ನಾವದನ್ನು ಪುನಃ ಮಾಡುವೆವೊ?—ಆಕ್ಸಿಲಿಯರಿ ಪಯನೀಯರರಿಗಾಗಿ ಇನ್ನೊಂದು ಕರೆ
1 ನಾವೇನನ್ನು ಪುನಃ ಮಾಡುವುದು? ಜ್ಞಾಪಕದ ಕಾಲದಲ್ಲಿ ನಾವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವೆವೊ? ಫೆಬ್ರವರಿ 1997ರ ನಮ್ಮ ರಾಜ್ಯದ ಸೇವೆಯ ಪುರವಣಿಯು, ಈ ದಪ್ಪಕ್ಷರದ ಶೀರ್ಷಿಕೆಯಿಂದ ನಮ್ಮ ಗಮನವನ್ನು ಸರೆಹಿಡಿಯಿತು: “ಬೇಕಾಗಿದ್ದಾರೆ—4,000 ಆಕ್ಸಿಲಿಯರಿ ಪಯನೀಯರರು.” ನೀವು ಆ ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರೆಂದು ನಮಗೆ ಭರವಸೆಯಿತ್ತು. ನಮ್ಮ ಸಮೀಕ್ಷೆಯನ್ನು ನಾವು ಪೂರ್ಣಗೊಳಿಸಿದಾಗ, ಮಾರ್ಚ್, ಏಪ್ರಿಲ್, ಅಥವಾ ಮೇ, ಈ ಮೂರು ತಿಂಗಳುಗಳಲ್ಲಿ ಕಡಿಮೆಪಕ್ಷ ಒಂದು ತಿಂಗಳಿನಲ್ಲಿ, ಸುಮಾರು 4,250 ಪ್ರಚಾರಕರು ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಿದ್ದರೆಂಬುದನ್ನು ತಿಳಿದು ನಾವು ಹರ್ಷಿಸಿದೆವು. 1997ರ ಏಪ್ರಿಲ್ ತಿಂಗಳೊಂದರಲ್ಲೇ, 2,093 ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿ ತಮ್ಮ ಹೆಸರುಗಳನ್ನು ನಮೂದಿಸಿಕೊಂಡರು! ಆ ತಿಂಗಳಿನಲ್ಲಿ ವರದಿಸಿದ 797 ಮಂದಿ ಕ್ರಮದ ಪಯನೀಯರರನ್ನು ಹಾಗೂ 288 ಮಂದಿ ವಿಶೇಷ ಪಯನೀಯರರನ್ನು ಆ ಸಂಖ್ಯೆಗೆ ಕೂಡಿಸಿದರೆ, ಎಲ್ಲ ಪ್ರಚಾರಕರಲ್ಲಿ 18 ಪ್ರತಿಶತಕ್ಕಿಂತ ಹೆಚ್ಚು ಮಂದಿ ಪಯನೀಯರ್ ಸೇವೆಯಲ್ಲಿದ್ದರೆಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಈ ಸಲದ ಜ್ಞಾಪಕದ ಕಾಲದಲ್ಲಿ ನಾವದನ್ನು ಪುನಃ ಮಾಡುವೆವೊ?
2 ಕಳೆದ ವರ್ಷ ತಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ಹೆಚ್ಚಿಸಲಿಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಮಾಡಿದವರೆಲ್ಲರನ್ನು ನಾವು ಹೃದಯೋಲ್ಲಾಸದಿಂದ ಶ್ಲಾಘಿಸುತ್ತೇವೆ. ನೀವೆಲ್ಲರೂ ಯೆಹೋವ ದೇವರಿಗಾಗಿ ಮತ್ತು ನಿಮ್ಮ ನೆರೆಯವರಿಗಾಗಿ ನಿಸ್ವಾರ್ಥ ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿದ್ದೀರೆಂಬುದು ಸ್ಪಷ್ಟ. (ಲೂಕ 10:27; 2 ಪೇತ್ರ 1:5-8) ಜೀವಿತದ ವಿಭಿನ್ನ ಪರಿಸ್ಥಿತಿಗಳಲ್ಲಿರುವ ಪ್ರಚಾರಕರು, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ತಮ್ಮ ವ್ಯವಹಾರಗಳನ್ನು ಏರ್ಪಡಿಸಿದರು. ಒಂದು ಸಭೆಯಲ್ಲಿ, ಒಂದೇ ತಿಂಗಳಿನಲ್ಲಿ 51 ಪ್ರಚಾರಕರು ಪಯನೀಯರ್ ಸೇವೆಯನ್ನು ಮಾಡಿದರು. ಇವರಲ್ಲಿ, ಅಧಿಕಾಂಶ ಹಿರಿಯರು, 15 ತಿಂಗಳ ಮಗಳು ಇದ್ದ ಒಬ್ಬ ತಾಯಿ, ಪಯನೀಯರ್ ಸೇವೆಯನ್ನು ಮಾಡಲು ತನ್ನನ್ನು ಶಕ್ತಗೊಳಿಸುವಂತೆ ತನ್ನ ಉದ್ಯೋಗವನ್ನು ಬಿಟ್ಟು ಅಂಶಕಾಲಿಕ ಕೆಲಸವನ್ನು ಪಡೆದ ಒಬ್ಬ ಸಹೋದರಿ, ಮತ್ತು ಹಿಂದೆಂದೂ ಪಯನೀಯರ್ ಸೇವೆಯನ್ನು ಮಾಡಿರದ ಒಬ್ಬ ವೃದ್ಧ ಸಹೋದರಿಯೂ ಸೇರಿದ್ದರು. ಸರ್ಕಿಟ್ ಮೇಲ್ವಿಚಾರಕರು ಬರೆದುದು: “ಸಾರುವ ಕಾರ್ಯದಲ್ಲಿ ಪ್ರಚಂಡವಾದ ಪ್ರಯತ್ನವು ಮಾಡಲ್ಪಡುತ್ತಾ ಇದೆ. . . . ಇದು ಟೆರಿಟೊರಿಗಳ ಮೇಲೆ ಒಂದು ಪ್ರಭಾವವನ್ನು ಬೀರುತ್ತಿದೆ ಮಾತ್ರವಲ್ಲ, ಸಭೆಗಳು ಕೂಡ ಉತ್ಸಾಹದಿಂದ ತುಂಬಿತುಳುಕುತ್ತಿವೆ. ಪರಸ್ಪರವಾಗಿ ಹೆಚ್ಚು ಚೆನ್ನಾಗಿ ತಿಳಿದುಕೊಳ್ಳುವುದರಲ್ಲಿ ಸಹೋದರರು ಆನಂದಿಸುತ್ತಿದ್ದಾರೆ ಹಾಗೂ ಶುಶ್ರೂಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣುತ್ತಿದ್ದಾರೆ.”
