ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/00 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2000 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಡಿಸೆಂಬರ್‌ 11ರಿಂದ ಆರಂಭವಾಗುವ ವಾರ
  • ಡಿಸೆಂಬರ್‌ 18ರಿಂದ ಆರಂಭವಾಗುವ ವಾರಸಂಗೀತ 5 (46)
  • ಡಿಸೆಂಬರ್‌ 25ರಿಂದ ಆರಂಭವಾಗುವ ವಾರ
  • ಜನವರಿ 1ರಿಂದ ಆರಂಭವಾಗುವ ವಾರ
2000 ನಮ್ಮ ರಾಜ್ಯದ ಸೇವೆ
km 12/00 ಪು. 2

ಸೇವಾ ಕೂಟದ ಶೆಡ್ಯೂಲ್‌

ಡಿಸೆಂಬರ್‌ 11ರಿಂದ ಆರಂಭವಾಗುವ ವಾರ

ಸಂಗೀತ 6 (45)

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಮಹಾನ್‌ ಪುರುಷ ಅಥವಾ ಮಹಾ ಬೋಧಕ ಪುಸ್ತಕಗಳು ಸಭೆಯ ಸ್ಟಾಕ್‌ನಲ್ಲಿರುವುದಾದರೆ, ರಜೆಯ ಸಮಯದಲ್ಲಿ ಇವುಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ ಎಂಬುದನ್ನು ತೋರಿಸಿರಿ. ಡಿಸೆಂಬರ್‌ 25ರ ವಾರದ ಸೇವಾ ಕೂಟದಲ್ಲಿ ನಡೆಯುವ ಚರ್ಚೆಗಾಗಿ ತಯಾರಿಯನ್ನು ಮಾಡುವುದಕ್ಕಾಗಿ, ಬೈಬಲ್‌—ನಿಷ್ಕೃಷ್ಟ ಇತಿಹಾಸ, ಭರವಸಾರ್ಹ ಪ್ರವಾದನೆ (ಇಂಗ್ಲಿಷ್‌) ಎಂಬ ವಿಡಿಯೋವನ್ನು ನೋಡುವಂತೆ ಎಲ್ಲರನ್ನು ಉತ್ತೇಜಿಸಿರಿ. ವಿಡಿಯೋ ಹೊಂದಿರುವವರು ಅದನ್ನು ಹೊಂದಿರದವರಿಗೆ ಕೊಡಬಹುದು ಇಲ್ಲವೆ ಒಟ್ಟಿಗೆ ನೋಡಬಹುದು.

15 ನಿ: “ದಿನವೆಲ್ಲಾ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ.”a ಎಚ್ಚರ! ಪತ್ರಿಕೆಯ 1998, ಫೆಬ್ರವರಿ 8, ಪುಟ 27ರಲ್ಲಿ ನೀಡಲ್ಪಟ್ಟಿರುವ ದೈವಿಕ ಭಯದ ಕುರಿತಾದ ವಿವರಣೆಯನ್ನು ಸಹ ಒಳಗೂಡಿಸಿರಿ. ಯೆಹೋವನಿಗೆ ಭಯಪಡುವುದರಿಂದ ಸಿಗುವ ಒಳ್ಳೆಯ ಪ್ರಯೋಜನಗಳನ್ನು ಒತ್ತಿಹೇಳಿರಿ.

20 ನಿ: “ಸಮವಯಸ್ಸಿನವರ ಒತ್ತಡ ಹಾಗೂ ಸಾರುವ ನಿಮ್ಮ ಸುಯೋಗ.” ಭಾಷಣ ಹಾಗೂ ಇಂಟರ್‌ವ್ಯೂಗಳು. ಸಮವಯಸ್ಸಿನವರ ಒತ್ತಡವಿದ್ದಾಗ್ಯೂ ಸಾರುವ ಕೆಲಸದಲ್ಲಿ ತಾವು ಹೇಗೆ ಸಕ್ರಿಯರಾಗಿರಶಕ್ತರಾಗಿದ್ದೇವೆ ಎಂಬುದನ್ನು ತಿಳಿಸುವಂತೆ ಒಂದಿಬ್ಬರನ್ನು ಆಹ್ವಾನಿಸಿರಿ.

ಸಂಗೀತ 21 (191) ಮತ್ತು ಸಮಾಪ್ತಿಯ ಪ್ರಾರ್ಥನೆ.

