ನೀವು ಧೈರ್ಯದಿಂದ ಸಾರುತ್ತೀರೋ?
1 ಪೇತ್ರ ಹಾಗೂ ಯೋಹಾನನನ್ನು ವಿರೋಧಿಗಳು ಬಂಧಿಸಿ, ಬಹಳಷ್ಟು ಬೆದರಿಕೆಯನ್ನು ಹಾಕಿದರೂ, ಅವರು ಮಾತ್ರ ರಾಜ್ಯದ ಸಂದೇಶವನ್ನು ಧೈರ್ಯದಿಂದ ಸಾರಿದರು. (ಅ. ಕೃ. 4:17, 21, 31) ಇಂದು ನಾವು ಧೈರ್ಯದಿಂದ ಸಾರಬೇಕು ಎಂಬುದರ ಅರ್ಥವೇನಾಗಿದೆ?
2 ಧೈರ್ಯದಿಂದ ಸಾಕ್ಷಿನೀಡುವುದು: “ಧೈರ್ಯ” ಎಂಬ ಪದಕ್ಕೆ ಸಮಾನಾರ್ಥಕ ಪದವು “ನಿರ್ಭಯತೆ” ಆಗಿದೆ. ಇದರರ್ಥ, “ದೃಢನಿಶ್ಚಯದ ನಿರ್ಭಯತೆ, ಧೃತಿ ಮತ್ತು ಸಹನೆ” ಆಗಿದೆ. ಧೈರ್ಯದಿಂದ ಸಾರಬೇಕು ಎಂದು ಹೇಳುವಾಗ, ನಿಜ ಕ್ರೈಸ್ತರ ಸಂಬಂಧದಲ್ಲಿ ಇತರರಿಗೆ ಸುವಾರ್ತೆಯನ್ನು ಸಾರಲು ಸಿಗುವ ತಕ್ಕ ಸಂದರ್ಭದಲ್ಲಿ ಭಯಪಡದೆ ಮಾತಾಡಬೇಕು ಎಂದಾಗಿದೆ. (ಅ. ಕೃ. 4:20; 1 ಪೇತ್ರ 3:15) ಸುವಾರ್ತೆಯನ್ನು ಸಾರಲು ನಾವು ನಾಚಿಕೆಪಡುವುದಿಲ್ಲ ಎಂಬುದು ಇದರ ಅರ್ಥವಾಗಿದೆ. (ಕೀರ್ತ. 119:46; ರೋಮಾ. 1:16; 2 ತಿಮೊ. 1:8) ಹೀಗೆ, ಈ ಅಂತ್ಯದ ಸಮಯದಲ್ಲಿ ರಾಜ್ಯ ಸುವಾರ್ತೆಯನ್ನು ಸಾರುವ ನೇಮಕವನ್ನು ನಮಗೆ ಕೊಡಲಾಗಿದೆ. ಇದನ್ನು ಪೂರೈಸಬೇಕಾದರೆ ನಮಗೆ ಧೈರ್ಯವು ಅತ್ಯಾವಶ್ಯಕ. ಇದು, ಜನರನ್ನು ನಾವು ಎಲ್ಲಿಯೇ ಕಂಡುಕೊಳ್ಳಲಿ ಅವರಿಗೆ ಸುವಾರ್ತೆಯನ್ನು ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ.—ಅ. ಕೃ. 4:29; 1 ಕೊರಿಂ. 9:23.
3 ಶಾಲೆಯಲ್ಲಿ ಧೈರ್ಯದಿಂದಿರುವುದು: ಭಯ ಅಥವಾ ಅಂಜಿಕೆಯು ನಿಮ್ಮನ್ನು ಶಾಲಾಸಹಪಾಠಿಗಳಿಗೆ ಸಾರುವುದನ್ನು ಕಷ್ಟಕರವನ್ನಾಗಿ ಮಾಡುತ್ತದೋ? ಕೆಲವೊಮ್ಮೆ ಸಾರುವುದು ಸುಲಭವಲ್ಲ ಏಕೆಂದರೆ, ಇದು ನಿಜವಾಗಿಯೂ ಒಂದು ಸವಾಲಾಗಿದೆ. ಆದರೆ, ಇತರರಿಗೆ ಸಾರಲಿಕ್ಕಾಗಿ ಧೈರ್ಯವನ್ನು ದಯಪಾಲಿಸುವಂತೆ ನೀವು ಯೆಹೋವನಲ್ಲಿ ಪ್ರಾರ್ಥಿಸುವುದಾದರೆ, ಆತನು ಖಂಡಿತವಾಗಿಯೂ ನಿಮ್ಮನ್ನು ಬಲಪಡಿಸುವನು. (ಕೀರ್ತ. 138:3) ಧೈರ್ಯವು, ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದೀರಿ ಎಂದು ಗುರುತಿಸಿಕೊಳ್ಳಲಿಕ್ಕಾಗಿ ಹಾಗೂ ಅಪಹಾಸ್ಯವನ್ನು ಸಹಿಸಿಕೊಳ್ಳಲಿಕ್ಕಾಗಿ ಸಹಾಯಮಾಡುವುದು. ಹೀಗೆ, ಶಾಲೆಯಲ್ಲಿ ಸಾರುವಾಗ ನಿಮ್ಮ ಸಂದೇಶಕ್ಕೆ ಕಿವಿಗೊಡುವವರು ರಕ್ಷಣೆಯನ್ನು ಪಡೆದುಕೊಳ್ಳುವರು.—1 ತಿಮೊ. 4:16.