3 ಯುವ ಜನರೂ ಸೇರಿದ್ದರು. 13 ವರ್ಷ ಪ್ರಾಯದ ಒಬ್ಬ ಅಸ್ನಾನಿತ ಪ್ರಚಾರಕಳು, ಯೆಹೋವನಿಗೆ ತನ್ನ ಸಮರ್ಪಣೆಯನ್ನು ಸಂಕೇತಿಸಲು ಶಕ್ತಳಾಗುವ ಸಮಯಕ್ಕಾಗಿ ಎದುರುನೋಡುತ್ತಿದ್ದಳು. ಫೆಬ್ರವರಿಯಲ್ಲಿ ದೀಕ್ಷಾಸ್ನಾನಪಡೆದುಕೊಂಡ ಬಳಿಕ, ಮಾರ್ಚ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ತನ್ನ ಬಯಕೆಯ ಕುರಿತಾಗಿ ಅವಳು ಬರೆದುದು: “ಈಗ ನನ್ನನ್ನು ತಡೆದುಹಿಡಿಯಲು ಯಾವ ಕಾರಣವೂ ಇಲ್ಲದಿರುವುದರಿಂದ, ನಾನು ತತ್ಕ್ಷಣವೇ ನನ್ನ ಅರ್ಜಿಯನ್ನು ಸಲ್ಲಿಸಿದೆ. . . . ಪಯನೀಯರ್ ಸೇವೆಯನ್ನು ಮಾಡುವಂತೆ ನೀವು ನೀಡಿದ ಪ್ರೀತಿಪರ ಆಮಂತ್ರಣವಿಲ್ಲದಿರುತ್ತಿದ್ದರೆ, ನಾವು ಅನುಭವಿಸಿದ ಅನೇಕ ಅದ್ಭುತಕರ ಅನುಭವಗಳು ಎಂದೂ ನೈಜ್ಯವಾಗುತ್ತಿರಲಿಲ್ಲ. ಪ್ರತಿಕ್ರಿಯೆ ತೋರಿಸಿದವರ . . . ನಡುವೆ ಇರುವ ಈ ಸುಯೋಗವನ್ನು ಪಡೆದದ್ದಕ್ಕಾಗಿ ನಾನು ಯೆಹೋವನಿಗೆ ಆಭಾರಿಯಾಗಿದ್ದೇನೆ.” ಅವಳದನ್ನು ಪುನಃ ಮಾಡುವ ಗುರಿಯನ್ನಿಟ್ಟಿದ್ದಾಳೆ.
4 ಕಳೆದ ಮಾರ್ಚ್ ತಿಂಗಳಿನಲ್ಲಿ ಪಯನೀಯರ್ ಚಟುವಟಿಕೆಯಲ್ಲಿ ಒಳಗೂಡಿದ್ದ 1,715 ಮಂದಿ, ಅಥವಾ ಏಪ್ರಿಲ್ ತಿಂಗಳ 2,093 ಮಂದಿ, ಅಥವಾ ಮೇ ತಿಂಗಳ 1,523 ಮಂದಿಯಲ್ಲಿ ನೀವು ಒಬ್ಬರಾಗಿದ್ದಿರಬಹುದು. ನೀವದನ್ನು ಪುನಃ ಈ ವರ್ಷ ಮಾಡುವಿರೊ? ಕಳೆದ ವರ್ಷ, ಮಾರ್ಚ್, ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನೀವು ಪಯನೀಯರ್ ಸೇವೆಯನ್ನು ಮಾಡಲು ಶಕ್ತರಾಗಿರದಿದ್ದಲ್ಲಿ, ನೀವು ಅದನ್ನು ಈ ವರ್ಷ ಮಾಡಸಾಧ್ಯವಿದೆಯೊ? ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದ 2,093 ಸಂಖ್ಯೆಯನ್ನು—ಇದು ಭಾರತದಲ್ಲಿ ಒಂದು ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದವರ ಅತಿ ದೊಡ್ಡ ಸಂಖ್ಯೆಯಾಗಿದೆ—ನಾವು ಮೀರಿಸಸಾಧ್ಯವಿದೆಯೊ?
5 ಏಪ್ರಿಲ್ ಮತ್ತು ಮೇ ತಿಂಗಳುಗಳ ಮೇಲೆ ಕೇಂದ್ರೀಕರಿಸಿರಿ: ಈ ವರ್ಷ ಜ್ಞಾಪಕವು, ಏಪ್ರಿಲ್ 11ರ ಶನಿವಾರದಂದು ಇರುವುದು. ಇದು ಏಪ್ರಿಲ್ ತಿಂಗಳನ್ನು, ಶುಶ್ರೂಷೆಯಲ್ಲಿನ ಹೆಚ್ಚಿನ ಚಟುವಟಿಕೆಗಾಗಿ ಒಂದು ಅತ್ಯುತ್ಕೃಷ್ಟ ತಿಂಗಳನ್ನಾಗಿ ಮಾಡುತ್ತದೆ. (2 ಕೊರಿಂ. 5:14, 15) ಆ ತಿಂಗಳ ಮೊದಲ 11 ದಿನಗಳಲ್ಲಿ, ಜ್ಞಾಪಕವನ್ನು ಹಾಜರಾಗಲಿಕ್ಕಾಗಿ ಸಾಧ್ಯವಿರುವಷ್ಟು ಹೆಚ್ಚು ಮಂದಿ ಆಸಕ್ತರನ್ನು ಆಮಂತ್ರಿಸಲಿಕ್ಕಾಗಿ ನಾವು ಗಮನವನ್ನು ಕೊಡುವೆವು. ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಯೋಜಿಸುತ್ತಿರುವಲ್ಲಿ, ನೀವು ಆರಂಭಿಸಲು ಬಯಸುವ ತಾರೀಖಿಗೆ ಸಾಕಷ್ಟು ಮುಂಚೆಯೇ ನಿಮ್ಮ ಅರ್ಜಿಯನ್ನು ದಯವಿಟ್ಟು ಸಲ್ಲಿಸಿರಿ.—1 ಕೊರಿಂ. 14:40.
6 ಮೇ ತಿಂಗಳಿನಲ್ಲಿ ಇಡೀ ಐದು ವಾರಾಂತ್ಯಗಳಿರುವುದರಿಂದ, ಪೂರ್ಣ ಸಮಯದ ಐಹಿಕ ಕೆಲಸವನ್ನು ಮಾಡುವ ಪ್ರಚಾರಕರಿಗೆ ಆ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವುದು ಹೆಚ್ಚು ಸುಲಭವಾಗಿರುವುದನ್ನು ಕಂಡುಕೊಳ್ಳಬಹುದು. ಮತ್ತು ಹೆಚ್ಚಿನ ಮಕ್ಕಳು ಮೇ ತಿಂಗಳಿನಲ್ಲಿ ರಜೆಯಲ್ಲಿರುವರು. ಐದು ವಾರಾಂತ್ಯಗಳಲ್ಲಿ, ಪ್ರತಿಯೊಂದು ವಾರಾಂತ್ಯಕ್ಕಾಗಿ ಕ್ಷೇತ್ರ ಸೇವೆಯ ಹತ್ತು ತಾಸುಗಳನ್ನು ಶೆಡ್ಯೂಲ್ ಮಾಡುವ ಮೂಲಕ, ಆವಶ್ಯಕವಾದ 60 ತಾಸುಗಳನ್ನು ತಲಪಲು ಆ ತಿಂಗಳಿನಲ್ಲಿ ನೀವು ಕೇವಲ ಹೆಚ್ಚಿನ ಹತ್ತು ತಾಸುಗಳನ್ನು ಶೆಡ್ಯೂಲ್ ಮಾಡುವ ಅಗತ್ಯವಿರುವುದು.
