ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/02 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2002 ನಮ್ಮ ರಾಜ್ಯದ ಸೇವೆ
2002 ನಮ್ಮ ರಾಜ್ಯದ ಸೇವೆ
km 3/02 ಪು. 7

ಪ್ರಕಟನೆಗಳು

◼ ಮಾರ್ಚ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ವಿಶೇಷವಾದ ಪ್ರಯತ್ನವು ಮಾಡಲ್ಪಡುವುದು. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಮನೆಯವರಿಗೆ ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಯನ್ನು ಕೊಡಲು ಮನಸ್ಸಿದ್ದರೆ ಅವರು ಹಾಗೆ ಮಾಡಬಹುದೆಂದು ಪ್ರಚಾರಕರು ಮನೆಯವರಿಗೆ ಹೇಳಬೇಕು. ಆಸಕ್ತಿಯು ತೋರಿಸಲ್ಪಡುವಲ್ಲೆಲ್ಲ ಬೈಬಲ್‌ ಅಧ್ಯಯನಗಳನ್ನು ಆರಂಭಿಸುವ ವಿಶೇಷ ಪ್ರಯತ್ನವನ್ನು ಮಾಡುತ್ತಾ, ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಜೂನ್‌: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಇಲ್ಲವೇ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆಯವರ ಬಳಿ ಈ ಪ್ರಕಾಶನಗಳು ಮೊದಲೇ ಇರುವುದಾದರೆ, ಸಭೆಯ ಸ್ಟಾಕ್‌ನಲ್ಲಿರುವ ಯಾವುದಾದರೊಂದು ಸೂಕ್ತ ಬ್ರೋಷರನ್ನು ನೀಡಿರಿ.

◼ ಏಪ್ರಿಲ್‌ನಲ್ಲಿ ಆಕ್ಸಿಲಿಯರಿ ಪಯನೀಯರರೋಪಾದಿ ಸೇವೆಸಲ್ಲಿಸಲು ಬಯಸುವ ಪ್ರಚಾರಕರು ಈಗಲೇ ತಮ್ಮ ಯೋಜನೆಗಳನ್ನು ಮಾಡಿ, ತಮ್ಮ ಅರ್ಜಿಯನ್ನು ಬೇಗನೆ ಕೊಡಬೇಕು. ಇದು ಹಿರಿಯರಿಗೆ ಅಗತ್ಯವಿರುವ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಮಾಡಲು ಮತ್ತು ಸಾಕಷ್ಟು ಪತ್ರಿಕೆಗಳು ಹಾಗೂ ಇತರ ಸಾಹಿತ್ಯವು ಲಭ್ಯವಿರುವಂತೆ ನೋಡಿಕೊಳ್ಳಲು ಸಹಾಯಮಾಡುವುದು. ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಲು ಸಮ್ಮತಿಪಡೆದಿರುವವರೆಲ್ಲರ ಹೆಸರುಗಳು ಪ್ರತಿ ತಿಂಗಳು ಸಭೆಗೆ ಪ್ರಕಟಿಸಲ್ಪಡಬೇಕು.

◼ ಜ್ಞಾಪಕಾಚರಣೆಯು, 2002, ಮಾರ್ಚ್‌ 28ರ ಗುರುವಾರದಂದು ನಡೆಯುವುದು. ನಿಮ್ಮ ಸಭೆಗೆ ಸಾಮಾನ್ಯವಾಗಿ ಗುರುವಾರದಂದು ಕೂಟಗಳಿರುವಲ್ಲಿ, ರಾಜ್ಯ ಸಭಾಗೃಹವು ಲಭ್ಯವಿರುವುದಾದರೆ ಈ ಕೂಟಗಳನ್ನು ವಾರದ ಬೇರೊಂದು ದಿನ ನಡೆಸತಕ್ಕದ್ದು. ಇದು ಸಾಧ್ಯವಾಗದಿರುವಲ್ಲಿ ಮತ್ತು ನಿಮ್ಮ ಸೇವಾ ಕೂಟವನ್ನು ಇದು ಬಾಧಿಸುವಲ್ಲಿ, ನಿಮ್ಮ ಸಭೆಗೆ ವಿಶೇಷವಾಗಿ ಅನ್ವಯವಾಗುವಂಥ ಭಾಗಗಳನ್ನು ಇನ್ನೊಂದು ಸೇವಾ ಕೂಟದಲ್ಲಿ ಒಳಗೂಡಿಸಬಹುದು.

