ಸೇವಾ ಕೂಟದ ಶೆಡ್ಯೂಲ್
ಜುಲೈ 10ರಿಂದ ಆರಂಭವಾಗುವ ವಾರ
ಸಂಗೀತ 17 (187)
12 ನಿ:ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಸಭೆಯ ಏಪ್ರಿಲ್ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ತಿಳಿಸಿರಿ. “ಹಿಂದಿನ ಪುಟವನ್ನು ನೋಡಿರಿ” ಎಂಬ ರೇಖಾಚೌಕಕ್ಕೆ ಎಲ್ಲರ ಗಮನವನ್ನು ತಿರುಗಿಸಿರಿ. ಅವುಗಳಲ್ಲಿ ಸೂಚಿಸಲ್ಪಟ್ಟಿರುವ ಮತ್ತು ಸ್ಥಳಿಕ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿರಬಲ್ಲ ಯಾವುದಾದರೂ ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ:‘ನಾವು ಹೇಳದೆ ಇರಲಾರೆವು.’ ಆರಂಭದ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯಕ್ಕೆ ಸೀಮಿತಗೊಳಿಸಿ, ಪ್ರಶ್ನೋತ್ತರ ಚರ್ಚೆಯೊಂದಿಗೆ ಮುಂದುವರಿಸಿರಿ. ನಾವು ನಮ್ಮ ಸಾರುವ ಕೆಲಸವನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂಬುದಕ್ಕಿರುವ ಕಾರಣಗಳನ್ನು ಒತ್ತಿಹೇಳಿರಿ. ಕಾವಲಿನಬುರುಜು ಪತ್ರಿಕೆಯ 1997, ಜನವರಿ 15ರ ಸಂಚಿಕೆಯ 23-4ನೆಯ ಪುಟಗಳಿಂದ ಸಂಬಂಧಪಟ್ಟ ವಿಷಯಗಳನ್ನೂ ಸೇರಿಸಿರಿ.
18 ನಿ:“ನೀವು ಏನೂ ನಡಿಸಿದರೂ ಭಕ್ತಿವೃದ್ಧಿಗಾಗಿಯೇ ನಡಿಸಿರಿ.” ಇಬ್ಬರು ಹಿರಿಯರು ಈ ಲೇಖನವನ್ನು ಚರ್ಚಿಸುತ್ತಾರೆ. ಪ್ರತಿಯೊಂದು ಪ್ಯಾರಗ್ರಾಫನ್ನು ಮತ್ತು ಕೊಡಲ್ಪಟ್ಟಿರುವ ವಚನಗಳನ್ನು ಓದಿರಿ. ಅದರಲ್ಲಿರುವ ಮೂಲತತ್ವಗಳನ್ನು ಎತ್ತಿತೋರಿಸಿರಿ. ವ್ಯಾಪಾರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಅಥವಾ ಬಂಡವಾಳವನ್ನು ನೀಡುವಾಗ ವಿವೇಚನಾಶಕ್ತಿಯನ್ನು ಉಪಯೋಗಿಸುವ ಅಗತ್ಯವನ್ನು ಒತ್ತಿಹೇಳಿರಿ. 1997, ಮಾರ್ಚ್ 15ರ ಕಾವಲಿನಬುರುಜು ಪತ್ರಿಕೆಯ 18-19, 22ನೆಯ ಪುಟಗಳಲ್ಲಿರುವ ಸಲಹೆಯನ್ನು ಪುನರ್ವಿಮರ್ಶಿಸಿರಿ.
ಸಂಗೀತ 2 (15) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 17ರಿಂದ ಆರಂಭವಾಗುವ ವಾರ
ಸಂಗೀತ 29 (222)
12 ನಿ:ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಒಬ್ಬ ಆಸಕ್ತ ವ್ಯಕ್ತಿಯು, ದೇವರ ವೈಯಕ್ತಿಕ ಹೆಸರನ್ನು ತಿಳಿದುಕೊಳ್ಳುವ ಮತ್ತು ಅದನ್ನು ಉಪಯೋಗಿಸುವ ಅಗತ್ಯವನ್ನು ಗ್ರಹಿಸುವಂತೆ ಸಹಾಯಮಾಡಲು, ಸದಾಜೀವನವನ್ನು ಆನಂದಿಸಿರಿ ಎಂಬ ಬ್ರೋಷರನ್ನು ಹೇಗೆ ಉಪಯೋಗಿಸಬಹುದೆಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ.—ರೀಸನಿಂಗ್ ಪುಸ್ತಕದ 196-7ನೆಯ ಪುಟಗಳನ್ನು ನೋಡಿರಿ.