7 ಏಪ್ರಿಲ್ ಮತ್ತು ಮೇ, ಈ ಎರಡೂ ತಿಂಗಳುಗಳಲ್ಲಿ, ಸಾಹಿತ್ಯ ನೀಡುವಿಕೆಯಾಗಿ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳನ್ನು ನೀಡುತ್ತಿರುವೆವು. ಇದು ನಮ್ಮಲ್ಲಿ ಇನ್ನೂ ಹೆಚ್ಚು ಮಂದಿ ಪ್ರಯತ್ನಿಸಿ ಪಯನೀಯರ್ ಸೇವೆ ಮಾಡುವಂತೆ ಉತ್ತೇಜಿಸಬೇಕು. ನಾವು ಹೀಗೇಕೆ ಹೇಳುತ್ತೇವೆ? ಪತ್ರಿಕೆಗಳನ್ನು ಸಾದರಪಡಿಸುವುದು ಸುಲಭ ಮತ್ತು ಶುಶ್ರೂಷೆಯಲ್ಲಿ ಅವುಗಳೊಂದಿಗೆ ಕೆಲಸಮಾಡುವುದು ಆನಂದಕರವಾಗಿದೆ. ಸೇವೆಯ ಎಲ್ಲ ವೈಶಿಷ್ಟ್ಯಗಳಲ್ಲಿ—ಮನೆಯಿಂದ ಮನೆ ಮತ್ತು ಅಂಗಡಿಯಿಂದ ಅಂಗಡಿ ಸಾಕ್ಷಿಕಾರ್ಯದಲ್ಲಿ, ಹಾಗೂ ಬೀದಿಯಲ್ಲಿ, ಪಾರ್ಕಿಂಗ್ ಕ್ಷೇತ್ರಗಳಲ್ಲಿ, ಮತ್ತು ಉದ್ಯಾನವನಗಳಲ್ಲಿ ಮತ್ತು ಇತರ ಅನೌಪಚಾರಿಕ ಸನ್ನಿವೇಶಗಳಲ್ಲಿ ನಾವು ಜನರನ್ನು ಸಮೀಪಿಸುವಾಗ—ಅವುಗಳನ್ನು ತಕ್ಕದ್ದಾಗಿಯೇ ಉಪಯೋಗಿಸಸಾಧ್ಯವಿದೆ. ಹೆಚ್ಚು ಪ್ರಾಮುಖ್ಯವಾಗಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ರಾಜ್ಯ ಸತ್ಯಗಳನ್ನು ಎತ್ತಿಹಿಡಿಯುತ್ತವೆ. ದೇವರ ರಾಜ್ಯವು ಆಳುತ್ತಿದೆಯೆಂಬುದನ್ನು ರುಜುಪಡಿಸುತ್ತಾ, ಬೈಬಲ್ ಪ್ರವಾದನೆಯ ನೆರವೇರಿಕೆಗೆ ಅವು ಗಮನವನ್ನು ಸೆಳೆಯುತ್ತವೆ. ಜನರ ನಿಜವಾದ ಅಗತ್ಯಗಳೊಂದಿಗೆ ತಿಳಿವಳಿಕೆಯಿಂದ ವ್ಯವಹರಿಸುವ ಮೂಲಕ ಅವು ಓದುಗರ ಜೀವಿತಗಳನ್ನು ಪ್ರಭಾವಿಸುತ್ತವೆ ಕೂಡ. ಈ ಅಮೂಲ್ಯವಾದ ಪತ್ರಿಕೆಗಳಿಂದ ನಮ್ಮ ಜೀವಿತವು ಹೇಗೆ ಪ್ರಭಾವಿಸಲ್ಪಟ್ಟಿದೆಯೆಂಬುದರ ಕುರಿತು ನಾವು ಯೋಚಿಸುವಲ್ಲಿ, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಅವುಗಳಿಗೆ ಸಾಧ್ಯವಿರುವಷ್ಟು ವಿಸ್ತಾರವಾದ ವಿತರಣೆಯನ್ನು ಕೊಡುವುದರಲ್ಲಿ ಪಾಲ್ಗೊಳ್ಳಲು ನಾವು ಪ್ರಚೋದಿಸಲ್ಪಡುವೆವು.
8 ಈ ತೀವ್ರಗತಿಯ ಪತ್ರಿಕಾ ಚಟುವಟಿಕೆಗಾಗಿ ಸಿದ್ಧತೆಯಲ್ಲಿ, ಈ ಲೇಖನಗಳನ್ನು ಪುನರ್ವಿಮರ್ಶಿಸುವುದರಿಂದ ನೀವು ಪ್ರಯೋಜನ ಪಡೆಯುವಿರಿ: “ಕಾವಲಿನಬುರುಜು ಮತ್ತು ಎಚ್ಚರ!—ಸತ್ಯದ ಸಮಯೋಚಿತ ಪತ್ರಿಕೆಗಳು” (ಜನವರಿ 1, 1994ರ ಕಾವಲಿನಬುರುಜು), “ನಮ್ಮ ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ” (ಜನವರಿ 1996ರ ನಮ್ಮ ರಾಜ್ಯದ ಸೇವೆ), ಮತ್ತು “ನಿಮ್ಮ ಸ್ವಂತ ಪತ್ರಿಕಾ ನಿರೂಪಣೆಯನ್ನು ತಯಾರಿಸಿರಿ” (ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆ).