4 ಕೆಲಸಮಾಡುವ ಸ್ಥಳದಲ್ಲಿ ರ್ಧೈಯದಿಂದಿರುವುದು: ಕೆಲಸಮಾಡುವ ಸ್ಥಳದಲ್ಲಿ ನೀವೊಬ್ಬ ಯೆಹೋವನ ಸಾಕ್ಷಿಯಾಗಿದ್ದೀರಿ ಎಂಬುದು ಎಲ್ಲರಿಗೂ ಗೊತ್ತೋ? ನೀವು ನಿಮ್ಮ ಸಹೋದ್ಯೋಗಿಗಳಿಗೆ ಸಾರುವಾಗಲೇ, ಅವರಿಗೆ ಸುವಾರ್ತೆಯು ತಲುಪುವುದು. ಧೈರ್ಯವು, ಕ್ರೈಸ್ತ ಕೂಟಗಳಿಗೆ ಹಾಗೂ ಅಧಿವೇಶನಗಳಿಗೆ ಹೋಗಲು ರಜೆಯನ್ನು ಕೇಳಲು ಸಹ ಸಹಾಯಮಾಡುವುದು.
5 ಪರೀಕ್ಷೆಯನ್ನು ಎದುರಿಸುವಾಗ ಧೈರ್ಯದಿಂದಿರುವುದು: ನಾವು ವಿರೋಧವನ್ನು ಎದುರಿಸುವಾಗ ಧೈರ್ಯವನ್ನು ತಂದುಕೊಳ್ಳುವುದು ಬಹಳ ಮುಖ್ಯ. (1 ಥೆಸ. 2:1, 2) ಬೆದರಿಕೆ, ಅಪಹಾಸ್ಯ, ದಯೆದಾಕ್ಷಿಣ್ಯವಿಲ್ಲದ ಹಿಂಸೆಯನ್ನು ನಾವು ಎದುರಿಸುವಾಗ ನಮ್ಮ ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವುದಕ್ಕೆ ಧೈರ್ಯವು ಸಹಾಯಮಾಡುತ್ತದೆ. (ಫಿಲಿ. 1:27, 28) ಯೆಹೋವ ದೇವರ ಮಟ್ಟಗಳಿಗನುಸಾರ ನಡೆಯುವ ವಿಷಯದಲ್ಲಿ ರಾಜಿಮಾಡಿಕೊಳ್ಳುವಂತೆ ನಮ್ಮ ಮೇಲೆ ಒತ್ತಡಗಳು ಬರುವಾಗ, ನಾವು ದೃಢವಾಗಿ ನಿಂತುಕೊಳ್ಳಲು ಇದು ನಮಗೆ ಬಲವನ್ನು ನೀಡುತ್ತದೆ. ಮತ್ತು ಇದು ಇತರರು ಜಗಳವಾಡುವಂತೆ ನಮ್ಮನ್ನು ಕೆರಳಿಸುವಾಗ, ಸಮಾಧಾನದಿಂದಿರುವಂತೆ ನಮಗೆ ಸಹಾಯಮಾಡುತ್ತದೆ.—ರೋಮಾ. 12:18.
6 ನಾವು ಯಾವುದೇ ಕಷ್ಟನಷ್ಟಗಳನ್ನು ಅನುಭವಿಸುವುದಾದರೂ ನಾವು ಧೈರ್ಯದಿಂದ ಸುವಾರ್ತೆಯನ್ನು ಸಾರುವುದರಲ್ಲಿ ಪಟ್ಟುಹಿಡಿಯೋಣ.—ಎಫೆ. 6:18-20.