15 ನಿ:‘ಉದಾರಿಗಳೂ, ಹಂಚಿಕೊಳ್ಳಲು ಸಿದ್ಧರೂ ಆಗಿರಿ.’ ಪ್ರಶ್ನೋತ್ತರಗಳು. 1996, ನವೆಂಬರ್ 1ರ ಕಾವಲಿನಬುರುಜು ಪತ್ರಿಕೆಯ 29-30ನೆಯ ಪುಟಗಳಲ್ಲಿ “ನಾವು ಕೊಡುವ ಕಾರಣ” ಎಂಬ ಉಪಶೀರ್ಷಿಕೆಯ ಕೆಳಗೆ ಕೊಡಲ್ಪಟ್ಟಿರುವ ನಾಲ್ಕು ಕಾರಣಗಳನ್ನು ಸೇರಿಸಿರಿ.
18 ನಿ:ನಿಮ್ಮ ಆದರ್ಶ ವ್ಯಕ್ತಿ ಯಾರಾಗಿರಬೇಕು? ಒಬ್ಬ ತಂದೆ ತನ್ನ ಒಬ್ಬ ಅಥವಾ ಇಬ್ಬರು ಹದಿವಯಸ್ಕ ಮಕ್ಕಳೊಂದಿಗೆ ಕುಟುಂಬ ಅಭ್ಯಾಸವನ್ನು ನಡೆಸುತ್ತಾನೆ. ಮಕ್ಕಳು ಯಾವಾಗಲೂ ಕ್ರೀಡಾ ಜಗತ್ತಿನ ಹೀರೋಗಳು, ಚಲನಚಿತ್ರ ತಾರೆಗಳು, ಟಿವಿಯಲ್ಲಿನ ಹೆಸರಾಂತ ವ್ಯಕ್ತಿಗಳು ಮತ್ತು ಸಂಗೀತಗಾರರ ಕುರಿತಾಗಿ ಮಾತಾಡುತ್ತಾ ಇರುವುದನ್ನು ತಂದೆ ಇತ್ತೀಚೆಗೆ ಗಮನಿಸಿದ್ದಾರೆ. ಈ ರೀತಿಯ ವ್ಯಕ್ತಿಗಳ ಕಡೆಗಿನ ಆಕರ್ಷಣೆಯು, ಲೌಕಿಕ ಮನೋಭಾವದ ಒಂದು ಲಕ್ಷಣವಾಗಿರುವುದರಿಂದ ಅವನು ಚಿಂತೆಯನ್ನು ವ್ಯಕ್ತಪಡಿಸುತ್ತಾನೆ. ಅವರೆಲ್ಲರೂ 1998, ಜೂನ್ 8ರ ಎಚ್ಚರ! ಪತ್ರಿಕೆಯ 12-14ನೆಯ ಪುಟಗಳಲ್ಲಿರುವ ವಿಷಯವನ್ನು ಚರ್ಚಿಸುತ್ತಾರೆ. ಆಗ ಈ ಹದಿವಯಸ್ಕ ಮಕ್ಕಳು, ಲೋಕದ ಹೆಸರಾಂತ ವ್ಯಕ್ತಿಗಳನ್ನು ಪೂಜಿಸುವುದರಲ್ಲಿರುವ ಅಪಾಯವನ್ನು ಗ್ರಹಿಸುತ್ತಾರೆ. ಮತ್ತು ಈ ಲೋಕದಲ್ಲಿ ಪ್ರಸಿದ್ಧಿಯನ್ನು ಪಡೆದಿರುವವರಿಂದ ಕ್ರೈಸ್ತರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಿಲ್ಲ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಬದಲಾಗಿ ಅವರು ತಮ್ಮ ಹೆತ್ತವರನ್ನು, ಹಿರಿಯರನ್ನು, ಸಭೆಯಲ್ಲಿರುವ ಇತರ ಆದರ್ಶಪ್ರಾಯ ವ್ಯಕ್ತಿಗಳನ್ನು —ಮತ್ತು ವಿಶೇಷವಾಗಿ ಯೇಸು ಕ್ರಿಸ್ತನನ್ನು—ತಮ್ಮ ಆದರ್ಶ ವ್ಯಕ್ತಿಗಳಾಗಿ ಮಾಡಿಕೊಂಡರೆ ತಮಗೆ ಸಿಗಬಹುದಾದ ಪ್ರಯೋಜನಗಳನ್ನು ಪರಿಗಣಿಸುತ್ತಾರೆ.