9 ಹಿರಿಯರು ಮುಂದಾಳುತ್ವವನ್ನು ವಹಿಸುತ್ತಾರೆ: ಕಳೆದ ಮಾರ್ಚ್ ತಿಂಗಳಿನಿಂದ ಮೇ ತಿಂಗಳ ವರೆಗೆ ಪಯನೀಯರ್ ಸೇವೆಯನ್ನು ಮಾಡುತ್ತಿದ್ದ ಅನೇಕ ಪ್ರಚಾರಕರಿಗೆ ಸಹಾಯಮಾಡಲು, ಒಂದು ಸಭೆಯಲ್ಲಿನ ಹಿರಿಯರು, ತಿಂಗಳ ಒಂದು ಶನಿವಾರವನ್ನು ಇಡೀ ಸಭೆಗಾಗಿ ಸೇವಾ ಚಟುವಟಿಕೆಯ ಒಂದು ವಿಶೇಷ ದಿನವಾಗಿ ಬದಿಗಿರಿಸಿದರು. ಸಭೆಯಲ್ಲಿರುವವರಿಗೆ ಸಾಕ್ಷಿಕಾರ್ಯದ ವಿಭಿನ್ನ ರೂಪಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕೊಡುತ್ತಾ, ದಿನದ ಅನೇಕ ವಿಭಿನ್ನ ಸಮಯಗಳಲ್ಲಿ ಕೂಡಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟವು. ಈ ಸಮಯಗಳಲ್ಲಿ, ವ್ಯಾಪಾರದ ಕ್ಷೇತ್ರಗಳಲ್ಲಿ ಕೆಲಸಮಾಡುವುದು, ಬೀದಿಯಲ್ಲಿ ಸಾಕ್ಷಿನೀಡುವುದು, ಮನೆಯಿಂದ ಮನೆಗೆ ಭೇಟಿನೀಡುವುದು, ಪುನರ್ಭೇಟಿಗಳನ್ನು ಮಾಡುವುದು, ಪತ್ರಗಳನ್ನು ಬರೆಯುವುದು, ಮತ್ತು ಟೆಲಿಫೋನ್ ಮೂಲಕ ಸಾಕ್ಷಿಕೊಡುವುದು ಸೇರಿತ್ತು. ಪ್ರತಿಕ್ರಿಯೆಯು ಗಮನಾರ್ಹವಾಗಿತ್ತು. ಇಡೀ ದಿನದ ಕ್ಷೇತ್ರ ಸೇವೆಯಲ್ಲಿ 117 ಪ್ರಚಾರಕರು ಭಾಗವಹಿಸಿದರು. ಅವರು ಶುಶ್ರೂಷೆಯಲ್ಲಿ ಒಟ್ಟು 521 ತಾಸುಗಳನ್ನು ವ್ಯಯಿಸಿದರು ಮತ್ತು 617 ಪತ್ರಿಕೆಗಳು, ಬ್ರೋಷರುಗಳು ಮತ್ತು ಪುಸ್ತಕಗಳನ್ನು ನೀಡಿದರು! ಆ ಶನಿವಾರದ ಸಡಗರವು ಆದಿತ್ಯವಾರವು ಮುಂದುವರಿಯಿತು. ಆ ದಿನ ಸಾರ್ವಜನಿಕ ಕೂಟ ಮತ್ತು ಕಾವಲಿನಬುರುಜು ಪತ್ರಿಕೆಯ ಅಭ್ಯಾಸಕ್ಕಾಗಿದ್ದ ಹಾಜರಿಯು ಬಹುಮಟ್ಟಿಗೆ ಒಂದು ದಾಖಲೆಯಾಗಿತ್ತು.
10 ಏಪ್ರಿಲ್ ಮತ್ತು ಮೇ ತಿಂಗಳುಗಳ ಪ್ರತಿಯೊಂದು ಸೇವಾ ಕೂಟದಲ್ಲಿ, ಬರುವ ವಾರದಲ್ಲಿ ಕ್ಷೇತ್ರ ಸೇವೆಗಾಗಿ ಕೂಟಗಳು ಎಲ್ಲಿ ಮತ್ತು ಯಾವಾಗ ನಡಿಸಲ್ಪಡುವವು ಎಂಬ ವಿಷಯವನ್ನು ಸಭೆಗೆ ಜ್ಞಾಪಕಹುಟ್ಟಿಸಬೇಕು. ಸಾಮಾನ್ಯವಾಗಿ ಶೆಡ್ಯೂಲ್ಮಾಡಲ್ಪಟ್ಟಿರುವ ಏರ್ಪಾಡುಗಳನ್ನು ಬಿಟ್ಟು ಕೆಲವೊಂದು ಹೆಚ್ಚಿನ ಏರ್ಪಾಡುಗಳು ಮಾಡಲ್ಪಡುವಲ್ಲಿ ಇದನ್ನು ವಿಶೇಷವಾಗಿ ಮಾಡಬೇಕು. ಕ್ರಮದ ಪಯನೀಯರರು, ಹಾಗೂ ಆಕ್ಸಿಲಿಯರಿ ಪಯನೀಯರರಾಗಿರದ ಪ್ರಚಾರಕರು, ತಮ್ಮ ಪರಿಸ್ಥಿತಿಗಳಿಗನುಸಾರ ಈ ಗುಂಪು ಏರ್ಪಾಡುಗಳನ್ನು ಬೆಂಬಲಿಸುವಂತೆ ಉತ್ತೇಜಿಸಲ್ಪಟ್ಟಿದ್ದಾರೆ.
11 ಪದೇ ಪದೇ ಆವರಿಸಲ್ಪಟ್ಟಿರದ ಟೆರಿಟೊರಿಗಳಲ್ಲಿ ಕೆಲಸಮಾಡಲಿಕ್ಕಾಗಿ ಏರ್ಪಾಡುಗಳನ್ನು ಮಾಡಲು, ಟೆರಿಟೊರಿಗಳನ್ನು ನೇಮಿಸುವ ಸಹೋದರರೊಂದಿಗೆ ಸೇವಾ ಮೇಲ್ವಿಚಾರಕನು ಭೇಟಿಯಾಗುವ ಅಗತ್ಯವಿದೆ. ಮನೆಯಲ್ಲಿಲ್ಲದವರ ಮತ್ತು ಬೀದಿಯಲ್ಲಿ ಮತ್ತು ಅಂಗಡಿಯಿಂದ ಅಂಗಡಿಗೆ ಸಾಕ್ಷಿನೀಡುವ ಕಾರ್ಯಕ್ಕಾಗಿ ಹೆಚ್ಚಿನ ಗಮನವು ಕೊಡಲ್ಪಡಬಹುದು. ವಿಶೇಷವಾಗಿ ಆ ತಿಂಗಳುಗಳಲ್ಲಿ ಹಗಲುಹೊತ್ತಿನ ತಾಸುಗಳು ಹೆಚ್ಚಿರುವುದರಿಂದ, ಸಂಜೆ ಸಾಕ್ಷಿಕಾರ್ಯಕ್ಕೆ ಮಹತ್ವವನ್ನು ಕೊಡಸಾಧ್ಯವಿದೆ. ಈ ವರ್ಧಿಸಲ್ಪಟ್ಟ ಚಟುವಟಿಕೆಯ ನಿರೀಕ್ಷಣೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿಗಾಗಿ ಪತ್ರಿಕೆಗಳ ಸಾಕಷ್ಟು ಸರಬರಾಯಿ ಆರ್ಡರ್ ಮಾಡಲ್ಪಡಬೇಕು.
