ಪ್ರಕಟನೆಗಳು
◼ ಜನವರಿ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಸಭೆಯ ಸ್ಟಾಕ್‌ನಲ್ಲಿರಬಹುದಾದ ಯಾವುದೇ ಹಳೆಯ 192 ಪುಟಗಳ ಪುಸ್ತಕವನ್ನು ನೀಡಬಹುದು. ಇಂಥ ಪುಸ್ತಕಗಳ ಸರಬರಾಯಿ ಇಲ್ಲದ ಸಭೆಗಳು, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕಗಳನ್ನು ನೀಡಬಹುದು. ಫೆಬ್ರವರಿ: ಕುಟುಂಬ ಸಂತೋಷದ ರಹಸ್ಯ. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ವಿಶೇಷ ಪ್ರಯತ್ನಗಳು ಮಾಡಲ್ಪಡುವವು. ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳು. ಆಸಕ್ತ ಜನರಿಗೆ ನೀಡಲು ನಿಮ್ಮ ಬಳಿ ಅಪೇಕ್ಷಿಸು ಬ್ರೋಷರನ್ನು ಇಟ್ಟುಕೊಂಡಿರಿ ಮತ್ತು ಗೃಹ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸಿರಿ.
◼ ಜನವರಿ 10ರ ವಾರದಂದು ಸೇವಾ ಕೂಟದಲ್ಲಿ ಉಪಸ್ಥಿತರಿರುವ ಎಲ್ಲ ದೀಕ್ಷಾಸ್ನಾನಿತ ಪ್ರಚಾರಕರು, ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ ಮತ್ತು ಮಕ್ಕಳಿಗಾಗಿ ಐಡೆಂಟಿಟಿ ಕಾರ್ಡನ್ನು ಪಡೆದುಕೊಳ್ಳಸಾಧ್ಯವಿದೆ.
◼ ಫೆಬ್ರವರಿಯಿಂದ ಪ್ರಾರಂಭಿಸಿ ಮಾರ್ಚ್ 5ರ ವರೆಗೆ ಸರ್ಕಿಟ್ ಮೇಲ್ವಿಚಾರಕರು “ನಿಜವಾದ ಅರ್ಮಗೆದೋನ್—ಏಕೆ? ಯಾವಾಗ?” ಎಂಬ ಹೊಸ ಬಹಿರಂಗ ಭಾಷಣವನ್ನು ನೀಡುವರು.
◼ ಈ ವರ್ಷ ಏಪ್ರಿಲ್ 19ರ ಬುಧವಾರದಂದು ಸೂರ್ಯಾಸ್ತಮಾನದ ನಂತರ ಜ್ಞಾಪಕಾಚರಣೆಯನ್ನು ನಡೆಸಲು ಸಭೆಗಳು ಅನುಕೂಲಕರವಾದ ಏರ್ಪಾಡುಗಳನ್ನು ಮಾಡತಕ್ಕದ್ದು. ಭಾಷಣವು ಬೇಗನೆ ಪ್ರಾರಂಭವಾಗಬಹುದಾದರೂ, ಜ್ಞಾಪಕಾಚರಣೆಯ ಕುರುಹುಗಳು ಸೂರ್ಯಾಸ್ತಮಾನವಾಗುವ ತನಕ ದಾಟಿಸಲ್ಪಡಬಾರದು. ನೀವಿರುವ ಸ್ಥಳದಲ್ಲಿ ಯಾವಾಗ ಸೂರ್ಯಾಸ್ತಮಾನವಾಗುತ್ತದೆ ಎಂಬುದನ್ನು ಸ್ಥಳಿಕ ಮೂಲಗಳಿಂದ ವಿಚಾರಿಸಿ ತಿಳಿದುಕೊಳ್ಳಿರಿ. ಪ್ರತಿಯೊಂದು ಸಭೆಯು ಜ್ಞಾಪಕಾಚರಣೆಯನ್ನು ರಾಜ್ಯ ಸಭಾಗೃಹದಲ್ಲಿ ನಡೆಸಲು ಇಷ್ಟಪಡುವುದಾದರೂ, ಇದು ಯಾವಾಗಲೂ ಸಾಧ್ಯವಾಗದಿರಬಹುದು. ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಿರುವಲ್ಲಿ, ಅಂದಿನ ಸಂಜೆಯಂದು ಒಂದೆರಡು ಸಭೆಗಳು ಬೇರೆ ಸ್ಥಳದಲ್ಲಿ ಜ್ಞಾಪಕಾಚರಣೆಯನ್ನು ಆಚರಿಸಸಾಧ್ಯವಿದೆ. ಸಾಧ್ಯವಿರುವಲ್ಲಿ, ಕಾರ್ಯಕ್ರಮಗಳ ನಡುವೆ ಕಡಿಮೆ ಪಕ್ಷ 40 ನಿಮಿಷಗಳಷ್ಟು ಅಂತರವಿರುವಂತೆ ನೋಡಿಕೊಳ್ಳಿರಿ ಎಂಬುದು ನಮ್ಮ ಸಲಹೆಯಾಗಿದೆ. ಹೀಗೆ ಈ ಸಂದರ್ಭದಿಂದ ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ ಮತ್ತು ಇದು ಸಂದರ್ಶಕರನ್ನು ಅಭಿವಂದಿಸಲು ಹಾಗೂ ಹೊಸದಾಗಿ ಆಸಕ್ತಿ ತೋರಿಸುವವರನ್ನು ಉತ್ತೇಜಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ. ಟ್ರ್ಯಾಫಿಕ್ ವ್ಯವಸ್ಥೆಗಳು ಮತ್ತು ಪಾರ್ಕಿಂಗ್ ಸ್ಥಳಗಳ ವಿಷಯಕ್ಕೆ ಹಾಗೂ ಪಯಣಿಗರನ್ನು ವಾಹನದಲ್ಲಿ ಹತ್ತಿಸಿಕೊಳ್ಳುವ ಮತ್ತು ಇಳಿಸುವ ವಿಷಯಕ್ಕೂ ಗಮನವನ್ನು ಕೊಡತಕ್ಕದ್ದು. ಸ್ಥಳಿಕವಾಗಿ ಯಾವ ಏರ್ಪಾಡುಗಳು ಅತ್ಯುತ್ತಮವಾಗಿರಬಹುದು ಎಂಬುದನ್ನು ಹಿರಿಯರ ಮಂಡಳಿಯು ನಿರ್ಧರಿಸತಕ್ಕದ್ದು.
◼ ಇಸವಿ 2000ದ ಜ್ಞಾಪಕಾಚರಣೆಯ ಸಮಯದಲ್ಲಿ ವಿಶೇಷ ಬಹಿರಂಗ ಭಾಷಣವು ಏಪ್ರಿಲ್ 16ರ ಭಾನುವಾರದಂದು ನೀಡಲ್ಪಡುವುದು. ಭಾಷಣದ ವಿಷಯವು “ಮಾನವಕುಲಕ್ಕೆ ಪ್ರಾಯಶ್ಚಿತ್ತದ ಅಗತ್ಯ ಏಕಿದೆ?” ಎಂದಾಗಿರುವುದು. ಇದರ ಹೊರಮೇರೆಯನ್ನು ನೀಡಲಾಗುವುದು. ಆ ವಾರಾಂತ್ಯದಲ್ಲಿ ಸರ್ಕಿಟ್ ಮೇಲ್ವಿಚಾರಕರ ಸಂದರ್ಶನ, ಸರ್ಕಿಟ್ ಸಮ್ಮೇಳನ ಅಥವಾ ವಿಶೇಷ ಸಮ್ಮೇಳನ ದಿನವಿರುವ ಸಭೆಗಳಿಗೆ, ಅದರ ಮುಂದಿನ ವಾರದಲ್ಲಿ ಈ ವಿಶೇಷ ಭಾಷಣವನ್ನು ನೀಡಲಾಗುವುದು. ಯಾವ ಸಭೆಯಲ್ಲಿಯೂ 2000, ಏಪ್ರಿಲ್ 16ಕ್ಕೆ ಮುಂಚೆ ಈ ವಿಶೇಷ ಭಾಷಣವನ್ನು ನೀಡಬಾರದು.
◼ ಲಭ್ಯವಿರುವ ಹೊಸ ಪ್ರಕಾಶನ:
ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 1998
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಬ್ರೋಷರ್‌ಗಳು: ಜೀವಿತದ ಉದ್ದೇಶವೇನು?—ಕನ್ನಡ, ಮರಾಠಿ ಮತ್ತು ಮಲೆಯಾಳಂ
◼ ಆಡಿಯೋ ಕಾಂಪ್ಯಾಕ್ಟ್ ಡಿಸ್ಕ್‌ಗಳು:
ಸಂಗೀತ—ಗಾಯನ: ಸಿಂಗಿಂಗ್ ಕಿಂಗ್‌ಡಮ್ ಸಾಂಗ್ಸ್ (ಒಂದು ಡಿಸ್ಕ್)
ಸಂಗೀತ-ಆರ್ಕೆಸ್ಟ್ರಾ: ಕಿಂಗ್‌ಡಮ್ ಮೆಲೋಡಿಸ್, 1ರಿಂದ 8 ನಂಬರ್‌ಗಳು (ಎಂಟು ಡಿಸ್ಕ್ ಸೆಟ್)
(ನಿರ್ದಿಷ್ಟ ಡಿಸ್ಕ್ ನಂಬರ್ ಅನ್ನು ಸೂಚಿಸುವ ಮೂಲಕ ಬಿಡಿ ಡಿಸ್ಕ್‌ಗಳನ್ನು ಸಹ ಪಡೆದುಕೊಳ್ಳಬಹುದು)