ಸಂಗೀತ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 24ರಿಂದ ಆರಂಭವಾಗುವ ವಾರ
ಸಂಗೀತ 6 (45)
5 ನಿ:ಸ್ಥಳಿಕ ತಿಳಿಸುವಿಕೆಗಳು.
15 ನಿ:ದೇವರ ಶುಶ್ರೂಷಕರೆಂದು ನಮ್ಮನ್ನು ಶಿಫಾರಸ್ಸುಮಾಡಿಕೊಳ್ಳುವುದು. 1998, ಡಿಸೆಂಬರ್ 15ರ ಕಾವಲಿನಬುರುಜು ಪತ್ರಿಕೆಯ 19-20ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರೀಯ ಬುದ್ಧಿವಾದವನ್ನು ಇಬ್ಬರು ಶುಶ್ರೂಷಾ ಸೇವಕರು ಚರ್ಚಿಸುತ್ತಾರೆ. ಅವರು ಶುಶ್ರೂಷಾ ಸೇವಕರಿಗಾಗಿರುವ ಆವಶ್ಯಕತೆಗಳಿಗೆ ತಕ್ಕಂತೆ ನಡೆಯುವ ಅಗತ್ಯವನ್ನು ಗ್ರಹಿಸುತ್ತಾರೆ ಮತ್ತು ತಮ್ಮ ನೇಮಕಗಳನ್ನು ಪೂರೈಸುತ್ತಿದ್ದೇವೆಂಬುದನ್ನು ತೋರಿಸಲು ತಾವು ವೈಯಕ್ತಿಕವಾಗಿ ಏನನ್ನು ಮಾಡಬಹುದೆಂಬುದನ್ನು ಪುನರ್ವಿಮರ್ಶಿಸುತ್ತಾರೆ. ಕ್ಷೇತ್ರ ಸೇವೆಯಲ್ಲಿ ತಾವು ಒಳ್ಳೆಯ ಮಾದರಿಯಾಗಿರುವುದು ಮಹತ್ವಪೂರ್ಣವಾಗಿದೆ ಎಂಬುದನ್ನು ಅವರು ಗ್ರಹಿಸುತ್ತಾರೆ. ಮತ್ತು ಇತರರಿಗೆ ವೈಯಕ್ತಿಕ ನೆರವನ್ನು ಕೊಡುವುದರಲ್ಲಿ ತಾವು ಹಿರಿಯರಿಗೆ ಸಹಾಯ ಮಾಡಬಹುದಾದ ವಿಧಗಳನ್ನು ಚರ್ಚಿಸುತ್ತಾರೆ. ನಾವು ಜೀವಿಸುತ್ತಿರುವ ಈ ಸಮಯವು ಎಷ್ಟು ತುರ್ತಿನದ್ದಾಗಿದೆ ಎಂಬುದನ್ನು ಮತ್ತು ಆತ್ಮಿಕವಾಗಿ ಬೆಳೆದು, ಏಳಿಗೆ ಹೊಂದುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಗ್ರಹಿಸುವಂತೆ ಸಭೆಗೆ ಸಹಾಯ ಮಾಡಲು ತಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವುದೇ ತಮ್ಮ ಬಯಕೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.
10 ನಿ:ನಾವು ವೈಯಕ್ತಿಕವಾಗಿ ಸಂಪರ್ಕಿಸಲಾಗದಂತಹ ಜನರಿಗೆ ಪತ್ರಗಳನ್ನು ಬರೆಯುವುದು. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಇಂದು ಜನರನ್ನು ಮನೆಯಲ್ಲಿ ಭೇಟಿಯಾಗುವುದು ಕಷ್ಟಕರವಾಗುತ್ತಿರುವುದರಿಂದ, ಪತ್ರಗಳನ್ನು ಬರೆಯುವ ಮೂಲಕ ಕೆಲವು ಪ್ರಚಾರಕರು ಒಳ್ಳೆಯ ಫಲಿತಾಂಶಗಳನ್ನು ಪಡೆದಿದ್ದಾರೆ. ಆದರೆ ಈ ನಿರ್ದೇಶನಗಳನ್ನು ಮನಸ್ಸಿನಲ್ಲಿಡಿ: ಪತ್ರಗಳು ಚುಟುಕಾಗಿರಬೇಕು, ಶಾಸ್ತ್ರವಚನಗಳ ಮೇಲೆ ಆಧಾರಿತವಾಗಿರಬೇಕು ಮತ್ತು ಗೌರವಪೂರ್ವಕವಾಗಿರಬೇಕು. ನಿಮ್ಮ ಹೆಸರನ್ನು ಬರೆಯದೇ ಪತ್ರಗಳನ್ನು