ನಮ್ಮ ಸಾಹಿತ್ಯವನ್ನು ವಿತರಿಸುವ ಸರಳೀಕೃತ ಏರ್ಪಾಡು
1 ಕಳೆದ ಒಂದು ವರುಷದಿಂದ ನಮ್ಮ ಸಾಹಿತ್ಯವನ್ನು ವೆಚ್ಚವಿಲ್ಲದೆ ಕೊಡುವ ಸರಳೀಕೃತ ಏರ್ಪಾಡು ಕಾರ್ಯರೂಪದಲ್ಲಿದೆ. ಈ ಏರ್ಪಾಡು ಯಶಸ್ವಿಕರವಾಗಿ ಪರಿಣಮಿಸಿದೆಯೋ? ಎಲ್ಲ ತರಹದ ನೀಡುವಿಕೆಗಳು ಹೆಚ್ಚಿರುವುದನ್ನು ಕ್ಷೇತ್ರ ಸೇವೆಯ ವರದಿಗಳು ತೋರಿಸುತ್ತವೆ. ವಾಸ್ತವವಾಗಿ ಲಕ್ಷಾಂತರ ಜನರಿಗೆ “ಜೀವಜಲವನ್ನು ಕ್ರಯವಿಲ್ಲದೆ” ಪಡೆದುಕೊಳ್ಳುವ ಅವಕಾಶವು ನೀಡಲಾಗಿದೆ.—ಪ್ರಕ. 22:17
2 ಆದರೂ, ನಮ್ಮ ಸಾಹಿತ್ಯಗಳನ್ನು ಪಡೆಯಲಿಚ್ಚಿಸುವ ಪ್ರತಿಯೊಬ್ಬನಿಗೆ ಅದನ್ನು ಸಿಕ್ಕಾಬಟ್ಟೆ ಕೊಡಲು ನಾವು ಹಂಗಿಗರೂ ಅಲ್ಲ, ಹಾಗೆ ಬಯಸುವುದೂ ಇಲ್ಲ. ನಮ್ಮ ಐಹಿಕ ಸ್ವತ್ತುಗಳನ್ನು ವಿವೇಕದಿಂದ ಉಪಯೋಗಿಸುವ ಹಾಗೆಯೇ, ಪ್ರತಿಯೊಬ್ಬ ಪ್ರಚಾರಕನೋ ಪ್ರಚಾರಕಳೋ ಸಂಸ್ಥೆಯಿಂದ ಸ್ಥಳಿಕ ಸಭೆಯ ಮೂಲಕ ವೆಚ್ಚವಿಲ್ಲದೆ ಪಡೆದುಕೊಳ್ಳುವ ಸಾಹಿತ್ಯವನ್ನು ವಿವೇಕದಿಂದ ಉಪಯೋಗಿಸುವ ಜವಾಬ್ದಾರಿಯನ್ನು ಹೊಂದಿದವರಾಗಿದ್ದಾರೆ. ಸಂಸ್ಥೆಯು, ಪ್ರಚಾರಕರಿಗೆ ವೆಚ್ಚವಿಲ್ಲದೆ ಸಾಹಿತ್ಯವನ್ನು ಒದಗಿಸುವುದರಿಂದ, ಅದನ್ನು ತಯಾರಿಸಲು ಹಾಗೂ ವಿತರಿಸಲು ಯಾವುದೇ ಖರ್ಚು ಒಳಗೂಡಿಲ್ಲ ಎಂಬುದು ಇದರ ಅರ್ಥವಲ್ಲ. ಯೆಹೋವ ದೇವರ ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಳ್ಳಲು ತವಕ ಪಡುವ ಸಹೃದಯದ ಜನರಿಗೆ ಸಹಾಯಮಾಡುವುದರಲ್ಲಿ ನಮ್ಮ ಸಾಹಿತ್ಯಗಳು ಅತ್ಯಮೂಲ್ಯವಾಗಿವೆ ಎಂಬುದನ್ನು ವಿಶೇಷವಾಗಿ ಎಲ್ಲರೂ ಗಣ್ಯಮಾಡಬೇಕು.—ಯೋಹಾ. 17:3.
