ಪೂರ್ವ ಯೂರೋಪಿನಲ್ಲಿ ಸತ್ಯಾರಾಧನೆಯು ಹಬ್ಬುತ್ತಿದೆ
1 ಪ್ರಥಮ ಶತಮಾನದ ಕ್ರೈಸ್ತರು ಹುರುಪುಳ್ಳ ರಾಜ್ಯ ಪ್ರಚಾರಕರಾಗಿದ್ದರು. ಸಭೆಗಳು “ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ” ಬಂದಾಗ ಅವರು ಬಹಳ ಆನಂದಿಸಿದರು. (ಅ. ಕೃ. 16:5) ಅವರು ಧೈರ್ಯದಿಂದ ಮಾಡಿದಂತಹ ಸಾರುವಿಕೆಯ ಕೆಲಸದಿಂದಾಗಿ, ಸತ್ಯಾರಾಧನೆಯು ಏಷ್ಯಾ, ಆಫ್ರಿಕ, ಮತ್ತು ಯೂರೋಪಿನ ವರೆಗೂ ತಲಪಿತು. ಇದರ ಫಲಿತಾಂಶವಾಗಿ ಅಸಂಖ್ಯಾತ ವಿಶ್ವಾಸಿಗಳು ಸತ್ಯಾರಾಧನೆಯನ್ನು ಸ್ವೀಕರಿಸಿದರು.
2 ಈ ಅಂತ್ಯದ ಸಮಯದಲ್ಲಿ, ಸತ್ಯಾರಾಧನೆಯು ವಿಶೇಷವಾಗಿ ಪೂರ್ವ ಯೂರೋಪಿನ ದೇಶಗಳಲ್ಲಿ ಹಬ್ಬುತ್ತಾ ಇದೆ. 1990ರ ಆದಿಭಾಗದ ವರೆಗೆ ಸರಕಾರದಿಂದ ನಿರ್ಬಂಧಕ್ಕೊಳಪಟ್ಟಿದ್ದ ದೇಶಗಳಲ್ಲಿ ಈಗ ಹೆಚ್ಚಿನ ವೃದ್ಧಿಯನ್ನು ನಾವು ನೋಡುತ್ತಿದ್ದೇವೆ. ಇಂತಹ ಎರಡು ದೇಶಗಳು ರಷ್ಯಾ ಮತ್ತು ಯೂಕ್ರೇನ್ಗಳಾಗಿದ್ದು, ಇವುಗಳಲ್ಲಿ ಪ್ರತಿಯೊಂದು ದೇಶವು 1,00,000ಕ್ಕಿಂತಲೂ ಹೆಚ್ಚು ಪ್ರಚಾರಕರು ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ವರದಿಸಿದೆಯೆಂಬುದನ್ನು 1999ರ ವರ್ಷಪುಸ್ತಕ (ಇಂಗ್ಲಿಷ್)ವು ತಿಳಿಸುತ್ತದೆ. ಹಿಂದಿನ ಸೋವಿಯಟ್ ಒಕ್ಕೂಟದ 15 ಕ್ಷೇತ್ರಗಳಲ್ಲಿ, 1991ರಿಂದ ಸುಮಾರು 2,20,000 ಜನರು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾರೆ! ಈ ಕ್ಷಿಪ್ರಗತಿಯ ಅಭಿವೃದ್ಧಿಯಿಂದಾಗಿ ಅನೇಕ ಹೊಸ ರಾಜ್ಯ ಸಭಾಗೃಹಗಳನ್ನೂ ಅಸೆಂಬ್ಲಿ ಹಾಲ್ಗಳನ್ನೂ ಕಟ್ಟಬೇಕಾಗಿದೆ ಮಾತ್ರವಲ್ಲದೆ, ಹಲವಾರು ಬ್ರಾಂಚ್ ಕಟ್ಟಡಗಳನ್ನು ಸಹ ವಿಸ್ತರಿಸಬೇಕಾಗಿದೆ.