ಕಳುಹಿಸಬೇಡಿರಿ. ನೀಟಾಗಿ ಮತ್ತು ಸುಲಭವಾಗಿ ಓದಲು ಸಾಧ್ಯವಿರುವಂತಹ ರೀತಿಯಲ್ಲಿ ಬರೆಯಿರಿ ಅಥವಾ ಟೈಪ್ ಮಾಡಿರಿ. ರಾಜ್ಯ ಸಭಾಗೃಹದ ವಿಳಾಸ ಹಾಗೂ ಸಭಾ ಕೂಟಗಳ ಸಮಯವನ್ನು ಅದರಲ್ಲಿ ಸ್ಪಷ್ಟವಾಗಿ ಬರೆಯಿರಿ ಮತ್ತು ಆ ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸಿರಿ. ಅವರು ಪತ್ರಕ್ಕೆ ಉತ್ತರವನ್ನು ಬರೆಯಲಿಕ್ಕಾಗಿ, ಸೊಸೈಟಿಯ ವಿಳಾಸವನ್ನು ಕೊಡಬೇಡಿ. ಸ್ಕೂಲ್ ಗೈಡ್‌ಬುಕ್‌ನ 27-8ನೆಯ ಪುಟಗಳಲ್ಲಿರುವ ಸಲಹೆಯನ್ನು ಮತ್ತು 1996ರ ನವೆಂಬರ್ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪ್ರಶ್ನಾ ರೇಖಾಚೌಕದಲ್ಲಿರುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ.
15 ನಿ:ಪರಿಣಾಮಕಾರಿಯಾಗಿರುವ ಪೀಠಿಕೆಗಳನ್ನು ಉಪಯೋಗಿಸಿರಿ. ರೀಸನಿಂಗ್ ಪುಸ್ತಕದ 9-15ನೆಯ ಪುಟಗಳಲ್ಲಿರುವ ಎರಡು ಅಥವಾ ಮೂರು ಪೀಠಿಕೆಗಳನ್ನು ಆಯ್ಕೆಮಾಡಿ, ಇವುಗಳನ್ನು ಸ್ಥಳಿಕ ಟೆರಿಟೊರಿಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಬಹುದೆಂಬುದನ್ನು ಚರ್ಚಿಸಿರಿ. “ಬೀದಿಯಲ್ಲಿ, ಅನೌಪಚಾರಿಕವಾಗಿ ಅಥವಾ ಬೇರೆ ಕಡೆಗಳಲ್ಲಿ ಒಬ್ಬರೊಂದಿಗೆ ಸಂಭಾಷಣೆಗಳನ್ನು ಆರಂಭಿಸುವಾಗ, ಯಾವ ಪೀಠಿಕೆಗಳನ್ನು ಉಪಯೋಗಿಸುತ್ತೀರಿ?” ಎಂದು ಸಭಿಕರಿಗೆ ಕೇಳಿರಿ. ಉಳಿದಿರುವ ಸಮಯಕ್ಕನುಸಾರ, ಒಂದು ಅಥವಾ ಎರಡು ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ.
ಸಂಗೀತ 1 (13) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 31ರಿಂದ ಆರಂಭವಾಗುವ ವಾರ
ಸಂಗೀತ 23 (200)
15 ನಿ:ಸ್ಥಳಿಕ ತಿಳಿಸುವಿಕೆಗಳು. ಜುಲೈ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ. ಈ ತಿಂಗಳಲ್ಲಿ ಬ್ರೋಷರುಗಳನ್ನು ನೀಡುತ್ತಿದ್ದಾಗ ತಮಗೆ ವೈಯಕ್ತಿಕವಾಗಿ ಸಿಕ್ಕಿದಂತಹ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
12 ನಿಳ:ಸ್ಥಳಿಕ ಅಗತ್ಯಗಳು.
18 ನಿ:“ಯೆಹೋವನ ತಾಳ್ಮೆಯನ್ನು ನೀವು ಗಣ್ಯಮಾಡುತ್ತೀರೊ?” ಪ್ರಶ್ನೋತ್ತರಗಳು. ಯೆಹೋವನ ದೀರ್ಘಶಾಂತಿಗೆ ಸಂಬಂಧಪಟ್ಟ ವಿಷಯಗಳನ್ನು ಸೇರಿಸಿರಿ.—ಇನ್‌ಸೈಟ್, ಸಂಪುಟ 2, 263-4ನೆಯ ಪುಟಗಳನ್ನು ನೋಡಿರಿ.