◼ ಸಾಹಿತ್ಯಕ್ಕಾಗಿರುವ ಪ್ರಚಾರಕರ ವೈಯಕ್ತಿಕ ವಿನಂತಿಗಳನ್ನು ಸೊಸೈಟಿಯು ಸ್ವೀಕರಿಸುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಇದು, ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳಲು ಆಸಕ್ತರಿರುವವರೆಲ್ಲರೂ ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ತಿಳಿಸುವಂತೆ ಸಾಧ್ಯಮಾಡುತ್ತದೆ. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.

◼ ಅಗತ್ಯವಿರುವ ವಿಭಿನ್ನ ಭಾಷೆಗಳಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ ಎಂಬ ಬ್ರೋಷರಿನ ಸಾಕಷ್ಟು ಸ್ಟಾಕ್‌ಗಾಗಿ ಸಭೆಗಳು ಆರ್ಡರ್‌ ಅನ್ನು ಕಳುಹಿಸಬೇಕು. ಹೀಗೆ, ಮೇ ತಿಂಗಳ ಅಂತ್ಯದಿಂದ ಜೂನ್‌ನ ಆರಂಭದ ವರೆಗಿನ ಹೊಸ ಶಾಲಾ ವರ್ಷಕ್ಕಾಗಿ ಹೆತ್ತವರು ಮತ್ತು ಶಾಲೆಗೆ ಹೋಗುವ ಮಕ್ಕಳು ಯೋಗ್ಯ ರೀತಿಯಲ್ಲಿ ಸಜ್ಜಿತರಾಗಿರುವರು.

◼ ಪತ್ರಿಕೆಗಳು ಹಾಗೂ ಸಾಹಿತ್ಯದ ಉತ್ಪಾದನೆ ಮತ್ತು ರವಾನೆಗಾಗಿ ಆಗುವಂಥ ಖರ್ಚುಗಳನ್ನು ಪರಿಗಣಿಸುವಾಗ, ನೇಮಿತ ಸಹೋದರರು ಮತ್ತು ಒಬ್ಬೊಬ್ಬ ಪ್ರಚಾರಕರೂ ಈ ಮುಂದಿನ ವಿಷಯಗಳಿಗೆ ಗಮನಕೊಡುವ ಮೂಲಕ, ಸೊಸೈಟಿಗೆ ಹಣಕಾಸಿನ ವಿಷಯದಲ್ಲಿ ಸಹಾಯಮಾಡಬಹುದು:

ಸಭೆಗಳಿಂದ ಪಡೆಯಲಾಗಿರುವ ಸೆಪ್ಟೆಂಬರ್‌ 1, 2001ರ ವಾರ್ಷಿಕ ಸಾಹಿತ್ಯ ಇನ್‌ವೆಂಟರಿಯು ತೋರಿಸುವುದೇನಂದರೆ, ಅನೇಕ ಸಭೆಗಳಲ್ಲಿ ಪುಸ್ತಕಗಳು ಹಾಗೂ ಬ್ರೋಷರುಗಳ ಸ್ಟಾಕ್‌ ಎಷ್ಟು ಇದೆಯೆಂದರೆ, ಅದು ಇನ್ನೂ ಅನೇಕ ವರ್ಷಗಳ ವರೆಗೆ ಸಾಕಾಗಬಹುದು. ಆದರೆ ಅದೇ ಸಮಯದಲ್ಲಿ ಅಂಥ ಸಭೆಗಳು ಇನ್ನೂ ಹೆಚ್ಚಿನ ಸಾಹಿತ್ಯಕ್ಕಾಗಿ ವಿನಂತಿಸಿಕೊಳ್ಳುತ್ತಿವೆ. ಎಲ್ಲ ಸಭೆಗಳು ಈಗ ತಮ್ಮ ಬಳಿ ಇರುವ ಸ್ಟಾಕ್‌ ಅನ್ನು ಮುಗಿಸಿದ ನಂತರವೇ ಹೊಸ ಸರಬರಾಯಿಗಾಗಿ ಕೇಳಿಕೊಳ್ಳುವಂತೆ ಉತ್ತೇಜಿಸಲಾಗಿದೆ. ಸಭೆಗಳು ಸುಮಾರು ಮೂರು ತಿಂಗಳಿಗಾಗಿ ಬೇಕಾಗುವಷ್ಟು ಸಾಹಿತ್ಯವನ್ನು ಮಾತ್ರ ಸ್ಟಾಕ್‌ನಲ್ಲಿಡುವಂತೆ ನಿರೀಕ್ಷಿಸಲಾಗುತ್ತದೆ. ಆದುದರಿಂದ, ಸೊಸೈಟಿಗೆ ಲಿಟರೇಚರ್‌ ರಿಕ್ವೆಸ್ಟ್‌ ಅನ್ನು ಕಳುಹಿಸುವ ಮುಂಚೆ, ಸಭೆಯಲ್ಲಿ ಸಾಹಿತ್ಯಗಳ ಸ್ಟಾಕ್‌ ವಿಪರೀತವಾಗಿಲ್ಲ ಎಂಬುದನ್ನು ಸೇವಾ ಮೇಲ್ವಿಚಾರಕನು ವೈಯಕ್ತಿಕವಾಗಿ ಖಚಿತಪಡಿಸಿಕೊಳ್ಳಬೇಕು.