12 ಅನೇಕ ಪ್ರಚಾರಕರು ಅರ್ಹರಾಗಸಾಧ್ಯವಿದೆ: ಆಕ್ಸಿಲಿಯರಿ ಪಯನೀಯರ್ ಅರ್ಜಿಯ ಪ್ರಥಮ ವಾಕ್ಯವು ಹೀಗೆ ತಿಳಿಸುತ್ತದೆ: “ಯೆಹೋವನಿಗಾಗಿರುವ ನನ್ನ ಪ್ರೀತಿ ಮತ್ತು ಆತನ ಕುರಿತಾಗಿ ಹಾಗೂ ಆತನ ಪ್ರೀತಿಪರ ಉದ್ದೇಶಗಳ ಕುರಿತಾಗಿ ಇತರರು ಕಲಿಯುವಂತೆ ಸಹಾಯಮಾಡಲು ನನಗಿರುವ ಬಯಕೆಯಿಂದಾಗಿ, ಆಕ್ಸಿಲಿಯರಿ ಪಯನೀಯರ್ ಆಗಿ ಹೆಸರನ್ನು ನಮೂದಿಸಿಕೊಳ್ಳುವ ಮೂಲಕ ಕ್ಷೇತ್ರ ಸೇವೆಯಲ್ಲಿ ನನ್ನ ಪಾಲನ್ನು ಹೆಚ್ಚಿಸಲು ನಾನು ಇಷ್ಟಪಡುತ್ತೇನೆ.” ಯೆಹೋವನನ್ನು ಪ್ರೀತಿಸುವುದು ಮತ್ತು ಇತರರಿಗೆ ಆತ್ಮಿಕವಾಗಿ ಸಹಾಯಮಾಡಲು ಬಯಸುವುದು, ನಮ್ಮ ಸಮರ್ಪಣೆಗೆ ಮೂಲಭೂತವಾದ ವಿಷಯವಾಗಿದೆ. (1 ತಿಮೊ. 4:8, 10) ಆಕ್ಸಿಲಿಯರಿ ಪಯನೀಯರ್ ಸೇವೆಗೆ ಅರ್ಹರಾಗಲು, ಒಬ್ಬನು ದೀಕ್ಷಾಸ್ನಾನಿತನಾಗಿರಬೇಕು, ಒಳ್ಳೆಯ ನೈತಿಕ ನಿಲುವುಳ್ಳವನಾಗಿರಬೇಕು, ಮತ್ತು ಆ ತಿಂಗಳಿನಲ್ಲಿ ಶುಶ್ರೂಷೆಯಲ್ಲಿ 60 ತಾಸುಗಳನ್ನು ಮೀಸಲಾಗಿಡುವ ಸ್ಥಾನದಲ್ಲಿರಬೇಕು. ನಾವೆಲ್ಲರೂ ನಮ್ಮ ಪರಿಸ್ಥಿತಿಗಳನ್ನು ಪರಿಗಣಿಸಿದಂತೆ, ನಮ್ಮಲ್ಲಿ ಹಿಂದೆಂದೂ ಪಯನೀಯರ್ ಸೇವೆಯನ್ನು ಮಾಡಿರದ ಕೆಲವರು, ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಅದನ್ನು ಮಾಡಬಲ್ಲೆವೊ?
13 ಸಭೆಗಳಲ್ಲಿರುವ ಅನೇಕರು, ತಮ್ಮ ಪರಿಸ್ಥಿತಿಗಳಿಗೆ ಸಮಾನವಾದ ಪರಿಸ್ಥಿತಿಗಳಲ್ಲಿರುವವರು ತಮ್ಮ ಹೆಸರುಗಳನ್ನು ನಮೂದಿಸಿಕೊಳ್ಳುವುದನ್ನು ನೋಡುವಾಗ, ತಾವೂ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯವಿದೆಯೆಂಬುದನ್ನು ಗ್ರಹಿಸಬಹುದು. ಶಾಲಾಮಕ್ಕಳು, ವೃದ್ಧರು, ಪೂರ್ಣ ಸಮಯದ ಐಹಿಕ ಕೆಲಸಗಾರರು, ಹಿರಿಯರು ಮತ್ತು ಶುಶ್ರೂಷಾ ಸೇವಕರನ್ನು ಒಳಗೂಡಿಸಿ, ಇತರರೂ ಯಶಸ್ವಿಕರವಾಗಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದ್ದಾರೆ. ಪೂರ್ಣ ಸಮಯದ ಉದ್ಯೋಗವುಳ್ಳ, ಎರಡು ಮಕ್ಕಳ ತಾಯಿಯಾಗಿರುವ ಗೃಹಿಣಿಯೊಬ್ಬಳು, ಆಕ್ಸಿಲಿಯರಿ ಪಯನೀಯರ್ ಸೇವೆಯ ಒಂದೇ ತಿಂಗಳಿನಲ್ಲಿ 60 ತಾಸುಗಳನ್ನು ತಲಪಿ, 108 ಪತ್ರಿಕೆಗಳನ್ನು ನೀಡಿ, 3 ಬೈಬಲ್ ಅಭ್ಯಾಸಗಳನ್ನು ಆರಂಭಿಸಿದಳು. ಅವಳದನ್ನು ಮಾಡಿದ್ದು ಹೇಗೆ? ಕೆಲಸದ ಸ್ಥಳದಲ್ಲಿ ತನ್ನ ಊಟದ ಸಮಯವನ್ನು ಹತ್ತಿರದಲ್ಲಿದ್ದ ಟೆರಿಟೊರಿಯಲ್ಲಿ ಸಾಕ್ಷಿನೀಡಲು ಅವಳು ಉಪಯೋಗಿಸಿದಳು, ಪತ್ರಗಳನ್ನು ಬರೆಯುವ ಮೂಲಕ ಸಾಕ್ಷಿನೀಡಿದಳು, ಮತ್ತು ಪಾರ್ಕಿಂಗ್ ಕ್ಷೇತ್ರದಲ್ಲಿ ಹಾಗೂ ಬೀದಿ ಸಾಕ್ಷಿಕಾರ್ಯದಲ್ಲಿ ಅವಳು ಒಳಗೂಡಿದಳು. ಪ್ರತಿ ವಾರ ಅವಳಿಗೆ ಕೆಲಸದಲ್ಲಿ ಸಿಗುವ ರಜಾ ದಿನವನ್ನು ಅವಳು, ಸಭೆಯೊಂದಿಗೆ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮವಾಗಿ ವಿನಿಯೋಗಿಸಿದಳು. ಆಕ್ಸಿಲಿಯರಿ ಪಯನೀಯರ್ ಸೇವೆಯು, ತಲಪಲಾರದಂತಹ ಒಂದು ಗುರಿಯಾಗಿದೆಯೆಂದು ಅವಳು ಆರಂಭದಲ್ಲಿ ನೆನಸಿದಳಾದರೂ, ಇತರರಿಂದ ಉತ್ತೇಜನ ಮತ್ತು ಒಂದು ಕಾರ್ಯಸಾಧ್ಯ ಕಾರ್ಯತಖ್ತೆಯೊಂದಿಗೆ, ಆ ತಡೆಗಳು ಜಯಿಸಲ್ಪಟ್ಟವು.
