ಪ್ರಕಟನೆಗಳು
◼ ಮೇ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳು. ಆಸಕ್ತ ಜನರಿಗೆ ನೀಡಲಿಕ್ಕಾಗಿ ಅಪೇಕ್ಷಿಸು ಬ್ರೋಷರನ್ನು ನಿಮ್ಮ ಬಳಿ ಇಟ್ಟುಕೊಂಡಿರಿ ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸಿರಿ. ಜೂನ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಜುಲೈ ಮತ್ತು ಆಗಸ್ಟ್: ಈ ಕೆಳಗೆ ಉಲ್ಲೇಖಿಸಲ್ಪಟ್ಟಿರುವ ಯಾವುದೇ 32-ಪುಟದ ಬ್ರೋಷರುಗಳನ್ನು ಉಪಯೋಗಿಸಬಹುದು: ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರಲಿರುವ ಸರಕಾರ (ಇಂಗ್ಲಿಷ್), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್). ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್), ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? (ಇಂಗ್ಲಿಷ್) ಎಂಬ ಬ್ರೋಷರುಗಳನ್ನು ನೀಡಬಹುದು.
◼ ಯಾವುದೇ ರೀತಿಯ ವೈಯಕ್ತಿಕ ಪತ್ರ ವ್ಯವಹಾರವನ್ನು ಮಾಡುವಾಗ, ಸೊಸೈಟಿಯ ರಿಟರ್ನ್ (ವಾಪಸು ಕಳುಹಿಸುವ) ವಿಳಾಸವನ್ನು ಉಪಯೋಗಿಸಲೇಬಾರದು ಎಂದು ಎಲ್ಲ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸುವುದು ಅಗತ್ಯವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆಸಕ್ತ ಜನರಿಗೆ, ಮನೆಯಲ್ಲಿಲ್ಲದವರಿಗೆ, ಅಥವಾ ತಲಪಲು ಅಸಾಧ್ಯವಾಗಿರುವಂತಹ ಸ್ಥಳಗಳಲ್ಲಿರುವವರಿಗೆ ಒಂದು ಸಾಕ್ಷಿಯನ್ನು ಕೊಡಲಿಕ್ಕಾಗಿ ಅಂಚೆಯ ಮೂಲಕ ಕಳುಹಿಸಲ್ಪಡುವ ಎಲ್ಲ ಪತ್ರಗಳು ಹಾಗೂ ಸಾಹಿತ್ಯಗಳಿಗೂ ಇದು ಅನ್ವಯಿಸುತ್ತದೆ. ಅಂಚೆಯ ಮೂಲಕ ಸಾಕ್ಷಿಯನ್ನು ನೀಡುವಾಗ, ನೀವು ನಿಮ್ಮ ವೈಯಕ್ತಿಕ ರಿಟರ್ನ್ ವಿಳಾಸವನ್ನೋ ಅಥವಾ ಸ್ಥಳಿಕ ರಾಜ್ಯ ಸಭಾಗೃಹದ ವಿಳಾಸವನ್ನೋ ಉಪಯೋಗಿಸಿರಿ. ದಯವಿಟ್ಟು ಸೊಸೈಟಿಯ ವಿಳಾಸವನ್ನು ಉಪಯೋಗಿಸಬೇಡಿರಿ.