3 ಮಾರ್ಚ್ 1997ರ ನಮ್ಮ ರಾಜ್ಯದ ಸೇವೆಯ ಅಮೆರಿಕದ ಆವೃತ್ತಿಯಲ್ಲಿ ಪ್ರಕಟಿಸಲ್ಪಟ್ಟಂತೆ, ಹೆಚ್ಚೆಚ್ಚು ರಾಜ್ಯ ಸಭಾಗೃಹಗಳು ಅತ್ಯಂತ ಜರೂರಿಯಾಗಿರುವುದಾದರೂ, ಸಾಕಷ್ಟು ಹಣಕಾಸಿಲ್ಲದ ಮತ್ತು ತುಂಬ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶಗಳಲ್ಲಿರುವ ಸಭೆಗಳಿಗೆ ಸಾಲಗಳನ್ನು ಕೊಡಲು, ಸೊಸೈಟಿ ಕಿಂಗ್ಡಮ್ ಹಾಲ್ ಫಂಡ್ನ ಒಂದು ಭಾಗವನ್ನು ಈಗ ಉಪಯೋಗಿಸಲಾಗುತ್ತಿದೆ. ಮಾರ್ಚ್ 1996 ಮತ್ತು ಅಕ್ಟೋಬರ್ 1998ರ ಮಧ್ಯೆ, ಪೂರ್ವ ಯೂರೋಪಿನ 11 ದೇಶಗಳನ್ನು ನೋಡಿಕೊಳ್ಳುತ್ತಿರುವ ಬ್ರಾಂಚ್ ಆಫೀಸುಗಳಿಂದ ಬಂದ 359 ರಾಜ್ಯ ಸಭಾಗೃಹಗಳ ಸಾಲದ ವಿನಂತಿಗಳನ್ನು ಸೊಸೈಟಿಯು ಮಂಜೂರು ಮಾಡಿತು. ಕಾಣಿಕೆಯಾಗಿ ನೀಡಲ್ಪಟ್ಟ ಹಣವನ್ನು, ಹೊಸ ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ಬೇಕಾಗಿರುವ ಸ್ಥಳವನ್ನು ಹಾಗೂ ಸಾಮಗ್ರಿಗಳನ್ನು ಖರೀದಿಸಲು ಮಾತ್ರವಲ್ಲ, ಈಗಾಗಲೇ ಇರುವಂತಹ ಸಭಾಗೃಹಗಳನ್ನು ನವೀಕರಿಸುವುದರಲ್ಲಿ ಸಭೆಗಳಿಗೆ ಸಹಾಯಮಾಡಲು ಸಹ ಉಪಯೋಗಿಸಲಾಗುತ್ತಿದೆ. ಇಲ್ಲಿ ಕೊಡಲ್ಪಟ್ಟಿರುವಂತಹ ಚಿತ್ರಗಳು, ಅಮೆರಿಕದಲ್ಲಿ ಮತ್ತು ಇತರ ದೇಶಗಳಲ್ಲಿ ಸೊಸೈಟಿ ಕಿಂಗ್ಡಮ್ ಹಾಲ್ ಫಂಡ್ಗೆ ನೀಡಲ್ಪಡುವ ಕಾಣಿಕೆಗಳು, ಪೂರ್ವ ಯೂರೋಪಿನಲ್ಲಿರುವ ನಮ್ಮ ಸಹೋದರರಿಗೆ ಹೇಗೆ ಸಹಾಯಮಾಡಿವೆ ಎಂಬುದನ್ನು ನಮಗೆ ತೋರಿಸುತ್ತವೆ.
