ನಿಮ್ಮ ಲೈಬ್ರರಿಯಿಂದ ಯಾವುದಾದರೂ ಯಿಯರ್ಬುಕ್ಗಳು ಕಳೆದುಹೋಗಿವೆಯೋ?
ಯೆಹೋವನ ಸಾಕ್ಷಿಗಳ ಪ್ರತಿಯೊಂದು ಯಿಯರ್ಬುಕ್ ಆಹ್ಲಾದಕರವಾದ ಓದುವಿಕೆಯ ನಿಧಿ ಸಂಗ್ರಹದಂತಿದೆ. ಲೋಕವ್ಯಾಪಕವಾದ ರಾಜ್ಯ ಸಾರುವಿಕೆಯ ಕೆಲಸದ ಕುರಿತಾದ ಉತ್ತೇಜಿಸುವಂಥ ವರದಿಗಳು, ಯೆಹೋವನ ಮಾರ್ಗದರ್ಶನೆ, ಸಂರಕ್ಷಣೆ, ಮತ್ತು ಆಶೀರ್ವಾದದಲ್ಲಿ ನಮ್ಮ ಭರವಸೆಯನ್ನು ಬಲಪಡಿಸುತ್ತವೆ. 1997ರಿಂದ 2000 ಇಸವಿಯ ಯಿಯರ್ಬುಕ್ನ ಇಂಗ್ಲಿಷ್ ಪ್ರತಿಗಳ ಸರಬರಾಯಿ ನಮ್ಮಲ್ಲಿದೆ. ಈ ಯಿಯರ್ಬುಕ್ಗಳಲ್ಲಿ ಚೆಕ್ ರಿಪಬ್ಲಿಕ್, ಜಪಾನ್, ಜರ್ಮನಿ, ಪ್ಯಾರಗ್ವೈ, ಬೆನಿನ್, ಬ್ರಸಿಲ್, ಬ್ರಿಟನ್, ಮಡಗಾಸ್ಕರ್, ಮಲಾವಿ, ಮಾರ್ಟಿನೀಕ್, ಮೈಕ್ರೊನೇಸಿಯಾ, ಮತ್ತು ಯುರಗ್ವೈನ ಆಸಕ್ತಿಕರವಾದ ಇತಿಹಾಸವು ಅಡಕವಾಗಿದೆ. ನಿಮ್ಮ ವೈಯಕ್ತಿಕ ಲೈಬ್ರರಿಯಲ್ಲಿ ಈ ಯಿಯರ್ಬುಕ್ನ ಪ್ರತಿಗಳಲ್ಲಿ ಯಾವುದಾದರೊಂದು ಕಳೆದುಹೋಗಿದೆಯೋ ಎಂಬುದನ್ನು ಏಕೆ ಹುಡುಕಿ ನೋಡಬಾರದು? ತದ್ರೀತಿಯಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಮೇಲ್ವಿಚಾರಕನು ರಾಜ್ಯ ಸಭಾಗೃಹದ ಲೈಬ್ರರಿಯನ್ನು ಪರೀಕ್ಷಿಸಿ ನೋಡಬೇಕು. ಒಬ್ಬ ಪ್ರಚಾರಕ ಅಥವಾ ಒಂದು ಸಭೆಯು ಈ ಯಿಯರ್ಬುಕ್ಗಳನ್ನು ಬಯಸುವುದಾದರೆ, ಸಭಾ ಸಾಹಿತ್ಯ ಸೇವಕನ ಮೂಲಕ ಈಗ ಇದನ್ನು ವಿನಂತಿಸಬಹುದು.