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಜೂನ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯನ್ನು ಓದಿದ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಅನೇಕ ಸಭೆಗಳಲ್ಲಿ ಹಳೆಯ ಸಾಹಿತ್ಯದ ಸ್ಟಾಕ್ ಅತ್ಯಧಿಕವಾಗಿಬಿಟ್ಟಿದೆ. ಸಾಹಿತ್ಯದ ಸ್ಟಾಕ್ ವಿಪರೀತವಾಗಿರುವುದು ಒಂದು ಸಮಸ್ಯೆಯಾಗಿದ್ದು, ಸೇವಾ ಕಮಿಟಿಗಳು ಹಾಗೂ ವಿಶೇಷವಾಗಿ ಸೇವಾ ಮೇಲ್ವಿಚಾರಕರು, ಸಭೆಯಿಂದ ಯಾವ ಸಾಹಿತ್ಯವು ಆರ್ಡರ್ ಮಾಡಲ್ಪಡುತ್ತಿದೆ ಎಂಬುದನ್ನು ಸರಿಯಾಗಿ ನೋಡಿಕೊಳ್ಳುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ. ಈಗ ಕ್ಷೇತ್ರದಲ್ಲಿ ನಾವು ಸಾಹಿತ್ಯವನ್ನು ನೀಡುವಾಗ, ಅದಕ್ಕೆ ತಗಲಿರುವ ಹಣವನ್ನು ಕೇಳದೇ ಅದನ್ನು ವಿತರಿಸುವುದರಿಂದ, ಈ ವಿಷಯಕ್ಕೆ ವಿಶೇಷ ಗಮನ ಕೊಡಬೇಕಾಗಿದೆ. ನಾಲ್ಕು ಅಥವಾ ಐದು ತಿಂಗಳುಗಳ ಸರಬರಾಜಿಗಿಂತ ಹೆಚ್ಚನ್ನು ದಯವಿಟ್ಟು ಆರ್ಡರ್ ಮಾಡಬೇಡಿ. ಇದು ನಿಮಗೆ ಸಾಕಾಗುವುದು, ಏಕೆಂದರೆ ಅನಂತರ ನೀವು ಪ್ರತಿ ತಿಂಗಳು ಸಾಹಿತ್ಯದ ಆರ್ಡರ್ ಅನ್ನು ಕಳುಹಿಸಸಾಧ್ಯವಿದೆ.
ಹಳೆಯ ಪ್ರಕಾಶನಗಳ ಸದ್ಯದ ಸ್ಟಾಕ್ ಮುಗಿಯುವ ತನಕ, ಸೊಸೈಟಿಯು ಸಾಹಿತ್ಯವನ್ನು ಪುನರ್‌ಮುದ್ರಿಸುವುದಿಲ್ಲ. ಈ ಕಾರಣದಿಂದಾಗಿ, ನೀವು ಕೇಳಿಕೊಂಡಿರುವ ಒಂದು ಪ್ರಕಾಶನವು ಸ್ಟಾಕ್‌ನಲ್ಲಿ ಇಲ್ಲದಿರುವಲ್ಲಿ, ಇದಕ್ಕೆ ಸರಿಸಮವಾದ ಯಾವ ಪ್ರಕಾಶನವು ಲಭ್ಯವಿದೆ ಎಂಬುದನ್ನು ಸೊಸೈಟಿಯು ಪ್ಯಾಕಿಂಗ್ ಲಿಸ್ಟ್‌ನ ಮೇಲೆ ತೋರಿಸುವುದು. ಆಗ ನೀವು ಅದನ್ನು ನಿಮ್ಮ ಮುಂದಿನ ಲಿಟ್‌ರೇಚರ್ ರಿಕ್ವೆಸ್ಟ್‌ನಲ್ಲಿ ಒಳಗೂಡಿಸಸಾಧ್ಯವಿದೆ. ಮುಂಬರುವ ತಿಂಗಳುಗಳಲ್ಲಿ ಹಳೆಯ ಸಾಹಿತ್ಯವನ್ನು ಸದುಪಯೋಗಿಸುವುದರಲ್ಲಿ ಸತತ ಪ್ರಯತ್ನವನ್ನು ಮಾಡುವಂತೆ ನಾವು ಸಭೆಗಳನ್ನು ಪ್ರೋತ್ಸಾಹಿಸುತ್ತೇವೆ.
◼ ಲಭ್ಯವಿರುವ ಹೊಸ ಪ್ರಕಾಶನ:
ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! —ಹಿಂದಿ