ಡಿಸೆಂಬರ್‌ 18ರಿಂದ ಆರಂಭವಾಗುವ ವಾರಸಂಗೀತ 5 (46)

15 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ. ಡಿಸೆಂಬರ್‌ 25 ಹಾಗೂ ಜನವರಿ 1ರಂದು ಮಾಡಿರುವ ವಿಶೇಷ ಕ್ಷೇತ್ರ ಸೇವಾ ಏರ್ಪಾಡುಗಳ ಬಗ್ಗೆ ತಿಳಿಸಿರಿ. ಈಗ ಧಾರ್ಮಿಕ ಕಾರಣಗಳಿಗಾಗಿ ಆಚರಿಸಲ್ಪಡದಿರುವ ಆದರೆ, ಅಕ್ರೈಸ್ತ ಮೂಲಗಳಿರಬಹುದಾದ ಆಚರಣೆಗಳಲ್ಲಿ ಪಾಲ್ಗೊಳ್ಳುವುದರಲ್ಲಿ ಆಕ್ಷೇಪಣೆಯಿದೆಯೋ?—ರೀಸನಿಂಗ್‌ ಪುಸ್ತಕ, ಪುಟಗಳು 178-80ನ್ನು ನೋಡಿರಿ.

12 ನಿ: “2001ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲೆ.” ಶಾಲಾ ಮೇಲ್ವಿಚಾರಕನಿಂದ ಭಾಷಣ. ವಾರದ ಬೈಬಲ್‌ ವಾಚನವನ್ನು ಓದುವಂತೆ ಹಾಗೂ ಶಾಲೆಯಲ್ಲಿ ಕೊಡಲ್ಪಡುವ ನೇಮಕಗಳನ್ನು ಮಾಡುವುದರಲ್ಲಿ ಶ್ರದ್ಧಾಪೂರ್ವಕರಾಗಿರುವಂತೆ ಎಲ್ಲರನ್ನೂ ಉತ್ತೇಜಿಸಿರಿ.

18 ನಿ: “ನೀವು ಧೈರ್ಯದಿಂದ ಸಾರುತ್ತೀರೋ?”b ಲೇಖನದಲ್ಲಿರುವ ಶಾಸ್ತ್ರವಚನಗಳಿಂದ ಹೇಳಿಕೆಗಳನ್ನು ಹೊರಸೆಳೆಯಿರಿ. ನಮ್ಮ ಶುಶ್ರೂಷೆ ಪುಸ್ತಕದ ಪುಟ 86ನ್ನು ಉಪಯೋಗಿಸುತ್ತಾ, ಧೈರ್ಯವನ್ನು ಹೇಗೆ ಪಡೆದುಕೊಳ್ಳಬಹುದು ಮತ್ತು ಕ್ಷೇತ್ರ ಸೇವೆಯಲ್ಲಿ ಹೇಗೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬುದನ್ನು ತೋರಿಸಿರಿ.

ಸಂಗೀತ 13 (124) ಮತ್ತು ಸಮಾಪ್ತಿಯ ಪ್ರಾರ್ಥನೆ.

ಡಿಸೆಂಬರ್‌ 25ರಿಂದ ಆರಂಭವಾಗುವ ವಾರ

ಸಂಗೀತ 3 (32)

10 ನಿ: ಸ್ಥಳಿಕ ತಿಳಿಸುವಿಕೆಗಳು. ಸಾಕ್ಷಿಯನ್ನು ನೀಡುವಾಗ ಇತ್ತೀಚೆಗೆ ಪಡೆದುಕೊಂಡ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿರಿ. ಜನವರಿ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ.

10 ನಿ: “ಹೊಸ ಸರ್ಕಿಟ್‌ ಸಮ್ಮೇಳನದ ಕಾರ್ಯಕ್ರಮ.” ಪ್ರಶ್ನೋತ್ತರಗಳು. ಮುಂದಿನ ಸರ್ಕಿಟ್‌ ಸಮ್ಮೇಳನದ ತಾರೀಖನ್ನು ಪ್ರಕಟಿಸಿರಿ ಮತ್ತು ಎರಡೂ ದಿವಸ ಹಾಜರಾಗುವಂತೆ ಎಲ್ಲರನ್ನು ಪ್ರೇರೇಪಿಸಿರಿ. ಬೈಬಲ್‌ ವಿದ್ಯಾರ್ಥಿಗಳಿಗೆ ಆಮಂತ್ರಣವನ್ನು ನೀಡಲು ವಿಶೇಷ ಪ್ರಯತ್ನವನ್ನು ಮಾಡುವಂತೆ ಎಲ್ಲರಿಗೂ ಉತ್ತೇಜನವನ್ನು ನೀಡಿರಿ. ಸಮ್ಮೇಳನಕ್ಕೆ ಹಾಜರಾಗುವುದು ಕ್ರಮವಾಗಿ ಸಭೆಯೊಂದಿಗೆ ಸಹವಾಸವನ್ನು ಮಾಡುವ ಅವರ ಆಸೆಯನ್ನು ತೀವ್ರಗೊಳಿಸುವುದು.