14 ಯೇಸು ತನ್ನ ಶಿಷ್ಯರಿಗೆ ಆಶ್ವಾಸನೆ ನೀಡಿದ್ದು: “ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾ. 11:30) ಅದು, ಆಗಸ್ಟ್ 15, 1995ರ ಕಾವಲಿನಬುರುಜು ಪತ್ರಿಕೆಯಲ್ಲಿನ ಒಂದು ಉತ್ತೇಜನದಾಯಕ ಲೇಖನದ ಶೀರ್ಷಿಕೆಯಾಗಿತ್ತು. ಹೆಚ್ಚೊತ್ತಡದ, ಪೂರ್ಣಸಮಯದ ಐಹಿಕ ಉದ್ಯೋಗವಿದ್ದ ಒಬ್ಬ ಸಹೋದರಿಯ ಕುರಿತಾಗಿ ಅದು ತಿಳಿಸುತ್ತದೆ. ಆಕ್ಸಿಲಿಯರಿ ಪಯನೀಯರ್ ಸೇವೆಯು ಖಂಡಿತವಾಗಿಯೂ ತನಗಲ್ಲವೆಂದು ಅವಳು ನೆನಸಿದಳೊ? ಇಲ್ಲ. ವಾಸ್ತವದಲ್ಲಿ, ಅವಳು ಪ್ರತಿ ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಶಕ್ತಳಾದಳು. ಏಕೆ? ಏಕೆಂದರೆ ಪಯನೀಯರ್ ಸೇವೆಯು ಅವಳಿಗೆ ತನ್ನ ಸಮತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತೆಂದು ಅವಳಿಗನಿಸಿತು. ಜನರು ಬೈಬಲ್ ಸತ್ಯವನ್ನು ಕಲಿತಂತೆ ಅವರಿಗೆ ಸಹಾಯ ಮಾಡುವುದು ಮತ್ತು ದೇವರ ಒಪ್ಪಿಗೆಯನ್ನು ಗಳಿಸಲಿಕ್ಕಾಗಿ ತಮ್ಮ ಜೀವಿತಗಳನ್ನು ಬದಲಾಯಿಸುವುದನ್ನು ನೋಡುವುದು, ಅವಳ ಕಾರ್ಯಮಗ್ನ ಜೀವಿತದಲ್ಲಿ ಆನಂದದ ಅತಿ ಮಹಾನ್ ಮೂಲವಾಗಿತ್ತು.—ಜ್ಞಾನೋ. 10:22.
15 ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಒಬ್ಬರು ಮಾಡಬೇಕಾದ ಯಾವುದೇ ವೈಯಕ್ತಿಕ ತ್ಯಾಗಗಳು ಮತ್ತು ಅಳವಡಿಸುವಿಕೆಗಳು, ಆನಂದಿಸಲ್ಪಡುವ ಆಶೀರ್ವಾದಗಳಿಂದ ಅತಿ ಹೇರಳವಾಗಿ ಬಹುಮಾನಿಸಲ್ಪಡುತ್ತವೆ. ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವ ತನ್ನ ಅನುಭವದ ಕುರಿತಾಗಿ ಒಬ್ಬ ಸಹೋದರಿಯು ಬರೆದುದು: “ಅದು ನಾನು ಸ್ವಾರ್ಥಿಯಾಗಿರದಂತೆ ಮತ್ತು ಇತರರಿಗೆ ಸಹಾಯ ಮಾಡುವುದರ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವಂತೆ ಸಹಾಯ ಮಾಡಿತು. . . . ಅದನ್ನು ಮಾಡಲು ಸಾಧ್ಯವಿರುವವರಿಗೆ ಅದನ್ನು ಮಾಡುವಂತೆ ನಾನು ಶಿಫಾರಸ್ಸು ಮಾಡುತ್ತೇನೆ.”
16 ಒಂದು ಒಳ್ಳೆಯ ಕಾರ್ಯತಖ್ತೆಯು ಆವಶ್ಯಕ: ಈ ಪುರವಣಿಯ ಕೊನೆಯ ಪುಟದಲ್ಲಿ, ಫೆಬ್ರವರಿ 1997ರ ನಮ್ಮ ರಾಜ್ಯದ ಸೇವೆಯಲ್ಲಿ ಬಂದಿದ್ದ ಮಾದರಿ ಕಾರ್ಯತಖ್ತೆಗಳನ್ನು ನಾವು ಪುನಃ ಕೊಟ್ಟಿದ್ದೇವೆ. ಇವುಗಳಲ್ಲಿ ಒಂದು ನಿಮ್ಮ ಪರಿಸ್ಥಿತಿಗಳಿಗೆ ಹೊಂದಿಕೆಯಾಗುತ್ತಿರಬಹುದು. ನೀವು ಅವುಗಳನ್ನು ಪುನರ್ವಿಮರ್ಶಿಸಿದಂತೆ, ನಿಮ್ಮ ತಿಂಗಳಿನ ಚಟುವಟಿಕೆಯ ಸಾಮಾನ್ಯ ದಿನಚರಿಯನ್ನು ಪರಿಗಣಿಸಿರಿ. ಮನೆಯಲ್ಲಿನ ಯಾವ ಕಾರ್ಯಯೋಜನೆಗಳನ್ನು ನಿಮ್ಮ ಪಯನೀಯರ್ ಸೇವೆಯ ಮುಂಚೆಯೇ ಮಾಡಸಾಧ್ಯವಿದೆ ಅಥವಾ ಅದರ ನಂತರ ಮಾಡಲಿಕ್ಕಾಗಿ ತಾತ್ಕಾಲಿಕವಾಗಿ ಬದಿಗಿರಿಸಸಾಧ್ಯವಿದೆ? ವಿನೋದಾವಳಿ, ಮನೋರಂಜನೆ, ಅಥವಾ ಇತರ ರೀತಿಯ ವಿರಾಮಮಜಾಕ್ಕಾಗಿ ನೀವು ಕಳೆಯುವ ಸ್ವಲ್ಪ ಸಮಯವನ್ನು ಕಡಿಮೆಮಾಡಸಾಧ್ಯವಿದೆಯೊ? ಅಗತ್ಯವಿರುವ ಒಟ್ಟು 60 ತಾಸುಗಳನ್ನು ನೋಡುವ ಬದಲಿಗೆ, ನಿಮ್ಮ ಕಾರ್ಯತಖ್ತೆಯನ್ನು ಒಂದು ದೈನಿಕ ಅಥವಾ ಸಾಪ್ತಾಹಿಕ ಮಟ್ಟದಲ್ಲಿ ಯೋಜಿಸಿರಿ. ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು, ದಿನದಲ್ಲಿ ಕೇವಲ 2 ತಾಸುಗಳು ಅಥವಾ ವಾರದಲ್ಲಿ 15 ತಾಸುಗಳು ಬೇಕಾಗಿವೆ. ನಮೂನಾ ಕಾರ್ಯತಖ್ತೆಗಳನ್ನು ನೋಡಿರಿ ಮತ್ತು ಕೈಯಲ್ಲಿ ಪೆನ್ಸಿಲ್ ಹಿಡಿದು, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅತ್ಯುತ್ತಮವಾಗಿ ಹೊಂದುವ ಒಂದು ವೈಯಕ್ತಿಕ ಸೇವಾ ಕಾರ್ಯತಖ್ತೆಯ ಸಂಬಂಧದಲ್ಲಿ ನೀವೇನನ್ನು ಏರ್ಪಡಿಸಸಾಧ್ಯವಿದೆ ಎಂಬುದನ್ನು ನೋಡಿರಿ.
17 ಕಳೆದ ವರ್ಷ, ಸಭೆಯು ತೋರಿಸಿದ ಉತ್ತಮ ಪ್ರತಿಕ್ರಿಯೆ ಮತ್ತು ಹೆಚ್ಚಿನ ಬೆಂಬಲವು, ಒಬ್ಬ ಕ್ರಮದ ಪಯನೀಯರಳ ಉತ್ಸಾಹವನ್ನು ಪ್ರೋತ್ಸಾಹಿಸಿತು. ಅವಳು ಬರೆದುದು: “ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಬೆಂಬಲಿಸಲು ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ನೀವು ಕೊಟ್ಟ ಪ್ರೀತಿಪರ ಉತ್ತೇಜನಕ್ಕಾಗಿ ನಿಮಗೆ ತುಂಬ ಉಪಕಾರ. . . . ನೀವು ಸೂಚಿಸಿದಂತಹ ಕಾರ್ಯತಖ್ತೆಗಳು, ಹಿಂದೆಂದೂ ಪಯನೀಯರ್ ಸೇವೆಯನ್ನು ಮಾಡಿರದ ಅನೇಕರು ತಾವು ಅದನ್ನು ಮಾಡಸಾಧ್ಯವಿದೆಯೆಂದು ಗ್ರಹಿಸಲು ಸಹಾಯಮಾಡಿತು. . . . ಯೆಹೋವನ ಸಂಸ್ಥೆಯ ಭಾಗವಾಗಿರಲು ಮತ್ತು ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಸಂತೋಷಕರವಾದ ಪ್ರೀತಿಪರ ಮುಂದಾಳುತ್ವವನ್ನು ಅನುಸರಿಸಲು ನಾನು ತುಂಬ ಸಂತೋಷಿತಳಾಗಿದ್ದೇನೆ.”
18 ಜ್ಞಾನೋಕ್ತಿ 21:5 (NW) ನಮಗೆ ಆಶ್ವಾಸನೆಯನ್ನೀಯುವುದು: “ಶ್ರಮಶೀಲನ ಯೋಜನೆಗಳು ನಿಶ್ಚಯವಾಗಿಯೂ ಪ್ರಯೋಜನಕ್ಕೆ ಅನುಕೂಲವಾಗುತ್ತವೆ.” ಜ್ಞಾನೋಕ್ತಿ 16:3 ನಮ್ಮನ್ನು ಉತ್ತೇಜಿಸುವುದು: “ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು.” ಹೌದು, ನಮ್ಮ ನಿರ್ಣಯದಲ್ಲಿ ಯೆಹೋವನನ್ನು ಪ್ರಾರ್ಥನಾಪೂರ್ವಕವಾಗಿ ಒಳಗೂಡಿಸುವ ಮೂಲಕ ಮತ್ತು ನಾವು ಸಫಲರಾಗಲಿಕ್ಕಾಗಿ ಆತನ ಮೇಲೆ ಬಲವಾಗಿ ಆತುಕೊಳ್ಳುವ ಮೂಲಕ, ನಾವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ನಮ್ಮ ಯೋಜನೆಗಳ ಕುರಿತಾಗಿ ಸಕಾರಾತ್ಮಕರಾಗಿರಬಲ್ಲೆವು. ಒಂದು ಅಥವಾ ಎರಡು ತಿಂಗಳುಗಳಿಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿ, ನಮ್ಮ ಕಾರ್ಯತಖ್ತೆಯು ಎಷ್ಟು ಚೆನ್ನಾಗಿ ನಡಿಯುತ್ತದೆಂಬುದನ್ನು ನಾವು ನೋಡಿದ ನಂತರ, ಆಕ್ಸಿಲಿಯರಿ ಪಯನೀಯರ್ ಅರ್ಜಿಯ ಈ ರೇಖಾಚೌಕದಲ್ಲಿ ನಾವು ಗುರುತುಹಾಕಲು ಶಕ್ತರಾಗುವೆವು. ಅದು ಹೀಗೆ ಹೇಳುತ್ತದೆ: “ಮುಂದೆ ತಿಳಿಸಲ್ಪಡುವ ತನಕ ಆಕ್ಸಿಲಿಯರಿ ಪಯನೀಯರರಾಗಿ ಸತತವಾಗಿ ಸೇವೆ ಸಲ್ಲಿಸಲು ನೀವು ಬಯಸುವಲ್ಲಿ ಇಲ್ಲಿ ಗುರುತುಹಾಕಿರಿ.” ಏನೇ ಆದರೂ, ಆಗಸ್ಟ್ ತಿಂಗಳಿನಲ್ಲಿ ಇಡೀ ಐದು ವಾರಾಂತ್ಯಗಳಿರುವುದರಿಂದ, ನಾವು ಪುನಃ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಮುನ್ನೋಡಸಾಧ್ಯವಿದೆ. ಆಗಸ್ಟ್ ತಿಂಗಳಿನಲ್ಲಿ ನಾವು ಸೇವಾ ವರ್ಷವನ್ನು ಸಮಾಪ್ತಿಗೊಳಿಸಿದಂತೆ, ಶುಶ್ರೂಷೆಯಲ್ಲಿ ಎಲ್ಲರೂ ಸಾಧ್ಯವಿರುವಷ್ಟು ಪೂರ್ಣವಾಗಿ ಭಾಗವಹಿಸಲು ಐಕ್ಯ ಪ್ರಯತ್ನವು ಮಾಡಲ್ಪಡುವುದು.
19 ಯೇಸು ಪ್ರವಾದಿಸಿದ್ದು: “ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು.” (ಯೋಹಾ. 14:12) ಈ ಪ್ರವಾದನೆಯು ತನ್ನ ಭವ್ಯ ನೆರವೇರಿಕೆಯನ್ನು ಪಡೆಯುತ್ತಿರುವ ಸಮಯದಲ್ಲಿ, ದೇವರ ಜೊತೆಕೆಲಸಗಾರರಾಗಿ ಸೇವೆಸಲ್ಲಿಸುವುದು ನಮ್ಮ ಆನಂದಕರ ಸುಯೋಗವಾಗಿದೆ. ಈ ಕೆಲಸವನ್ನು ಮಾಡಲಿಕ್ಕಾಗಿ ಯುಕ್ತವಾದ ಸಮಯವನ್ನು ಖರೀದಿಸುತ್ತಾ, ಹಿಂದೆಂದಿಗಿಂತಲೂ ಹೆಚ್ಚು ತೀವ್ರತೆಯೊಂದಿಗೆ ಸುವಾರ್ತೆಯನ್ನು ಸಾರುವ ಸಮಯವು ಇದಾಗಿದೆ. (1 ಕೊರಿಂ. 3:9; ಕೊಲೊ. 4:5) ರಾಜ್ಯ ಘೋಷಕರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸುವ ಅತ್ಯುತ್ಕೃಷ್ಟ ಮಾರ್ಗವು, ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಸಾಧ್ಯವಿರುವಷ್ಟು ಸಲ ಪಾಲ್ಗೊಳ್ಳುವುದೇ ಆಗಿದೆ. ಈ ಜ್ಞಾಪಕದ ಕಾಲದಲ್ಲಿ, ಆಕ್ಸಿಲಿಯರಿ ಪಯನೀಯರರಿಂದ, ಸ್ತುತಿಗೀತೆಯು ಎಷ್ಟು ಉನ್ನತವಾಗಿರುವುದೆಂಬುದನ್ನು ನೋಡಲು ನಾವು ಆತುರದಿಂದ ಕಾಯುತ್ತೇವೆ. (ಕೀರ್ತ. 27:6) ಕಳೆದ ವರ್ಷದ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳ ಫಲಿತಾಂಶಗಳ ಕುರಿತಾಗಿ ಯೋಚಿಸುತ್ತಾ, ‘ನಾವದನ್ನು ಪುನಃ ಮಾಡುವೆವೊ?’ ಎಂದು ಕುತೂಹಲಪಡುತ್ತೇವೆ. ನಾವು ಮಾಡುವೆವೆಂದು ನಮಗೆ ಭರವಸೆಯಿದೆ!
