ಕುಟುಂಬ ಸದಸ್ಯರು ಪೂರ್ಣವಾಗಿ ಪಾಲ್ಗೊಳ್ಳುವುದಕ್ಕಾಗಿ ಸಹಕರಿಸುವ ವಿಧ—ಶುಶ್ರೂಷೆಯಲ್ಲಿ
1 ಪತಿಪತ್ನಿಯರು ಮತ್ತು ಮಕ್ಕಳಾದಿ ಎಲ್ಲರೂ ಕ್ರೈಸ್ತ ಶುಶ್ರೂಷೆಯಲ್ಲಿ, ಯೆಹೋವನ ಹೆಸರನ್ನು ಸಾರ್ವಜನಿಕವಾಗಿ ಸ್ತುತಿಸುತ್ತಿರುವುದನ್ನು ನೋಡುವುದಕ್ಕಿಂತಲೂ ಇನ್ಯಾವ ವಿಷಯವು ಹೆಚ್ಚು ಸಂತೋಷವನ್ನು ತರುವಂತಹದ್ದಾಗಿರಸಾಧ್ಯವಿದೆ? (ಕೀರ್ತ. 148:1,2 13) ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದನ್ನು ಎಲ್ಲ ಕುಟುಂಬಗಳು ರೂಢಿಮಾಡಿಕೊಳ್ಳಬೇಕು. ಶುಶ್ರೂಷೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ವಾರದಲ್ಲಿ ಒಂದು ದಿನವನ್ನು ನಿಮ್ಮ ಕುಟುಂಬವು ನಿಗದಿಪಡಿಸಿದೆಯೋ? ಹಾಗಿದ್ದಲ್ಲಿ, ಏನನ್ನು ಮಾಡಬೇಕು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡು, ಪೂರ್ಣ ಪಾಲನ್ನು ತೆಗೆದುಕೊಳ್ಳಸಾಧ್ಯವಿದೆ.—ಜ್ಞಾನೋ. 21:5ಎ.
2 ನಿಗದಿಪಡಿಸಿದ ದಿನದಂದು ಕುಟುಂಬವಾಗಿ ಕ್ಷೇತ್ರ ಸೇವೆಗೆ ಹೋಗುವ ಮುಂಚೆ, ನಿಮ್ಮ ಕುಟುಂಬವು ಉಪಯೋಗಿಸಲಿರುವ ನಿರೂಪಣೆಗಳನ್ನು ಒಟ್ಟಿಗೆ ಏಕೆ ತಯಾರಿಸಬಾರದು? ಅಭ್ಯಾಸಾವಧಿಗಳು ಹೆಚ್ಚು ಸಹಾಯಕಾರಿಯಾಗಿರಬಲ್ಲವು ಮತ್ತು ಅವು ಕುಟುಂಬ ಸಹಕಾರದ ನಿಜ ಆತ್ಮವನ್ನು ತರಬಲ್ಲವು. ಕುಟುಂಬವಾಗಿ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದು ಮತ್ತು ಸದಸ್ಯರೆಲ್ಲರೂ ಚೆನ್ನಾಗಿ ಸಿದ್ಧರಾಗಿರುವುದು ಎಷ್ಟು ಪ್ರತಿಫಲದಾಯಕವಾದ ವಿಷಯ!
3 ಒಬ್ಬ ಸಂಚರಣ ಮೇಲ್ವಿಚಾರಕನು ಒಂದು ಕುಟುಂಬದೊಟ್ಟಿಗೆ ಪತ್ರಿಕಾ ಚಟುವಟಿಕೆಯಲ್ಲಿ ಜೊತೆಗೂಡಿದನು. ಮನೆಯಿಂದ ಮನೆಗೆ ಪ್ರಚಾರಮಾಡುತ್ತಿದ್ದಾಗ ಪುತ್ರಿಯರಲ್ಲಿ ಒಬ್ಬಳು ಕೇಳಿದ್ದು: “ನೀವು ನನ್ನೊಟ್ಟಿಗೆ ಎಷ್ಟು ಸಮಯದ ವರೆಗೆ ಸುವಾರ್ತೆಯನ್ನು ಸಾರುತ್ತೀರಿ?” ಅನಂತರ ತಾನು ತಂದೆಯೊಟ್ಟಿಗೆ ಸುವಾರ್ತೆಯನ್ನು ಸಾರುತ್ತೇನೆಂದು ಅವಳು ಹೇಳಿದಳು. ಅವಳು ಮತ್ತು ಅವಳ ತಂದೆಯು ಸೇವೆಯನ್ನು ಒಟ್ಟಿಗೆ ಮಾಡುವುದರಲ್ಲಿ ಆನಂದಿಸಿದರು ಎಂಬುದನ್ನು ಇದು ಸ್ಪಷ್ಟಪಡಿಸಿತು. ಕುಟುಂಬವಾಗಿ ಒಟ್ಟಿಗೆ ಕಾರ್ಯಮಾಡುವುದರಲ್ಲಿ ಎಂಥ ಒಂದು ಉತ್ತಮ ಮನೋಭಾವ!
4 ವರ್ಷದಲ್ಲಿ ಒಂದು ತಿಂಗಳು ಒಟ್ಟಿಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಕೆಲವು ಕುಟುಂಬಗಳಿಗೆ ಸಾಧ್ಯವಾಗಬಹುದು. ಅಥವಾ ಕುಟುಂಬದಲ್ಲಿ ಒಬ್ಬ ಸದಸ್ಯನು ಕ್ರಮವಾಗಿ ಆಕ್ಸಿಲಿಯರಿ ಪಯನೀಯರ್ ಸೇವೆ ಅಥವಾ ಕ್ರಮದ ಪಯನೀಯರರಾಗಿ ಸೇವೆಸಲ್ಲಿಸಲು ಶಕ್ತನಾಗಬಹುದು. ಸುಸಂಘಟನೆ ಮತ್ತು ಸಹಕಾರದೊಂದಿಗೆ, ಕುಟುಂಬದ ಸದಸ್ಯರೆಲ್ಲರೂ ಪಯನೀಯರ್ ಸೇವೆಯನ್ನು ಮಾಡುತ್ತಿರುವವರಿಗೆ ಬೆಂಬಲನ್ನು ನೀಡುವ ಮೂಲಕ, ಸೇವೆಯಲ್ಲಿ ತಮ್ಮ ವೈಯಕ್ತಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಸಾಧ್ಯವಿದೆ. ಹೆಚ್ಚಿಸಲ್ಪಟ್ಟ ಚಟುವಟಿಕೆಯಿಂದ ಮತ್ತು ಶುಶ್ರೂಷೆಯಲ್ಲಿ ಆನಂದಿಸಿದ ಒಳ್ಳೆಯ ಅನುಭವಗಳಿಂದ ಕುಟುಂಬವು ನಿಜವಾಗಿಯೂ ಆಶೀರ್ವದಿಸಲ್ಪಡುವುದು.—ಮಲಾ. 3:10.
5 ಸುವಾರ್ತಾ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವುದರಿಂದ ಕುಟುಂಬಗಳು ಯೆಹೋವನ ಸೇವೆಯಲ್ಲಿ ನಿಕಟವಾಗಿ, ಹುರುಪಿನಿಂದ, ಫಲಪ್ರದವಾಗಿ ಮತ್ತು ಸಂತೋಷದಿಂದಿರಸಾಧ್ಯವಿದೆ!—ಫಿಲಿಪ್ಪಿ 2:1, 2ನ್ನು ಹೋಲಿಸಿರಿ.