25 ನಿ: “ಬೈಬಲ್‌—ನಿಷ್ಕೃಷ್ಟ ಇತಿಹಾಸ, ಭರವಸಾರ್ಹ ಪ್ರವಾದನೆ ಎಂಬ ವಿಡಿಯೋದಿಂದ ಕಲಿಯುವುದು.” ಸಭಿಕರೊಂದಿಗೆ ಚರ್ಚೆ. ಇತರರನ್ನು ಪ್ರೇರೇಪಿಸಲಿಕ್ಕಾಗಿ ಈ ವಿಡಿಯೋವನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬದರ ಬಗ್ಗೆ ಸಲಹೆಗಳನ್ನು ನೀಡಿರಿ. (1999 ಯಿಯರ್‌ಬುಕ್‌, ಪುಟಗಳು 51-2) ಫೆಬ್ರವರಿ ತಿಂಗಳಿನಲ್ಲಿ ಬೈಬಲ್‌—ಮಾನವಕುಲದ ಅತಿ ಪ್ರಾಚೀನ ಆಧುನಿಕ ಗ್ರಂಥ (ಇಂಗ್ಲಿಷ್‌) ಎಂಬ ವಿಡಿಯೋದ ಬಗ್ಗೆ ಪುನರ್ವಿಮರ್ಶೆಯಿರುವುದು.

ಸಂಗೀತ 26 (212) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 1ರಿಂದ ಆರಂಭವಾಗುವ ವಾರ

ಸಂಗೀತ 11 (85)

10 ನಿ: ಸ್ಥಳಿಕ ತಿಳಿಸುವಿಕೆಗಳು. ಹೊಸ ವರ್ಷದಲ್ಲಿ ನಿಮ್ಮ ಸಭೆಯ ಕೂಟದ ಸಮಯಗಳು ಬದಲಾಗುವಲ್ಲಿ, ಕ್ರಮವಾಗಿ ಕೂಟಕ್ಕೆ ಹಾಜರಾಗುವಂತೆ ಎಲ್ಲರನ್ನು ಪ್ರೇರೇಪಿಸಿರಿ. ಏನಾದರೂ ಬದಲಾವಣೆಗಳಿರುವಲ್ಲಿ ಅದನ್ನು ಬೈಬಲ್‌ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ತಿಳಿಸಿರಿ ಮತ್ತು ಹೊಸ ವೇಳಾಪಟ್ಟಿಯಿರುವ ಕರಪತ್ರಗಳನ್ನು ಹಂಚಲು ಪ್ರಾರಂಭಿಸಿರಿ. ದೇಶದ ಹಾಗೂ ಸ್ಥಳಿಕ ಸಭೆಯ ಆಗಸ್ಟ್‌ ಕ್ಷೇತ್ರ ಸೇವಾ ವರದಿಯನ್ನು ತಿಳಿಸಿರಿ. ಡಿಸೆಂಬರ್‌ ತಿಂಗಳಿಗಾಗಿ ಕ್ಷೇತ್ರಸೇವಾ ವರದಿಯನ್ನು ಹಾಕುವಂತೆ ಎಲ್ಲ ಪ್ರಚಾರಕರಿಗೂ ಜ್ಞಾಪಿಸಿರಿ.

10 ನಿ: “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ.” ಒಂದು ಭಾಷಣ. ಒಂದುವೇಳೆ ಗೊತ್ತಿರುವಲ್ಲಿ, ಮುಂದಿನ ವಿಶೇಷ ಸಮ್ಮೇಳನದ ತಾರೀಖನ್ನು ಪ್ರಕಟಿಸಿರಿ. ಇಡೀ ದಿವಸ ಸಮ್ಮೇಳನದಲ್ಲಿ ಹಾಜರಿರುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಆಸಕ್ತರನ್ನು ಹಾಗೂ ಬೈಬಲ್‌ ವಿದ್ಯಾರ್ಥಿಗಳನ್ನು ಆಮಂತ್ರಿಸುವಂತೆ ಪ್ರಚಾರಕರಿಗೆ ಉತ್ತೇಜನವನ್ನು ನೀಡಿರಿ.