[ಪುಟ 3ರಲ್ಲಿರುವಚೌಕ]
ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಬಲ್ಲಿರೊ?
“ನಿಮ್ಮ ವೈಯಕ್ತಿಕ ಪರಿಸ್ಥಿತಿ ಏನೇ ಇರಲಿ, ನೀವು ದೀಕ್ಷಾಸ್ನಾನ ಹೊಂದಿದವರೂ ಉತ್ತಮ ನೈತಿಕ ಸ್ಥಿತಿಯಲ್ಲಿರುವವರೂ ಕ್ಷೇತ್ರ ಶುಶ್ರೂಷೆಯಲ್ಲಿ ಪ್ರತಿ ತಿಂಗಳಿಗೆ 60 ತಾಸುಗಳ ಆವಶ್ಯಕತೆಯನ್ನು ಮುಟ್ಟಲು ಸಮಯವನ್ನೇರ್ಪಡಿಸಲು ಮತ್ತು ಒಂದು ಅಥವಾ ಹೆಚ್ಚು ತಿಂಗಳು ಸಹಾಯಕ ಪಯನೀಯರರಾಗಿ ಸೇವೆ ಮಾಡಲು ಸಾಧ್ಯವಿರುವವರೂ ಆಗಿರುವಲ್ಲಿ ಈ ಸೇವಾ ಸುಯೋಗಕ್ಕೆ ನೀವು ಹಾಕಿರುವ ಅರ್ಜಿಯನ್ನು ಪರಿಗಣಿಸಲು ಸಭೆ ಹಿರಿಯರು ಸಂತೋಷಿಸುವರು.”—ನಿಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು, ಪುಟ 114.
[ಪುಟ 6ರಲ್ಲಿರುವಚೌಕ]
ಆಕ್ಸಿಲಿಯರಿ ಪಯನೀಯರ್ ಕಾರ್ಯತಖ್ತೆಗಳು
ಪ್ರತಿ ವಾರ 15 ತಾಸುಗಳ ಕ್ಷೇತ್ರ ಸೇವೆಯನ್ನು ಗೊತ್ತುಪಡಿಸುವ ಮಾದರಿ ವಿಧಗಳು
ಬೆಳಗ್ಗೆಗಳು—ಸೋಮವಾರದಿಂದ ಶನಿವಾರದ ವರೆಗೆ
ಆದಿತ್ಯವಾರವನ್ನು ಯಾವುದೇ ದಿನದೊಂದಿಗೆ ಬದಲಿ ಮಾಡಬಹುದು
ದಿನ ಅವಧಿ ತಾಸುಗಳು
ಸೋಮವಾರ ಬೆಳಗ್ಗೆ 2 1/2
ಮಂಗಳವಾರ ಬೆಳಗ್ಗೆ 2 1/2
ಬುಧವಾರ ಬೆಳಗ್ಗೆ 2 1/2
ಗುರುವಾರ ಬೆಳಗ್ಗೆ 2 1/2
ಶುಕ್ರವಾರ ಬೆಳಗ್ಗೆ 2 1/2
ಶನಿವಾರ ಬೆಳಗ್ಗೆ 2 1/2
ಒಟ್ಟು ತಾಸುಗಳು:15
ಇಡೀ ಎರಡು ದಿನಗಳು
ವಾರದ ಯಾವುದೇ ಎರಡು ದಿನಗಳನ್ನು ಆರಿಸಿಕೊಳ್ಳಬಹುದು
ದಿನ ಅವಧಿ ತಾಸುಗಳು
ಬುಧವಾರ ಇಡೀ ದಿನ 71/2
ಶನಿವಾರ ಇಡೀ ದಿನ 71/2
ಒಟ್ಟು ತಾಸುಗಳು: 15
ಎರಡು ಸಂಜೆಗಳು ಮತ್ತು ವಾರಾಂತ್ಯ
ವಾರದ ದಿನದ ಯಾವುದೇ ಎರಡು ಸಂಜೆಗಳನ್ನು ಆರಿಸಿಕೊಳ್ಳಬಹುದು
ದಿನ ಅವಧಿ ತಾಸುಗಳು
ಸೋಮವಾರ ಸಾಯಂಕಾಲ 11 /2
ಬುಧವಾರ ಸಾಯಂಕಾಲ 11 /2
ಶನಿವಾರ ಇಡೀ ದಿನ 8
ಆದಿತ್ಯವಾರ ಅರ್ಧ ದಿನ 4
ಒಟ್ಟು ತಾಸುಗಳು: 15
ವಾರದ ದಿನದ ಮಧ್ಯಾಹ್ನಗಳು ಮತ್ತು ಶನಿವಾರ
ಆದಿತ್ಯವಾರವನ್ನು ಯಾವುದೇ ದಿನದೊಂದಿಗೆ ಬದಲಿ ಮಾಡಬಹುದು
ದಿನ ಅವಧಿ ತಾಸುಗಳು
ಸೋಮವಾರ ಮಧ್ಯಾಹ್ನ 2
ಮಂಗಳವಾರ ಮಧ್ಯಾಹ್ನ 2
ಬುಧವಾರ ಮಧ್ಯಾಹ್ನ 2
ಗುರುವಾರ ಮಧ್ಯಾಹ್ನ 2
ಶುಕ್ರವಾರ ಮಧ್ಯಾಹ್ನ 2
ಶನಿವಾರ ಇಡೀ ದಿನ5
ಒಟ್ಟುತಾಸುಗಳು: 15
ನನ್ನ ವೈಯಕ್ತಿಕ ಸೇವಾ ಕಾರ್ಯತಖ್ತೆ
ಪ್ರತಿಯೊಂದು ಅವಧಿಗಾಗಿ ಎಷ್ಟು ತಾಸುಗಳನ್ನು ಮಾಡಬೇಕೆಂಬುದನ್ನು ನಿರ್ಣಯಿಸಿರಿ
ದಿನ ಅವಧಿ ತಾಸುಗಳು
ಸೋಮವಾರ
ಮಂಗಳವಾರ
ಬುಧವಾರ
ಗುರುವಾರ
ಶುಕ್ರವಾರ
ಶನಿವಾರ
ಆದಿತ್ಯವಾರ
ಒಟ್ಟು ತಾಸುಗಳು: 15