4 ಇಸವಿ 1998ರಲ್ಲಿ, ಬಲ್ಗೇರಿಯ 12 ಪ್ರತಿಶತ ವೃದ್ಧಿಯನ್ನು ಅನುಭವಿಸಿತು. ಮತ್ತು ಅದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಮೊದಲ ರಾಜ್ಯ ಸಭಾಗೃಹದ ಸಮರ್ಪಣೆಯಾದಾಗ ಸಹೋದರರು ಪುಳಕಿತರಾದರು. ಕ್ರೊಏಷಿಯ 4 ಪ್ರತಿಶತ ಅಭಿವೃದ್ಧಿಯಲ್ಲಿ ಆನಂದಿಸಿತು ಮತ್ತು ಸತ್ಯಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಈಗ ಅಲ್ಲಿನ ಸಹೋದರರು ಹೆಚ್ಚೆಚ್ಚು ರಾಜ್ಯ ಸಭಾಗೃಹಗಳನ್ನು ಕಟ್ಟುತ್ತಿದ್ದಾರೆ. ಹಂಗೆರಿಯಲ್ಲಿ ಸುಮಾರು 80 ರಾಜ್ಯ ಸಭಾಗೃಹಗಳನ್ನು 144 ಸಭೆಗಳು ಉಪಯೋಗಿಸುತ್ತಿವೆ. ಇದರರ್ಥ, ಆ ದೇಶದಲ್ಲಿರುವ 235 ಸಭೆಗಳಲ್ಲಿ ಸುಮಾರು 61 ಪ್ರತಿಶತ ಸಭೆಗಳಿಗೆ ತಮ್ಮ ಸ್ವಂತ ಆರಾಧನಾ ಸ್ಥಳವಿದೆ. ಮ್ಯಾಸಡೋನ್ಯದಲ್ಲಿ ರಾಜ್ಯ ಸಭಾಗೃಹ ನಿರ್ಮಾಣ ಯೋಜನೆಯು ಎರಡು ಹೊಸ ಸಭಾಗೃಹಗಳನ್ನು ಕಟ್ಟಿಮುಗಿಸಿದೆ ಮತ್ತು ಇನ್ನೂ ಅನೇಕ ಸಭಾಗೃಹಗಳು ನಿರ್ಮಾಣ ಹಂತದಲ್ಲಿವೆ. 1999ರ ಬೇಸಗೆ ಸಮಯದಲ್ಲಿ, ಸ್ಕೊಪ್ಯೇಯ ರಾಜಧಾನಿಯಲ್ಲಿ ಒಂದೇ ಕಟ್ಟಡದಲ್ಲಿ ಎರಡು ರಾಜ್ಯ ಸಭಾಗೃಹಗಳನ್ನು ಕಟ್ಟಿಮುಗಿಸಲಾಯಿತು. ಈ ಸಭಾಗೃಹಗಳಲ್ಲಿ ಕಡಿಮೆಪಕ್ಷ ಆರು ಸಭೆಗಳು ಕೂಟಗಳನ್ನು ನಡಿಸಸಾಧ್ಯವಿದೆ.
5 ಇಸವಿ 1998ರ ಸೇವಾ ವರ್ಷದಲ್ಲಿ ರಷ್ಯಾ ದೇಶದಲ್ಲಿ, ಪ್ರತಿ ವಾರ ಸರಾಸರಿಯಾಗಿ ಸುಮಾರು 260ಕ್ಕಿಂತಲೂ ಹೆಚ್ಚಿನ ಜನರು ದೀಕ್ಷಾಸ್ನಾನ ಪಡೆದುಕೊಂಡರು! ಇತರ ದೇಶಗಳ ಮಾದರಿಯನ್ನು ಅನುಸರಿಸುತ್ತಾ, ಭಾವೀ ರಾಜ್ಯ ಸಭಾಗೃಹದ ನಿರ್ಮಾಣ ಯೋಜನೆಗಳನ್ನು ಬೆಂಬಲಿಸಲಿಕ್ಕಾಗಿ ರಷ್ಯಾ ಬ್ರಾಂಚ್ ತನ್ನ ವ್ಯಾಪಕವಾದ ಕ್ಷೇತ್ರದಲ್ಲಿ 12 ರೀಜನಲ್ ಬಿಲ್ಡಿಂಗ್ ಕಮಿಟಿಗಳನ್ನು ಈಗ ಸಂಘಟಿಸಿದೆ. ಸೆಂಟ್ ಪೀಟರ್ಸ್ಬರ್ಗ್ನ ಉತ್ತರ ಭಾಗದಲ್ಲಿ, ಈ ದೇಶದ ಮೊದಲ ಅಸೆಂಬ್ಲಿ ಹಾಲ್ ಈಗ ನಿರ್ಮಾಣ ಹಂತದಲ್ಲಿದೆ, ಮತ್ತು ಇದರಲ್ಲಿ ಸುಮಾರು 1,600 ಜನರು ಕುಳಿತುಕೊಳ್ಳಬಹುದು. ಆ ಕಟ್ಟಡದಲ್ಲಿ ಐದು ರಾಜ್ಯ ಸಭಾಗೃಹಗಳು ಒಳಗೊಂಡಿದ್ದು, ಪ್ರತಿಯೊಂದರಲ್ಲಿಯೂ 200 ಜನರು ಕುಳಿತುಕೊಳ್ಳಸಾಧ್ಯವಿದೆ. ಯುಕ್ರೇನ್ನಲ್ಲಿರುವ ನಮ್ಮ ಸಹೋದರರು ಮತ್ತು ಅನೇಕ ಆಸಕ್ತ ಜನರ ಆತ್ಮಿಕ ಅಗತ್ಯಗಳನ್ನು ಪೂರೈಸಲಿಕ್ಕಾಗಿ, 84 ರಾಜ್ಯ ಸಭಾಗೃಹಗಳನ್ನು ಕಟ್ಟಿಮುಗಿಸಲಾಗಿದೆ ಮತ್ತು 80 ರಾಜ್ಯ ಸಭಾಗೃಹಗಳು ಇನ್ನೂ ನಿರ್ಮಾಣ ಹಂತದಲ್ಲಿವೆ.
6 ಪೂರ್ವ ಯೂರೋಪಿನಲ್ಲಿ ಆಗುತ್ತಿರುವ ಈ ಅಭಿವೃದ್ಧಿಯು ನಮಗೆ ಆನಂದವನ್ನು ತರುವುದಿಲ್ಲವೋ? ನಾವು ಎಲ್ಲಿಯೇ ಜೀವಿಸುತ್ತಿರಲಿ, ದೇವರು ಪಕ್ಷಪಾತಿಯಲ್ಲ ಮತ್ತು ಆತನ ತಾಳ್ಮೆಯು ‘ಮಹಾ ಸಮೂಹಕ್ಕೆ’ ರಕ್ಷಣೆಯ ಅರ್ಥದಲ್ಲಿದೆ ಎಂಬುದನ್ನು ಸತ್ಯಾರಾಧನೆಯ ಹಬ್ಬುವಿಕೆಯು ನಮಗೆ ಜ್ಞಾಪಿಸುತ್ತದೆ. (ಪ್ರಕ. 7:9; 2 ಪೇತ್ರ 3:9) ಇತರರ ಆತ್ಮಿಕ ಬೆಳವಣಿಗೆಗಾಗಿ ಕಾಣಿಕೆಯನ್ನು ಕೊಡುವುದರಲ್ಲಿ ನಮಗಿರುವ ಚಿಕ್ಕ ಪಾತ್ರವು ಎಂತಹ ಒಂದು ಸುಯೋಗವಾಗಿದೆ! “ಬಡವರಿಗೆ ದಾನಮಾಡುವವನು ಕೊರತೆಪಡನು” ಎಂದು ಜ್ಞಾನೋಕ್ತಿ 28:27 ನಮಗೆ ಆಶ್ವಾಸನೆಯನ್ನು ನೀಡುತ್ತದೆ. ಇಂತಹ ನಿರ್ಮಾಣ ವೆಚ್ಚಗಳನ್ನು ಭರಿಸಲು ಸಹಾಯಮಾಡುವುದರಲ್ಲಿ ನಾವು ತೋರಿಸುವ ಸಿದ್ಧಮನಸ್ಸು, ಭೌತಿಕ ವಿಷಯಗಳ “ಸಮಾನತ್ವ”ವನ್ನು ಉಂಟುಮಾಡುತ್ತದೆ. ಇದು, ಕೊಡುವುದರಿಂದ ಬರುವ ಸಂತೋಷವನ್ನು ಮತ್ತು ಸತ್ಯಾರಾಧನೆಯು ಲೋಕವ್ಯಾಪಕವಾಗಿ ಹಬ್ಬುತ್ತಿರುವುದನ್ನು ನೋಡುವುದರಿಂದ ಫಲಿಸುವ ಆನಂದವನ್ನು ಎಲ್ಲರೂ ಅನುಭವಿಸುವಂತೆ ಮಾಡುತ್ತದೆ.—2 ಕೊರಿಂ. 8:14, 15; ಅ. ಕೃ. 20:35.
