ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/00 ಪು. 4
  • ನೀವು ನಾಚಿಕೆ ಸ್ವಭಾವದವರೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ನಾಚಿಕೆ ಸ್ವಭಾವದವರೋ?
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಇತರರೊಂದಿಗೆ ನಾನು ಸುಲಭವಾಗಿ ಏಕೆ ಬೆರೆಯಲಾರೆ?
    ಎಚ್ಚರ!—1999
  • ನಾಚಿಕೆ ಸ್ವಭಾವನ ಜಯಿಸೋದು ಹೇಗೆ?
    ಯುವಜನರ ಪ್ರಶ್ನೆಗಳು
  • ನಾನು ಜನರೊಂದಿಗೆ ಹೇಗೆ ಸುಲಭವಾಗಿ ಬೆರೆಯಬಲ್ಲೆ?
    ಎಚ್ಚರ!—1999
  • ಯೆಹೋವ ನಿಮಗೆ ಬಲ ಕೊಡ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
2000 ನಮ್ಮ ರಾಜ್ಯದ ಸೇವೆ
km 7/00 ಪು. 4

ನೀವು ನಾಚಿಕೆ ಸ್ವಭಾವದವರೋ?

1 ಚಿಕ್ಕ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಹಿಂದೆ ನಿಂತುಕೊಂಡು ಇಣಿಕಿನೋಡುವುದನ್ನು ನಾವು ನೋಡಿದ್ದೇವೆ. ಆದರೆ ನಾವು ಅದನ್ನು ನೋಡಿ ಆಶ್ಚರ್ಯಪಡುವುದಿಲ್ಲ, ಯಾಕೆಂದರೆ ಬಾಲ್ಯಾವಸ್ಥೆಯಲ್ಲಿ ನಾಚಿಕೆ ಸ್ವಭಾವವು ಸ್ವಾಭಾವಿಕವಾದದ್ದು. ಅನೇಕ ವಯಸ್ಕರೂ ನಾಚಿಕೆ ಸ್ವಭಾವದವರಾಗಿರುತ್ತಾರೆ. ನಿಮಗೂ ಇಂತಹ ಸ್ವಭಾವವಿರುವಲ್ಲಿ ಮತ್ತು ಇದು ನಿಮಗೆ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಅಡ್ಡಬರುತ್ತಿರುವಲ್ಲಿ, ನೀವೇನು ಮಾಡಬಹುದು?

2 ನಾಚಿಕೆ ಸ್ವಭಾವವನ್ನು ನಿಭಾಯಿಸುವುದು: ನಮ್ಮ “ಒಳಗಣ ಭೂಷಣ”ಕ್ಕೆ ಗಮನಕೊಡುವುದು ಪ್ರಾಮುಖ್ಯ. (1 ಪೇತ್ರ 3:4) ಯೆಹೋವನಿಗಾಗಿ ಮತ್ತು ನಿಮ್ಮ ನೆರೆಯವನಿಗಾಗಿರುವ ನಿಮ್ಮ ಪ್ರೀತಿಯನ್ನು ಬಲಪಡಿಸಿರಿ. ಸ್ವತ್ಯಾಗದ ಪ್ರೀತಿಯನ್ನು ತೋರಿಸುವ ಒಂದು ಅತ್ಯುತ್ತಮ ವಿಧವು, ಸಾರುವ ಕೆಲಸವನ್ನು ಪೂರೈಸುವುದೇ ಆಗಿದೆ ಎಂಬ ಸಂಗತಿಯನ್ನು ಮನದಟ್ಟುಮಾಡಿಕೊಳ್ಳಿರಿ. ವೈಯಕ್ತಿಕ ಅಭ್ಯಾಸವನ್ನು ಮಾಡುವುದು ಮತ್ತು ಕೂಟಗಳಿಗೆ ಹಾಜರಾಗುವುದನ್ನು ಒಂದು ರೂಢಿಯಾಗಿ ಮಾಡಿಕೊಳ್ಳಿ. ಕ್ರಮವಾಗಿ ಪ್ರಾರ್ಥನೆ ಮಾಡಿ, ನಿರ್ದಿಷ್ಟವಾದ ಸಹಾಯಕ್ಕಾಗಿ ಯೆಹೋವನ ಬಳಿ ಬೇಡಿಕೊಳ್ಳಿರಿ. ನಿಮಗೆ ಯೆಹೋವನಲ್ಲಿ ಬಲವಾದ ನಂಬಿಕೆ ಮತ್ತು ಭರವಸೆ ಇರುವಲ್ಲಿ, ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, “ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯ”ವನ್ನು ಕೊಡುವುದು.—ಫಿಲಿ. 1:14.