3 ಸಂಸ್ಥೆಯು ವೆಚ್ಚವಿಲ್ಲದೆ ಸಾಹಿತ್ಯವನ್ನು ಎಲ್ಲರಿಗೂ ಒದಗಿಸಲು ಹೇಗೆ ಸಾಧ್ಯವಾದೀತು? ನಮ್ಮ ಸಾಹಿತ್ಯವನ್ನು ತಯಾರಿಸುವುದರಲ್ಲಿ ಹಾಗೂ ವಿತರಿಸುವುದರಲ್ಲಿ ಒಳಗೂಡಿರುವ ಅನಿವಾರ್ಯ ಖರ್ಚುಗಳನ್ನು ಕಾಣಿಕೆಗಳಿಂದ ನಿರ್ವಹಿಸಲಾಗುತ್ತದೆ. ಈ ಬೆಂಬಲವು ಪ್ರಪ್ರಥಮವಾಗಿ ಯೆಹೋವನ ಸಮರ್ಪಿತ ಸೇವಕರಿಂದ ಬರುತ್ತದೆ. ರಾಜ್ಯದ ಕುರಿತು ಸಾರುವ ಈ ತುರ್ತಿನ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಯೆಹೋವನ ಸಾಕ್ಷಿಗಳು ಎಂದಿಗೂ ಸಾರ್ವಜನಿಕರ ಸಹಾಯವನ್ನು ಕೇಳಿರುವುದಿಲ್ಲ. ಸಾರ್ವಜನಿಕ ನಿಧಿ-ಸಂಗ್ರಹದ ಕೆಲಸದಲ್ಲಿ ನಾವು ಹಿಂದೆಯೂ ಒಳಗೂಡಿಲ್ಲ ಮತ್ತು ಈಗಲೂ ಒಳಗೂಡುವುದಿಲ್ಲ. ಆದರೂ ಸೇವೆಯಲ್ಲಿ ಭೇಟಿಯಾಗುವ ಯಥಾರ್ಥವಾದ ಆಸಕ್ತಿ ತೋರಿಸುವವರ ಮತ್ತು ಗಣ್ಯತೆಯನ್ನು ತೋರಿಸುವ ವ್ಯಕ್ತಿಗಳ ಸಣ್ಣ ಕಾಣಿಕೆಗಳನ್ನು ನಾವು ಮಾನ್ಯಮಾಡುತ್ತೇವೆ.
ನಮ್ಮ ಕಾಣಿಕೆಗಳು ಏನನ್ನು ಪೂರೈಸುತ್ತವೆ?
4 ಆದುದರಿಂದ, ನಮ್ಮ ಲೋಕವ್ಯಾಪಕ ಶೈಕ್ಷಣಿಕ ಕಾರ್ಯವು ಸ್ವ-ಇಚ್ಛೆಯಿಂದ ಕೊಡಲ್ಪಡುವ ಕಾಣಿಕೆಗಳಿಂದ ಹೇಗೆ ನಿರ್ವಹಿಸಲ್ಪಡುತ್ತವೆ ಎಂಬುದನ್ನು ಸಂಕ್ಷಿಪ್ತವಾಗಿ ಹಾಗೂ ಸ್ಪಷ್ಟವಾಗಿ ವಿವರಿಸಲು ನಾವು ಸಿದ್ಧರಾಗಿರಬೇಕು. ಈ ನವೀನ ಯುಗದಲ್ಲಿ, ರಾಜ್ಯದ ಕುರಿತು ಸಾರುವ ಕೆಲಸವನ್ನು ಪೂರೈಸುವುದರಲ್ಲಿ ಒಳಗೂಡಿರುವ ವಿಪರೀತ ಖರ್ಚುಗಳನ್ನು ನಿರ್ವಹಿಸುವುದಕ್ಕಾಗಿ ಎಲ್ಲ ನಿಧಿಗಳು ಉಪಯೋಗಿಸಲ್ಪಡುತ್ತವೆ. ಸಾಹಿತ್ಯವನ್ನು ಲೋಕವ್ಯಾಪಕವಾಗಿ ವಿತರಿಸುವುದರೊಂದಿಗೆ, ಬ್ರಾಂಚ್ ಆಫೀಸ್ಗಳು, ಬೆತೆಲ್ ಗೃಹಗಳು, ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್ಗಳು, ವಿಶೇಷ ಪಯನೀಯರರು, ಸಂಚರಣ ಮೇಲ್ವಿಚಾರಕರು, ಮತ್ತು ಯೇಸು ತನ್ನ ಶಿಷ್ಯರಿಗೆ ಕೊಟ್ಟ ಒಟ್ಟಿನ ನೇಮಕವನ್ನು ಪೂರೈಸಲು ಬೇಕಾಗಿರುವ ಇನ್ನಿತರ ಸೇವೆಗಳನ್ನು ಸಂಸ್ಥೆಯು ನೋಡಿಕೊಳ್ಳುತ್ತದೆ.—ಮತ್ತಾ. 24:14; 28:19, 20.
