರ ಸೇವಾ ಏರ್ಪಾಡುಗಳ ಬಗ್ಗೆ ಸಭೆಗೆ ತಿಳಿಸಿರಿ.
15 ನಿ: “ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು—ಕಾವಲಿನಬುರುಜು ಪತ್ರಿಕೆಯ ಅಭ್ಯಾಸ ಸಂಚಾಲಕ.” ಕಾವಲಿನಬುರುಜು ಅಭ್ಯಾಸ ಸಂಚಾಲಕನಿಂದ ಒಂದು ಭಾಷಣ. ಅವನು ತನ್ನ ಜವಾಬ್ದಾರಿಗಳನ್ನು ತಿಳಿಸುತ್ತಾನೆ ಮತ್ತು ಉಪಸ್ಥಿತರಿರುವವರೆಲ್ಲರೂ ಅಭ್ಯಾಸವನ್ನು ಹೇಗೆ ಸ್ವಾರಸ್ಯಕರವೂ, ಬೋಧಪ್ರದವೂ ಮತ್ತು ಆತ್ಮಿಕವಾಗಿ ಕಟ್ಟುವಂತಹದ್ದೂ ಆಗಿ ಮಾಡಸಾಧ್ಯವಿದೆ ಎಂಬುದನ್ನು ವಿವರಿಸುತ್ತಾನೆ.—ನಮ್ಮ ಶುಶ್ರೂಷೆ, ಪುಟ 67ನ್ನು ನೋಡಿರಿ.
20 ನಿ: “ನಾವು ಭಿನ್ನರಾಗಿದ್ದೇವೆಂಬುದನ್ನು ಅವರು ನೋಡಬಲ್ಲರು.” ಪ್ರಶ್ನೋತ್ತರಗಳು. ನಮ್ಮನ್ನು ಅಸಾಧಾರಣರನ್ನಾಗಿ ಮಾಡುವ ಪ್ರತಿಯೊಂದು ವೈಶಿಷ್ಟ್ಯವನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. ಆಸಕ್ತ ಜನರನ್ನು ಸಂಸ್ಥೆಯ ಕಡೆಗೆ ಮಾರ್ಗದರ್ಶಿಸುವುದರಲ್ಲಿ ಮತ್ತು ಸತ್ಯವು ಅದಕ್ಕನುಸಾರವಾಗಿ ಜೀವಿಸುವವರಲ್ಲಿ ಕ್ರಿಸ್ತೀಯ ಗುಣಗಳನ್ನು ಹೇಗೆ ಉಂಟುಮಾಡುತ್ತದೆಂಬುದನ್ನು ಅವರಿಗೆ ತೋರಿಸುವುದರಲ್ಲಿ ಈ ಮಾಹಿತಿಯನ್ನು ಉಪಯೋಗಿಸಸಾಧ್ಯವಿರುವ ವಿಧವನ್ನು ತೋರಿಸಿರಿ.
ಸಂಗೀತ 146 (11) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 21ರಿಂದ ಆರಂಭವಾಗುವ ವಾರ
ಸಂಗೀತ 163 (23)
8 ನಿ: ಸ್ಥಳಿಕ ತಿಳಿಸುವಿಕೆಗಳು. ಹೊಸ ವರ್ಷದಲ್ಲಿ ನಿಮ್ಮ ಸಭೆಯು ಕೂಟದ ಸಮಯಗಳನ್ನು ಬದಲಾಯಿಸುವುದಾದರೆ, ಅದರ ಹೊಸ ಸಮಯಗಳಿಗೆ ಹೊಂದಿಕೊಂಡು, ಎಲ್ಲರೂ ಕ್ರಮವಾಗಿ ಹಾಜರಾಗುವಂತೆ ಸ್ನೇಹಭಾವದಿಂದ ಉತ್ತೇಜಿಸಿರಿ. ಯಾವುದೇ ಬದಲಾವಣೆಗಳಿದ್ದಲ್ಲಿ ಬೈಬಲ್ ವಿದ್ಯಾರ್ಥಿಗಳಿಗೆ ಮತ್ತು ಇತರ ಆಸಕ್ತ ಜನರಿಗೆ ತಿಳಿಸುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಎಲ್ಲ ಪ್ರಚಾರಕರು ನಮ್ಮ ರಾಜ್ಯದ ಸೇವೆಯ ವೈಯಕ್ತಿಕ ಪ್ರತಿಗಳನ್ನು, ವಿಶೇಷವಾಗಿ ಪುರವಣಿಗಳನ್ನು ಸುರಕ್ಷಿತವಾಗಿ ಇಡುವಂತೆ ಉತ್ತೇಜಿಸಿರಿ. ಭವಿಷ್ಯತ್ತಿನಲ್ಲಿ ಬಹುಶಃ ಅವುಗಳನ್ನು ನಾವು ಆಗಾಗ್ಗೆ ಉಪಯೋಗಿಸುವೆವು. ಮುಂದಿನ ವಾರದ ಸೇವಾ ಕೂಟಕ್ಕೆ, ಮೇ 1998ರ ನಮ್ಮ ರಾಜ್ಯದ ಸೇವೆಯ ಪುರವಣಿಯನ್ನು ತರುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ.
12 ನಿ: ಸ್ಥಳಿಕ ಅಗತ್ಯಗಳು.
