ಪ್ರಕಟನೆಗಳು
◼ ಸೆಪ್ಟೆಂಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಎಂಬ ಬ್ರೋಷರ್ ಮತ್ತು ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಎಂಬ ಪುಸ್ತಕ. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಯಾರಾದರೂ ಆಸಕ್ತಿಯನ್ನು ತೋರಿಸುವಲ್ಲಿ ಪತ್ರಿಕಾ ಮಾರ್ಗಗಳನ್ನು ಆರಂಭಿಸಲು ಪುನರ್ಭೇಟಿಗಳನ್ನು ಮಾಡಿರಿ. ಪತ್ರಿಕಾ ಮಾರ್ಗವು ಪ್ರಾಯೋಗಿಕವಾಗಿಲ್ಲದಿದ್ದರೆ ಮಾತ್ರ ಒಂದು ಚಂದಾವನ್ನು ನೀಡಬಹುದು. ನವೆಂಬರ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಒಂದುವೇಳೆ ಜನರ ಬಳಿ ಈಗಾಗಲೇ ಈ ಪ್ರಕಾಶನಗಳು ಇರುವಲ್ಲಿ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಅಥವಾ ಇನ್ನಾವುದೇ ಹಳೆಯ ಪ್ರಕಾಶನವನ್ನು ನೀಡಬಹುದು. ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಒಂದು ಬದಲಿ ನೀಡುವಿಕೆಯಾಗಿ, ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ನೀವು ಉಪಯೋಗಿಸಬಹುದು.
◼ ಸಭೆಯಲ್ಲಿ ಪುನಸ್ಥಾಪಿಸಲ್ಪಡಲು ಇಷ್ಟವಿರಬಹುದಾದ ಯಾವುದೇ ಬಹಿಷ್ಕೃತರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ, 1992 ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯ 19-21ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವಂತೆ ಹಿರಿಯರಿಗೆ ಜ್ಞಾಪಿಸಲಾಗುತ್ತದೆ.
◼ ಸರಕಾರದೊಂದಿಗೆ ಒಂದು ಟ್ರಸ್ಟನ್ನು ರೆಜಿಸ್ಟರ್ ಮಾಡಿರುವ ಸಭೆಗಳು, ಆ ಟ್ರಸ್ಟ್ ರದ್ದುಗೊಳಿಸಲ್ಪಡದೇ ಇರುವುದಕ್ಕಾಗಿ ನಿಯತಕಾಲಿಕವಾಗಿ ಕೂಟಗಳು ನಡೆಸಲ್ಪಡುವುದನ್ನು ಮತ್ತು ಚರ್ಚಿಸಲ್ಪಟ್ಟ ವಿಷಯಗಳ ದಾಖಲೆಗಳನ್ನು ಜೋಪಾನವಾಗಿ ಇಡುವುದನ್ನು ಖಚಿತಪಡಿಸಿಕೊಳ್ಳಬೇಕು.
◼ ಪ್ರಚಾರಕರು ಮತ್ತು ಪಯನೀಯರರು, ಒಂದು ವೈಯಕ್ತಿಕ ಚಂದಾವನ್ನು ಕೇಳಿಕೊಳ್ಳುವ ಬದಲು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ತಮ್ಮ ಸ್ವಂತ ಪ್ರತಿಗಳನ್ನು ರಾಜ್ಯ ಸಭಾಗೃಹದಲ್ಲಿ ಸಭೆಯ ಸರಬರಾಯಿಯಿಂದಲೇ ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ. ಇದು ಸಂಸ್ಥೆಗೆ ಸಮಯ ಮತ್ತು ಖರ್ಚಿನ ಉಳಿತಾಯವನ್ನು ಮಾಡುವುದು.