ಸಂಗೀತ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 7ರಿಂದ ಆರಂಭವಾಗುವ ವಾರ
ಸಂಗೀತ 26 (212)
10 ನಿ:ಸ್ಥಳಿಕ ತಿಳಿಸುವಿಕೆಗಳು.
17 ನಿ:“ನೀವು ನಾಚಿಕೆ ಸ್ವಭಾವದವರೋ?” ಪ್ರಶ್ನೋತ್ತರಗಳು. 1997 ಯಿಯರ್‌ಬುಕ್‌ನ 43-4 ಪುಟಗಳಿಂದ ಒಂದು ಉತ್ತೇಜನದಾಯಕವಾದ ಅನುಭವವನ್ನು ತಿಳಿಸಿರಿ.
18 ನಿ:ನಿಮ್ಮ ಭವಿಷ್ಯತ್ತಿನ ವಿಷಯದಲ್ಲಿ ಬುದ್ಧಿವಂತರಾಗಿರಿ. ಹಿರಿಯನೊಬ್ಬನಿಂದ ಭಾಷಣ. ತಮ್ಮ ಪ್ರಿಯ ವ್ಯಕ್ತಿಗಳೊಂದಿಗೆ ಒಂದು ಸಂತೋಷಭರಿತ ಭವಿಷ್ಯತ್ತನ್ನು ಆನಂದಿಸುವುದು ಯುವ ಜನರ ಆಸೆಯಾಗಿರುತ್ತದೆ. ಇದು ಸ್ವಾಭಾವಿಕ. ಆದರೆ ಅವರು ಸಫಲರಾಗಬೇಕಾದರೆ, ದೈವಿಕ ಸಲಹೆಯನ್ನು ತಮ್ಮ ಜೀವನದಲ್ಲಿ ಅನ್ವಯಿಸಬೇಕು. (ಜ್ಞಾನೋ. 19:20) ಯುವ ಪ್ರಾಯದಲ್ಲಿ ವಿರುದ್ಧ ಲಿಂಗದವರ ಕಡೆಗಿನ ಆಕರ್ಷಣೆಯು ತುಂಬ ಬಲವಾಗಿರುತ್ತದೆ. ಇಂತಹ ಭಾವನೆಗಳನ್ನು ನಿಯಂತ್ರಿಸದೇ ಹೋಗುವಲ್ಲಿ, ಫಲಿತಾಂಶಗಳು ವಿಪತ್ಕಾರಕವಾಗಿರುವವು. ಹದಿವಯಸ್ಕರು ವಿರುದ್ಧ ಲಿಂಗದವರೊಂದಿಗೆ ಭಾವನಾತ್ಮಕವಾಗಿ ತೀರ ಹತ್ತಿರವಾಗಿ, ಡೇಟಿಂಗ್‌ಗೆ ನಡೆಸುವ ಪ್ರಣಯಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದರ ಬಗ್ಗೆ ಅನೇಕ ಪ್ರಶ್ನೆಗಳೇಳುತ್ತವೆ. ಯುವ ಜನರ ಪ್ರಶ್ನೆಗಳು ಪುಸ್ತಕದ 231-5ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವನ್ನು ಪುನರ್ವಿಮರ್ಶಿಸಿರಿ. 1999, ನವೆಂಬರ್ 15ರ ಕಾವಲಿನಬುರುಜು ಪತ್ರಿಕೆಯ 18-23ನೆಯ ಪುಟಗಳಲ್ಲಿ, ಯುವ ಜನರು ದೇವರ ಕಡೆಗೆ ತಮಗಿರುವ ಪೂರ್ಣ ಕರ್ತವ್ಯವನ್ನು ನೆರವೇರಿಸುವುದರ ಮಹತ್ವವನ್ನು ತೋರಿಸುವ ಮುಖ್ಯಾಂಶಗಳನ್ನು ಎತ್ತಿತೋರಿಸಿರಿ. ಈ ಸಲಹೆಯ ಕುರಿತು ಗಂಭೀರವಾಗಿ ಯೋಚಿಸುವಂತೆ ಮತ್ತು ಅವರಿಗೆ ಪ್ರಶ್ನೆಗಳಿರುವಲ್ಲಿ ಅವುಗಳನ್ನು ತಮ್ಮ ಹೆತ್ತವರೊಂದಿಗೆ ಚರ್ಚಿಸುವಂತೆ ಹದಿವಯಸ್ಕರನ್ನು ಉತ್ತೇಜಿಸಿರಿ.
ಸಂಗೀತ 28 (224) ಮತ್ತು ಸಮಾಪ್ತಿಯ ಪ್ರಾರ್ಥನೆ.