25 ನಿ: ಪುನರ್ಭೇಟಿಗಳನ್ನು ಮಾಡುವ ಮೊದಲು ತಯಾರಿಮಾಡುವ ವಿಧ. ತಮ್ಮ ಶುಶ್ರೂಷೆಯಲ್ಲಿ ಇನ್ನೂ ಹೆಚ್ಚು ಸಾಮರ್ಥ್ಯವುಳ್ಳವರಾಗಸಾಧ್ಯವಿದೆ ಎಂಬುದರ ಕುರಿತು ತಂದೆಯೊಬ್ಬನು ತನ್ನ ಕುಟುಂಬದೊಂದಿಗೆ ಚರ್ಚಿಸುತ್ತಾನೆ. ಕಂಡುಕೊಳ್ಳಲ್ಪಟ್ಟ ಎಲ್ಲ ಆಸಕ್ತರನ್ನು ಹೋಗಿ ಭೇಟಿಮಾಡುವುದಕ್ಕಾಗಿರುವ ಶಾಸ್ತ್ರೀಯ ಕಾರಣಗಳನ್ನು ಅವನು ಒತ್ತಿಹೇಳುತ್ತಾನೆ. 1999 ಜುಲೈ 1ರ ಕಾವಲಿನಬುರುಜು ಪತ್ರಿಕೆಯ ಪುಟ 22, ಪ್ಯಾರ 18ರಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶನಗಳನ್ನು ಉಪಯೋಗಿಸುತ್ತಾ, ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಅವರು ತಯಾರಿಮಾಡುತ್ತಾರೆ. ಪುನಃ ಭೇಟಿಮಾಡಲ್ಪಡಬೇಕಾದ ಜನರನ್ನೆಲ್ಲ ತಾವು ಸಂಪರ್ಕಿಸಿದ್ದೇವೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮೊದಲ ಭೇಟಿಯಲ್ಲಿ ಪಡೆದುಕೊಂಡ ಪ್ರತಿಕ್ರಿಯೆಯನ್ನು ಪ್ರತಿಯೊಬ್ಬರೂ ವರ್ಣಿಸುತ್ತಾರೆ. ಹಾಗೆ ಒಬ್ಬನು ವರ್ಣಿಸುವಾಗ, ಕುಟುಂಬದ ಇತರ ಸದಸ್ಯರು ಪುನರ್ಭೇಟಿಯಲ್ಲಿ ಉಪಯೋಗಿಸಲಿಕ್ಕಾಗಿ ಒಂದು ಸಲಹೆ ಹಾಗೂ ಶಾಸ್ತ್ರವಚನವೊಂದನ್ನು ಸೂಚಿಸುತ್ತಾರೆ. ಪರಿಣಾಮಕಾರಿಯಾಗಿ ಉಪಯೋಗಿಸಲ್ಪಡಬಹುದಾದ ಅಂಶಗಳನ್ನು ಅವರು ಅಪೇಕ್ಷಿಸು ಬ್ರೋಷರಿನಲ್ಲಿ ಕಂಡುಕೊಳ್ಳುತ್ತಾರೆ. ಮಕ್ಕಳಲ್ಲಿ ಒಬ್ಬನು ತನ್ನ ಪುನರ್ಭೇಟಿಯಲ್ಲಿ ಏನನ್ನು ಹೇಳಬೇಕು ಎಂಬುದನ್ನು ಅಭ್ಯಾಸಿಸಿ ತೋರಿಸುವಂತೆ ಹೆತ್ತವರು ಕೇಳಿಕೊಳ್ಳುತ್ತಾರೆ. ಬರುವ ವಾರದಲ್ಲಿ ಪುನರ್ಭೇಟಿಗಳನ್ನು ಮಾಡಲು ನಿರ್ದಿಷ್ಟ ಸಮಯವನ್ನು ಅವರು ಗೊತ್ತುಪಡಿಸುತ್ತಾರೆ.

ಸಂಗೀತ 18 (162) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