5 ಯೆಹೋವನ ಜನರ ಮಧ್ಯೆ ಆಗುತ್ತಿರುವ ಬಹು ಪರಿಣಾಮಕಾರಿಯಾದ ಬೆಳವಣಿಗೆಯನ್ನು ನೋಡಿದ ಅನೇಕರು, ತಾವು ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಕೇಳುವಂತೆ ಪ್ರಚೋದಿತರಾಗಿದ್ದಾರೆ. ಅನೇಕರಿಗೆ ವೈಯಕ್ತಿಕವಾಗಿ, ಹೊಸ ಬ್ರಾಂಚ್ಗಳನ್ನು ಹಾಗೂ ರಾಜ್ಯ ಸಭಾಗೃಹಗಳನ್ನು ಕಟ್ಟುವುದರಲ್ಲಿ ಅಥವಾ ದೂರ ದೇಶಗಳಿಗೆ ಹೋಗಿ ಅಲ್ಲಿಯ ಸೌವಾರ್ತಿಕ ಕೆಲಸಕ್ಕಾಗಿ ಮಾಡಲ್ಪಡುವ ಪ್ರಯತ್ನಗಳನ್ನು ಬೆಂಬಲಿಸಲು ಸಾಧ್ಯವಿರುವುದಿಲ್ಲ. ಆದರೆ ಈ ಎಲ್ಲ ಉತ್ತೇಜಿಸುವ ಅಭಿವೃದ್ಧಿಯಲ್ಲಿ ತಮಗೆ ಸಾಧ್ಯವಾದಷ್ಟು ಮಟ್ಟಿಗೆ ಭಾಗವಹಿಸಲು, ಅನೇಕ ಪ್ರಚಾರಕರು ಮತ್ತು ಅವರ ಕುಟುಂಬದವರು ಕ್ರಮವಾಗಿ ಲೋಕವ್ಯಾಪಕ ಕೆಲಸಕ್ಕಾಗಿ ಸ್ವಲ್ಪವನ್ನಾದರೂ ಬದಿಗಿಡುತ್ತಾರೆ. (ಹೋಲಿಸಿ 1 ಕೊರಿಂ. 16:1, 2) ಈ ರೀತಿಯಲ್ಲಿ, ಸಾಹಿತ್ಯಗಳ ವಿತರಣೆಯೊಂದಿಗೆ ಸಂಸ್ಥೆಯ ಅನೇಕ ಕಾರ್ಯಕಲಾಪಗಳು ಬೆಂಬಲಿಸಲ್ಪಡುತ್ತವೆ. ಆದುದರಿಂದ, ಕಾಣಿಕೆಗಳನ್ನು ಕೇವಲ ನಾವು ನೀಡುವ ಸಾಹಿತ್ಯಗಳಿಗೆ ಮಾತ್ರ ಕೊಡಲಾಗುತ್ತದೆ ಎಂದು ಯಾರೂ ನೆನೆಸಬಾರದು.