25 ನಿ: “ಯೆಹೋವನ ಸೇವೆಯ ಸುತ್ತಲೂ ನಿಮ್ಮ ಜೀವಿತವನ್ನು ಕಟ್ಟಿರಿ.” ಪ್ರಶ್ನೋತ್ತರಗಳು. ಪ್ರತಿ ವಾರ ಕ್ಷೇತ್ರ ಸೇವೆಯಲ್ಲಿ ಸ್ಥಿರವಾದ, ಕ್ರಮವಾದ ಶೆಡ್ಯೂಲನ್ನು ಯಶಸ್ವಿಕರವಾಗಿ ಕಾಪಾಡಿಕೊಂಡಿರುವ ಒಬ್ಬ ಅವಿವಾಹಿತ ವ್ಯಕ್ತಿ ಮತ್ತು ಒಬ್ಬ ಕುಟುಂಬ ಮುಖ್ಯಸ್ಥನನ್ನು ಸಂದರ್ಶನ ಮಾಡಿರಿ. ಆತ್ಮಿಕ ಅಭಿರುಚಿಗಳಿಗೆ ಆದ್ಯತೆಯನ್ನು ಕೊಡುವುದಕ್ಕಾಗಿ ಯಾವ ರೀತಿಯ ವೈಯಕ್ತಿಕ ವ್ಯವಸ್ಥೆಯು ಅಗತ್ಯವಾಗಿದೆ ಎಂಬುದನ್ನು ಅವರು ಹೇಳಲಿ.
ಸಂಗೀತ 119 (17) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 28ರಿಂದ ಆರಂಭವಾಗುವ ವಾರ
ಸಂಗೀತ 178 (20)
10 ನಿ: ಸ್ಥಳಿಕ ತಿಳಿಸುವಿಕೆಗಳು. ಡಿಸೆಂಬರ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ. ಜನವರಿ ತಿಂಗಳಿನ ಸಾಹಿತ್ಯ ನೀಡುವಿಕೆಗಾಗಿ ಲಭ್ಯವಿರುವ ಹಳೆಯ ಪುಸ್ತಕಗಳನ್ನು ತೋರಿಸಿರಿ. ಈ ವಾರಾಂತ್ಯದಲ್ಲಿ ವಿತರಿಸುವುದಕ್ಕಾಗಿ ಕೆಲವೊಂದು ಪುಸ್ತಕಗಳನ್ನು ಕೊಂಡುಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
10 ನಿ: “1999ರ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಕಾರ್ಯಕ್ರಮದಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ.” ದೇವಪ್ರಭುತ್ವ ಶುಶ್ರೂಷಾ ಶಾಲೆಯ ಮೇಲ್ವಿಚಾರಕನಿಂದ ಭಾಷಣ. ಪ್ರತಿ ವಾರ “ಸಂಪೂರಕ ಬೈಬಲ್-ವಾಚನ ಶೆಡ್ಯೂಲ್” ಅನ್ನು ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ ತಮಗಾದ ಪ್ರಯೋಜನಗಳ ಕುರಿತಾಗಿ ಕೆಲವು ಪ್ರಚಾರಕರು ಹೇಳಲಿ. ದೇವರ ವಾಕ್ಯವನ್ನು ಪ್ರತಿನಿತ್ಯವೂ ಓದುವಂತೆ ಎಲ್ಲರನ್ನೂ ಉತ್ತೇಜಿಸಿರಿ.
25 ನಿ: ಮೇ 1998ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ “ಬೇಕಾಗಿವೆ—ಹೆಚ್ಚು ಬೈಬಲ್ ಅಭ್ಯಾಸಗಳು” ಎಂಬ ವಿಷಯವನ್ನು ಸೇವಾ ಮೇಲ್ವಿಚಾರಕನು ಪುನರ್ವಿಮರ್ಶಿಸುತ್ತಾನೆ. ಮೇ 1998ರಂದಿನಿಂದ ಆಗಿರುವ ಬೈಬಲ್ ಅಭ್ಯಾಸದ ಚಟುವಟಿಕೆಯ ಪ್ರಗತಿಯನ್ನು ಪುನರ್ವಿಮರ್ಶಿಸಿರಿ. ಬೈಬಲ್ ಅಭ್ಯಾಸವೊಂದನ್ನು ಹೊಂದಿರದವರು ಈ ವಿಷಯವನ್ನು ಆಗಿಂದಾಗ್ಗೆ ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವಂತೆ ಉತ್ತೇಜಿಸಿರಿ. ಸಭೆಯಲ್ಲಿರುವವರು ಒಂದು ಬೈಬಲ್ ಅಭ್ಯಾಸವನ್ನು ಈಗಾಗಲೇ ನಡೆಸುತ್ತಿರುವುದಾದರೂ, ಇನ್ನೂ ಹೆಚ್ಚಿನ ಬೈಬಲ್ ಅಭ್ಯಾಸಗಳನ್ನು ನಡೆಸುವಂತೆ ಅವರನ್ನು ಉತ್ತೇಜಿಸಸಾಧ್ಯವಿದೆ.
ಸಂಗೀತ 195 (8) ಮತ್ತು ಸಮಾಪ್ತಿಯ ಪ್ರಾರ್ಥನೆ.