◼ ಎಲ್ಲಾ ಸಭೆಗಳಿಗಾಗಿದ್ದ ಏಪ್ರಿಲ್ 10, 2001ರ ಪತ್ರವು, ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್) ಎಂಬ ಹೊಸ ವಿಡಿಯೋ ಸಾಕ್ಷ್ಯಚಿತ್ರದ ಬಿಡುಗಡೆಯನ್ನು ಪ್ರಕಟಿಸಿತು. ಈ ಕಾರ್ಯಕ್ರಮವು ವಿಶೇಷವಾಗಿ ಸಾರ್ವಜನಿಕರಿಗಾಗಿ ತಯಾರಿಸಲ್ಪಟ್ಟಿದೆ. ಆದುದರಿಂದ, ಸಂಭಾಷಣೆಗಳನ್ನು ಆರಂಭಿಸುವುದರಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ ಮತ್ತು ಅವಿಶ್ವಾಸಿ ಸಂಗಾತಿಗಳು ಅಥವಾ ಸಂಬಂಧಿಕರೊಂದಿಗೆ, ಶಿಕ್ಷಕರೊಂದಿಗೆ, ಜೊತೆ ಕೆಲಸಗಾರರೊಂದಿಗೆ, ಸಹಪಾಠಿಗಳೊಂದಿಗೆ, ನೆರೆಯವರೊಂದಿಗೆ, ಮತ್ತು ಬೈಬಲ್ ವಿದ್ಯಾರ್ಥಿಗಳೊಂದಿಗೆ ಈ ಕಾರ್ಯಕ್ರಮವನ್ನು ನೋಡುವ ಮೂಲಕ ತುಂಬ ಒಳಿತಾಗುವುದು. ಸಾಕ್ಷ್ಯೇತರರೊಂದಿಗೆ ಈ ಕಾರ್ಯಕ್ರಮವನ್ನು ನೋಡಿದ ನಂತರ, ಅವರಿಂದ ಕೇಳಲ್ಪಡುವ ಯಾವುದೇ ಪ್ರಶ್ನೆಗಳು ಅಥವಾ ಮಾಡಲ್ಪಡುವ ಹೇಳಿಕೆಗಳು ಒಂದು ಪುನರ್ಭೇಟಿಯನ್ನು ಮಾಡಲು ಅಥವಾ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಆಧಾರವನ್ನು ಒದಗಿಸಬಹುದು.
◼ ಕೊಲ್ಕತ್ತ (ಕಲ್ಕತ್ತಾ)ದಲ್ಲಿ ನಡೆಸಲ್ಪಡಬೇಕಾಗಿರುವ “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದ ಶೆಡ್ಯೂಲ್ ಪರಿಷ್ಕರಿಸಲ್ಪಟ್ಟಿದೆ. ಪರಿಷ್ಕೃತ ತಾರೀಖುಗಳು 2001, ನವೆಂಬರ್ 9-11 ಆಗಿವೆ. ಆದರೂ, ಸಭಾಂಗಣದ ವಿಳಾಸವು 2001ರ ಜುಲೈ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿ ಸೂಚಿಸಲ್ಪಟ್ಟಿರುವುದೇ ಆಗಿರುವುದು.
◼ ಬ್ಯಾಡ್ಜ್ ಕಾರ್ಡ್‌ಹೋಲ್ಡರ್‌ಗಳು ಜಿಲ್ಲಾ ಅಧಿವೇಶನದ ನಂತರವೂ ಇನ್ನೂ ಸುಸ್ಥಿತಿಯಲ್ಲಿರುವಲ್ಲಿ ಪ್ರತಿ ವರ್ಷ ಹೊಸ ಸರಬರಾಯಿಗಳಿಗಾಗಿ ವಿನಂತಿಸಿಕೊಳ್ಳುವ ಬದಲು ಅವುಗಳನ್ನು ಭಾವೀ ಉಪಯೋಗಕ್ಕಾಗಿ ಇಟ್ಟುಕೊಳ್ಳಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ —ನೇಪಾಲಿ ಮತ್ತು ಹಿಂದಿ
◼ ಪುನಃ ಲಭ್ಯವಿರುವ ಪ್ರಕಾಶನಗಳು:
ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು —ಬಂಗಾಲಿ
‘ಇಗೋ! ನಾನು ಎಲ್ಲವನ್ನು ಹೊಸದು ಮಾಡುತ್ತೇನೆ’ —ತಮಿಳು, ನೇಪಾಲಿ, ಮರಾಠಿ, ಮತ್ತು ಹಿಂದಿ
ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ಯಾರು ಸಹಾಯ ಮಾಡುವರು? —ತೆಲುಗು
ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? —ತಮಿಳು, ತೆಲುಗು, ಮರಾಠಿ, ಮಲೆಯಾಳಂ, ಮತ್ತು ಹಿಂದಿ
ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? —ಕನ್ನಡ, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಮತ್ತು ಹಿಂದಿ
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ —ತಮಿಳು ಮತ್ತು ಮಲೆಯಾಳಂ
ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ —ತೆಲುಗು
ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ (ಮುಸ್ಲಿಮರಿಗಾಗಿ) —ಗುಜರಾಥಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ
◼ ಮೇಲಿನ ಐಟಮ್‌ಗಳಿಗಾಗಿ ನಿಮ್ಮ ಸಾಹಿತ್ಯ ವಿನಂತಿಗಳನ್ನು (S-314) ಕಳುಹಿಸುವ ಮುನ್ನ, ಇವೇ ಐಟಮ್‌ಗಳಿಗಾದ ನಿಮ್ಮ ಹಿಂದಿನ ವಿನಂತಿಗಳು ಭರ್ತಿಮಾಡಲ್ಪಟ್ಟು ಕಳುಹಿಸಲ್ಪಟ್ಟಿವೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.