6 ಸಾಕ್ಷಿ ನೀಡಲು ನಾವು ಮನೆಯಿಂದ ಮನೆಯ ಸಾಕ್ಷಿ ಕಾರ್ಯದಲ್ಲೋ ಇಲ್ಲವೆ ಬೇರೆ ಸ್ಥಳದಲ್ಲೋ ಜನರನ್ನು ಸಂದರ್ಶಿಸುವಾಗ, ಒಂದು ಬೈಬಲ್ ವಿಷಯದ ಕುರಿತು ಮಾತಾಡಲು ಸಿದ್ಧರಾಗಿರಬೇಕು. ಸೂಕ್ತವಾದ ಅನೇಕ ವಿಷಯಗಳೊಂದಿಗೆ ಬಗೆಬಗೆಯ ಆಸಕ್ತಿಕರ ಪೀಠಿಕೆಗಳನ್ನು ಉಪಯೋಗಿಸುವಂತೆ ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಪುಸ್ತಕದಲ್ಲಿ ಸಲಹೆ ನೀಡಲ್ಪಟ್ಟಿದೆ. ಅಥವಾ ನಮ್ಮ ರಾಜ್ಯದ ಸೇವೆಯಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸಬಹುದು. ರಾಜ್ಯದ ಸಂದೇಶಕ್ಕೆ ಒಬ್ಬ ವ್ಯಕ್ತಿ ತೋರಿಸುವ ಪ್ರತಿಕ್ರಿಯೆಯ ಮೇಲೆ ಅವಲಂಬಿಸಿ, ಪ್ರಚಾರಕನು ಸಾಹಿತ್ಯವನ್ನು ನೀಡುವುದರಲ್ಲಿ ಹೇಗೆ ಮುಂದುವರಿಯಬೇಕು ಎಂಬುದನ್ನು ತೀರ್ಮಾನಿಸಬೇಕು. ಒಂದು ಪುಸ್ತಕವನ್ನೋ ಯಾವುದೋ ಒಂದು ಸಾಹಿತ್ಯವನ್ನೋ ಕೊಡುವಷ್ಟು ಆಸಕ್ತಿ ಕಂಡುಬರದಿದ್ದಲ್ಲಿ, ನಿಮ್ಮ ಸಂಭಾಷಣೆಯನ್ನು ಜಾಣ್ಮೆಯಿಂದ ಕೊನೆಗೊಳಿಸಿ, ಮುಂದೆ ಹೋಗಲು ನೀವು ತೀರ್ಮಾನಿಸಬಹುದು. ಒಂದುವೇಳೆ ಆ ವ್ಯಕ್ತಿಯು ಓದುತ್ತೇನೆಂದು ಮಾತುಕೊಡುವಲ್ಲಿ, ಒಂದು ಕಿರುಹೊತ್ತಗೆ ಅಥವಾ ಟ್ರ್ಯಾಕ್ಟನ್ನು ಕೊಡಬಹುದು. ಪುನಃ ಸಂದರ್ಶಿಸಲಾಗುವಂತೆ ಆ ವ್ಯಕ್ತಿಯ ವಿಳಾಸವನ್ನು ಖಂಡಿತವಾಗಿ ಬರೆದಿಟ್ಟುಕೊಳ್ಳಿ. ಕಾರ್ಯಮಗ್ನನಾಗಿರುವ ಕಾರಣ ಅಥವಾ ಸಮಯವು ಅನುಕೂಲವಾಗಿರದ ಕಾರಣ ಅರ್ಥಭರಿತ ಸಂಭಾಷಣೆಗೆ ಸಮಯವಿಲ್ಲದಿರುವಾಗಲೂ, ಮೇಲೆ ಹೇಳುವಂತೆ ಮಾಡಬಹುದು.
7 ಸಾಹಿತ್ಯವನ್ನು ವಿತರಿಸುವ ಸರಳೀಕೃತ ಏರ್ಪಾಡು, ನಮ್ಮ ಬೈಬಲ್ ಶೈಕ್ಷಣಿಕ ಕಾರ್ಯವು ಯಾವುದೇ ರೀತಿಯಲ್ಲಿ ವ್ಯಾಪಾರಕ್ಕೆ ಸಂಬಂಧಪಟ್ಟದ್ದಲ್ಲ ಎಂಬುದನ್ನು ಗ್ರಹಿಸಲು ಎಲ್ಲರಿಗೂ ಸಹಾಯಮಾಡುತ್ತದೆ.