[ಪುಟ 3ರಲ್ಲಿ ಇಡೀ ಪುಟದ ಚಿತ್ರ]
ಸಾಸೀಲ್, ರೊಮೇನಿಯ
[ಪುಟ 3ರಲ್ಲಿ ಇಡೀ ಪುಟದ ಚಿತ್ರ]
ಮಾರ್ಡೂ, ಎಸ್ಟೋನಿಯ
[ಪುಟ 3ರಲ್ಲಿ ಇಡೀ ಪುಟದ ಚಿತ್ರ]
ಸೆವೆನಿಟ್ಸ, ಸ್ಲೊವೇನಿಯ
[ಪುಟ 3ರಲ್ಲಿ ಇಡೀ ಪುಟದ ಚಿತ್ರ]
ಟೆಸಾವಾಸ್ವಾರಿ, ಹಂಗೆರಿ
[ಪುಟ 4ರಲ್ಲಿ ಇಡೀ ಪುಟದ ಚಿತ್ರ]
ಸೂರ್ಮಾಲಾ, ಲ್ಯಾಟ್ವಿಯ
[ಪುಟ 4ರಲ್ಲಿ ಇಡೀ ಪುಟದ ಚಿತ್ರ]
ಟಾಲಿನ್, ಎಸ್ಟೋನಿಯ
[ಪುಟ 4, 5ರಲ್ಲಿ ಇಡೀ ಪುಟದ ಚಿತ್ರ]
ಟಾರೇಜ್, ಲಿತ್ಯೂಏನಿಯ
[ಪುಟ 4, 5ರಲ್ಲಿ ಇಡೀ ಪುಟದ ಚಿತ್ರ]
ಪ್ರೀವಿಡ್ಸ್, ಸ್ಲೊವಾಕಿಯ
[ಪುಟ 5ರಲ್ಲಿ ಇಡೀ ಪುಟದ ಚಿತ್ರ]
ಮಾಟೆಸಾಲ್ಕ, ಹಂಗೆರಿ
[ಪುಟ 5ರಲ್ಲಿ ಇಡೀ ಪುಟದ ಚಿತ್ರ]
ಬೆಲ್ಗ್ರೇಡ್, ಯುಗೊಸ್ಲಾವಿಯ
[ಪುಟ 6ರಲ್ಲಿ ಇಡೀ ಪುಟದ ಚಿತ್ರ]
ರೂಮ, ಯುಗೊಸ್ಲಾವಿಯ
[ಪುಟ 6ರಲ್ಲಿ ಇಡೀ ಪುಟದ ಚಿತ್ರ]
ವ್ರಾನಾವ್ ನಾಡ್ ಟಾಪ್ಲೂ, ಸ್ಲೊವಾಕಿಯ
[ಪುಟ 6ರಲ್ಲಿ ಇಡೀ ಪುಟದ ಚಿತ್ರ]
ಟಾರ್ನಾಕ್ನಾಲ್ಸ್, ಲ್ಯಾಟ್ವಿಯ