3 ನೀವು ಅಸಮರ್ಥರಾಗಿದ್ದೀರೆಂಬ ಭಾವನೆಗಳ ವಿರುದ್ಧ ಹೋರಾಡಿರಿ. ತಿಮೊಥೆಯನು ಸಹ ಇಂಥ ಹೋರಾಟವನ್ನು ಮಾಡಬೇಕಾಗಿತ್ತೆಂದು ತೋರುತ್ತದೆ. ಯಾಕೆಂದರೆ ಪೌಲನು ತಿಮೊಥೆಯನಿಗೆ, ‘ಯೌವನಸ್ಥನೆಂದು [ಅವನನ್ನು] ಅಸಡ್ಡೆಮಾಡುವದಕ್ಕೆ ಯಾರಿಗೂ ಅವಕಾಶಕೊಡದಂತೆ’ ಇರಲು ಉತ್ತೇಜಿಸಿದನು. ಯಾಕೆಂದರೆ ‘ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಹೊರತು ಹೇಡಿತನದ ಆತ್ಮವಲ್ಲ’ ಎಂದು ಅವನು ಹೇಳಿದನು. (1 ತಿಮೊ. 4:12; 2 ತಿಮೊ. 1:7) ಯೆಹೋವನು ತಿಮೊಥೆಯನನ್ನು ಸಂಪೂರ್ಣವಾಗಿ ಉಪಯೋಗಿಸಿದನು. ಅದೇ ರೀತಿಯಲ್ಲಿ, ನೀವು ದೇವರಲ್ಲಿ ಸಂಪೂರ್ಣ ಭರವಸೆಯನ್ನಿಟ್ಟು ಮುಂದುವರಿಯುವುದಾದರೆ, ಆತನು ನಿಮ್ಮನ್ನು ಸಹ ಉಪಯೋಗಿಸುವನು.—ಕೀರ್ತ. 56:11.

4 ಒಬ್ಬ ಸಹೋದರಿಯು ತನ್ನನ್ನು ವಿರೋಧಿಸುತ್ತಿದ್ದ ಗಂಡನಿಗೆ ತುಂಬ ಹೆದರುತ್ತಿದ್ದಳು. ಆದರೆ ಮತ್ತಾಯ 10:37ರಂತಹ ವಚನದ ಕುರಿತು ಮನನಮಾಡುವುದರಿಂದ ಅವಳಿಗೆ ಸಹಾಯ ಸಿಕ್ಕಿತು. ಅವಳು ಪಟ್ಟುಹಿಡಿದು ಮುಂದುವರಿದಂತೆ, ಅವಳಿಗೆ ಶುಶ್ರೂಷೆಯ ಕೆಲಸವು ಹೆಚ್ಚು ಸುಲಭವಾಯಿತು. ಮತ್ತು ಕೊನೆಗೂ ಅವಳ ಗಂಡ, ತಾಯಿ, ಮತ್ತು ಸಹೋದರರು ಸತ್ಯವನ್ನು ಸ್ವೀಕರಿಸಿದರು.

5 ತಯಾರಿ ಅತ್ಯಾವಶ್ಯಕ: ನೀವು ಶುಶ್ರೂಷೆಗಾಗಿ ಚೆನ್ನಾಗಿ ತಯಾರಿ ಮಾಡುವಲ್ಲಿ ನಿಮ್ಮ ಆತ್ಮವಿಶ್ವಾಸವು ಹೆಚ್ಚುವುದು. ರೀಸನಿಂಗ್‌ ಪುಸ್ತಕದಿಂದ, ಅಥವಾ ನಮ್ಮ ರಾಜ್ಯದ ಸೇವೆಯ ಹಿಂದಿನ ಸಂಚಿಕೆಗಳಿಂದ ಒಂದು ಸರಳವಾದ ನಿರೂಪಣೆಯನ್ನು ಆಯ್ಕೆಮಾಡಿ, ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ಚೆನ್ನಾಗಿ ಪ್ರ್ಯಾಕ್ಟಿಸ್‌ ಮಾಡಿರಿ. ಅನಾವಶ್ಯಕವಾಗಿ ಚಿಂತೆ ಮಾಡುವ ಬದಲಿಗೆ, ಸಕಾರಾತ್ಮಕವಾಗಿ ಯೋಚಿಸಿರಿ. ಬೇರೆಯವರೊಂದಿಗೆ ಹೆಚ್ಚೆಚ್ಚು ಕೆಲಸಮಾಡುವ ಮೂಲಕ ಧೈರ್ಯವನ್ನು ಪಡೆದುಕೊಳ್ಳಿ. ನೀವು ಅನೇಕ ಮನೆಗಳಲ್ಲಿ ಭೇಟಿಯಾಗಲಿರುವ ಜನರು ನಿಮ್ಮಂತೆಯೇ ಅಂಜುವ ಸ್ವಭಾವದವರಾಗಿದ್ದಾರೆಂಬುದನ್ನು ನೆನಪಿನಲ್ಲಿಡಿರಿ. ಆದರೂ, ಎಲ್ಲರಿಗೂ ರಾಜ್ಯದ ಸಂದೇಶವನ್ನು ತಿಳಿಸುವ ಅಗತ್ಯವಿದೆ.

6 ನೀವು ನಾಚಿಕೆ ಸ್ವಭಾವದವರಾಗಿರುವಲ್ಲಿ, ನಿರಾಶರಾಗಬೇಡಿರಿ. ನೀವು ಪಟ್ಟುಹಿಡಿದು ಪ್ರಯತ್ನ ಮಾಡಿದಂತೆ, ಯೆಹೋವನು ನಿಮಗೆ ಸುವಾರ್ತೆಯ ಒಬ್ಬ ಪರಿಣಾಮಕಾರಿ ಸೌವಾರ್ತಿಕನಾಗಲು ಸಹಾಯ ಮಾಡುವನು. ಆಗ ನಿಮಗೆ ನಿಮ್ಮ ಶುಶ್ರೂಷೆಯಲ್ಲಿ ಆನಂದವು ಸಿಗುವುದು.—ಜ್ಞಾನೋ. 10:22.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