ರಾಜ್ಯದ ಸುವಾರ್ತೆಯನ್ನು ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ನಮ್ಮ ಮುಖ್ಯ ಗುರಿಯನ್ನು ಮುಂದಿಡಲು ಇದು ನಮಗೆ ಸಹಾಯಮಾಡುತ್ತದೆ. ‘ದಾನವನ್ನು ಕೇಳಲು’ ಹೋಗುವ ಸಂಸ್ಥೆಗಳಿಗೆ ತೀರ ವಿರುದ್ಧವಾಗಿ, ಯೆಹೋವನ ಸಾಕ್ಷಿಗಳು ತಮ್ಮ ಸಾಹಿತ್ಯಗಳು ಎಲ್ಲರಿಗೂ ವೆಚ್ಚವಿಲ್ಲದೆ ಸಿಗುವಂತೆ ನೋಡಲು ಇಷ್ಟಪಡುತ್ತಾರೆ. ಲೋಕವ್ಯಾಪಕ ಕೆಲಸಕ್ಕಾಗಿ ನೀಡಲ್ಪಡುವಂತಹ ಕಾಣಿಕೆಗಳು, ನಮ್ಮ ಸಂದೇಶಕ್ಕೆ ನಿಜವಾದ ಆಸಕ್ತಿಯನ್ನು ತೋರಿಸದ ಜನರಿಂದ ನಿರೀಕ್ಷಿಸಲ್ಪಡುವುದಿಲ್ಲ. (2000, ನವೆಂಬರ್ 1ರ ಕಾವಲಿನಬುರುಜು ಪತ್ರಿಕೆಯ, ಪುಟ 28-31ನ್ನು ನೋಡಿ.) ಕೊಡಲ್ಪಡುವ ಕಾಣಿಕೆಗಳೆಲ್ಲ ನೂರು ಪ್ರತಿಶತ ಅಥವಾ ಸಂಪೂರ್ಣವಾಗಿ ಲೋಕವ್ಯಾಪಕ ಶೈಕ್ಷಣಿಕ ಕೆಲಸಕ್ಕಾಗಿ ಉಪಯೋಗಿಸಲ್ಪಡುತ್ತವೆ, ಏಕೆಂದರೆ ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರೂ ಸ್ವಯಂ-ಸೇವಕರಾಗಿರುವುದರಿಂದ ಅವರಿಗೆ ಸಂಬಳ ಅಥವಾ ಕಮಿಷನ್ ಕೊಡಲಾಗುವುದಿಲ್ಲ. ಲೋಕವ್ಯಾಪಕ ಕೆಲಸವನ್ನು ಬೆಂಬಲಿಸುವ ಕಾಣಿಕೆಗಳ ಕುರಿತು ಕೇಳುವ ಅಥವಾ ನಮ್ಮ ಕೆಲಸದಲ್ಲಿ ಆಸಕ್ತಿ ತೋರಿಸುವ ಜನರಿಂದ ಪರಿಗಣಿಸಲಾಗುತ್ತದೆ.
8 ನಮ್ಮ ಸಂಸ್ಥೆಯ ಅಮೂಲ್ಯವಾದ ಪ್ರಕಾಶನಗಳನ್ನು ವಿವೇಕದಿಂದ ಉಪಯೋಗಿಸಿ, ಉತ್ಸಾಹದಿಂದ ನಮ್ಮ ಸೇವೆಯನ್ನು ವಿಸ್ತರಿಸುವುದಾದರೆ, ಯೆಹೋವನು ಅಭಿವೃದ್ಧಿಯನ್ನು ಕೊಡುತ್ತಾ ಇರುವನು. ಸಹೃದಯಿಗಳಾದ ಜನರಿಗೆ ನಮ್ಮ ಕ್ಷೇತ್ರ ಸೇವೆಯ ವಿಧದ ಕುರಿತು ಆಲೋಚನಾಭರಿತ ವಿವರಣೆಯನ್ನು ನೀಡುವಾಗ, ಅದನ್ನು ಅವರು ಗಣ್ಯಮಾಡುತ್ತಾರೆ ಮತ್ತು ಇದಕ್ಕೆ ಬೆಂಬಲ ನೀಡಲು ಇಷ್ಟಪಡುತ್ತೇವೆ ಎಂಬುದನ್ನು ಕಾಣಿಕೆಗಳನ್ನು ನೀಡುವುದರ ಮೂಲಕ ವ್ಯಕ್ತಪಡಿಸುತ್ತಾರೆ.