ತಮ್ಮ ಸಭೆಯಲ್ಲಿ ಪತ್ರಿಕೆಗಳು ರಾಶಿಗೂಡದಂತೆ ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕರು ನೋಡಿಕೊಳ್ಳಬೇಕು. ಹಾಗೆ ರಾಶಿಗೂಡುತ್ತಿರುವಲ್ಲಿ, ಸಾಧ್ಯವಿರುವಷ್ಟು ಬೇಗನೆ ಅವುಗಳನ್ನು ವಿತರಿಸಲಿಕ್ಕಾಗಿ ವಿಶೇಷವಾದ ಕಾರ್ಯಾಚರಣೆಗಳು ಏರ್ಪಡಿಸಲ್ಪಡಬೇಕು ಮತ್ತು ಸಭೆಯ ಪತ್ರಿಕಾ ಸರಬರಾಯಿಯನ್ನು ಕಡಿಮೆಗೊಳಿಸುವಂತೆ ಬ್ರಾಂಚ್‌ ಆಫೀಸಿಗೆ ತಿದ್ದಲ್ಪಟ್ಟ ಆರ್ಡರನ್ನು ಕಳುಹಿಸಬೇಕು. ಪತ್ರಿಕೆಗಳು ಮತ್ತು ಸಾಹಿತ್ಯವು ಪ್ರಚಾರಕರ ಮನೆಗಳಲ್ಲೂ ರಾಶಿಗೂಡಬಾರದು. ಎಲ್ಲ ಪ್ರಚಾರಕರು ತಮ್ಮ ವೈಯಕ್ತಿಕ ಬಳಕೆ ಹಾಗೂ ಕ್ಷೇತ್ರದಲ್ಲಿ ಉಪಯೋಗಕ್ಕಾಗಿ ಬೇಕಾಗುವಷ್ಟನ್ನು ಮಾತ್ರ ವಿನಂತಿಸಿಕೊಳ್ಳಬೇಕು.

◼ ಭಾರತದ ಬ್ರಾಂಚ್‌ ಆಫೀಸು ಬೆಂಗಳೂರಿನಲ್ಲಿರುವ ಹೊಸ ಸಂಕೀರ್ಣಕ್ಕೆ ಸ್ಥಳಾಂತರಿಸಲಿರುವುದರಿಂದ, ಇಸವಿ 2002ರ ಮಾರ್ಚ್‌ ತಿಂಗಳ ಮಧ್ಯದಿಂದ ಏಪ್ರಿಲ್‌ ತಿಂಗಳ ಮಧ್ಯಭಾಗದ ವರೆಗೆ ಸಾಹಿತ್ಯ ಹಾಗೂ ಪತ್ರಿಕಾ ವಿನಂತಿಗಳನ್ನು ಕಳುಹಿಸಲು ಅಸಾಧ್ಯವಾಗುವುದು ಎಂಬುದನ್ನು ದಯವಿಟ್ಟು ಗಮನಿಸಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